KL ರಾಹುಲ್, ಪ್ರಸಿದ್ಧ್​ ಕೃಷ್ಣ, ಸಿರಾಜ್​​ಗೆ 2 ತಿಂಗಳು ಸುದೀರ್ಘ ವಿಶ್ರಾಂತಿ.. ಕಾರಣವೇನು?

ಡೊಮೆಸ್ಟಿಕ್​ ಕ್ರಿಕೆಟ್​​ನ ಪ್ರತಿಷ್ಠಿತ ಟ್ರೋಫಿ ಅಗಸ್ಟ್​ 28ರಿಂದ ಆರಂಭವಾಗಲಿದೆ. ಟೀಮ್​ ಅನೌನ್ಸ್​ ಆದ ಬೆನ್ನಲ್ಲೇ ತಂಡಗಳಲ್ಲಿ ಸಿದ್ಧತೆಯೂ ಜೋರಾಗಿ ನಡೆದಿದೆ. ಇದರ ಮಧ್ಯೆ ಬಿಸಿಸಿಐ VS ಸೆಲೆಕ್ಟರ್ಸ್​​ ಸಂಘರ್ಷ ಶುರುವಾಗಿದೆ.

author-image
Bhimappa
KL_RAHUL_SIRAJ
Advertisment

ಬಿಸಿಸಿಐ VS  ಪ್ಲೇಯರ್ಸ್​​ ಆಯ್ತು, ಈಗ ಬಿಸಿಸಿಐ VS ಸೆಲೆಕ್ಟರ್ಸ್​​ ಸಂಘರ್ಷ ಶುರುವಾಗಿದೆ. ಬಿಸಿಸಿಐ ನಿಯಮಗಳನ್ನ ಸೌತ್​​ಝೋನ್​ ಸೆಲೆಕ್ಟರ್ಸ್​ ಗಾಳಿಗೆ ತೂರಿದ್ದಾರೆ. ಈ ಗುದ್ದಾಟದಲ್ಲಿ ಕೆ.ಎಲ್​ ರಾಹುಲ್​, ಪ್ರಸಿದ್ಧ್​ ಕೃಷ್ಣ, ಮೊಹಮ್ಮದ್​ ಸಿರಾಜ್​​ಗೆ ಲಾಟರಿ ಹೊಡೆದಿದೆ. ಬರೋಬ್ಬರಿ 2 ತಿಂಗಳ ಸುದೀರ್ಘ ರೆಸ್ಟ್​ ಸಿಗುವಂತಾಗಿದೆ. 

ಡೊಮೆಸ್ಟಿಕ್​ ಕ್ರಿಕೆಟ್​​ನ ಪ್ರತಿಷ್ಠಿತ ಟೂರ್ನಿ ದುಲೀಪ್​ ಟ್ರೋಫಿ ಆರಂಭಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಅಗಸ್ಟ್​ 28ರಿಂದ ಟೂರ್ನಿ ಆರಂಭವಾಗಲಿದ್ದು, ಟೀಮ್​ ಅನೌನ್ಸ್​ ಆದ ಬೆನ್ನಲ್ಲೇ ತಂಡಗಳಲ್ಲಿ ಸಿದ್ಧತೆಯೂ ಆರಂಭವಾಗಿದೆ. ಟೀಮ್​ ಇಂಡಿಯಾ ಟೆಸ್ಟ್​ ಕ್ಯಾಪ್ಟನ್​​ ಶುಭ್​ಮನ್​ ಗಿಲ್​, ಆರ್ಷ್​​​​ದೀಪ್​ ಸಿಂಗ್​, ಹರ್ಷಿತ್​ ರಾಣಾ, ಮೊಹಮ್ಮದ್​ ಶಮಿ, ಯಶಸ್ವಿ ಜೈಸ್ವಾಲ್​​, ಶ್ರೇಯಸ್​ ಅಯ್ಯರ್​, ದೃವ್​ ಜುರೇಲ್​ ಸೇರಿದಂತೆ ಟೆಸ್ಟ್​ ತಂಡದ ಪ್ರಮುಖ ಆಟಗಾರರೆಲ್ಲಾ ದೇಶಿ ಕ್ರಿಕೆಟ್​ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. 

PRASIDDH_KRISHNA (1)

BCCI ಬಾಸ್​​​ಗಳ ಸೂಚನೆಗೆ ಡೋಂಟ್​​ಕೇರ್​​.!

ಕಳೆದ ವರ್ಷವೇ ಟೀಮ್​ ಇಂಡಿಯಾ ಆಟಗಾರರು ಯಾವುದೇ ಸರಣಿ ಇಲ್ಲದೇ ಇರೋ ಸಮಯದಲ್ಲಿ ಡೊಮೆಸ್ಟಿಕ್​ ಕ್ರಿಕೆಟ್​ ಆಡೋದು ಕಡ್ಡಾಯ ಎಂಬ ನಿಯಮ ಜಾರಿಗೊಳಿಸಿದೆ. ಹೀಗಾಗಿಯೇ ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಸೇರಿದಂತೆ ಹಲ ಆಟಗಾರರು ದುಲೀಪ್​ ಟ್ರೋಫಿ ಆಡ್ತಿದ್ದಾರೆ. ಸೆಂಟ್ರಲ್​ ಝೋನ್​, ವೆಸ್ಟ್​ ಝೋನ್​, ಈಸ್ಟ್​ ಝೋನ್, ನಾರ್ಥ್​​​ ಝೋನ್​ ತಂಡಗಳಲ್ಲಿ ಸ್ಟಾರ್​​ಗಳಿಗೆ ಸ್ಥಾನ ನೀಡಲಾಗಿದೆ. ಆದ್ರೆ, ಸೌತ್​ ಝೋನ್​ ತಂಡದ ಮಾತ್ರ ಬಾಸ್​​ಗಳ ಸೂಚನೆಗೆ ಡೋಂಟ್​ಕೇರ್​ ಎಂದಿದೆ. ​​

ನಿಯಮ ಗಾಳಿಗೆ ತೂರಿದ ಸೌತ್​​​​ ಝೋನ್​.!

ಉಳಿದೆಲ್ಲಾ ತಂಡಗಳು ಟೀಮ್​ ಇಂಡಿಯಾದ ಟೆಸ್ಟ್​ ಪ್ಲೇಯರ್​​ಗಳಿಗೆ ಆದ್ಯತೆಯ ಮೇಲೆ ತಂಡದಲ್ಲಿ ಸ್ಥಾನ ನೀಡಿವೆ. ಆದ್ರೆ, ಸೌತ್​ ಝೋನ್​​ ಮಾತ್ರ ಸ್ಟಾರ್​​ಗಳನ್ನ ಬಿಟ್ಟು ಟೀಮ್​ ಸೆಲೆಕ್ಟ್​ ಮಾಡಿದೆ. ನಿಜ ಹೇಳಬೇಕಂದ್ರೆ ಟೆಸ್ಟ್ ತಂಡದ ಭಾಗವಾಗಿರೋ ಒಬ್ಬೇ ಒಬ್ಬ ಆಟಗಾರನನ್ನ ತಂಡಕ್ಕೆ ಆಯ್ಕೆ ಮಾಡಿಲ್ಲ. ಇಂಗ್ಲೆಂಡ್​​ ಪ್ರವಾಸ ಮುಗಿಸಿ ಬಂದವರಿಗೆ ಮತ್ತಷ್ಟು ರೆಸ್ಟ್​ ನೀಡಲಾಗ್ತಿದೆ.

ರಾಹುಲ್​, ಸಿರಾಜ್​, ಪ್ರಸಿದ್ಧ್​​ಗೆ ಫುಲ್​ ರೆಸ್ಟ್​​.!

ಟೀಮ್​ ಇಂಡಿಯಾ ಟೆಸ್ಟ್​ ತಂಡದ ಭಾಗವಾಗಿರೋ ಕೆ.ಎಲ್​ ರಾಹುಲ್​, ಮೊಹಮ್ಮದ್​ ಸಿರಾಜ್​, ಪ್ರಸಿದ್ಧ ಕೃಷ್ಣ, ವಾಷಿಂಗ್ಟನ್​ ಸುಂದರ್​​ ಇಂಗ್ಲೆಂಡ್​ ಪ್ರವಾಸ ಮುಗಿಸಿ ಬಂದು 2 ವಾರಗಳೇ ಉರುಳಿವೆ. ಸತತ ಕ್ರಿಕೆಟ್​​ ಆಡಿ ದಣಿದಿದ್ದ ಆಟಗಾರರು ವಿಶ್ರಾಂತಿ ಪಡೆದು ರೆಡಿಯಾಗಿದ್ದಾರೆ. ಮುಂಬರೋ ಏಷ್ಯಾಕಪ್​ ತಂಡದಲ್ಲೂ ಇವರ್ಯಾರೂ ಇಲ್ಲ. ಆದ್ರೂ ಇವರನ್ನ ಸೌತ್​ ಝೋನ್​ ಟೀಮ್​ ಸೆಲೆಕ್ಷನ್​ಗೆ ಪರಿಗಣಿಸಿಲ್ಲ. ಮುಂದೆ ಇವ್ರು ಕಣಕ್ಕಿಳಿಯೋದು ಅಕ್ಟೋಬರ್​​ನಲ್ಲಿ ನಡೆಯೋ ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ. ಅಂದ್ರೆ ಸುದೀರ್ಘ 2 ತಿಂಗಳ ವಿಶ್ರಾಂತಿ ಇವ್ರಿಗೆ ಸಿಗಲಿದೆ. 

ಇದನ್ನೂ ಓದಿ:ಏಷ್ಯಾ ಕಪ್​ ಆಯ್ಕೆಯಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಅನ್ಯಾಯ.. ಗಂಭೀರ್ ಸರ್ವಾಧಿಕಾರತ್ವ ಹೇಗಿದೆ?

KL_RAHUL (8)

ಸ್ಟಾರ್​​ಗಳಿಗೆ ಚಾನ್ಸ್​​ ಕೊಡಲ್ಲ ಅಂದಿದ್ಯಾಕೆ.?

ಬಿಸಿಸಿಐ ನಿಯಮವನ್ನ ಸೌತ್​ಝೋನ್​ ಗಾಳಿಗೆ ತೂರಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಿಸಿಸಿಐ vs ಸೌತ್​​ಝೋನ್​ ಸೆಲೆಕ್ಟರ್ಸ್​​ ಸಂಘರ್ಷ ಶುರುವಾಗಿದೆ. ಆದ್ರೆ, ಇದಕ್ಕೆ ಸೌತ್​​ಝೋನ್​ ತನ್ನದೆ ಆದ ಸಮರ್ಥನೆ ಕೊಡ್ತಿದೆ. ನಾವು ನಮ್ಮ ಕೋರ್​ ಟೀಮ್​ ಅನ್ನೇ ಆಡಿಸೋದು ಅನ್ನೋದು ಸೌತ್​ ಝೋನ್​​ನ ಸೆಲೆಕ್ಟರ್ಸ್​​​ ವಾದವಾಗಿದೆ. ಟೀಮ್​ ಇಂಡಿಯಾ ಸ್ಟಾರ್​​ಗಳಿಗಿಂತ ಯುವ ಆಟಗಾರರಿಗೆ ನಾವು ಹೆಚ್ಚಿನ ಆದ್ಯತೆ ನೀಡ್ತಿವಿ ಎಂದು ಸೌತ್​​ಝೋನ್​​ ಹೇಳ್ತಿದೆ. 

ಕಳೆದ ವರ್ಷವೇ ಬಿಸಿಸಿಐ ಸೆಂಟ್ರಲ್​ ಕಾಂಟ್ರ್ಯಾಕ್ಟ್​​​ನಲ್ಲಿರೋ ಆಟಗಾರರು ಟೀಮ್​ ಇಂಡಿಯಾದ ಯಾವುದೇ ಸರಣಿಗಳಿಲ್ಲದೆ ಇದ್ರೆ ಡೊಮೆಸ್ಟಿಕ್​ ಕ್ರಿಕೆಟ್​ ಆಡೋದು ಕಡ್ಡಾಯ ಎಂಬ ರೂಲ್ಸ್​ ಮಾಡಿದೆ. ಇದನ್ನ ಉಲ್ಲಂಘಿಸಿದ ಶ್ರೇಯಸ್​​ ಅಯ್ಯರ್​ ನಿಷೇಧ ಶಿಕ್ಷೆ ಅನುಭವಿಸಿ ವಾಪಾಸ್ಸಾಗಿದ್ರೆ, ಇಶನ್​ ಕಿಶನ್​ ಇನ್ನೂ ವನವಾಸದಲ್ಲೇ ಇದ್ದಾರೆ. ಆದ್ರೆ, ಈ ವರ್ಷ ಆಟಗಾರರು ಬದಲು ಸೆಲೆಕ್ಟರ್ಸ್​ ಆಟಗಾರರನ್ನ ಹೊರಗಿಟ್ಟಿದ್ದಾರೆ. ಇದಕ್ಕೆ ಬಿಸಿಸಿಐ ಬಾಸ್​​ಗಳು ಹೇಗೆ ರಿಯಾಕ್ಟ್​ ಮಾಡ್ತಾರೆ ಅನ್ನೋದು ಸದ್ಯದ ಕುತೂಹಲ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

cricket players Mohammed Siraj KL Rahul T20 KL Rahul Gautam Gambhir
Advertisment