/newsfirstlive-kannada/media/media_files/2026/01/12/prasidh-krishna-2-2026-01-12-08-55-51.jpg)
ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟರ್ಸ್​ ಮಿಂಚಿದ್ರು. ಬರೋಡಾದಲ್ಲಿ ಟೀಮ್ ಇಂಡಿಯಾ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಕಿವೀಸ್, ಬಿಗ್ ಸ್ಕೋರ್ ಕಲೆಹಾಕಿತ್ತು. ಡ್ಯಾರೆಲ್ ಮಿಚ್ಚೆಲ್, ನಿಕೋಲ್ಸ್ ಮತ್ತು ಕಾನ್ವೆರ ಸಾಲಿಡ್ ಇನ್ನಿಂಗ್ಸ್​, ಟೀಮ್ ಇಂಡಿಯಾ ಬೌಲರ್​ಗಳ ಮೇಲೆ ಒತ್ತಡ ಹೆಚ್ಚಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡಕ್ಕೆ, ಆರಂಭಿಕ ಡ್ವೇನ್ ಕಾನ್ವೆ ಮತ್ತು ಹೆನ್ರಿ ನಿಕೋಲ್ಸ್ ಸಾಲಿಡ್ ಸ್ಟಾರ್ಟ್ ನೀಡಿದ್ರು. ಈ ನಡುವೆ ನಿಕೋಲ್ಸ್​ ಮತ್ತು ಕಾನ್ವೆ ತಲಾ ಅರ್ಧಶತಕ ಸಿಡಿಸಿ ಸಂಭ್ರಮಿಸಿಕೊಂಡ್ರು. ಮೊದಲ ವಿಕೆಟ್​ಗೆ ಈ ಜೋಡಿ ಶತಕದ ಜೊತೆಯಾಟವಾಡಿತು. 130 ಎಸೆತಗಳಲ್ಲಿ 117 ರನ್​ ಕಲೆಹಾಕಿದ ಕಾನ್ವೆ ಮತ್ತು ನಿಕೋಲ್ಸ್​, ಟೀಮ್ ಇಂಡಿಯಾ ಬೌಲರ್​ಗಳನ್ನ ಕಾಡಿದ್ರು.
ಇದನ್ನೂ ಓದಿ: ಅಘನಾಶಿನಿ-ಬೇಡ್ತಿ ಪ್ರಾಜೆಕ್ಟ್ ಖಂಡಿಸಿ ಬೃಹತ್ ಪ್ರತಿಭಟನೆ.. ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್..!
ಕ್ರೀಸ್​ನಲ್ಲಿ ಸೆಟಲ್ ಆಗಿದ್ದ ಈ ಜೋಡಿಯನ್ನ ವೇಗಿ ಹರ್ಷಿತ್ ರಾಣಾ, ಬೇರ್ಪಡಿಸಿದ್ರು. ನಿಕೋಲ್ಸ್ 62 ರನ್​ ಮತ್ತು ಕಾನ್ವೆ 56 ರನ್​ಗಳಿಸಿ ಹರ್ಷಿತ್ ರಾಣಾಗೆ ವಿಕೆಟ್ ಒಪ್ಪಿಸಿದ್ರು. ವಿಕೆಟ್ ಕೀಪರ್ ವಿಲ್ ಯಂಗ್ ಮತ್ತು ಗ್ಲೇನ್ ಫಿಲಿಪ್ಸ್ ತಲಾ 12 ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡ್ರೆ, ಮಿಚ್ಚಲ್ ಹೇ 18 ರನ್​​ಗಳಿಸಿದರಷ್ಟೇ..
ಕ್ಯಾಪ್ಟನ್ ಮೈಕಲ್ ಬ್ರೇಸ್​ವೆಲ್ 16 ರನ್​ಗಳಿಸಿ ರನ್​ಔಟ್ ಆದ್ರು. ಇನ್ನು ಝ್ಯಾಕ್ ಫೋಕ್ಸ್​ ಹೀಗೆ ಬಂದು ಹಾಗೆ ಹೋದ್ರು. ಏಕಾಂಗಿ ಹೋರಾಟ ನಡೆಸಿದ ಡ್ಯಾರೆಲ್ ಮಿಚ್ಚೆಲ್, ಕೆಲ ಕಾಲ ಅಬ್ಬರಿಸಿದ್ರು. ಬರೋಡಾದಲ್ಲಿ ಬೌಂಡರಿ, ಸಿಕ್ಸರ್​ಗಳನ್ನ ಸಿಡಿಸಿದ್ರು. 71 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದ ಮಿಚ್ಚೆಲ್, ಕೊನೆಗೆ 84 ರನ್​ಗಳಿಸಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ನೀಡಿದ್ರು. ಅಂತಿಮವಾಗಿ ನ್ಯೂಜಿಲೆಂಡ್ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಬರೋಬ್ಬರಿ 300 ರನ್​ಗಳಿಸಿತು. ಟೀಮ್ ಇಂಡಿಯಾ ಪರ ವೇಗಿಗಳಾದ ಸಿರಾಜ್, ರಾಣಾ ಮತ್ತು ಪ್ರಸಿದ್ಧ್ ತಲಾ 2 ವಿಕೆಟ್ ಪಡೆದರು.
ಇದನ್ನೂ ಓದಿ: 93 ರನ್​ಗಳಿಸಿ ಔಟಾದ ಕೊಹ್ಲಿ.. ಟೀಂ ಇಂಡಿಯಾಗೆ 4 ವಿಕೆಟ್​​ಗಳ ಗೆಲುವು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us