ಅಂತರಾಷ್ಟ್ರೀಯ T20 ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಮರ್ಕ್ಯೂ ಬೌಲರ್ ಮಿಚೆಲ್ ಸ್ಟಾರ್ಕ್

ಮರ್ಕ್ಯೂ ಬೌಲರ್ ಎಂದೇ ಖ್ಯಾತಿ ಪಡೆದಿದ್ದ ಮಿಚೆಲ್ ಸ್ಟಾರ್ಕ್ ಟಿ20 ಇಂಟರ್​​ನ್ಯಾಷನಲ್​ ಕ್ರಿಕೆಟ್​ಗೆ ನಿವೃತ್ತಿ ಅನೌನ್ಸ್ ಮಾಡಿದ್ದಾರೆ. ಇವರು ಕೊನೆಯ ಬಾರಿಗೆ 2024ರಲ್ಲಿ ಟಿ20 ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು.

author-image
Bhimappa
Mitchell_Starc_New
Advertisment

ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆ. ಮುಂದಿನ ಭಾರತದ ವಿರುದ್ಧದ ಟೆಸ್ಟ್ ಹಾಗೂ 2027ರಲ್ಲಿ ನಡೆಯುವ ಒನ್​ಡೇ ವರ್ಲ್ಡ್​ಕಪ್​ ದೃಷ್ಟಿಯಲ್ಲಿಟ್ಟುಕೊಂಡು ಮಿಚೆಲ್ ಸ್ಟಾರ್ಕ್ ಟಿ20ಗೆ ವಿದಾಯ ಹೇಳಿದ್ದಾರೆ. 

ಆಸ್ಟ್ರೇಲಿಯಾ ತಂಡದಲ್ಲಿ ಮರ್ಕ್ಯೂ ಬೌಲರ್ ಎಂದೇ ಖ್ಯಾತಿ ಪಡೆದಿದ್ದ ಮಿಚೆಲ್ ಸ್ಟಾರ್ಕ್ ಟಿ20 ಇಂಟರ್​​ನ್ಯಾಷನಲ್​ ಕ್ರಿಕೆಟ್​ಗೆ ನಿವೃತ್ತಿ ಅನೌನ್ಸ್ ಮಾಡಿದ್ದಾರೆ. ಇವರು ಕೊನೆಯ ಬಾರಿಗೆ 2024ರಲ್ಲಿ ಟಿ20 ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು. ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ ಮೇಲೆ ಹೆಚ್ಚಿನ ಗಮನ ಹರಿಸುವ ಸಂಬಂಧ ಟಿ20 ಕ್ರಿಕೆಟ್​ನಿಂದ ದೂರವಾಗುತ್ತಿದ್ದೇನೆ ಎಂದು ಮಿಚೆಲ್ ಸ್ಟಾರ್ಕ್ ಅವರು ಹೇಳಿದ್ದಾರೆ. 

ಇದನ್ನೂ ಓದಿ:ನಿರಂತರ ಮಳೆ, ಕುಸಿದ ಬೃಹತ್ ಬೆಟ್ಟ.. 1000ಕ್ಕೂ ಹೆಚ್ಚು ಜನ ಭೂ ಸಮಾಧಿ, ಒಬ್ಬನು ಮಾತ್ರ..

Mitchell_Starc

65 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಮಿಚೆಲ್ ಸ್ಟಾರ್ಕ್​ 23.81 ಸರಾಸರಿಯೊಂದಿಗೆ 79 ವಿಕೆಟ್​ಗಳನ್ನು ಕಬಳಿಸಿದ್ದಾರೆ. 7.74 ಬೌಲಿಂಗ್​ನಲ್ಲಿ ಎಕನಾಮಿ ಹೊಂದಿದ್ದರು. 20 ರನ್​ಗೆ 4 ವಿಕೆಟ್​ಗಳನ್ನು ಕಬಳಿಸಿರುವುದು ಟಿ20ಯಲ್ಲಿ ಇವರ ಅತ್ಯುತ್ತಮ ಸಾಧನೆ ಆಗಿದೆ. ಟಿ20 ಕ್ರಿಕೆಟ್​ ತಂಡದಲ್ಲಿ ಇಷ್ಟು ದಿನ ಆಡಿದ್ದಕ್ಕೆ ಖುಷಿ ಇದೆ. ಒಳ್ಳೆಯ ತಂಡದೊಂದಿಗೆ ಇದ್ದಿದ್ದಕ್ಕೆ ನೆನಪುಗಳು ಹಾಗೇ ಇರಲಿವೆ ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ 2021ರಲ್ಲಿ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್​ ಗೆದ್ದುಕೊಂಡಿತ್ತು. ಆಗ ಮಿಚೆಲ್ ಸ್ಟಾರ್ಕ್​ ಆಸಿಸ್​ ತಂಡದ ಭಾಗವಾಗಿದ್ದರು. ಇದಾದ ಮೇಲೆ 2024ರ ಟಿ20 ವಿಶ್ವಕಪ್​ನಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ಮಾಡಿದ್ದರು. ಇದೇ ಇವರು ಕೊನೆಯದಾಗಿ ಕಾಣಿಸಿಕೊಂಡಿದ್ದ ಟೂರ್ನಿಯಾಗಿತ್ತು. ಆ ನಂತರ ಆಸ್ಟ್ರೇಲಿಯಾದ ಯಾವುದೇ ಟಿ20 ಟೂರ್ನಿಯಲ್ಲಿ ಮಿಚೆಲ್ ಸ್ಟಾರ್ಕ್​ ಆಡಿರಲಿಲ್ಲ. ಸದ್ಯ ಈಗ ತಮ್ಮ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ.  

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Australia Cricket news in Kannada cricket players cricketers love
Advertisment