/newsfirstlive-kannada/media/media_files/2026/02/07/gambhir-5-2026-02-07-12-46-39.jpg)
ಐಪಿಎಲ್ ಸೀಸನ್-19 ಹತ್ತಿರವಾಗ್ತಿದಂತೆ ರಾಜಸ್ಥಾನ್ ರಾಯಲ್ಸ್​ ತಂಡದಲ್ಲಿ ದಿನಕ್ಕೊಂದು ಬದಲಾವಣೆ ಆಗ್ತಿದೆ. ಇತ್ತೀಚಿಗಷ್ಟೇ ಆರ್​ಆರ್ ತಂಡಕ್ಕೆ ನೂತನ ನಾಯಕನ ಆಯ್ಕೆ ನಡೆಯಿತು. ಆದ್ರೀಗ ಮಹತ್ವದ ಹುದ್ದೆಗೆ ಮಾಜಿ ಕ್ರಿಕೆಟಿಗ ಕೋಚ್​ಗೆ ಆರ್​ಆರ್​ ಬಿಗ್ ಡೀಲ್ ಆಫರ್ ಮಾಡಿದೆ. ರಾಜಸ್ಥಾನ್​​​​​​​​​​ ಫ್ರಾಂಚೈಸಿ ಆಫರ್ ಮಾಡಿದ್ದು ಯಾರು? ಬನ್ನಿ ನೋಡೋಣ.
ಜುಲೈ 9, 2024! ಗೌತಮ್ ಗಂಭೀರ್, ಟೀಮ್ ಇಂಡಿಯಾ ಕೋಚ್ ಹುದ್ದೆ ಅಲಂಕರಿಸಿದ ದಿನ. ಗಂಭೀರ್ ಕೋಚ್ ಹುದ್ದೆಗೇರಿ ಬರೋಬ್ಬರಿ 19 ತಿಂಗಳಾಯ್ತು. ರಾಷ್ಟ್ರೀಯ ತಂಡದ ಕೋಚ್ ಆಗಿ ಗಂಭೀರ್ ಸಾಕಷ್ಟು ಏಳು ಬೀಳುಗಳನ್ನ ಕಂಡಿದ್ದಾರೆ. ಆದ್ರೆ ಟಿ-20 ಫಾರ್ಮೆಟ್​​ನಲ್ಲಿ ಮಾತ್ರ ಗೌತಿ, ನಿರೀಕ್ಷೆಗೂ ಮೀರಿದ ಸಕ್ಸಸ್ ಕಂಡಿದ್ದಾರೆ. ಈ ಯಶಸ್ಸೇ ಗಂಭೀರ್​​ಗೆ ಇದೀಗ ಬಿಗ್ ಡೀಲ್ ಬರುವಂತೆ ಮಾಡಿದೆ.
ಇದನ್ನೂ ಓದಿ: ನಂದಿನಿ ಉತ್ಪನ್ನಗಳ ವಿರುದ್ಧ ಅಪಪ್ರಚಾರ- ವೈದ್ಯೆ ಶರಣ್ಯ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು
/filters:format(webp)/newsfirstlive-kannada/media/media_files/2026/01/06/gambhir-4-2026-01-06-14-11-07.jpg)
ಗಂಭೀರ್ ಆಯ್ಕೆ ಯಾವುದು?
ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್​​ಗೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯಿಂದ ಕೋಟಿ ಕೋಟಿ ಹಣದ ಆಫರ್ ಬಂದಿದೆ. ಈ ಅವಕಾಶ ಗಂಭೀರ್​ಗೆ, ಲೈಫ್​ ಟೈಮ್​ನಲ್ಲಿ ಬರೋದು ಒಂದೇ ಒಂದು ಸಲ. ಈ ಆಫರ್​ ಬಗ್ಗೆ ಗಂಭೀರ್, ಗಂಭೀರವಾಗೇ ಚಿಂತಿಸುತ್ತಿದ್ದಾರೆ. ಆ ಆಫರ್​ ಪಡೆಯಬೇಕಾದ್ರೆ ಗೌತಿ, ಟೀಮ್ ಇಂಡಿಯಾ ಕೋಚ್ ಹುದ್ದೆ ತ್ಯಜಿಸಬೇಕು. ಸದ್ಯ ಕೋಚ್ ಗಂಭೀರ್, ಕಂಟ್ರಿ ವರ್ಸಸ್​ ಕ್ಲಬ್ ಆಯ್ಕೆಯ ಒತ್ತಡಕ್ಕೆ ಸಿಲುಕಿದ್ದಾರೆ.
ಆರ್​ಆರ್​ ಫ್ರಾಂಚೈಸಿ ಗೌತಮ್ ಗಂಭೀರ್​ಗೆ ಕೊಟ್ಟಿರೋದು ಅಂತಿಂತಾ ಆಫರ್ ಅಲ್ಲ. ಕಣ್ಣು ಮುಚ್ಚಿಕೊಂಡು ಎರಡೂ ಕೈಗಳಿಂದ ಬಾಚಿಕೊಳ್ಳುವ ಆಫರ್ ಅದಾಗಿದೆ. ಗಂಭೀರ್​ಗೆ ರಾಯಲ್ಸ್​ ಫ್ರಾಂಚೈಸಿ ನೀಡಿರುವ ಆಫರ್ ಬಗ್ಗೆ ಕೇಳಿದ್ರೆ, ನೀವೂ ಶಾಕ್ ಆಗ್ತೀರಾ. ಆರ್​ಆರ್​ ಫ್ರಾಂಚೈಸಿ ಗಂಭೀರ್​​ಗೆ ಪಾರ್ಟ್ನರ್, CEO ಮತ್ತು ಮೆಂಟರ್ ರೋಲ್ ಆಫರ್​ ಆಫರ್ ಮಾಡಲಾಗಿದೆ. ಇದುವರೆಗೂ ಯಾವ ಕ್ರಿಕೆಟಿಗನಿಗೂ ಸಿಗದ ಮೆಗಾ ಆಫರ್ ಇದಾಗಿದೆ.
ಆರ್​ಆರ್​ ಫ್ರಾಂಚೈಸಿ ಗಂಭೀರ್​​ಗೆ ನೀಡಿರುವ ಆಫರ್ ಮತ್ತು ರೋಲ್, ತುಂಬಾನೇ ದೊಡ್ಡದು. ಫ್ರಾಂಚೈಸಿಯ ಪಾರ್ಟ್ನರ್, CEO ಮತ್ತು ಮೆಂಟರ್ ಆದ್ರೆ ಗಂಭೀರ್​​ಗೆ, 2 ರಿಂದ 3 ಪರ್ಸಂಟ್ ಮಾಲಿಕತ್ವದ ಪಾಲು ಸಿಗುತ್ತದೆ. ಜೊತೆಗೆ ಇಡೀ ತಂಡದ ಜವಾಬ್ದಾರಿ ಗಂಭೀರ್​ ಮೇಲಿರುತ್ತದೆ. ಗಂಭೀರ್ ಯಾರ ಹಸ್ತಕ್ಷೇಪವಿಲ್ಲದೆ ಏಕಾಂಗಿಯಾಗಿ ನಿರ್ಧಾರಗಳನ್ನ ತೆಗೆದುಕೊಳ್ಳಬಹುದು. ಒಂದೇ ಮಾತಲ್ಲಿ ಹೇಳೋದಾದ್ರೆ, ಇಡೀ ಫ್ರಾಂಚೈಸಿಯೇ ಗಂಭೀರ್ ಕೈಯಲ್ಲಿರುತ್ತದೆ.
/filters:format(webp)/newsfirstlive-kannada/media/media_files/2025/11/19/gambhir-and-agarkar-2025-11-19-13-32-58.jpg)
ಗಂಭೀರ್ ಕೇವಲ ಶ್ರೇಷ್ಟ ಕ್ರಿಕೆಟಿಗ ಮಾತ್ರವಲ್ಲ. ಆತ ಅತ್ಯುತ್ತಮ ಲೀಡರ್ ಅನ್ನೋದನ್ನೂ ಪ್ರೂವ್ ಮಾಡಿದ್ದಾರೆ. ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್​ರೈಡರ್ಸ್​ ತಂಡದ ನಾಯಕನಾಗಿದ್ದ ಗೌತಿ, 2 ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಹಾಗೆ ಮೆಂಟರ್ ಆಗಿಯೂ ಕೆಕೆಆರ್​ಗೆ ಪ್ರಶಸ್ತಿ ಸಿಗುವಂತೆ ಮಾಡಿದ್ದಾರೆ. ಗಂಭೀರ್ ​​​ಎಕೋ ಸಿಸ್ಟಮ್ ಗೊತ್ತು. ಡ್ರೆಸಿಂಗ್​ ರೂಮ್​​ನಲ್ಲಿ ಕಮ್ಯಾಂಡ್ ಮಾಡಲು ಗೊತ್ತು. ಆರ್​ಆರ್​ ಫ್ರಾಂಚೈಸಿ ಗಂಭೀರ್​ ಮೇಲೆ ಕಣ್ಣಿಟ್ಟಿದೆ. ​
ಗಂಭೀರ್​​​ಗೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಬಿಗ್ ಆಫರ್ ನೀಡಿರೋದು ಸರ್​ಪ್ರೈಸ್​​ ಏನಿಲ್ಲ.! ಆದ್ರೆ ಗಂಭೀರ್, ಬಿಗ್ ಡೀಲ್​ಗೆ ಕೈಹಾಕ್ತಾರಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಯಕಂದ್ರೆ ಗಂಭೀರ್​​ಗೆ ಕಾಂಟ್ರ್ಯಾಕ್ಟ್ ಇರೋದು 2027ರವರೆಗೆ ಮಾತ್ರ. ಆದ್ರೆ ಗೌತಿ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್​ವರೆಗೂ ಟೀಮ್ ಇಂಡಿಯಾ ಜೊತೆ ಇರಲು ಚಿಂತಿಸುತ್ತಿದ್ದಾರೆ ಎನ್ನಲಾಗ್ತಿದೆ.
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಮಾಡಿರುವ ಆಫರ್, ಎಂಥಹವರಿಗೂ ಟೆಂಪ್ಟ್ ಆಗದೇ ಇರೋದಿಲ್ಲ.​ ಹಾಗಾಗಿ ಗಂಭೀರ್ ಮುಂದೆ ಯಾವ ನಿರ್ಧಾರ ಕೈಗೊಳ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.​​​​​​​​​​​
ಇದನ್ನೂ ಓದಿ: ಪ್ಯಾನ್ ನಂಬರ್ ಇಲ್ಲದೇ 10 ಲಕ್ಷ ರೂ. ಕ್ಯಾಶ್ ಠೇವಣಿ, ವಿತ್ ಡ್ರಾಗೆ ಅವಕಾಶ- ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us