Advertisment

ಅಂಧರ ಟಿ-20 ವಿಶ್ವಕಪ್ ಗೆದ್ದ ಆಟಗಾರ್ತಿಯರಿಗೆ ತಲಾ 10 ಲಕ್ಷ - ನ್ಯೂಸ್​ಫಸ್ಟ್​ನ ‘ಮಹಿಳಾ ಮಾಣಿಕ್ಯ’ ವೇದಿಕೆಯಲ್ಲಿ ಹೆಬ್ಬಾಳ್ಕರ್ ಘೋಷಣೆ

ಕಳೆದ ನವೆಂಬರ್​ನಲ್ಲಿ ಚೊಚ್ಚಲ ಅಂಧರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿತ್ತು. ಈ ತಂಡದ ನೇತೃತ್ವದ ವಹಿಸಿದ್ದ ಕ್ಯಾಪ್ಟನ್ ದೀಪಿಕಾರಿಗೆ ನ್ಯೂಸ್​ಫಸ್ಟ್​ನ ಮಹಿಳಾ ಮಾಣಿಕ್ಯ ವಿಶೇಷ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲಾಯ್ತು.

author-image
Ganesh Kerekuli
mahila manikya (2)
Advertisment

ಬೆಂಗಳೂರು: ಕಳೆದ ನವೆಂಬರ್​ನಲ್ಲಿ ಚೊಚ್ಚಲ ಅಂಧರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿತ್ತು. ಈ ತಂಡದ ನೇತೃತ್ವದ ವಹಿಸಿದ್ದ ಕ್ಯಾಪ್ಟನ್ ದೀಪಿಕಾರಿಗೆ ನ್ಯೂಸ್​ಫಸ್ಟ್​ನ ಮಹಿಳಾ ಮಾಣಿಕ್ಯ ವಿಶೇಷ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲಾಯ್ತು.

Advertisment

mahila manikya (1)

ವಿಶ್ವಕಪ್​ ಗೆದ್ದ ಬೆನ್ನಲ್ಲೇ ಕರ್ನಾಟಕ ಸರ್ಕಾರ ದೇಶವನ್ನು ಪ್ರತಿನಿಧಿಸಿದ್ದ ಭಾರತ ತಂಡದ ಎಲ್ಲಾ ಸದಸ್ಯರಿಗೂ ತಲಾ 10 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಘೋಷಿಸಿತ್ತು. ಇನ್ನು, ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದ ಮೂವರು ಕರ್ನಾಟಕದ ಆಟಗಾರ್ತಿಯರಿಗೆ ಸರ್ಕಾರಿ ಉದ್ಯೋಗದ ಭರವಸೆಯನ್ನ ರಾಜ್ಯ ಸರ್ಕಾರ ನೀಡಿತ್ತು.

mahila manikya (3)

ಇದೀಗ ನ್ಯೂಸ್​ಫಸ್ಟ್​ ಆಯೋಜನೆಯ ‘ಮಹಿಳಾ ಮಾಣಿಕ್ಯ’ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಭರವಸೆ ನೀಡಿ ಪುನರುಚ್ಚರಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕಪ್ ಗೆದ್ದ ತಂಡದಲ್ಲಿದ್ದ ಎಲ್ಲಾ ಆಟಗಾರ್ತಿಯರಿಗೂ ನಮ್ಮ ಸರ್ಕಾರದಿಂದ ತಲಾ 10 ಲಕ್ಷ ರೂಪಾಯಿ ಘೋಷಣೆ ಮಾಡಿದ್ದೇವೆ. ಈ ಸಂಬಂಧ ಈಗಾಗಲೇ ಹಣಕಾಸು ಇಲಾಖೆಯಿಂದ ಕ್ಲೀಯರೆನ್ಸ್ ಸಿಕ್ಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪೋರ್ಟ್ಸ್​​ ವಿಭಾಗ ನೋಡಿಕೊಳ್ತಿರೋದ್ರಿಂದ ಎಲ್ಲವೂ ಕ್ಲೀಯರ್ ಆಗಿ ಫೈಲ್​​ಗಳೆಲ್ಲ ಅವರ ಹತ್ತಿರ ಹೋಗಿವೆ. 

mahila manikya

ಇನ್ನೇನು 15 ರಿಂದ 20 ದಿನಗಳ ಮುಗಿದ ಬಳಿಕ ಮಾನ್ಯ ಮುಖ್ಯಮಂತ್ರಿಗಳೇ ತಮ್ಮ ಕಚೇರಿಗೆ ಕರೆಸಿ ಮತ್ತೊಮ್ಮೆ ಅಭಿನಂದಿಸಲಿದ್ದಾರೆ. ಅದನ್ನು ಮಾಡಿಸುವ ಜವಾಬ್ದಾರಿಯನ್ನು ನಾನು ಹೊತ್ತುಕೊಂಡಿದ್ದೇನೆ. ಅದರ ನಂತರ, ಮಹಿಳಾ ತಂಡದ ಕ್ಯಾಪ್ಟನ್ ದೀಪಿಕಾ ಸೇರಿ, ಕರ್ನಾಟಕದಿಂದ ಮೂವರು ಆಟಗಾರ್ತಿಯರು ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಈ ಮೂವರಿಗೂ ನಾವು ಸರ್ಕಾರಿ ಉದ್ಯೋಗವನ್ನು ಕೊಡುತ್ತಿದ್ದೇವೆ ಎಂದು ಭರವಸೆ ನೀಡಿದ್ದಾರೆ. 

Advertisment

ಇದನ್ನೂ ಓದಿ:ವಿಶ್ವಕಪ್ ಫೈನಲ್​ ಪಂದ್ಯದ ಪಿಚ್ ರಿಪೋರ್ಟ್ ಬಹಿರಂಗ..! ಯಾವ ತಂಡಕ್ಕೆ ಹೆಚ್ಚು ಲಾಭ ಇದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mahila Manikya captain Deepika blind cricket Blind Women’s T20 World Cup 2025
Advertisment
Advertisment
Advertisment