KL​ ರಾಹುಲ್​ ಕ್ಲಾಸ್​ ಆಟ.. 11 ವರ್ಷಗಳ ಕೊರಗಿಗೆ ಬ್ರೇಕ್, ಕರ್ನಾಟಕ ಫೈನಲ್​​ಗೆ ಲಗ್ಗೆ ​

ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಸುದೀರ್ಘ ದಿನಗಳ ಕೊರಗಿಗೆ ಕೊನೆಗೂ ಬ್ರೇಕ್​ ಬಿದ್ದಿದೆ. ಎಕಾನ ಅಂಗಳದಲ್ಲಿ ವೀರ ಕನ್ನಡಿಗರ ಅಬ್ಬರಕ್ಕೆ ಉತ್ತರಾಖಾಂಡ ಉಡೀಸ್​ ಆಯ್ತು. ಬ್ಯಾಟಿಂಗ್​, ಬೌಲಿಂಗ್​ನಲ್ಲಿ ಡಾಮಿನೇಟಿಂಗ್​ ಪರ್ಫಾಮೆನ್ಸ್​ ನೀಡಿದ ಕರ್ನಾಟಕ, ಫೈನಲ್​ಗೆ ರಾಹುಲ್​ ಎಂಟ್ರಿ ಕೊಡ್ತು.

author-image
Ganesh Kerekuli
KL Rahul
Advertisment
  • 11 ವರ್ಷದ ಬಳಿಕ ರಣಜಿ ಫೈನಲ್​ಗೆ ಕರ್ನಾಟಕ ಎಂಟ್ರಿ
  • ಸೆಮಿಫೈನಲ್ ಪಂದ್ಯದಲ್ಲಿ ಡ್ರಾ ಸಾಧಿಸಿದ ಕರ್ನಾಟಕ
  • ಫಸ್ಟ್​ ಇನ್ನಿಂಗ್ಸ್​ ಲೀಡ್​ ಆಧಾರದಲ್ಲಿ ಫೈನಲ್​ಗೆ​ ಎಂಟ್ರಿ

11 ವರ್ಷ... ಬರೋಬ್ಬರಿ 11 ವರ್ಷಗಳ ಕೊರಗು ಕೊನೆಗೂ ನೀಗಿದೆ. ಡೊಮೆಸ್ಟಿಕ್​ ಕ್ರಿಕೆಟ್​ನ ರಾಜ ಎಂದೇ ಕರೆಸಿಕೊಳ್ಳೋ ರಣಜಿ ಟ್ರೋಫಿ ಟೂರ್ನಿಯಲ್ಲಿ ಸತತ 11 ವರ್ಷಗಳಿಂದ ಸತತ ವೈಫಲ್ಯ ಕಂಡಿದ್ದ ಕರ್ನಾಟಕ ತಂಡ ಕೊನೆಗೂ ಪುಟಿದೆದ್ದಿದೆ. 2014-15ರ ಸೀಸನ್​​ನಲ್ಲಿ ಕೊನೆಯ ಫೈನಲ್ ಪ್ರವೇಶ ಮಾಡಿದ್ದ ಕರ್ನಾಟಕ, ಸುದೀರ್ಘ ಅಂತರದ ಬಳಿಕ ಈ ಸೀಸನ್​ನಲ್ಲಿ ಕ್ವಾಲಿಫೈ ಆಗಿದೆ. ಉತ್ತರಾಖಾಂಡ ತಂಡವನ್ನ ಉಡೀಸ್​ ಮಾಡಿದ ವೀರ ಕನ್ನಡಿಗರ ಪಡೆ ಫೈನಲ್​ಗೆ ಎಂಟ್ರಿ ಕೊಟ್ಟಿದೆ. 

ಕನ್ನಡಿಗರ ಆಟಕ್ಕೆ ಉತ್ತರಾಖಾಂಡ ಬೌಲರ್ಸ್​ ಸುಸ್ತೋ ಸುಸ್ತು

ಲಕ್ನೋನ ಎಕಾನ ಮೈದಾನದಲ್ಲಿ ಮೊದಲು ಬ್ಯಾಟಿಂಗ್​ಗಿಳಿದ ಕರ್ನಾಟಕ ತಂಡ ಡಾಮಿನೇಟಿಂಗ್​ ಪರ್ಫಾಮೆನ್ಸ್​ ನೀಡಿತು. ನಾಯಕ ದೇವದತ್​ ಪಡಿಕ್ಕಲ್​ ಡಬಲ್​ ಸೆಂಚುರಿ ಬಾರಿಸಿದ್ರೆ, ಕೆ.ಎಲ್​ ರಾಹುಲ್, ಸ್ಮರಣ್​ ರವಿಚಂದ್ರನ್ ಶತಜ ಸಿಡಿಸಿ ಮಿಂಚಿದ್ರು. ಕೃತಿಕ್ ಕೃಷ್ಣ, ವಿದ್ಯಾದರ್​ ಪಾಟೀಲ್​ ಹಾಫ್​ ಸೆಂಚುರಿ ಕಾಣಿಕೆ ನೀಡಿದ್ರು. ಕನ್ನಡಿಗರ ಆಟಕ್ಕೆ ಉತ್ತರಾಖಾಂಡ ಬೌಲರ್ಸ್​ ಬೆಸ್ತು ಬಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ ಕರ್ನಾಟಕ ಬರೋಬ್ಬರಿ 736 ರನ್​ಗಳ ಬಿಗ್ ಸ್ಕೋರ್​ ಕಲೆ ಹಾಕಿತು.

ವಿದ್ಯಾಧರ್​​, ವೈಶಾಕ್​ ಬಿರುಗಾಳಿಗೆ ಉತ್ತರಾಖಾಂಡ ಉಡೀಸ್​

ಬ್ಯಾಟರ್ಸ್​ ಬಳಿಕ ಕರ್ನಾಟಕ ಬೌಲರ್ಸ್​​ ಎಕಾನ ಅಂಗಳದಲ್ಲಿ ಧೂಳೆಬ್ಬಿಸಿದ್ರು. ವಿಧ್ಯಾದರ್​ ಪಾಟೀಲ್, ವೈಶಾಕ್ ವಿಜಯ್ ಕುಮಾರ್​ ಬಿರುಗಾಳಿಯ ದಾಳಿ ಸಂಘಟಿಸಿದ್ರೆ, ಶ್ರೇಯಸ್​ ಗೋಪಾಲ್ ಸ್ಪಿನ್ ಮ್ಯಾಜಿಕ್ ಮಾಡಿದ್ರು. ಶಿಖರ್​​ ಶೆಟ್ಟಿ, ಪ್ರಸಿದ್ಧ್​​ ಕೃಷ್ಣ ಕೂಡ ಬ್ಯಾಟರ್ಸ್​ಗೆ ಕಾಟ ಕೊಟ್ರು. ಕನ್ನಡಿಗರ ಸಂಘಟಿತ ದಾಳಿಗೆ ಉತ್ತರಾಖಾಂಡ ಉಡೀಸ್​ ಆಯ್ತು. 233 ರನ್​ಗೆ ಉತ್ತರಾಖಾಂಡ ಆಲೌಟ್​ ಆದ್ರೆ, ಕರ್ನಾಟಕ 503 ರನ್​​ಗಳ ಬಿಗ್ ಲೀಡ್​ ಪಡೆದುಕೊಳ್ತು.

ಸ್ಮರಣ್, ರಾಹುಲ್ ಕ್ಲಾಸಿಕ್​ ಆಟಕ್ಕೆ ಬೆಂಡಾದ ಬೌಲರ್ಸ್​ 

2ನೇ ಇನ್ನಿಂಗ್ಸ್​ನಲ್ಲೂ ಕರ್ನಾಟಕ ಬ್ಯಾಟರ್ಸ್​ ಶೈನ್ ಆದ್ರು. ಸ್ಮರಣ್​ ರವಿಚಂದ್ರನ್​ ಮತ್ತೊಂದು ಸ್ಮರಣೀಯ ಸೆಂಚುರಿ ಸಿಡಿಸಿದ್ರೆ, ಕೃತಿಕ್ ಕೃಷ್ಣ ಮತ್ತೊಂದು ಹಾಫ್​ ಸೆಂಚುರಿ ಸಿಡಿಸಿ ಶೈನ್​ ಆದ್ರು. ಕ್ಲಾಸಿಕ್ ಇನ್ನಿಂಗ್ಸ್​ ಕಟ್ಟಿದ ಕೆ.ಎಲ್​ ರಾಹುಲ್​ ಅಜೇಯ 86 ರನ್​ಗಳ ಕಾಣಿಕೆ ನೀಡಿದ್ರು. 2ನೇ ಇನ್ನಿಂಗ್ಸ್​ನಲ್ಲಿ 323 ರನ್​ಗಳಿಸಿದ ಕರ್ನಾಟಕ, ಉತ್ತರಾಖಾಂಡಕ್ಕೆ ಬರೋಬ್ಬರಿ 827 ರನ್​ಗಳ ಬಿಗ್​ ಟಾರ್ಗೆಟ್​ ನೀಡಿತು. 
ಡ್ರಾನಲ್ಲಿ ಪಂದ್ಯ ಅಂತ್ಯ, ಫೈನಲ್​ಗೆ ಕರ್ನಾಟಕ

ಟಾರ್ಗೆಟ್​ ಚೇಸಿಂಗ್​ಗಿಳಿದ ಉತ್ತರಾಖಾಂಡ ಬ್ಯಾಟರ್ಸ್​ ಕರ್ನಾಟಕದ ಬೌಲರ್​ಗಳ ದಾಳಿ ಉತ್ತರವಿಲ್ಲದೇ ಪೆವಿಲಿಯನ್ ಸೇರಿದ್ರು. ಶ್ರೇಯಸ್​ ಗೋಪಾಲ್​ 3 ವಿಕೆಟ್​ ಕಬಳಿಸಿದ್ರೆ, ಪ್ರಸಿದ್ಧ ಕೃಷ್ಣ 2, ವೈಶಾಕ್ ವಿಜಯ್​ಕುಮಾರ್​ 1 ವಿಕೆಟ್​ ಉರುಳಿಸಿದ್ರು. ಆದ್ರೆ, ಆದಿತ್ಯ ರಾವತ್​, ಅಭಯ್ ನೇಗಿ ಕೊನೆಯವರೆಗೂ ಹೋರಾಡಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದ್ರು. ಪಂದ್ಯ ಡ್ರಾನಲ್ಲಿ ಅಂತ್ಯವಾದ್ರೆ, ಮೊದಲ ಇನ್ನಿಂಗ್ಸ್​ ಲೀಡ್​ ತೆಗೆದುಕೊಂಡ ಕರ್ನಾಟಕ ಫೈನಲ್​ಗೆ ರಾಯಲ್​ ಎಂಟ್ರಿ ಕೊಡ್ತು. 

ಹುಬ್ಬಳ್ಳಿಯಲ್ಲಿ ನಡೆಯಲಿದೆ ಫೈನಲ್​ ಕದನ 

ಈ ಸೀಸನ್​ನಲ್ಲಿ ಬೊಂಬಾಟ್​ ಪ್ರದರ್ಶನ ನೀಡಿದ ಕರ್ನಾಟಕ ತಂಡ ಬರೋಬ್ಬರಿ 11 ವರ್ಷಗಳ ಫೈನಲ್​​ಗೆ ಎಂಟ್ರಿ ಕೊಟ್ಟಿದೆ. ಅತ್ತ ರಣಜಿ ಟ್ರೋಫಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರ ತಂಡ ಫೈನಲ್​ಗೆ ಬಂದಿದೆ. ಕರ್ನಾಟಕ ತಂಡ 9ನೇ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದ್ರೆ, ಜಮ್ಮು ಕಾಶ್ಮೀರ ಚೊಚ್ಚಲ ಟ್ರೋಫಿ ಗೆಲುವಿನ ಕನವರಿಕೆಯಲ್ಲಿದೆ. ಹುಬ್ಬಳ್ಳಿಯ ರಾಜ್​ನಗರ್​ ಸ್ಟೇಡಿಯಂನಲ್ಲಿ ನಡೆಯೋ ಫೈನಲ್​ ಕದನ ಕ್ರಿಕೆಟ್​ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.  

ಇದನ್ನೂ ಓದಿ: ದೇಶಿ ಕ್ರಿಕೆಟ್​ನಲ್ಲಿ ಸ್ಮರಣ್​ ರವಿಚಂದ್ರನ್​ ಶೈನಿಂಗ್.. ಸೆಮಿಸ್​ ಸಮರದಲ್ಲಿ ಡಬಲ್ ಧಮಾಕಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KL Rahul Ranji Trophy Karnataka team
Advertisment