KKR ಪರ್ಸ್​ 64.3 ಕೋಟಿ.. ಆಟಗಾರರ ರಿಲೀಸ್​​ ವೇಳೆ ಮಹಾ ಯಡವಟ್ಟು..!

KKR​​ ಐಪಿಎಲ್ ಸೀಸನ್-19ರಲ್ಲಿ ಹೊಸ ಅಧ್ಯಾಯ ಶುರುಮಾಡಲು ಹೊರಟಿದೆ. ಬಿಗ್ ಪರ್ಸ್​​​ನೊಂದಿಗೆ ಮಿನಿ ಆಕ್ಷನ್​​ಗೆ ರೆಡಿಯಾಗ್ತಿರುವ ಕೆಕೆಆರ್​​ ಮುಂದೆ, ದೊಡ್ಡ ಸವಾಲಿದೆ. ಈಗಾಗಲೇ ಪವರ್​​ಪ್ಯಾಕ್ಡ್​​ ಕೋಚಿಂಗ್ ಸ್ಟಾಫ್ ಹೊಂದಿರುವ ಕೊಲ್ಕತ್ತಾ, ಹರಾಜಿನಲ್ಲಿ ಭರ್ಜರಿ ಬೇಟೆಯಾಡುವ ವಿಶ್ವಾಸದಲ್ಲಿದೆ.

author-image
Ganesh Kerekuli
KKR (1)
Advertisment
  • ಕೋರ್ ಟೀಮ್ ಕಟ್ಟೋದೇ ಕೊಲ್ಕತ್ತಾಗೆ ಬಿಗ್ ಚಾಲೆಂಜ್
  • ಬಿಗ್ ಪ್ಲೇಯರ್ಸ್​ ಕೈಬಿಟ್ಟು ಎಡವಿತಾ ನೈಟ್​ರೈಡರ್ಸ್​..?
  • ಕೆಕೆಆರ್​ಗೆ ಬೇಕಾಗಿರೋ ಆಟಗಾರರು ಯಾರು..?

ಕೊಲ್ಕತ್ತಾ ನೈಟ್​ರೈಡರ್ಸ್​​ ಐಪಿಎಲ್ ಸೀಸನ್-19ರಲ್ಲಿ ಹೊಸ ಅಧ್ಯಾಯ ಶುರುಮಾಡಲು ಹೊರಟಿದೆ. ಬಿಗ್ ಪರ್ಸ್​​​ನೊಂದಿಗೆ ಮಿನಿ ಆಕ್ಷನ್​​ಗೆ ರೆಡಿಯಾಗ್ತಿರುವ ಕೆಕೆಆರ್​​ ಮುಂದೆ, ದೊಡ್ಡ ಸವಾಲಿದೆ.  ಈಗಾಗಲೇ ಪವರ್​​ಪ್ಯಾಕ್ಡ್​​ ಕೋಚಿಂಗ್ ಸ್ಟಾಫ್ ಹೊಂದಿರುವ ಕೊಲ್ಕತ್ತಾ, ಹರಾಜಿನಲ್ಲಿ ಭರ್ಜರಿ ಬೇಟೆಯಾಡುವ ವಿಶ್ವಾಸದಲ್ಲಿದೆ.

3 ಬಾರಿ ಐಪಿಎಲ್ ಚಾಂಪಿಯನ್ ಕೊಲ್ಕತ್ತಾ ನೈಟ್​ರೈಡರ್ಸ್​​​, ಐಪಿಎಲ್​​ ಮಿನಿ ಆಕ್ಷನ್​ ಸೆಂಟರ್​ ಆಫ್​​ ಅಟ್ರಾಕ್ಷನ್​ ಅನಿಸಿದೆ. ಉಳಿದೆಲ್ಲಾ ಫ್ರಾಂಚೈಸಿಗಳಿಗಿಂತ ಹೈಯೆಸ್ಟ್​ ಪರ್ಸ್​​ನೊಂದಿಗೆ ಹರಾಜಿಗೆ ಇಳಿಯಲಿರುವ ಕೆಕೆಆರ್, ಸೂಪರ್​ಸ್ಟಾರ್ ಆಟಗಾರರನ್ನ ಖರೀದಿಸುವ ಉತ್ಸಾಹದಲ್ಲಿದೆ. 12 ಆಟಗಾರರನ್ನ ರೀಟೇನ್ ಮಾಡಿಕೊಂಡಿರುವ ಕೊಲ್ಕತ್ತಾ, 9 ಆಟಗಾರರನ್ನ ರಿಲೀಸ್ ಮಾಡಿದೆ. ಖಾಲಿ ಆಗಿರುವ ಸ್ಲಾಟ್ ಫಿಲ್ ಮಾಡೋದೇ, ನೂತನ ಕೋಚ್​​ ಅಭಿಷೇಕ್ ನಾಯರ್​ ಮುಂದಿರೋ ದೊಡ್ಡ ಸವಾಲಾಗಿದೆ.

ಇದನ್ನೂ ಓದಿ:ಕೆಲಸಕ್ಕೆ ರಜೆ ಸಿಗಲಿಲ್ಲ -ಉಡುಪಿಯಲ್ಲಿ ನಡೆಯಿತು ಆನ್​ಲೈನ್​ ಮೂಲಕ ಎಂಗೇಜ್ಮೆಂಟ್..!

13 ಸ್ಲಾಟ್, 64.3 ಕೋಟಿ ಪರ್ಸ್​..!

ಕೆಕೆಆರ್​ಗೆ​​​​​​​​​​​​​​​​ 13 ಸ್ಲಾಟ್​​ಗಳು ಖಾಲಿ ಇವೆ. ಅದ್ರಲ್ಲಿ 6 ಫಾರಿನ್ ಪ್ಲೇಯರ್ಸ್​ ಖರೀದಿಸೋದೇ ಕಿಂಗ್ ಖಾನ್​​ ತಂಡದ ಮುಂದಿರೋ ಬಿಗ್ಗೆಸ್ಟ್ ಟಾಸ್ಕ್. ಪರ್ಸ್​​​​​ನಲ್ಲಿ 64.3 ಕೋಟಿ ರೂಪಾಯಿ ಬ್ಯಾಲೆನ್ಸ್ ಉಳಿಸಿಕೊಂಡಿರೋ ನೈಟ್​ರೈಡರ್ಸ್​, ಹರಾಜಿನಲ್ಲಿ ಭರ್ಜರಿ ಬೇಟೆಯಾಡಲು ತುದಿಗಾಲಲ್ಲಿ ನಿಂತಿದೆ.

ಕೊಲ್ಕತ್ತಾ ನೈಟ್​ರೈಡರ್ಸ್ ತಂಡ ಟ್ರಾನ್ಸ್​​ಫಾರ್ಮೆಷನ್​​​ನಲ್ಲಿದೆ. ಕೋರ್ ಟೀಮ್ ಇಲ್ಲದ ಕೊಲ್ಕತ್ತಾ ಫ್ರಾಂಚೈಸಿ, ಬಲಿಷ್ಟ ತಂಡ ಕಟ್ಟಲು ಮುಂದಾಗಲಿದೆ. ಆದ್ರೆ ಅದು ಅಷ್ಟು ಸುಲಭವಲ್ಲ. ಯಾಕಂದ್ರೆ ಕೆಕೆಆರ್​ಗೆ ಟಕ್ಕರ್ ಕೊಡಲು, ಚೆನ್ನೈ ಸೂಪರ್​ಕಿಂಗ್ಸ್​ ಫ್ರಾಂಚೈಸಿಯೂ ರೆಡಿಯಾಗಿದೆ. 

ಇದನ್ನೂ ಓದಿ:IPL ಹರಾಜಿನಲ್ಲಿ 11 ಮಂದಿ ಕನ್ನಡಿಗರು.. ಯಾರ ಅದೃಷ್ಟ ಬದಲಾಗಲಿದೆ..?

KKR

ಕೆಕೆಆರ್​​ ಸೂಪರ್​ಸ್ಟಾರ್ ಪ್ಲೇಯರ್​ಗಳನ್ನ ರಿಲೀಸ್ ಮಾಡಿ ಎಡವಿತಾ.? ಈ ಪ್ರಶ್ನೆ ಈಗ ಸ್ವತಃ ಕೆಕೆಆರ್​​ ಮ್ಯಾನೇಜ್ಮೆಂಟ್​ನೇ ಕಾಡ್ತಿದೆ. ಌಂಡ್ರೆ ರಸಲ್, ಕ್ವಿಂಟನ್ ಡಿಕಾಕ್, ಎನ್ರಿಚ್ ನೋಕಿಯಾ, ರಹಮಾನುಲ್ಲಾ ಗುರ್ಬಾಝ್​​​​ರಂತಹ ಆಟಗಾರರನ್ನ ಕೈಬಿಟ್ಟಿದೆ. ಮತ್ತೆ ಇಂಥ ಸಮರ್ಥ ಆಟಗಾರರ ಖರೀದಿಸೋಕೆ ಸಾಧ್ಯಾನಾ ಎಂಬ ಪ್ರಶ್ನೆ ಕಾಡ್ತಿದೆ.

ಕೆಕೆಆರ್​ಗೆ ಬೇಕಾಗಿರೋ ಆಟಗಾರರು ಯಾರು..?

ಡಿಕಾಕ್, ಗುಬಾರ್ಝ್​​ನ ರಿಲೀಸ್​ ಮಾಡಿರುವ ಕೆಕೆಆರ್​​​ ತಂಡಕ್ಕೆ ವಿಕೆಟ್ ಕೀಪರ್ ಅವಶ್ಯಕತೆ ತುಂಬಾ ಇದೆ. ಹಾಗೆ ಌಂಡ್ರೆ ರಸಲ್ ಸ್ಲಾಟ್ ಫಿಲ್ ಮಾಡಲು, ಬಿಗ್ ಆಲ್​ರೌಂಡರ್ ಬೇಕೇ ಬೇಕು. ಇನ್ನು ಅನ್​ಸೆಟಲ್ಡ್ ಓಪನಿಂಗ್ ಸ್ಲಾಟ್​​ಗೂ ಸ್ಪೆಷಲಿಸ್ಟ್ ಓಪನರ್ ಅವಶ್ಯಕತೆ ಇದೆ. ಈ ಮೂರು ಪ್ರಮುಖ ಸ್ಲಾಟ್​ಗಳನ್ನ ನೈಟ್​ರೈಡರ್ಸ್​ ಫಿಲ್ ಮಾಡಲೇಬೇಕು.

ಕೊಲ್ಕತ್ತಾ ನೈಟ್​ರೈಡರ್ಸ್​ ತಂಡ ಫಾರಿನ್ ಸೂಪರ್​ಸ್ಟಾರ್ ಪ್ಲೇಯರ್​ಗಳತ್ತ ಚಿತ್ತ ನೆಟ್ಟಿದೆ. ಅದ್ರಲ್ಲಿ ಪ್ರಮುಖವಾಗಿ ಆಸ್ಟ್ರೇಲಿಯಾದ ಬಿಗ್ ಆಲ್​ರೌಂಡರ್​ ಕ್ಯಾಮರೂನ್ ಗ್ರೀನ್, ನ್ಯೂಜಿಲೆಂಡ್​​ನ ಬಿಗ್ ಹಿಟ್ಟರ್ ಫಿನ್ ಌಲೆನ್, ಲಂಕಾದ ಯಂಗ್ ಸ್ಪೀಡ್​ಸ್ಟರ್​ ಮಥೀಶ ಪತಿರಣರನ್ನ ಹರಾಜಿನಲ್ಲಿ ಖರೀದಿಸಲು ಪ್ಲಾನ್ ಮಾಡ್ತಿದೆ. ಫ್ರಾಂಚೈಸಿಯಲ್ಲಿ ಬಿಗ್ ಪರ್ಸ್ ಇರೋದ್ರಿಂದ ಬಿಗ್ ಪ್ಲೇಯರ್​ಗಳನ್ನ ತಂಡಕ್ಕೆ ಕರೆತರಲು, ಕೊಲ್ಕತ್ತಾ ಯೋಚಿಸುತ್ತಿದೆ.

ಕೆಕೆಆರ್​​​ ತಂಡವನ್ನ ರೀ-ಬಿಲ್ಡ್​ ಮಾಡಲು ಕಸರತ್ತು ನಡೆಸುತ್ತಿದೆ. ಆದ್ರೆ ಹರಾಜಿನಲ್ಲಿ ನೈಟ್​ರೈಡರ್ಸ್​ ಸ್ಟ್ರಾಟಜಿ ವರ್ಕ್​​ಔಟ್ ಆಗುತ್ತಾ ಅನ್ನೋದೇ, ದೊಡ್ಡ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಆರ್​ಸಿಬಿ ಬೇಕು 8 ಆಟಗಾರರು.. ಯಾವೆಲ್ಲ ಆಟಗಾರರ ಮೇಲೆ ಬಿಡ್ ಮಾಡಲಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KKR Plan kolkata knight riders KKR
Advertisment