IPL Auction: ಆರ್​​ಸಿಬಿ ಭರ್ಜರಿ ಬೇಟೆ.. ಹೊಸದಾಗಿ ತಂಡಕ್ಕೆ ಯಾರೆಲ್ಲ ಬಂದ್ರು..?

16.4 ಕೋಟಿ . ಹರಾಜಿಗೂ ಮುನ್ನ ಆರ್​ಸಿಬಿ ಪರ್ಸ್​​ನಲ್ಲಿದ್ದ ಮೊತ್ತ. ಎಲ್ಲಾ ಫ್ರಾಂಚೈಸಿಗಳು ದೊಡ್ಡ ದೊಡ್ಡ ಆಟಗಾರರ ಹಿಂದೆ ಬಿದ್ರೆ, ಪಕ್ಕಾ ಲೆಕ್ಕಾಚಾರವನ್ನ ಹಾಕಿ ಆರ್​​​ಸಿಬಿ ಆಟಗಾರರ ಬೇಟೆಯಾಡಿತು. ಸರ್​​ಪ್ರೈಸ್​ ಪಿಕ್​ ಮಾಡಿ ಅಭಿಮಾನಿಗಳನ್ನೂ ಅಚ್ಚರಿಗೆ ದೂಡಿತು.

author-image
Ganesh Kerekuli
RCB (5)
Advertisment
  • ಐಪಿಎಲ್​ ಮಿನಿ ಆಕ್ಷನ್​ನಲ್ಲಿ ಆರ್​​ಸಿಬಿ ಭರ್ಜರಿ ಬೇಟೆ
  • ವೆಂಕಟೇಶ್​ ಅಯ್ಯರ್​ಗೆ ಗಾಳ ಹಾಕಿದ ಆರ್​​ಸಿಬಿ
  • ನಂಬರ್​ 2 ಟಿ20 ಬೌಲರ್​ ಜೇಕಬ್​ ಡಫಿ ಬೇಟೆ

ಪರ್ಸ್​​​​ನಲ್ಲಿ ಕಡಿಮೆ ದುಡ್ಡಿದ್ರೂ ನಿನ್ನೆ ನಡೆದ ಮಿನಿ ಆಕ್ಷನ್​ನಲ್ಲಿ ಆರ್​​ಸಿಬಿ ಸಖತ್​ ಗೇಮ್​ ಆಡಿತು. ಟಾರ್ಗೆಟ್​ ಲಿಸ್ಟ್​ನಲ್ಲಿದ್ದ ಆಟಗಾರರ ಹಿಂದೆ ಬಿದ್ದ ಆರ್​​ಸಿಬಿ, ಅಂದುಕೊಂಡಿದ್ದಂತೆ ಬಹುತೇಕ ಆಟಗಾರರನ್ನ ಬೇಟೆಯಾಡುವಲ್ಲಿ ಯಶಸ್ವಿಯಾಯ್ತು. ತಾಳ್ಮೆ ನಡೆ ಅನುಸರಿಸಿದ ರೆಡ್​ ಆರ್ಮಿಯ ಮ್ಯಾನೇಜ್​ಮೆಂಟ್​​ ಆಕ್ಷನ್​​ನಲ್ಲಿ ಚೀಪ್​ ಅಂಡ್ ಬೆಸ್ಟ್​​ ಪಿಕ್​ ಮಾಡಿತು.

ಅಯ್ಯರ್​ಗೆ ಗಾಳ ಹಾಕಿದ ಆರ್​​ಸಿಬಿ

2025ರ ಮೆಗಾ ಆಕ್ಷನ್​ನಲ್ಲಿ ವೆಂಕಟೇಶ್​ ಅಯ್ಯರ್​ಗೆ 23.50 ಕೋಟಿವರೆಗೆ ಬಿಡ್​ ಮಾಡಿ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದ ಆರ್​​ಸಿಬಿ ಈ ಆಕ್ಷನ್​ನಲ್ಲಿ ಸಕ್ಸ್​​ಫುಲ್​ ಬಿಡ್​ ಮಾಡಿತು. ಕೆಕೆಆರ್​​ ಜೊತೆಗೆ ಆಕ್ಷನ್​ ಅಖಾಡದಲ್ಲಿ ಬಿಗ್​ ಫೈಟ್​ ನಡೆಸಿದ ರೆಡ್​ ಆರ್ಮಿ ಅಂತಿಮವಾಗಿ 7 ಕೋಟಿ ನೀಡಿ ಆಲ್​​ರೌಂಡರ್​ನ ಖರೀದಿಸಿತು. ಆರ್​​ಸಿಬಿ ಹೋಮ್​ಗ್ರೌಂಡ್​ ಚಿನ್ನಸ್ವಾಮಿಯಲ್ಲಿ ಸ್ಪೋಟಕ ಬ್ಯಾಟಿಂಗ್​ ನಡೆಸೋ ಸಾಮರ್ಥ್ಯ ಹೊಂದಿರೋ ವೆಂಕಟೇಶ್​ ಅಯ್ಯರ್​, 6ನೇ ಬೌಲಿಂಗ್​ ಆಪ್ಷನ್​ ಆಗಿ ಕೂಡ ತಂಡಕ್ಕೆ ನೆರವಾಗಬಲ್ಲರು. ಈ ಎಲ್ಲಾ ಲೆಕ್ಕಾಚಾರ ಹಾಕಿಯೇ ಆರ್​​ಸಿಬಿ ಮಣೆ ಹಾಕಿದೆ. 

ಇದನ್ನೂ ಓದಿ: RCB ಸೇರಿದ ವೆಂಕಟೇಶ್ ಅಯ್ಯರ್.. ಆದರೆ, ಸಂಬಳದಲ್ಲಿ 16.75 ಕೋಟಿ ರೂ ಕುಸಿತ..!

Jacob Duffy

ಜೇಕಬ್​ ಡಫಿ ಬೇಟೆ..!

ಜೋಷ್​ ಹೇಜಲ್​ವುಡ್​ಗೆ ಬ್ಯಾಕ್​ಅಪ್​ ಪ್ಲೇಯರ್​ ಹುಡುಕಾಟದಲ್ಲಿದ್ದ ಅರ್​​ಸಿಬಿ ನ್ಯೂಜಿಲೆಂಡ್​ನ ಪೇಸರ್​ ಜೇಕಬ್​ ಡಫಿಯನ್ನ ಖರೀದಿಸಿತು. ವಿಶ್ವದ ನಂಬರ್​ 2 ಟಿ20 ಬೌಲರ್​ನ ಕೇವಲ 2 ಕೋಟಿಗೆ ಆರ್​​ಸಿಬಿ ಬುಟ್ಟಿಗೆ ಹಾಕಿಕೊಳ್ತು. ಪವರ್​ ಪ್ಲೇನಲ್ಲಿ ಪವರ್​ಫುಲ್​ ಸ್ಪಿಂಗ್​ ಬೌಲಿಂಗ್​ ಮಾಡಬಲ್ಲ ಜೇಕಬ್​ ಡಫಿ ಡೆತ್​ ಓವರ್​ನಲ್ಲೂ ಸೂಪರ್​ ಸ್ಪೆಲ್​ ಹಾಕಬಲ್ಲರು. ಒಂದು ರೀತಿಯಲ್ಲಿ  ಜೇಕಬ್​ ಡಫಿ ಹೇಜಲ್​ವುಡ್​ಗೆ ಪರ್ಫೆಕ್ಟ್​ ಬ್ಯಾಕ್​ಅಪ್​ ಪ್ಲೇಯರ್​​.

ಲೆಫ್ಟ್​ ಆರ್ಮ್​ ಪೇಸರ್​ ಮಂಗೇಶ್​ ಯಾದವ್​ ಮಣೆ..!

ಮಧ್ಯಪ್ರದೇಶದ ಯುವ ಆಲ್​​ರೌಂಡರ್​ ಮಂಗೇಶ್​ ಯಾದವ್​ನ ರೆಡ್​ ಆರ್ಮಿ ಮ್ಯಾನೇಜ್​ಮೆಂಟ್​ ಪೈಪೋಟಿ ನಡೆಸಿ ಖರೀದಿಸಿತು. ಸನ್​​ರೈಸರ್ಸ್​ ಹೈದ್ರಾಬಾದ್​ ಜೊತೆಗೆ ಆಕ್ಷನ್​ ಟೇಬಲ್ನಲ್ಲಿ ವಾರ್​ ನಡೆಸಿದ ಆರ್​ಸಿಬಿ 5.20 ಕೋಟಿ ನೀಡಿ ಆರ್​​ಸಿಬಿ ಮಂಗೇಶ್​ ಯಾದವ್​ನ ಖರೀದಿಸಿತು. ಕ್ಯಾಪ್ಟನ್​ ರಜತ್​ ಪಾಟಿದಾರ್​ ಜೊತೆಗೆ ಡ್ರೆಸ್ಸಿಂಗ್​ ರೂಮ್​ ಶೇರ್​ ಮಾಡಿರೋ ಮಂಗೇಶ್​, ಮಧ್ಯಪ್ರದೇಶ ಪ್ರೀಮಿಯರ್​ ಲೀಗ್​ನಲ್ಲಿ 6 ಪಂದ್ಯದಲ್ಲೇ 14 ವಿಕೆಟ್​ ಉರುಳಿಸಿದ್ರು. 23 ಲೆಫ್ಟ್​ ಆರ್ಮ್​ ಪೇಸರ್ ಖರೀದಿ ಹಿಂದೆ​ ಯಶ್​ ದಯಾಳ್​ಗೆ ಬ್ಯಾಕ್​ ಅಪ್​ ಪ್ಲೇಯರ್ ಲೆಕ್ಕಾಚಾರವೂ ಅಡಗಿದೆ. 

ಸರ್​​ಪ್ರೈಸ್​ ಪಿಕ್​..!

ಮಿನಿ ಆಕ್ಷನ್​ನಲ್ಲಿ ಆರ್​​ಸಿಬಿ ಸರ್​​ಪ್ರೈಸ್​ ಪಿಕ್​ ಈ ಸತ್ವಿಕ್​ ದೆಸ್ವಾಲ್​. ಪುದುಚೇರಿ ತಂಡದ 18 ವರ್ಷದ ಆಟಗಾರನನ್ನ ಆರ್​​ಸಿಬಿ ಬೇಸ್​​ಪ್ರೈಸ್​ 30 ಲಕ್ಷಕ್ಕೆ ಬೇಟೆಯಾಡಿತು. ಕಳೆದ ಸೀಸನ್​ನಲ್ಲಿ ಸತ್ವಕ್​ ಆರ್​​ಸಿಬಿಯ ನೆಟ್​ ಬೌಲರ್​ ಆಗಿದ್ರು. ಈ ಬಾರಿಯ ಪುದುಚೇರಿ ಪ್ರೀಮಿಯರ್​ ಲೀಗ್​ನಲ್ಲೂ ಇಂಪ್ರೆಸ್ಸಿವ್​ ಪ್ರದರ್ಶನ ನೀಡಿದ್ರು. 

ಇದನ್ನೂ ಓದಿ: ಮಾಜಿ CSK ಸ್ಟಾರ್​ಗೆ ಒಲಿದ ಜಾಕ್​ಪಾಟ್.. ಪತಿರಣ ಮೇಲೆ ಕೋಟಿ ಕೋಟಿ ಬಿಡ್ ಮಾಡಿ ಗೆದ್ದ KKR..!​

Green

‘ಬೇಸ್​​ ಪ್ರೈಸ್​ ಇಂಗ್ಲೆಂಡ್​​ ಯಂಗ್​ಸ್ಟರ್​ ಬಲೆಗೆ 

ಇಂಗ್ಲೆಂಡ್​ನ ಯುವ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್ ಜೋರ್ಡನ್​ ಕಾಕ್ಸ್​ನ ಆರ್​​ಸಿಬಿ ಬೇಸ್​ ಪ್ರೈಸ್​ಗೆ ಬಲೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯ್ತು. ಪಿಎಸ್​ಎಲ್​, ಬಿಬಿಎಲ್​, ಎಸ್​ಎಟಿ20, ಎಲ್​ಪಿಎಲ್​, ದಿ ಹಂಡ್ರೆಡ್​ ಲೀಗ್​ಗಳಲ್ಲಿ ಪ್ರಾಮಿಸಿಂಗ್​ ಪರ್ಫಾಮೆನ್ಸ್​ ನೀಡಿರುವ ಜೋರ್ಡಾನ್​ ಕಾಕ್ಸ್​ನ 75 ಲಕ್ಷಕ್ಕೆ ಆರ್​​ಸಿಬಿ ಡೀಲ್ ಮಾಡಿತು.​

ಕೊನೆ ಕ್ಷಣದಲ್ಲಿ ಯುವ ಆಟಗಾರರಿಗೆ ಆರ್​​ಸಿಬಿ ಬಿಡ್​

ಮಿನಿ ಆಕ್ಷನ್​ನ ಅಂತಿಮ ಹಂತದಲ್ಲಿ ಯುವ ಆಟಗಾರರಿಗೆ ಆರ್​ಸಿಬಿ ಬಿಡ್​ ಮಾಡಿತು. ಯುವ ಆಲ್​​ರೌಂಡರ್​ ವಿಕ್ಕಿ ಓಟ್ಸಾಲ್​, ಅಂಡರ್​​ 19 ಏಷ್ಯಾಕಪ್​ನಲ್ಲಿ ಮೋಡಿ ಮಾಡ್ತಿರೋ ವಿಹಾನ್​ ಮಲ್ಹೋತ್ರ ಹಾಗೂ ಆಲ್​​ರೌಂಡರ್​ ಕನಿಶ್ಕ್​ ಚೌಹಾಣ್​ಗೆ ಆರ್​​ಸಿಬಿ ಮಣೆ ಹಾಕಿತು. ಮಿನಿ ಆಕ್ಷನ್​ನಲ್ಲಿ ಜಾಣ ಹೆಜ್ಜೆ ಇಟ್ಟ ಆರ್​​ಸಿಬಿ ಪರ್ಸ್​ನಲ್ಲಿ 25 ಲಕ್ಷ ಹಣವನ್ನ ಬಾಕಿ ಉಳಿಸಿಕೊಂಡೆ 8 ಸ್ಲಾಟ್​ಗಳನ್ನ ಫಿಲ್​ ಮಾಡಿತು. ಫರ್ಫೆಕ್ಟ್​ ಬ್ಯಾಲೆನ್ಸ್​ಡ್​ ಟೀಮ್​ನೊಂದಿಗೆ ಚಾಂಪಿಯನ್ ಪಟ್ಟ ಡಿಫೆಂಡ್​ ಮಾಡಿಕೊಳ್ಳಲು ಆರ್​ಸಿಬಿ ರೆಡಿಯಾಗಿದೆ. ತಂಡಕ್ಕೆ ಸೇರಿರೋ ಹೊಸ ಆಟಗಾರರ ನಿರೀಕ್ಷೆಗೆ ತಕ್ಕಂತೆ ಪರ್ಫಾಮ್​ ಮಾಡ್ತಾರಾ ಅನ್ನೋದೆ ಪ್ರಶ್ನೆಯಾಗಿದೆ. 

ಇದನ್ನೂ ಓದಿ:ವಿಶ್ವದ ನಂಬರ್ 2 ಬೌಲರ್​​ನ ಕರೆತಂದ ಆರ್​ಸಿಬಿ.. ಬೆಂಗಳೂರು ತಂಡ ಮತ್ತಷ್ಟು ಸ್ಟ್ರಾಂಗ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Royal Challengers Bengaluru RCB IPL 2026 auction IPL 2026 mini auction
Advertisment