/newsfirstlive-kannada/media/media_files/2025/08/12/gill-17-2025-08-12-08-53-40.jpg)
ಯುಎಇನಲ್ಲಿ ಮುಂದಿನ ತಿಂಗಳಿನಿಂದ ಏಷ್ಯಾಕಪ್ ಟಿ20 ಟೂರ್ನಿ ಆರಂಭವಾಗಲಿದ್ದು ಟೀಮ್ ಇಂಡಿಯಾಕ್ಕೆ ಯಾರು ಯಾರು ಆಯ್ಕೆ ಆಗುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಈಗಾಗಲೇ ನಾಯಕ ಸೂರ್ಯಕುಮಾರ್ ಬೆಂಗಳೂರಿನಲ್ಲಿ ಅಭ್ಯಾಸ ನಡೆಸಿದ್ದಾರೆ. ಉಪನಾಯಕನ ಸ್ಥಾನಕ್ಕೆ ದೊಡ್ಡ ಪೈಪೋಟಿ ಏರ್ಪಟ್ಟಿದ್ದು ಅಕ್ಷರ್ ಪಟೇಲ್, ಶುಭ್ಮನ್ ಗಿಲ್ ಹಾಗೂ ಜಸ್ಪ್ರಿತ್ ಬೂಮ್ರಾ ಹೆಸರು ಕೇಳಿ ಬರುತ್ತಿವೆ. ಆದ್ರೆ ಈ ಮೂವರಲ್ಲಿ ಯಾರು ಆಯ್ಕೆ ಆಗುತ್ತಾರೆ ಎನ್ನುವುದು ಸದ್ಯಕ್ಕೆ ಟ್ವಿಸ್ಟ್ ಆಗಿದೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಶುಭ್ಮನ್ ಗಿಲ್ ನಾಯಕನಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಇದರಿಂದ ಟೀಮ್ ಇಂಡಿಯಾದ ಟಿ20 ಉಪನಾಯಕನಾಗಿರುವ ಅಕ್ಷರ್ ಪಟೇಲ್ಗೆ ಪ್ರತಿಸ್ಪರ್ಧಿ ಆಗಿದ್ದಾರೆ. ಇವರಿಬ್ಬರದ್ದು ಈಗಿರುವಾಗಲೇ ಜಸ್ಪ್ರಿತ್ ಬೂಮ್ರಾ ಕೂಡ ವೈಸ್ ಕ್ಯಾಪ್ಟನ್ ಸ್ಥಾನಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ. ಏಷ್ಯಾಕಪ್ ಟಿ20ನಲ್ಲಿ ಬೂಮ್ರಾ ಕೂಡ ಅಖಾಡಕ್ಕೆ ಇಳಿಯುತ್ತಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಧರ್ಮಸ್ಥಳ ಪ್ರಕರಣಕ್ಕೆ ಎಂಟ್ರಿ ಕೊಟ್ಟ NHRC.. ಐಪಿಎಸ್ ಸೇರಿ ನಾಲ್ವರು ಅಧಿಕಾರಿಗಳು ಅಖಾಡಕ್ಕೆ
ಸೆಪ್ಟೆಂಬರ್ 9 ರಿಂದ ಆರಂಭವಾಗುವ ಏಷ್ಯಾಕಪ್ನಲ್ಲಿ ಬೂಮ್ರಾರನ್ನು ಆಡಿಸಲಾಗುತ್ತದೆ. ಇದರ ಜೊತೆಗೆ ಅವರಿಗೆ ಉಪನಾಯಕನ ಸ್ಥಾನ ನೀಡಲಾಗುತ್ತದೆ ಎನ್ನುವು ಮಾತುಗಳು ಕೇಳಿ ಬರುತ್ತಿವೆ. ಇದರ ನಂತರ ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಜಸ್ಪ್ರಿತ್ ಬೂಮ್ರಾಗೆ ವಿಶ್ರಾಂತಿ ನೀಡಲಾಗುತ್ತದೆ. ಒಂದು ವೇಳೆ ಬಿಸಿಸಿಐ ಹೀಗೆ ಮಾಡಿದರೆ ಗಿಲ್, ಅಕ್ಷರ್ಗೆ ವೈಸ್ ಕ್ಯಾಪ್ಟನ್ ಸ್ಥಾನ ಕೈತಪ್ಪುವುದು ಗ್ಯಾರಂಟಿ ಆಗಿದೆ.
ಆಗಸ್ಟ್ 19 ಅಥವಾ 20 ರಂದು ಏಷ್ಯಾ ಕಪ್ಗೆ ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡುತ್ತದೆ. ಸೂರ್ಯಕುಮಾರ್ ಸೇರಿದಂತೆ ಎಲ್ಲ ಆಟಗಾರರ ಮೆಡಿಕಲ್ ಟೆಸ್ಟ್ನ ವರದಿಯನ್ನ ಬಿಸಿಸಿಐಗೆ ಕಳುಹಿಸಲಾಗುತ್ತದೆ. ಈ ಮೆಡಿಕಲ್ ವರದಿ ಆಧಾರದ ಮೇಲೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಆಟಗಾರರನ್ನು ಏಷ್ಯಾಕಪ್ಗೆ ಆಯ್ಕೆ ಮಾಡುತ್ತದೆ. ಒಟ್ಟು 18 ಆಟಗಾರರನ್ನು ಸೆಲೆಕ್ಟ್ ಮಾಡಲಾಗುತ್ತದೆ. ಇದರಲ್ಲಿ ಯಾರು, ಯಾರು ಸ್ಥಾನ ಪಡೆಯುತ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ