/newsfirstlive-kannada/media/media_files/2026/01/12/virat-kohli-7-2026-01-12-08-35-09.jpg)
ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತು. ಬರೋಡಾದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಶತಕವಂಚಿತರಾದ್ರು. ಮತ್ತೊಂದೆಡೆ ಉಪನಾಯಕ ಶ್ರೇಯಸ್ ಅಯ್ಯರ್, ಅರ್ಧಶತಕ ಸಿಡಿಸಿ ತಂಡಕ್ಕೆ ಸಾಲಿಡ್ ಕಮ್​ಬ್ಯಾಕ್ ಮಾಡಿದ್ರು. ಟೀಮ್ ಇಂಡಿಯಾ ಸಕ್ಸಸ್​ಫುಲ್ ಚೇಸ್ ಹೇಗಿತ್ತು?
301 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿದ್ದ ಟೀಮ್ ಇಂಡಿಯಾಗೆ ನಿರೀಕ್ಷಿತ ಸ್ಟಾರ್ಟ್ ಸಿಗಲಿಲ್ಲ. ಆರಂಭಿಕ ರೋಹಿತ್ ಶರ್ಮಾ ಕೇವಲ 26 ರನ್​ಗಳಿಸಿ, ಮೊದಲ ಪವರ್​-ಪ್ಲೇನಲ್ಲೇ ಪೆವಿಲಿಯನ್ ಪೆರೇಡ್ ನಡೆಸಿದ್ರು. 2ನೇ ವಿಕೆಟ್​ಗೆ ನಾಯಕ ಶುಭ್ಮನ್ ಗಿಲ್ ಜೊತೆಯಾದ ವಿರಾಟ್ ಕೊಹ್ಲಿ, ಸಾಲಿಡ್ ಜೊತೆಯಾಟವಾಡಿದ್ರು.
107 ಎಸೆತಗಳಲ್ಲಿ 118 ರನ್​ ಚಚ್ಚಿದ ಈ ಜೋಡಿ, ನ್ಯೂಜಿಲೆಂಡ್ ಬೌಲರ್​ಗಳ ಬೆವರಿಳಿಸಿದ್ರು. ಇನ್ನಿಂಗ್ಸ್​ ಆರಂಭದಿಂದಲೂ ಸುಪರ್ಬ್ ಟಚ್​ನಲ್ಲಿ ಬ್ಯಾಟ್ ಬಿಸ್ತಿದ್ದ ಗಿಲ್, ಅರ್ಧಶತಕ ಸಿಡಿಸಿ ಮಾಯವಾದ್ರು. ಗಿಲ್ ಔಟಾಗ್ತಿದಂತೆ ಕೊಹ್ಲಿ ಜೊತೆಗೂಡಿದ ಉಪನಾಯಕ ಶ್ರೇಯಸ್ ಅಯ್ಯರ್, ಅದ್ಭುತ ಬ್ಯಾಟಿಂಗ್ ನಡೆಸಿದ್ರು. 4ನೇ ವಿಕೆಟ್​ಗೆ ಕೊಹ್ಲಿ ಜೊತೆಗೂಡಿ 77 ರನ್ ಸಹ ಕಲೆಹಾಕಿದ್ರು.
ಇದನ್ನೂ ಓದಿ:ಮಂಗಳಸೂತ್ರ ಧರಿಸಿಯೇ ಸಮಂತಾ ಓಡಾಟ, ಅಭಿಮಾನಿಗಳ ಹೃದಯ ಗೆದ್ದ ಚೆಲುವೆ..!
ಮತ್ತೊಂದೆಡೆ ಔಟ್​ ಸ್ಟ್ಯಾಂಡಿಂಗ್ ಫಾರ್ಮ್​ನಲ್ಲಿ ಬ್ಯಾಟಿಂಗ್ ನಡೆಸ್ತಿದ್ದ ವಿರಾಟ್ ಕೊಹ್ಲಿ, ಶತಕದ ಸಮೀಪ ಎಡವಿದ್ರು. 91 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಭರ್ಜರಿ ಸಿಕ್ಸರ್ ಸಿಡಿಸಿದ ವಿರಾಟ್, 93 ರನ್​ಗಳಿಸಿ ಎಕ್ಸ್ಟ್ರಾ ಕವರ್​​ನಲ್ಲಿ ಬ್ರೇಸ್​ವೆಲ್​ಗೆ ಕ್ಯಾಚ್ ನೀಡಿದ್ರು. ಕೊಹ್ಲಿ ಔಟಾಗ್ತಿದಂತೆ ರವೀಂದ್ರ ಜಡೇಜಾ 4 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ರೆ, ಶ್ರೇಯಸ್ ಅಯ್ಯರ್ ಹೋರಾಟ 49 ರನ್​ಗಳಿಗೆ ಅಂತ್ಯವಾಯ್ತು.
ಕೊನೆಗೆ ಅನುಭವಿ ಆಟಗಾರ ಕೆ.ಎಲ್.ರಾಹುಲ್, ಜವಾಬ್ದಾರಿಯುತ ಬ್ಯಾಟಿಂಗ್ ನಡೆಸೋ ಮೂಲಕ ತಂಡವನ್ನ ಗೆಲುವಿನ ದಡ ಸೇರಿದ್ರು. ಅಂತಿಮವಾಗಿ ಟೀಮ್ ಇಂಡಿಯಾ ಇನ್ನೂ ಒಂದು ಓವರ್ ಬಾಕಿ ಇರುವಂತೆ 4 ವಿಕೆಟ್​ಗಳ ಗೆಲುವು ದಾಖಲಿಸಿತು. ರಾಹುಲ್ 29 ರನ್​ಗಳಿಸಿ ಅಜೇಯರಾಗುಳಿದ್ರು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿತು.
ಇದನ್ನೂ ಓದಿ: ಫಿನಾಲೆ ಹೊಸ್ತಿಲಲ್ಲಿ ಹೊರ ಬಂದ ರಾಶಿಕಾ ಶೆಟ್ಟಿ.. ಕಿಚ್ಚನ ಎದುರು ಹೇಳಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us