/newsfirstlive-kannada/media/media_files/2025/09/12/football-2025-09-12-20-20-02.jpg)
64ನೇ ಸುಬ್ರೋತೋ ಕಪ್ ಸಬ್ ಜೂನಿಯರ್ U-15 ವಿಭಾಗದಲ್ಲಿ ಮಿನರ್ವಾ ಪಬ್ಲಿಕ್ ಸ್ಕೂಲ್ ಫುಟ್‌ಬಾಲ್ ಚಾಂಪಿಯನ್ ಪಟ್ಟ ಆಲಂಕರಿಸಿದೆ.
ಸುಬ್ರೋತೋ ಕಪ್ ಅಂತರರಾಷ್ಟ್ರೀಯ ಫುಟ್‌ಬಾಲ್ ಟೂರ್ನಮೆಂಟ್‌ನ ಸಬ್ ಜೂನಿಯರ್ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಮೋಹಾಲಿಯ ಮಿನರ್ವಾ ಪಬ್ಲಿಕ್ ಸ್ಕೂಲ್ ತಂಡ 6-0 ಅಂತರದಿಂದ ಬಿಹಾರದ ವಿದ್ಯಾಚಲ್ ಇಂಟರ್‌ನ್ಯಾಷನಲ್ ಸ್ಕೂಲ್ ಮುಜಫರ್‌ಪುರ್ ವಿರುದ್ಧ ಭರ್ಜರಿ ಜಯ ಸಾಧಿಸಿತು.
ಫೈನಲ್ ಪಂದ್ಯಕ್ಕೆ ಪ್ರಮುಖ ಅತಿಥಿಯಾಗಿ ಏರ್ ಮಾರ್ಷಲ್ ತೇಜಿಂದರ್ ಸಿಂಗ್, ಭಾರತದ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಪಾಲ್ಗೊಂಡಿದ್ದರು. ಈ ವೇಳೆ ತಂಡಗಳ ಬಾಲಕರಿಗೆ ಹಸ್ತಲಾಘವ ನೀಡಿ ಎಲ್ಲರಿಗೂ ಶುಭಾ ಹಾರೈಸಿದರು.
ಇದನ್ನೂ ಓದಿ: ಭಾರತ-ಪಾಕ್ ಮಧ್ಯೆ ಪಂದ್ಯ.. ಹುಸಿಯಾದ ನಿರೀಕ್ಷೆ! ಯಾಕೆ ಹೀಗೆ ಆಯ್ತು..?
ಭಾರತ ಹಾಕಿ ತಂಡ ಮಾಜಿ ಆಟಗಾರ ಪಿಆರ್ ಶ್ರೀಜೇಶ್ ಅವರು ಮಾತನಾಡಿ, ಟೂರ್ನ್ಮೆಂಟ್ ಅನ್ನು ಅದ್ಭುತವಾಗಿ ಆಯೋಜನೆ ಮಾಡಲಾಗಿದೆ. ನನಗೆ ಶಾಕ್ ಆಯಿತು ಅಷ್ಟೊಂದು ಸುಂದರವಾಗಿ ಟೂರ್ನ್ಮೆಂಟ್ ರೆಡಿ ಮಾಡಿದ್ದಾರೆ. ಒಳ್ಳೆಯ ಗ್ರೌಂಡ್, ಕ್ರೌಡ್ ಕೂಡ ಜಾಸ್ತಿ ಇದೆ. ಬಾಲಕರು ಅತ್ಯುತ್ತಮ ರೀತಿಯಲ್ಲಿ ಆಡುತ್ತಿದ್ದಾರೆ. 15 ವರ್ಷದ ಒಳಗಿನ ಈ ಫುಟ್‌ಬಾಲ್ ಪಂದ್ಯ ಭಾರತದ ಫುಟ್ಬಾಲ್ಗೆ ಉತ್ತಮವಾದ ಅಡಿಪಾಯದಂತೆ ಇದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ