ದೇಶಿ ಕ್ರಿಕೆಟ್​ನಲ್ಲಿ ಸ್ಮರಣ್​ ರವಿಚಂದ್ರನ್​ ಶೈನಿಂಗ್.. ಸೆಮಿಸ್​ ಸಮರದಲ್ಲಿ ಡಬಲ್ ಧಮಾಕಾ..!

ಇಂಡಿಯನ್ ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಕನ್ನಡಿಗನದ್ದೇ ದರ್ಬಾರ್​. 22 ವರ್ಷದ ಯುವ ಆಟಗಾರನ ಆಟಕ್ಕೆ ಭಾರತೀಯ ಕ್ರಿಕೆಟ್​ನ ಲೆಂಜೆಂಡ್​ಗಳೂ ತಲೆ ಬಾಗಿದ್ದಾರೆ. ವೈಟ್​​ಬಾಲ್​, ರೆಡ್​ಬಾಲ್ ಯಾವುದೇ ಫಾರ್ಮೆಟ್​​ ಇರಲಿ.

author-image
Ganesh Kerekuli
Ravichandran Smaran
Advertisment
  • 2 ಇನ್ನಿಂಗ್ಸ್​ಗಳಲ್ಲಿ ಸೆಂಚುರಿ ಸಿಡಿಸಿ ಕನ್ನಡಿಗನ ಅಬ್ಬರ
  • ಈ ಸೀಸನ್​​ ರಣಜಿ ಟೂರ್ನಿಗೆ ಕನ್ನಡಿಗನೇ ‘ರಾಜ’
  • ಫಸ್ಟ್​ ಕ್ಲಾಸ್​ ಕ್ರಿಕೆಟ್​​ನಲ್ಲಿ ಫಸ್ಟ್​ ಕ್ಲಾಸ್​ ಪ್ರದರ್ಶನ

ಇಂಡಿಯನ್ ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಕನ್ನಡಿಗನದ್ದೇ ದರ್ಬಾರ್​. 22 ವರ್ಷದ ಯುವ ಆಟಗಾರನ ಆಟಕ್ಕೆ ಭಾರತೀಯ ಕ್ರಿಕೆಟ್​ನ ಲೆಂಜೆಂಡ್​ಗಳೂ ತಲೆ ಬಾಗಿದ್ದಾರೆ. ವೈಟ್​​ಬಾಲ್​, ರೆಡ್​ಬಾಲ್ ಯಾವುದೇ ಫಾರ್ಮೆಟ್​​ ಇರಲಿ. ಕಳೆದೊಂದು ವರ್ಷದಿಂದ ಸ್ಮರಣ್​ ರವಿಚಂದ್ರನ್​ ಹೆಸರು ಸಖತ್​​ ಸೌಂಡ್​ ಮಾಡಿದೆ. ಇಂಡಿಯನ್ ಕ್ರಿಕೆಟ್​ಗೆ ಮತ್ತೊಬ್ಬ ಕನ್ನಡಿಗನ ಎಂಟ್ರಿಗೂ ಕೌಂಟ್​​ಡೌನ್​​ ಶುರುವಾಗಿದೆ.

ಟೀಮ್​ ಇಂಡಿಯಾಗೆ ಮತ್ತೊಬ್ಬ ಕನ್ನಡಿಗನ ಎಂಟ್ರಿಗೆ ಕೌಂಟ್​​ಡೌನ್ ಆರಂಭವಾಗಿದೆ. ಡೊಮೆಸ್ಟಿಕ್ ಸರ್ಕ್ಯೂಟ್​ನಲ್ಲೂ ಹೊಸ ಸ್ಟಾರ್​ ಉದಯವಾಗಿದೆ. ಕೂಲ್​ ಅಂಡ್ ಕಾಮ್​ ಆ್ಯಟಿಟ್ಯೂಡ್, ಕ್ಯಾಲ್ಕ್ಯುಲೇಟೆಡ್​ ಆಟ, ಕನ್ಸಿಸ್ಟೆನ್ಸಿಯಿಂದ ಸದ್ದು ಮಾಡ್ತಿರೋ ಕನ್ನಡಿಗ ಸ್ಮರಣ್​ ರವಿಚಂದ್ರನ್​ ಭಾರತೀಯ ಕ್ರಿಕೆಟ್​ ಲೋಕದಲ್ಲಿ ಸಖತ್​ ಸದ್ದು ಮಾಡ್ತಿದ್ದಾರೆ. ಕರ್ನಾಟದ ಯುವ ಆಟಗಾರನ ಆಟಕ್ಕೆ ದಿಗ್ಗಜ ಆಟಗಾರರೆಲ್ಲಾ ಕ್ಲೀನ್​ ಬೋಲ್ಡ್​ ಆಗಿದ್ದಾರೆ.

ಇದನ್ನೂ ಓದಿ: ಫಾರ್ಮ್ 16 ಇನ್ನೂ ಮುಂದೆ ಫಾರ್ಮ್ 130 , ಫಾರ್ಮ್ 26 AS ಇನ್ನೂ ಫಾರ್ಮ್ 168 ಆಗಿ ಬದಲಾವಣೆ! - ಹೊಸ ಕಾಯಿದೆ ಜಾರಿ ಎಫೆಕ್ಟ್

ಸೆಮಿಸ್​ ಸಮರದಲ್ಲಿ ಸ್ಮರಣ್ ಡಬಲ್ ಧಮಾಕಾ

ಕೆ.ಎಲ್.ರಾಹುಲ್ ಮಯಾಂಕ್ ಅಗರ್ವಾಲ್​, ದೇವದತ್​ ಪಡಿಕ್ಕಲ್. ರಣಜಿ ಸೆಮಿಫೈನಲ್​ನಲ್ಲಿ ಸ್ಟಾರ್​ಗಳ ದಂಡೇ ಕರ್ನಾಟಕ ತಂಡದಲ್ಲಿತ್ತು. ಸ್ಟಾರ್​ಗಳನ್ನ ಸೈಡ್​ ಹೊಡೆದು ಹೆಚ್ಚು ಸದ್ದು ಮಾಡಿದ್ದು 22 ವರ್ಷದ ಯಂಗ್​ ಬ್ಯಾಟರ್​ ಸ್ಮರಣ್​ ರವಿಚಂದ್ರನ್​. ಪಂದ್ಯದ ಎರಡೂ ಇನ್ನಿಂಗ್ಸ್​ಗಳಲ್ಲಿ ಧಮಾಕೇದಾರ್​ ಇನ್ನಿಂಗ್ಸ್​​ ಕಟ್ಟಿದ ಸ್ಮರಣ್​ ಬ್ಯಾಕ್ ಟು ಬ್ಯಾಕ್​ ಸೆಂಚುರಿ ಸಿಡಿಸಿದ್ರು. ಈ ಮೂಲಕ ಸೆಮಿಸ್​ ಸಮರವನ್ನ ಸ್ಮರಣೀಯವಾಗಿಸಿಕೊಂಡ್ರು. 

ಇದನ್ನೂ ಓದಿ:ದೆಹಲಿಯ ಇಂಡಿಯಾ ಎಐ ಇಂಫ್ಯಾಕ್ಟ್ ಶೃಂಗದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಂದ ಶರ್ಟ್ ಬಿಚ್ಚಿ ಪ್ರತಿಭಟನೆ!

ಸೆಮಿಫೈನಲ್​ ಪಂದ್ಯ ಮಾತ್ರವಲ್ಲ. ಈ ಸೀಸನ್​ನೂದ್ದಕ್ಕೂ ರಣಜಿ ಟೂರ್ನಿಯಲ್ಲಿ ಸ್ಮರಣ್​ ಕನ್ಸಿಸ್ಟೆಂಟ್​ ಆಟವಾಡಿದ್ದಾರೆ. 2 ಡಬಲ್​ ಸೆಂಚುರಿ, 2 ಸೆಂಚುರಿ, 3 ಹಾಫ್​ ಸೆಂಚುರಿ ಬಾರಿಸಿ ಸ್ಮರಣ್​ ಶೈನ್​ ಆಗಿದ್ದಾರೆ. ಆಡಿದ 13 ಇನ್ನಿಂಗ್ಸ್​ಗಳಲ್ಲಿ ಬರೋಬ್ಬರಿ 95ರ ಸರಾಸರಿಯಲ್ಲಿ ರನ್​ ಕೊಳ್ಳೆ ಹೊಡೆದಿರೋ ಕನ್ನಡಿಗ 950 ರನ್​ಗಳಿಸಿದ್ದಾರೆ. ಈ ಸೀಸನ್​ನ ಟಾಪ್ ರನ್ ಗೆಟರ್​ ಆಗಿ ಮೆರೆದಾಡ್ತಿದ್ದಾರೆ. 
ಸ್ಮರಣ್​ ರವಿಚಂದ್ರನ್​ 22 ವರ್ಷ ವಯಸ್ಸಿಗೆ ರೆಡ್​ ಬಾಲ್​ ಕ್ರಿಕೆಟ್​ನಲ್ಲಿ ಸಖತ್ ಸಕ್ಸಸ್​​ ಕಂಡಿದ್ದಾರೆ. ಬರೋಬ್ಬರಿ 70.66ರ ಸರಾಸರಿಯನ್ನ ಫಸ್ಟ್​ ಕ್ಲಾಸ್​ ಕ್ರಿಕೆಟ್​ನಲ್ಲಿ ಸ್ಮರಣ್​ ಹೊಂದಿದ್ದಾರೆ. 15 ಪಂದ್ಯಗಳಿಂದ 1272 ರನ್​ಗಳಿಸಿದ್ದು ಅಜೇಯ 227 ರನ್​ ಸ್ಮರಣ್​ ಬೆಸ್ಟ್​ ಸ್ಕೋರ್​ ಆಗಿದೆ. 4 ಸೆಂಚುರಿ, 4 ಹಾಫ್​ ಸೆಂಚುರಿ ಸ್ಮರಣ್​ ಬ್ಯಾಟ್​ನಿಂದ ಬಂದಿವೆ.

ಲಿಸ್ಟ್​-ಎ ಕ್ರಿಕೆಟ್​ನಲ್ಲೂ ಕನ್ನಡಿಗನ ದರ್ಬಾರ್

ವೈಟ್​​ಬಾಲ್ ಕ್ರಿಕೆಟ್​ನಲ್ಲೂ ಸ್ಮರಣ್​ ರವಿಚಂದ್ರನ್ ದರ್ಬಾರ್​ ನಡೆಸಿದ್ದಾರೆ. ಈ ಸೀಸನ್​ನ ವಿಜಯ್​ ಹಜಾರೆ ಟೂರ್ನಿಯಲ್ಲಿ 7 ಇನ್ನಿಂಗ್ಸ್​ಗಳಲ್ಲಿ ಬರೋಬ್ಬರಿ 72.17ರ ಸರಾಸರಿಯಲ್ಲಿ 2 ಸೆಂಚುರಿ 2 ಹಾಫ್​ಸೆಂಚುರಿ ಸಹಿತ 433 ರನ್​ ಚಚ್ಚಿದ್ರು. ಒಟ್ಟಾರೆ ಲಿಸ್ಟ್​ ಎ ಕ್ರಿಕೆಟ್​ನಲ್ಲಿ 14 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿರೋ ಸ್ಮರಣ್​, 50ರ ಸರಾಸರಿಯನ್ನ ಹೊಂದಿದ್ದಾರೆ.  

ಇದನ್ನೂ ಓದಿ: ಜಿಂಬಾಬ್ವೆ ಆಟಕ್ಕೆ ಬೆರಗಾದ ಕ್ರಿಕೆಟ್ ಲೋಕ.. ಆಗ ಆಸ್ಟ್ರೇಲಿಯಾ, ಈಗ ಲಂಕಾ ದಹನ..!

ಚುಟುಕು ಫಾರ್ಮೆಟ್​ನಲ್ಲೂ ಸ್ಮರಣ್​ ರವಿಚಂದ್ರನ್ ಅಬ್ಬರ ನಡೆದಿದೆ. ಡೊಮೆಸ್ಟಿಕ್ ಸಕ್ಯೂಟ್​ನಲ್ಲಿ ಆಡಿರೋ 13 ಪಂದ್ಯಗಳಲ್ಲೇ 489 ರನ್​ಗಳಿಸಿರೋ ಸ್ಮರಣ್​ 1 ಶತಕವನ್ನೂ ಸಿಡಿಸಿ ಮಿಂಚಿದ್ದಾರೆ. 162.45ರ ಸಾಲಿಡ್​ ಸರಾಸರಿ ಹೊಂದಿದ್ದು, 30 ಸಿಕ್ಸರ್, 32 ಬೌಂಡರಿಗಳನ್ನ ಚಚ್ಚಿದ್ದಾರೆ. ಸ್ಮರಣ್​ ಪರ್ಫಾಮೆನ್ಸ್​ಗೆ ಸನ್​ರೈಸರ್ಸ್​ ಹೈದ್ರಾಬಾದ್​ ಫ್ರಾಂಚೈಸಿ ಮ್ಯಾನೇಜ್​ಮೆಂಟ್​ ಕೂಡ ಫುಲ್ ಇಂಪ್ರೆಸ್​ ಆಗಿದೆ. ಈ ಸೀಸನ್​ನಲ್ಲಿ ಚಾನ್ಸ್​ ಸಿಗೋ ಸಾಧ್ಯತೆಯೂ ದಟ್ಟವಾಗಿದೆ. 

22 ವರ್ಷ ವಯಸ್ಸಿಗೆ ಮೂರೂ ಫಾರ್ಮೆಟ್​ನಲ್ಲಿ ಮಿಂಚಿನ ಪರ್ಫಾಮೆನ್ಸ್​ ನೀಡಿರುವ ಸ್ಮರಣ್​ ರವಿಚಂದ್ರನ್​, ಟೀಮ್ ಇಂಡಿಯಾ ಎಂಟ್ರಿಗೆ ತುದಿಗಾಲಲ್ಲಿ ನಿಂತಿದ್ದಾರೆ. ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ನಿಂದ ಇಂಡಿಯನ್ ಟೀಮ್​ ಡೋರ್​ ಬಲವಾಗಿ ಬಡಿತಿದ್ದಾರೆ. ಸ್ಮರಣ್​ ಆಟಕ್ಕೆ ನ್ಯಾಷನಲ್ ಸೆಲೆಕ್ಟರ್ಸ್​ ಕೂಡ ಇಂಪ್ರೆಸ್​ ಆಗಿದ್ದಾರೆ. ಇದೇ ಆಟ ಮುಂದುವರೆಸಿದ್ರೆ ಶೀಘ್ರದಲ್ಲೇ ಕನ್ನಡಿಗ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: ಟೆಸ್ಟ್ ರೈಡ್‌, ಫೈನಾನ್ಸ್, ಸಬ್ಸಿಡಿ A to Z ಮಾಹಿತಿ.. EV ಎಕ್ಸ್​ಪೋಗೆ ಬಂದ್ರೆ ನಿಮಗೆ ಏನೆಲ್ಲ ಲಾಭ ಸಿಗುತ್ತೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Smran Ravichandran
Advertisment