/newsfirstlive-kannada/media/media_files/2026/02/20/evready-1-2026-02-20-14-48-40.jpg)
ಇದು ನ್ಯೂಸ್​ಫಸ್ಟ್​ ಆಯೋಜಿಸುತ್ತಿರುವ ಕರ್ನಾಟಕದ ಅತಿದೊಡ್ಡ ಇವಿ ವಾಹನಗಳ ಎಕ್ಸ್​​​ಪೋ. ಫೆಬ್ರವರಿ 21ರಿಂದ 23ರವರೆಗೆ ಮೂರು ದಿನ ಬೆಂಗಳೂರಿನ ಅರಮನೆ ಮೈದಾನ ತ್ರಿಪುರವಾಸಿನಿಯಲ್ಲಿ ಈ ಎಕ್ಸ್​ಪೋ ನಡೆಯಲಿದೆ. ಹಾಗಾದ್ರೆ, ಈ ಎಕ್ಸ್​ಪೋ ವಿಶೇಷ ಏನು? ಯಾವೆಲ್ಲಾ ಕಂಪನಿಗಳು ಇದರಲ್ಲಿ ಪಾಲ್ಗೊಳ್ತಾವೆ. ಇಲ್ಲಿ ಬರೋ ಜನರಿಗೆ ಏನು ಲಾಭ ಈ ಎಲ್ಲಾ ಡೀಟೇಲ್ಸ್​​ ಈ ರಿಪೋರ್ಟ್​ನಲ್ಲಿ.
ಒಂದೇ ವೇದಿಕೆಯಲ್ಲಿ..
ನ್ಯೂಸ್‌ಫಸ್ಟ್ ಕನ್ನಡ ತನ್ನ ಪರಿಸರ ಸ್ನೇಹಿ ಅಭಿಯಾನದ ಅಂಗವಾಗಿ ಕರ್ನಾಟಕದ ಅತಿದೊಡ್ಡ ಎಲೆಕ್ಟ್ರಿಕ್​ ವೆಹಿಕಲ್ಸ್​​ ಎಕ್ಸ್‌ಪೋವನ್ನ ಆಯೋಜನೆ ಮಾಡುತ್ತಿದೆ. EV Ready ಹೆಸರಿನಲ್ಲಿ ನಡೆಯುತ್ತಿರುವ ಈ ಎಕ್ಸ್​ಪೋನಲ್ಲಿ, ಸ್ಕೂಟರ್​​, ಬೈಕ್​​, ಆಟೋ ​​ಕಾರುಗಳಿಂದ ಹಿಡಿದು ಬಸ್, ಟ್ರಕ್, ಟ್ರಾಕ್ಟರ್‌ಗಳವರೆಗೆ ಎಲ್ಲವೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿವೆ.
ಇದನ್ನೂ ಓದಿ: ಕಂಟ್ರಿ vs ಕ್ಲಬ್.. ಕೋಚ್ ಗಂಭೀರ್ ಆಯ್ಕೆ ಯಾವುದು?
/filters:format(webp)/newsfirstlive-kannada/media/media_files/2026/02/16/ev-expo-2026-02-16-17-22-33.jpg)
ಇವಿ ವಾಹನಗಳನ್ನು ಹತ್ತಿರದಿಂದ ನೋಡೋದು, ಸ್ಪರ್ಶಿಸೋದು ಮತ್ತು ಅದರ ಅನುಭವ ಪಡೆದುಕೊಳ್ಳುವ ಅಪೂರ್ವ ಅವಕಾಶವನ್ನು ಈ ಎಕ್ಸ್​​ಪೋ ಒದಗಿಸಿಕೊಡುತ್ತಿದೆ. ಮಧ್ಯಮವರ್ಗದವರಿಗೆ ಸರಿ ಹೊಂದುವ ಬೈಕ್, ​ ಕಾರುಗಳು ಹಾಗೆನೇ ಲಕ್ಸುರಿ ಮತ್ತು ಅಲ್ಟ್ರಾ ಲಕ್ಸುರಿ ಕಾರುಗಳು ಸಹ ಈ ಎಕ್ಸ್​ಪೋನಲ್ಲಿ ಭಾಗವಹಿಸ್ತಿವೆ.
ನಿಮ್ಮ ಅನುಮಾನಗಳಿಗೆ ಸಿಗಲಿದೆ ಸ್ಪಷ್ಟ ಉತ್ತರ
ಎಲೆಕ್ಟ್ರಿಕ್​ ವೆಹಿಕಲ್​​ಗಳು ಅಂದಾಕ್ಷಣ ಚಾರ್ಚಿಂಗ್​ ಇರಬಹುದು, ಬ್ಯಾಟರಿ ಲೈಫ್​ ಇರಬಹುದು, ಸೇಫ್ಟಿ ಇರಬಹುದು ಜೊತೆಗೆ ರೀಸೇಲ್​​ ಆಗುತ್ತೋ ಇಲ್ವೋ ಅನ್ನೋ ಗೊಂದಲಗಳು ಸಾಕಷ್ಟು ಜನರಲ್ಲಿ ಇನ್ನೂ ಇದೆ. ಹಾಗಾಗಿ ಜನರು ನೇರವಾಗಿ ವಾಹನಗಳನ್ನು ನೋಡಿ, ತಮ್ಮಲ್ಲಿರೋ ಪ್ರಶ್ನೆಗಳಿಗೆ ತಜ್ಞರ ಜೊತೆ ಮಾತನಾಡಿ ಉತ್ತರವನ್ನ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ದೆಹಲಿಯ ಇಂಡಿಯಾ ಎಐ ಇಂಫ್ಯಾಕ್ಟ್ ಶೃಂಗದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಂದ ಶರ್ಟ್ ಬಿಚ್ಚಿ ಪ್ರತಿಭಟನೆ!
/filters:format(webp)/newsfirstlive-kannada/media/media_files/2026/02/16/ev-expo02-1-2026-02-16-17-24-19.jpg)
ಇದೇ ಮೊದಲ ಬಾರಿಗೆ, ಇವಿ ಬಸ್‌ಗಳು, ಟ್ರಕ್‌ಗಳು ಮತ್ತು ಟ್ರಾಕ್ಟರ್‌ಗಳಂತಹ ಭಾರೀ ವಾಹನಗಳೂ ಕೂಡ ಈ ಎಕ್ಸ್​ಪೋನಲ್ಲಿ ಭಾಗಿಯಾಗುತ್ತಿವೆ. ಎಕ್ಸ್​ಪೋದಲ್ಲಿ ಟೆಸ್ಟ್ ರೈಡ್‌ಗಳು, ತಾಂತ್ರಿಕ ಮಾಹಿತಿ, ಫೈನಾನ್ಸ್ ಹಾಗೂ ಸಬ್ಸಿಡಿ ವಿವರಗಳೂ ಲಭ್ಯವಿದೆ. ಇವಿ ವೆಹಿಕಲ್ಸ್​ ಖರೀದಿ ಮಾಡುಬೇಕು ಅನ್ನೋ ಯೋಚನೆಯಲ್ಲಿರುವವರಿಗೆ ಇದು ಖಂಡಿತಾ ಒನ್-ಸ್ಟಾಪ್ ಡೆಸ್ಟಿನೇಷನ್.
ಯಾವೆಲ್ಲ ಬ್ರಾಂಡ್​ಗಳು..?
ಪ್ರತಿಷ್ಠಿತಿ ಇವಿ ಬ್ರಾಂಡ್​​ಗಳಾದ ಟಾಟಾ ಇವಿ. ಟಾಟಾ ಮೋಟಾರ್ಸ್​ ಕಮರ್ಷಿಯಲ್​ ವೆಹಿಕಲ್​ಗಳು, ಮಹೀಂದ್ರಾ ಎಲೆಕ್ಟ್ರಿಕ್​ ಕಾರುಗಳು ಹಾಗೂ ಮಹೀಂದ್ರಾ ಲಾಸ್ಟ್​ ಮೈಲ್​ ಮೊಬಿಲಿಟಿ, ಅಶೋಕ್​ ಲೈಲಾಂಡ್​ ಟ್ರಕ್​​ಗಳು, ಸ್ವಿಚ್​ ಮೊಬಿಲಿಟಿ, ಇಕಾ ಮತ್ತು ವೋಲ್ವೋ ಐಶರ್​ ಕಮರ್ಶಿಯಲ್​ ವೆಹಿಕಲ್​ಗಳು ಭಾಗವಹಿಸಲಿವೆ. ಇನ್ನೂ ಕಾರುಗಳ ವಿಭಾಗದಲ್ಲಿ ಕಿಯಾ ಎಲೆಕ್ಟ್ರಿಕ್​ ಕಾರುಗಳು, ಎಂಜಿ ಮೋಟಾರ್ಸ್​, ಮರ್ಸಿಡಿಸ್​ ಬೆನ್ಜ್​ ಸೇರಿದಂತೆ ಅನೇಕ ಬ್ರಾಂಡ್​ಗಳು ಭಾಗವಹಿಸಲಿವೆ. ಬೈಕ್​​ಗಳ ವಿಭಾಗದಲ್ಲಿ ಏಥರ್​, ಟಿವಿಎಸ್​, ವಿಡಾ ಹೀರೋ, ಅಲ್ಟ್ರಾ ವಾಯ್ಲೆಟ್​ ಟೂವೀಲರ್​​ಗಳು ಭಾಗವಹಿಸುತ್ತಿರುವುದು ವಿಶೇಷವಾಗಿದೆ.
ಇದನ್ನೂ ಓದಿ:ಜಿಂಬಾಬ್ವೆ ಆಟಕ್ಕೆ ಬೆರಗಾದ ಕ್ರಿಕೆಟ್ ಲೋಕ.. ಆಗ ಆಸ್ಟ್ರೇಲಿಯಾ, ಈಗ ಲಂಕಾ ದಹನ..!
/filters:format(webp)/newsfirstlive-kannada/media/media_files/2026/02/17/ev-expo-newsfirst-2026-02-17-18-04-56.jpg)
ಸರ್ಕಾರಿ ಸಂಸ್ಥೆಗಳಾದ ಕರ್ನಾಟಕ ರೋಡ್​ ಸೇಫ್ಟಿ ಇಲಾಖೆ, ಕರ್ನಾಟಕ ಸಾರಿಗೆ, ಬೆಸ್ಕಾಂ ಹಾಗೂ ಕೆಪಿಟಿಸಿಎಲ್​ ಸಂಸ್ಥೆಗಳೂ ಭಾಗವಹಿಸುತ್ತಿರುವುದು ಕೂಡ ವಿಶೇಷವಾಗಿದೆ. ಹಾಗಾಗಿ ತಪ್ಪದೇ ಎಕ್ಸ್​ಪೋಗೆ ಭೇಟಿ ನೀಡಿ. ಇದರ ಲಾಭ ಪಡೆಯಿರಿ. ನ್ಯೂಸ್​ಫಸ್ಟ್​ನ ಈ ಎಕ್ಸ್​ಪೋ ಇದು ಕೇವಲ ವಾಹನ ಮೇಳವಲ್ಲ. ಇದು ಭವಿಷ್ಯದ ಸಾರಿಗೆ ಕ್ರಾಂತಿ.
ಭರತ್​ ಕೃಷ್ಣಪ್ಪ​, ನ್ಯೂಸ್​​ಫಸ್ಟ್​ ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us