ಮಾಜಿ CSK ಸ್ಟಾರ್​ಗೆ ಒಲಿದ ಜಾಕ್​ಪಾಟ್.. ಪತಿರಣ ಮೇಲೆ ಕೋಟಿ ಕೋಟಿ ಬಿಡ್ ಮಾಡಿ ಗೆದ್ದ KKR..!​

ಐಪಿಎಲ್ ಹರಾಜಿನಲ್ಲಿ ಆಟಗಾರರ ಖರೀದಿ ಜೋರಾಗಿದೆ. ಮಥೀಶ ಪತಿರಣ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಬರೋಬ್ಬರಿ 18 ಕೋಟಿಗೆ ಖರೀದಿಸಿದೆ. ಐಪಿಎಲ್ ಹರಾಜು ಇತಿಹಾಸದಲ್ಲಿ ಶ್ರೀಲಂಕಾದ ಅತ್ಯಂತ ದುಬಾರಿ ಕ್ರಿಕೆಟಿಗನಾಗಿದ್ದಾನೆ.

author-image
Ganesh Kerekuli
matheesha pathirana
Advertisment

ಮಥೀಶ ಪತಿರಣ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಬರೋಬ್ಬರಿ 18 ಕೋಟಿಗೆ ಖರೀದಿಸಿದೆ.  ಐಪಿಎಲ್ ಹರಾಜು ಇತಿಹಾಸದಲ್ಲಿ ಶ್ರೀಲಂಕಾದ ಅತ್ಯಂತ ದುಬಾರಿ ಕ್ರಿಕೆಟಿಗನಾಗಿದ್ದಾನೆ.

ಕಳೆದ ಸೀಸನ್​ಗಳಲ್ಲಿ ಪತಿರಣ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದರು. ಈ ಬಾರಿಯ ಹರಾಜಿನ ಆರಂಭದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಬಿಡ್ ಮಾಡಿದವು. ಡೆಲ್ಲಿ ಮತ್ತು ಎಲ್​ಎಸ್​ಜಿ ನಡುವೆ ಜಿದ್ದಾಜಿದ್ದಿ ನಡೆಯುತ್ತಿದ್ದಾಗ, ಕೋಲ್ಕತ್ತ ನೈಟ್ ರೈಡರ್ಸ್ ಬಿಗ್ ಸರ್ಪ್ರೈಸ್ ನೀಡಿತು. ಪತಿರಣ ಮೇಲೆ ಕೆಕೆಆರ್​ 18 ಕೋಟಿ ಬಿಡ್ ಮಾಡಿ ಖರೀದಿಸಿತು. 

ಇದನ್ನೂ ಓದಿ: RCB ಮಾಜಿ ಸ್ಟಾರ್​​​ಗೆ ಬಿಗ್ ಶಾಕ್..! ಯಾಱರು ಎಷ್ಟು ಕೋಟಿಗೆ ಬಿಕರಿ ಆದ್ರು..?

ಐಪಿಎಲ್​​ನ ಮಿನಿ ಹರಾಜಿನಲ್ಲಿ ಕೆಕೆಆರ್ ಈಗಾಗಲೇ 25.20 ಕೋಟಿ ಹಣ ನೀಡಿ, ಕ್ಯಾಮರೂನ್ ಗ್ರೀನ್ ಅವರನ್ನು ಖರಿದಿದೆ. ಗ್ರೀನ್ ಬೆನ್ನಲ್ಲೇ ಮತ್ತೊಂದು ದುಬಾರಿ ಬಿಡ್ ಮಾಡಿ ಗೆದ್ದಿದೆ. ಪತಿರಣಗೆ 18 ಕೋಟಿ ನೀಡುವ ಮೂಲಕ ಸ್ಟ್ರಾಂಗ್ ಟೀಂ ಕಟ್ಟಲು ಕೆಕೆಆರ್ ದಿಟ್ಟ ಹೆಜ್ಜೆಯನ್ನಿಟ್ಟಿದೆ. 

ಪತಿರಣ 2022ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದರು. ಆರಂಭದ ದಿನದಿಂದಲೂ ಸಿಎಸ್​ಕೆ ಪರ ಆಡ್ತಿದ್ದ ಪತಿರಣರನ್ನು ಫ್ರಾಂಚೈಸಿ ಈ ವರ್ಷ ಬಿಡುಗಡೆ ಮಾಡಿದೆ. ಧೋನಿ ಗರಡಿಯಲ್ಲಿ ಪಳಗಿರುವ ಪತಿರಣ, ಇನ್ಮುಂದೆ ಕೆಕೆಆರ್ ಫ್ರಾಂಚೈಸಿ ಪರ ಆಡಲಿದ್ದಾರೆ. ಸಿಎಸ್​ಕೆ ಪರ ಒಟ್ಟಿ 32 ಮ್ಯಾಚ್ ಆಡಿರುವ ಪತಿರಣ, ಒಟ್ಟು 47 ವಿಕೆಟ್ ಪಡೆದಿದ್ದಾರೆ. 

ಇದನ್ನೂ ಓದಿ: RCB ಸೇರಿದ ವೆಂಕಟೇಶ್ ಅಯ್ಯರ್.. ಆದರೆ, ಸಂಬಳದಲ್ಲಿ 16.75 ಕೋಟಿ ರೂ ಕುಸಿತ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

matheesha pathirana
Advertisment