ಲೈಲಾ ಫೈಸಲ್​ ಜೊತೆ ಕ್ರಿಕೆಟಿಗ ಅಭಿಷೇಕ್ ಶರ್ಮಾ ಡೇಟಿಂಗ್​..?

ಅಭಿಷೇಕ್ ಶರ್ಮಾ ಸದ್ಯ ಕ್ರಿಕೆಟ್​ ಲೋಕದ ಸೆನ್ಸಷನ್​ ಆಗ್ಬಿಟ್ಟಿದ್ದಾರೆ. ಪಂಜಾಬ್​ ಪುತ್ತರ್​​ ರಣಾರ್ಭಟಕ್ಕೆ ಅಭಿಮಾನಿಗಳು ಫುಲ್​​ ಫಿದಾ ಆಗಿದ್ದಾರೆ. ಸೆನ್ಸೇಷನ್​ ಆಟದ ಬಳಿಕ ಸೋಷಿಯಲ್​ ಮೀಡಿಯಾದಲ್ಲಂತೂ ಅಭಿಷೇಕ್ ಹೆಸ್ರು ಟ್ರೆಂಡಿಂಗ್​ನಲ್ಲಿದೆ.

author-image
Ganesh Kerekuli
Abhishek Sharma (5)
Advertisment
  • T20 ಕ್ರಿಕೆಟ್​ನ ನಯಾ ಕಿಂಗ್​ ಅಭಿಷೇಕ್ ಸಿಂಗಲ್ಲಾ?
  • ಡೆಲ್ಲಿ ಬೆಡಗಿಗೆ ಪಂಜಾಬ್​ ಪುತ್ತರ್​ ಕ್ಲೀನ್​ ಬೋಲ್ಡ್​​​​?
  • ವೈರಲ್​ ಆಯ್ತು ಫೋಟೋ.. ಶುರುವಾಯ್ತು ಹಲ್​ಚಲ್

ಆನ್​ಫೀಲ್ಡ್​ನಲ್ಲಿ ಬೌಂಡರಿಗಳ ಬೋರ್ಗರೆತ, ಸಿಕ್ಸರ್​​ಗಳ ಸುರಿಮಳೆ ಸುರಿಸ್ತಿರೋ ಅಭಿಷೇಕ್​ ಶರ್ಮಾ ಕ್ರಿಕೆಟ್​ ಲೋಕದಲ್ಲಿ ಹೊಸ ಸೆನ್ಸೇಷನ್​ ಹುಟ್ಟು ಹಾಕಿದ್ದಾರೆ. ಕ್ರಿಕೆಟ್​ ಜಗತ್ತು ಕಂಡ ಲೆಜೆಂಡ್​ಗಳಿಂದ ಹಿಡಿದು ಪುಟ್ಟ ಪುಟ್ಟ ಫ್ಯಾನ್ಸ್​ವರೆಗೂ ಅಭಿಷೇಕ್ ನಾಮಜಪ ಮಾಡ್ತಿದ್ದಾರೆ. ಇದ್ರ ನಡುವೆ ಮತ್ತೊಂದು ಹೆಸ್ರು ಅಭಿಷೇಕ್​ ಶರ್ಮಾ ಜೊತೆಗೆ ಸುದ್ದಿಯಾಗ್ತಿದೆ. 

ಟೀಮ್​ ಇಂಡಿಯಾ ಡೇರಿಂಗ್​ ಬ್ಯಾಟರ್​​ ಅಭಿಷೇಕ್ ಶರ್ಮಾ ಸದ್ಯ ಕ್ರಿಕೆಟ್​ ಲೋಕದ ಸೆನ್ಸಷನ್​ ಆಗ್ಬಿಟ್ಟಿದ್ದಾರೆ. ಪಂಜಾಬ್​ ಪುತ್ತರ್​​ ರಣಾರ್ಭಟಕ್ಕೆ ಅಭಿಮಾನಿಗಳು ಫುಲ್​​ ಫಿದಾ ಆಗಿದ್ದಾರೆ. ಸೆನ್ಸೇಷನ್​ ಆಟದ ಬಳಿಕ ಸೋಷಿಯಲ್​ ಮೀಡಿಯಾದಲ್ಲಂತೂ ಅಭಿಷೇಕ್ ಹೆಸ್ರು ಸಖತ್​ ಟ್ರೆಂಡಿಂಗ್​ನಲ್ಲಿದೆ. ಟಿ-20 ಕ್ರಿಕೆಟ್​ನ ನಯಾ ಕಿಂಗ್​ ಎಂಬ ಪಟ್ಟವನ್ನೇ ಕೊಟ್ಟಿದ್ದಾರೆ.  

ಇದನ್ನೂ ಓದಿ: ವೀಕ್ಷಕರಿಗೆ ಶಾಕಿಂಗ್ ನ್ಯೂಸ್​.. ಬೇಸರದ ಸುದ್ದಿ ಹಂಚಿಕೊಂಡ ಪುಟ್ಟಕ್ಕನ ಅಳಿಯ ಕಂಠಿ..!

Abhishek Sharma (4)

ಆನ್​​ಫೀಲ್ಡ್​​​ನಲ್ಲಿ ಅಬ್ಬರದ ಆಟವಾಡ್ತಿರೋ ಅಭಿಷೇಕ್ ಶರ್ಮಾ ಫ್ಯಾನ್ಸ್​​ಗೆ ಭರ್ಜರಿ ಟ್ರೀಟ್​​ ನೀಡ್ತಿದ್ದಾರೆ. ಅಭಿಷೇಕ್​ ಆಟಕ್ಕೆ ಫಿದಾ ಆಗಿರೋ ಫ್ಯಾನ್ಸ್​ ಇದೀಗ ಆಫ್​ ದ ಫೀಲ್ಡ್​ ಜೀವನದ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಈ ಹುಡುಕಾಟದಲ್ಲಿ ಒಬ್ಳು ಸುಂದರಿಯೊಂದಿಗೆ ಅಭಿಷೇಕ್​ ಹೆಸ್ರು ಕೇಳಿ ಬಂದಿದೆ. ಆಕೆಯ ಹೆಸರೇ ಲೈಲಾ ಫೈಸಲ್​. ಈ ಲೈಲಾ ಫೈಸಲ್​ - ಅಭಿಷೇಕ್​ ಶರ್ಮಾ ಡೇಟಿಂಗ್​ ಮಾಡ್ತಿದ್ದಾರೆ ಅನ್ನೋ ಸುದ್ದಿ ಸದ್ಯ ಟ್ರೆಂಡಿಂಗ್​ನಲ್ಲಿದೆ. 

ಈ ಲೈಲಾ ಫೈಸಲ್​ಗೂ ಅಭಿಷೇಕ್ ಶರ್ಮಾ ಎಲ್ಲಿಂದ ಸಂಬಂಧ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡಿರಬಹುದು. ಈ ಪ್ರಶ್ನೆಗೆ ಪಕ್ಕಾ ಉತ್ತರ ಸದ್ಯಕ್ಕಂತೂ ಸಿಕ್ಕಿಲ್ಲ. ಆದ್ರೆ, ಇವರಿಬ್ಬರು ತುಂಬಾ ಕ್ಲೋಸ್ ಆಗಿ​​ ಕಾಣಿಸಿಕೊಂಡಿರೋ ಒಂದು ಫೋಟೋ ವೈರಲ್​ ಆಗ್ತಿದೆ. ಈ ಫೋಟೋ ಕಾರಣದಿಂದಲೇ ಇವರಿಬ್ಬರು ರಿಲೇಶನ್​ಶಿಪ್​ನಲ್ಲಿದ್ದಾರೆ ಎಂಬ​ ರೂಮರ್ಸ್​ ಹುಟ್ಟಿದೆ.  

ಇನ್ಸ್​​ಸ್ಟಾಗ್ರಾಂನಲ್ಲಿ ಲೈಲಾ ಫೈಸಲ್​ ಹಾಗೂ ಅಭಿಷೇಕ್​ ಶರ್ಮಾ ಪರಸ್ಪರ ಫಾಲೋ ಮಾಡ್ತಿದ್ದಾರೆ. ಡೇಟಿಂಗ್​ ರೂಮರ್ಸ್​ ಹಬ್ಬಿರೋವಾಗ ಇದೇನು ಸರ್​​ಪ್ರೈಸ್​ ಅನಿಸಲ್ಲ. ಅಭಿಷೇಕ್​ ಶರ್ಮಾ ಅವರ ತಾಯಿ ಹಾಗೂ ತಂಗಿ ಕೋಮಲ್​ ಶರ್ಮಾ ಕೂಡ ಲೈಲಾನ ಫಾಲೋ ಮಾಡ್ತಿದ್ದಾರೆ. ಜೊತೆಗೆ ಅಭಿಷೇಕ್ ಶರ್ಮಾ ಆನ್​ಫೀಲ್ಡ್​ನಲ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡಿದಾಗೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಹಾಕಿ ಲೈಲಾ ಫೈಸಲ್ ಶುಭಾಶಯ ಕೋರ್ತಾರೆ. ಪೋಟೋ ಹಾಗೂ ಪೋಸ್ಟ್​ಗಳೇ ಸದ್ಯ ಡೇಟಿಂಗ್​ ಗಾಸಿಪ್​ಗೆ ಆಹಾರವಾಗಿವೆ. 

ಯಾರು ಈ ಲೈಲಾ ಫೈಸಲ್?

ಅಭಿಷೇಕ್ ಶರ್ಮಾ ಜೊತೆಗೆ ಲೈಲಾ ಫೈಸಲ್​ ಸದ್ಯ ಸಖತ್​ ಸದ್ದು ಮಾಡ್ತಿದೆ. ದೆಹಲಿಯ ಲೈಲಾ ಫೈಸಲ್​​ social media influencer, ಮಾಡೆಲ್​.  LRF  ಅನ್ನೋ ಮಹಿಳೆಯರ ಲಕ್ಸುರಿ clothing brand ಇದ್ಯಲ್ಲ.. ಅದ್ರ ಓನರ್ ಕೂಡ ಹೌದು​. ಶ್ರೀಮಂತ ಕುಟುಂಬದ ಲೈಲಾ ಫೈಸಲ್​ ಸ್ಕೂಲಿಂಗ್​, ಕಾಲೇಜು ಮುಗಿಸಿದ್ದು ಡೆಲ್ಲಿಯಲ್ಲಿ. ಆ ಬಳಿಕ ಈಕೆ ಲಂಡನ್​ ತೆರಳಿ ಫ್ಯಾಶನ್ ​ಡಿಸೈನ್​ ಮಾಡಿ ಬಂದಿದ್ದಾರೆ. ಸದ್ಯ ಸಹೋದರಿ ಜೊತೆಗೂಡಿ LRF clothing brand ನಡೆಸ್ತಿದ್ದಾರೆ. 

ಇದನ್ನೂ ಓದಿ: ಪಾಕ್​​ಗೆ ಜಯ್ ಶಾ ವಾರ್ನಿಂಗ್.. 48 ಗಂಟೆಯಲ್ಲಿ ಮಣಿಯದಿದ್ದರೆ 3 ಕಠಿಣ ಶಿಕ್ಷೆ..!

ಲೈಲಾ ಫೈಸಲ್ ಜೊತೆಗೆ ಅಭಿಷೇಕ್ ಹೆಸರು ತಳುಕು ಹಾಕಿಕೊಂಡಿದೆ. ಇದಕ್ಕೂ ಹಿಂದೆ ಮಾಡೆಲ್​ ದಿಯಾ ಮೆಹ್ತಾ ಜೊತೆಗೆ ಅಭಿಷೇಕ್ ಹೆಸ್ರು ಓಡಾಡಿತ್ತು. 2019ರಲ್ಲಿ ಮಿಸ್​ ರಾಜಸ್ತಾನ್​ ಆಗಿ ಹೊರಹೊಮ್ಮಿದ್ದ ಈಕೆಯ ಜೊತೆಗೆ ಅಭಿಷೇಕ್ ಡೇಟಿಂಗ್ ನಡೆಸ್ತಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಐಪಿಎಲ್​ ವೇಳೆ ಸನ್​ರೈಸರ್ಸ್​ ಹೈದ್ರಾಬಾದ್ ತಂಡದ ಡ್ರೆಸ್ಸಿಂಗ್​ ರೂಮ್​​ಗೆ ದಿಯಾ ಮೆಹ್ತಾ ಎಂಟ್ರಿಕೊಟ್ಟಿದ್ರು. ದಿಯಾ ಮೆಹ್ತಾ ಅಭಿಷೇಕ್ ಶರ್ಮಾ ಕೈ ಹಿಡಿದುಕೊಂಡಿದ್ದ ಒಂದು ಫೋಟೋ ಕೂಡ ವೈರಲ್ ಆಗಿತ್ತು. 
ಅಭಿಷೇಕ್​ ಶರ್ಮಾ ಜೊತೆಗೆ ಲೈಲಾ ಫೈಸಲ್​ ಹೆಸ್ರು ಸಖತ್ತಾಗಿ ಸೌಂಡ್​ ಮಾಡ್ತಿದೆ. ಅಭಿಷೇಕ್​-ಲೈಲಾ ಮಾತ್ರ ಈ ವಿಚಾರದಲ್ಲಿ ಸೈಲೆಂಟಾಗಿದ್ದಾರೆ. ಇವ್ರು ಮೌನ ಮುರಿದ್ರೆ ಮಾತ್ರ ಈ ಗಾಸಿಪ್​ಗೆ ಉತ್ತರ ಸಿಗಲಿದೆ. 

ಇದನ್ನೂ ಓದಿ: ಉಚಿತ ಮೊಮೋ ತಿನ್ನಲು ಮನೆಯ 85 ಲಕ್ಷ ಚಿನ್ನಾಭರಣವನ್ನು ಮೊಮೋ ಅಂಗಡಿ ಮಾಲೀಕನಿಗೆ ಕೊಟ್ಟ ಬಾಲಕ : ಯುಪಿಯಲ್ಲಿ ವಿಚಿತ್ರ ಕೇಸ್‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Abhishek Sharma
Advertisment