ಚಿನ್ನಸ್ವಾಮಿಯಲ್ಲಿ ಇಲ್ಲ ಅನುಮತಿ.. ನಾಳೆ ನಡೆಯಬೇಕಿದ್ದ ವಿಜಯ್ ಹಜಾರೆ ಪಂದ್ಯ ಶಿಫ್ಟ್..!

ನಾಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ವಿಜಯ್ ಹಜಾರೆ ಟೂರ್ನಿ ದೇವನಹಳ್ಳಿಗೆ ಶಿಫ್ಟ್​ ಆಗಿದೆ. ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯುವ ಸಾಧ್ಯತೆ ಹಿನ್ನಲೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಸಲು ಬೆಂಗಳೂರು ಪೊಲೀಸರು ನಿರಾಕರಿಸಿದ್ದಾರೆ.

author-image
Ganesh Kerekuli
Updated On
Chinnaswamy stadium
Advertisment

ಬೆಂಗಳೂರು: ನಾಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ವಿಜಯ್ ಹಜಾರೆ ಟೂರ್ನಿ ದೇವನಹಳ್ಳಿಗೆ ಶಿಫ್ಟ್​ ಆಗಿದೆ. ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯುವ ಸಾಧ್ಯತೆ ಹಿನ್ನಲೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಸಲು ಬೆಂಗಳೂರು ಪೊಲೀಸರು ನಿರಾಕರಿಸಿದ್ದಾರೆ.

ವಿರಾಟ್​ ಕೊಹ್ಲಿ ನಾಳಿನ ಪಂದ್ಯದಲ್ಲಿ ದೆಹಲಿ ಪರವಾಗಿ ಅಖಾಡಕ್ಕೆ ಇಳಿಯಬೇಕಿತ್ತು.  ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಚಿನ್ನಸ್ವಾಮಿ ಸ್ಟೇಡಿಯಂ ಬದಲು ದೇವನಹಳ್ಳಿ ಬಳಿ‌ ಇರುವ ಬಿಸಿಸಿಐನ COE ಮೈದಾನಕ್ಕೆ ಪಂದ್ಯವನ್ನ ಶಿಫ್ಟ್​ ಮಾಡಲಾಗಿದೆ.

ಅಸಲಿಗೆ ಆಗಿದ್ದೇನು..? 

ಕಾಲ್ತುಳಿತ ಪ್ರಕರಣ ಬಳಿಕ ಚಿನ್ನಸ್ವಾಮಿಯಲ್ಲಿ ಪಂದ್ಯಗಳ ಆಯೋಜನೆಗೆ ಅವಕಾಶ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ ಕೆಎಸ್​ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್​ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ನಾಳೆ ವಿಜಯ್ ಹಜಾರೆ ಟೂರ್ನಿ ಆಯೋಜನೆಗೊಂಡಿದೆ. ಆಂಧ್ರ ಮತ್ತು ದೆಹಲಿ ನಡುವೆ ಪಂದ್ಯ ನಡೆಯಲಿದೆ. ನಮಗೆ ಅವಕಾಶ ಮಾಡಿಕೊಡಬೇಕು ಎಂದು ವೆಂಕಟೇಶ್ ಪ್ರಸಾದ್ ಮನವಿ ಮಾಡಿಕೊಂಡಿದ್ದರು. 

ಇದನ್ನೂ ಓದಿನೀವು ಅಡಮಾನ ಇಟ್ಟ ಚಿನ್ನ ಎಷ್ಟು ಸೇಫ್..? ಮೈಸೂರಲ್ಲಿ ಏನಾಗಿದೆ ನೋಡಿ..

ಕೆಎಸ್​ಸಿಎ ಅಧ್ಯಕ್ಷರ ಮನವಿಗೆ ಸ್ಪಂದಿಸಿದ್ದ ಪರಮೇಶ್ವರ್​ ಅವರು, ಉಪಸಮಿತಿ ರಚಿಸಿ ಕಾಲ್ತುಳಿತ ಪ್ರಕರಣದ ಬಳಿಕ ಚಿನ್ನಸ್ವಾಮಿಯಲ್ಲಿ ಕೈಗೊಳ್ಳಲಾಗಿರುವ ಭದ್ರತಾ ಕ್ರಮಗಳನ್ನು ಪರಿಶೀಲಿಸಿ ವರದಿ ನೀಡುವಂತೆ ತುರ್ತಾಗಿ ಸೂಚಿಸಿದ್ದರು. ಅಂತೆಯೇ ಸರ್ಕಾರದ ಮಟ್ಟದಲ್ಲಿ ರಚನೆಯಾಗಿದ್ದ ಉಪಸಮಿತಿ ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ನೀಡಿತ್ತು. ಈ ವೇಳೆ ಲೋಕಪಯೋಗಿ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್, ಜಿಬಿಎ ಆಯುಕ್ತರು, ಅಗ್ನಿಶಾಮಕ ಸಿಬ್ಬಂದಿ ಕೂಡ ಭೇಟಿ ನೀಡಿದ್ದರು. 

ಪರಿಶೀಲನೆ ಬಳಿಕ, ಉಪಸಮಿತಿ ಸದ್ಯಕ್ಕೆ ಚಿನ್ನಸ್ವಾಮಿಯಲ್ಲಿ ಪಂದ್ಯಗಳ ಆಯೋಜನೆಗೆ ಅವಕಾಶ ನಿಡಬಾರದು ಎಂದು ಸೂಚಿಸಿದೆ. ಅಂತೆಯೇ, ಇಂದು ಬೆಳಗ್ಗೆ ಮಾತನ್ನಾಡಿರುವ ಸೀಮಂತ್ ಕುಮಾರ್ ಸಿಂಗ್, ನಾಳೆ ನಡೆಯಲಿರುವ ಪಂದ್ಯಕ್ಕೆ ಅನುಮತಿ ಇಲ್ಲ ಎಂದಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chinnaswamy Stadium Vijay Hazare Trophy
Advertisment