/newsfirstlive-kannada/media/media_files/2025/08/18/vaibhav_suryavanshi_batting-1-2025-08-18-18-29-07.jpg)
ಏಷ್ಯಾ ಕಪ್ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ಟೀಮ್ ಇಂಡಿಯಾಕ್ಕೆ ಯಾವ್ಯಾವ ಆಟಗಾರರನ್ನು ಆಯ್ಕೆ ಮಾಡಬೇಕು ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಸೂರ್ಯಕುಮಾರ್ ನೇತೃತ್ವದಲ್ಲಿ ಭಾರತ ತಂಡ ಏಷ್ಯಾ ಕಪ್ ಆಡಲಿದೆ ಅಂತ ಹೇಳಲಾಗುತ್ತಿದೆ. ಇದರ ನಡುವೆ ಯಂಗ್ ಬ್ಯಾಟರ್, ಹೊಡಿಬಡಿಯಿಂದಲೇ ಬ್ಯಾಟಿಂಗ್ ಆರಂಭಿಸುವ ವೈಭವ್ ಸೂರ್ಯವಂಶಿನ ತಂಡಕ್ಕೆ ಆಯ್ಕೆ ಮಾಡಬೇಕು ಎಂದು ಹಿರಿಯ ಆಟರರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುಎಇನಲ್ಲಿ ನಡೆಯುವ ಏಷ್ಯಾ ಕಪ್ಗಾಗಿ ಟೀಮ್ ಇಂಡಿಯಾದ ಆಟಗಾರರ ಹೆಸರನ್ನು ಇಂದು ಬಿಸಿಸಿಐ ಘೋಷಣೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ಲೆಜೆಂಡರಿ ಬ್ಯಾಟ್ಸ್ಮನ್ ಕೆ.ಶ್ರೀಕಾಂತ್ ಅವರು ಯುವ ಬ್ಯಾಟರ್ ವೈಭವ್ ಸೂರ್ಯವಂಶಿನ ಭಾರತ ತಂಡಕ್ಕೆ ಆಯ್ಕೆ ಮಾಡಬೇಕು. ಇದರಲ್ಲಿ ಅವರ ವಯಸ್ಸು ಮುಖ್ಯ ಆಗುವುದಿಲ್ಲ. ಪರ್ಫಾಮೆನ್ಸ್ ಮುಖ್ಯ ಎಂದು ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಇನ್ನೂ ಪ್ರಬುದ್ಧ (Mature) ಆಗಬೇಕು ಎಂದು ಯಾರು ಹೇಳಬಾರದು. ಅವರ ಸ್ಟನ್ನಿಂಗ್ ಪರ್ಫಾಮೆನ್ಸ್ ನೋಡಿ ಏಷ್ಯಾ ಕಪ್ನಲ್ಲಿ ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಬೇಕು. ಸೂರ್ಯವಂಶಿ ಇನ್ನು ಚೆನ್ನಾಗಿ ಆಡಬೇಕು, ಅದಕ್ಕಾಗಿ ಕಾಯಬೇಕು. ಮೆಚ್ಯುರ್ ಆಗಲಿ ಎಂದು ಹೇಳುವುದು ನಿಲ್ಲಿಸಿ. ಈಗಾಗಲೇ ಗಮನಾರ್ಹ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬ್ಯಾಟಿಂಗ್ ಸ್ಟೈಲ್, ಶಾಟ್ ಎಲ್ಲವೂ ಇನ್ನೊಂದು ಲೆವೆಲ್ನಲ್ಲಿ ಇವೆ ಎಂದು ಲೆಜೆಂಡರಿ ಬ್ಯಾಟ್ಸ್ಮನ್ ಕೆ.ಶ್ರೀಕಾಂತ್ ಅವರು ಗುಣಗಾನ ಮಾಡಿದ್ದಾರೆ.
ಇದನ್ನೂ ಓದಿ: ಬಾಬರ್ ಅಜಮ್, ರಿಜ್ವಾನ್ಗೆ ಭಾರೀ ಅವಮಾನ.. ಏಷ್ಯಾ ಕಪ್ಗೆ ಪಾಕ್ ಆಟಗಾರರ
ನಾನು ಒಂದು ವೇಳೆ ಬಿಸಿಸಿಐ ಅಧ್ಯಕ್ಷನಾಗಿದ್ರೆ ಸೂರ್ಯವಂಶಿಗೆ ತಂಡದಲ್ಲಿ ಸ್ಥಾನ ನೀಡುತ್ತಿದ್ದೆ. ಸಂಜು ಸ್ಯಾಮ್ಸನ್ ಓಪನರ್ಗೆ ಸೂಕ್ತವಲ್ಲ. ಓಪನಿಂಗ್ನಲ್ಲಿ ಅದ್ಭುತ ಬ್ಯಾಟರ್ಸ್ ಎಂದರೆ ವೈಭವ್ ಸೂರ್ಯವಂಶಿ, ಸಾಯಿ ಸುದರ್ಶನ್, ಗಿಲ್ ಅಥವಾ ಅಭಿಷೇಕ್ ಶರ್ಮಾಗೆ ಸ್ಥಾನ ನೀಡಬಹುದು. ಇದರಲ್ಲಿ ಓಪನರ್ಗೆ ಮೊದಲ ಆಯ್ಕೆ ಎಂದರೆ ಅಭಿಷೇಕ್ ಶರ್ಮಾ. ಇವರ ಜೊತೆ ಉಳಿದ ಮೂವರಲ್ಲಿ ಯಾರಾದರೂ ಬ್ಯಾಟಿಂಗ್ ಮಾಡಬಹುದು ಎಂದು ಹೇಳಿದ್ದಾರೆ.
ಇನ್ನು 14 ವರ್ಷದ ವೈಭವ್ ಸೂರ್ಯವಂಶಿ 2025ರ ಐಪಿಎಲ್ ಹಾಗೂ ಅಂಡರ್-19 ಟೂರ್ನಿಯಲ್ಲಿ ಸ್ಟನ್ನಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಎದುರಾಳಿ ಬೌಲರ್ಗಳನ್ನ ಮನ ಬಂದಂತೆ ಚಚ್ಚಿದ್ದಾರೆ. ತನ್ನ ಬ್ಯಾಟಿಂಗ್ ಶೈಲಿಯಿಂದ ಸೂರ್ಯವಂಶಿ, ಈಗಾಗಲೇ ಲೆಜೆಂಡರಿ ಆಟಗಾರರ ಮನ ಗೆದ್ದಿದ್ದಾರೆ. ಹೀಗಾಗಿಯೇ ಕೆ ಶ್ರೀಕಾಂತ್ ಸೇರಿದಂತೆ ಹಲವರು ಸೂರ್ಯವಂಶಿ ಪರ ಬ್ಯಾಟ್ ಬೀಸಿದ್ದಾರೆ. ಬಿಸಿಸಿಐ ಇಂದು ಮಧ್ಯಾಹ್ನದ ವೇಳೆಗೆ ಟೀಮ್ ಇಂಡಿಯಾ ಆಟಗಾರರ ಹೆಸರನ್ನು ಘೋಷಣೆ ಮಾಡಲಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ