/newsfirstlive-kannada/media/media_files/2025/08/23/nitish_kumar-2025-08-23-10-06-16.jpg)
ನಿತಿಶ್ ಕುಮಾರ್ ರೆಡ್ಡಿ ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್. ಒಂದು ವರ್ಷದ ಹಿಂದಷ್ಟೇ ಟೀಮ್ ಇಂಡಿಯಾಗೆ ಬಂದ ಈ ನಿತಿಶ್ ರೆಡ್ಡಿ, ಬೌಲಿಂಗ್, ಬ್ಯಾಟಿಂಗ್ನಲ್ಲೇ ಅಲ್ಲ. ತಮ್ಮ ಮೈಮೇಲಿರೋ ಟ್ಯಾಟೂಗಳಿಂದಲೂ ಗಮನ ಸೆಳೆದಿದ್ದಾರೆ. ಆ ಟ್ಯಾಟೂಗಳು ನಿತೀಶ್ ರೆಡ್ಡಿ ವಿಶೇಷ ಗುಣವನ್ನೇ ಪರಿಚಯಿಸಿವೆ. ಆ ಸ್ಪೆಷಲ್ ಸ್ಟೋರಿ ಇಲ್ಲಿದೆ.
ಟೀಮ್ ಇಂಡಿಯನ್ ಕ್ರಿಕೆಟರ್ಗಳಿಗೂ ಟ್ಯಾಟೂಗಳಿಗೂ ಒಂದು ರೀತಿ ವಿಶೇಷ ನಂಟಿದೆ. ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್, ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಹೀಗೆ ಟ್ಯಾಟೂ ಪ್ರಿಯರ ದಂಡೇ ಇದೆ. ಟ್ಯಾಟೊ ಕ್ರೇಜ್ ಹೊಂದಿರುವ ಕ್ರಿಕೆಟಿಗರು, ತಮ್ಮ ಕೈಗಳ ಮೇಲೆ, ದೇಹದ ಮೇಲೆ ವಿಶೇಷವಾದ ಹಚ್ಚೆ ಹಾಕಿಸಿಕೊಂಡಿದ್ದಿದೆ. ಈ ಪೈಕಿ ನಿತಿಶ್ ಕುಮಾರ್ ರೆಡ್ಡಿಯೂ ಒಬ್ಬರು.
ಇಂಗ್ಲೆಂಡ್ ಟೆಸ್ಟ್ ಸರಣಿಯ ಭಾಗವಾಗಿದ್ದ ನಿತಿಶ್ ರೆಡ್ಡಿ, ಇಂಜುರಿ ಕಾರಣಕ್ಕೆ ಅರ್ಧಕ್ಕೆ ಸರಣಿ ಮೊಟಕುಗೊಳಿಸಿದರು. ಫಿಟ್ನೆಸ್ಗಾಗಿ ಬೆಂಗಳೂರಿನ ಎನ್ಸಿಎನಲ್ಲಿ ಬೀಡು ಬಿಟ್ಟಿರುವ ನಿತೀಶ್, ಹೊಸ ಟ್ಯಾಟೋಗಳಿಂದಲೇ ಗಮನ ಸೆಳೆದಿದ್ದಾರೆ.
ಹೊಸ ಟ್ಯಾಟೋ ಮೂಲಕ ನಿತೀಶ್ ರೆಡ್ಡಿ ಸಂದೇಶ..!
ನಿತೀಶ್ ರೆಡ್ಡಿಗೆ ಟ್ಯಾಟೋ ಕ್ರೇಜ್ ಇದೆ ಅನ್ನೋದು ಓಪನ್ ಸಿಕ್ರೇಟ್. ಆದ್ರೆ, ಇಂಜುರಿಯಿಂದ ಚೇರಿಸಿಕೊಳ್ಳುತ್ತಿರುವ ನಿತೀಶ್ ರೆಡ್ಡಿ, ಎರಡು ಹೊಸ ಟ್ಯಾಟೋಗಳನ್ನು ಹಾಕಿಸಿಕೊಂಡಿದ್ದಾರೆ. ಪಕ್ಕೆಲುಬಿನ ಮೇಲೆ ಫಿನಿಕ್ಸ್ ಹಕ್ಕಿಯ ಟ್ಯಾಟೋ ಹಾಕಿಸಿಕೊಂಡಿರುವ ನಿತೀಶ್ ರೆಡ್ಡಿ, ಬೆನ್ನ ಹಿಂದೆ ಕತ್ತಿಯ ಜೊತೆಗೆ ಹಕ್ಕಿಯ ರೆಕ್ಕೆಯ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಇದು ಕ್ರೇಜ್ಗಾಗಿ ಮಾತ್ರವೇ ಹಾಕಿಸಿಕೊಂಡ ಟ್ಯಾಟೂಗಳು ಇವಲ್ಲ. ಟ್ಯಾಟೋಗಳ ಹಿಂದೆ ಒಂದು ಸಂದೇಶ ಇದೆ.
ಫಿನಿಕ್ಸ್, ಕತ್ತಿ & ರೆಕ್ಕೆ ಟ್ಯಾಟೋ ಹಿಂದಿದೆ ವಿಶೇಷ ಅರ್ಥ..!
ಫಿನಿಕ್ಸ್... ಇದು ಜನಪ್ರಿಯ ಪೌರಾಣಿಕ ಹಕ್ಕಿ. ಸತ್ತ ನಂತರವೂ ತನ್ನ ಬೂದಿಯಿಂದಲೇ ಮತ್ತೆ ಹುಟ್ಟಿ ಬರುವುದಕ್ಕೆ ಈ ಹಕ್ಕಿ ಹೆಸರುವಾಸಿ. ಸವಾಲುಗಳನ್ನ ಮೆಟ್ಟಿನಿಲ್ಲುವ ಸಾಮರ್ಥ್ಯ, ಹೋರಾಟದ ಪ್ರತಿರೂಪವೇ ಈ ಹಕ್ಕಿ ಅನ್ನೋದ್ರಲ್ಲಿ ಡೌಟೇ ಇಲ್ಲ. ಸುರ್ಯೋದಯದ ಸಂಕೇತವೂ ಆಗಿದೆ. ಸದ್ಯ ಇಂಜುರಿಯಾಗಿರುವ ನಿತಿಶ್, ಫಿನಿಕ್ಸ್ ಟ್ಯಾಟೋ ಮೂಲಕ ನೀಡಿರುವ ಸಂದೇಶವೇ ಟೀಮ್ ಇಂಡಿಯಾ ಕಮ್ಬ್ಯಾಕ್.
ಕತ್ತಿ & ರೆಕ್ಕೆಯ ಟ್ಯಾಟೋ ಸಂಕೇತವೇ ಫ್ರೀಡಂ. ಆ ಫ್ರೀಡಂಗಾಗಿ ಅಡೆತಡೆಗಳನ್ನು ಜಯಿಸುವ, ಹೋರಾಟದ ಗುಣ ಸೂಚಿಸುತ್ತೆ. ಶಕ್ತಿ, ಧೈರ್ಯ, ಹೋರಾಟದ ಮನೋಭಾವದ ಸಂಕೇತವೇ ಈ ಟ್ಯಾಟೋ ಆಗಿದೆ. ಕಮ್ಬ್ಯಾಕ್ಗಾಗಿ ಎಂಥಹ ಹೋರಾಟಕ್ಕೂ ನಾನು ಸಿದ್ದನೆಂನ ಸಂದೇಶವೇ ಈ ಟ್ಯಾಟೋ.
ನಿತೀಶ್ ರೆಡ್ಡಿ ಮೈಮೇಲಿದೆ ಮತ್ತೆರೆಡು ಟ್ಯಾಟೋ..!
ನಿತೀಶ್ ರೆಡ್ಡಿ ಮೈ ಮೇಲೆ ಮತ್ತೆರೆಡು ಟ್ಯಾಟೋಗಳಿವೆ. ಈ ಪೈಕಿ ಒಂದು ಬಲಗೈ ತೋಳಿನ ಮೇಲ್ಭಾಗದಲ್ಲಿ ಘರ್ಜಿಸ್ತಿರುವ ಹುಲಿ ಇದೆ. ಕೆಳ ಭಾಗದಲ್ಲಿ ಯೋಧನ ಚಿತ್ರವಿದೆ. ಅಷ್ಟೇ ಅಲ್ಲ.! ಈ ಹಚ್ಚೆಯ ಪ್ರಾಮುಖ್ಯತೆ, ಈ ಟ್ಯಾಟೋಗಳು ಪ್ರಭಾವ ಬೀರಿದ ಅಂಶಗಳ ಬಗ್ಗೆ ಸ್ವತಃ ನಿತಿಶ್ ರೆಡ್ಡಿಯೇ ಉಲ್ಲೇಖಿಸಿದ್ದಿದೆ.
ಇದನ್ನೂ ಓದಿ: ಫುಟ್ಬಾಲ್ ಫ್ಯಾನ್ಸ್ಗೆ ಗುಡ್ನ್ಯೂಸ್.. ಕೇರಳದಲ್ಲಿ ಮ್ಯಾಚ್ ಆಡಲಿರುವ ಲಿಯೋನೆಲ್ ಮೆಸ್ಸಿ ಟೀಮ್
ಈ ಟ್ಯಾಟೊ ಯೋಧ, ಹುಲಿಯನ್ನು ಪ್ರತಿನಿಧಿಸುತ್ತದೆ. ಆಟದ ನಡುವೆ ಈ ಹಚ್ಚೆ ನೋಡಿದಾಗಲೆಲ್ಲಾ, ನಾನು ಒಬ್ಬ ಯೋಧ ಎಂದು ಭಾವನೆ ಬರುತ್ತದೆ. ಒಂದು ಹುಲಿ ಕಾಡಿನಲ್ಲಿ ತನ್ನ ಭೂಭಾಗ ಸ್ಥಾಪಿಸಿದ್ರೆ, ಇತರೆ ಯಾವುದೇ ಪ್ರಾಣಿಗಳ ಪ್ರವೇಶಕ್ಕೆ ಅದು ಅನುಮತಿಸುವುದಿಲ್ಲ. ಆ ಹುಲಿಯಂತೆಯೇ ನಾನು ಭಾವಿಸಲು ಇಷ್ಟ ಪಡುತ್ತೇನೆ. ಆಟದಲ್ಲಿದ್ದಾಗ ಕಿಂಗ್ನಂತೆ ಫೀಲ್ ಆಗುತ್ತೇನೆ.
ನಿತೀಶ್ ರೆಡ್ಡಿ, ಆಟಗಾರ
ಇಂಟ್ರೆಸ್ಟಿಂಗ್ ಅಂದ್ರೆ, ಈ ಟ್ಯಾಟೋಗಳು ಮಾತ್ರವೇ ಅಲ್ಲ, ನಿತೀಶ್ ರೆಡ್ಡಿಯ ಕ್ರಿಕೆಟ್ ಕರಿಯರ್ ಸಹ ಒಂದು ಹೋರಾಟವೇ ಅನ್ನೋದನ್ನ ಮರೆಯುವಂತಿಲ್ಲ. ಯಾಕಂದ್ರೆ, ಸರ್ಕಾರಿ ಕೆಲಸ ಬಿಟ್ಟಿದ್ದ ತಂದೆ, ಬೇರೇ ಬೇರೆ ಬ್ಯುಸಿನೆಸ್ ಮಾಡಲು ಹೋಗಿ ಗೆಳೆಯರಿಂದಲೇ ಮೋಸ ಹೋಗಿದ್ರು. ಅರ್ಥಿಕ ಸಂಕಷ್ಟ ಎದುರಿಸಿದ್ದರು. ಕ್ರಿಕೆಟ್ ಕಿಟ್ ಖರೀದಿಸಲು ಹಣವಿಲ್ಲದ ಪರದಾಡಿದ ದಿನಗಳು, ಸಂಬಂಧಿಕರ ದೂರವಾದ ಕ್ಷಣಗಳ ನಡುವೆ ಅಪ್ಪನ ಕನಸಿಗಾಗಿ ಹೋರಾಡಿದ ನಿತೀಶ್, ನಿಜಕ್ಕೂ ಒಬ್ಬ ಡ್ರ್ಯಾಗನ್, ಹೋರಾಟಗಾರನೇ, ಜೀವನ ರೂಪಿಸಿಕೊಳ್ಳಲು ಹೋರಾಡಿದ ಯೋಧನೇ ಅನ್ನೋದ್ರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ