ನೀವು ಅಡಮಾನ ಇಟ್ಟ ಚಿನ್ನ ಎಷ್ಟು ಸೇಫ್..? ಮೈಸೂರಲ್ಲಿ ಏನಾಗಿದೆ ನೋಡಿ..

ಚಿನ್ನ ಅಡಮಾನ ಇಟ್ಟ ಗ್ರಾಹಕರಿಗೆ ಬ್ಯಾಂಕ್​ ಮೋಸ ಮಾಡಿದ ಆರೋಪ ಮೈಸೂರಿನ ಹಿನಕಲ್​ನಲ್ಲಿ ಕೇಳಿಬಂದಿದೆ. ಪ್ರತಿಷ್ಠಿತ ಕೆನರಾ ಬ್ಯಾಂಕ್ ಸಿಬ್ಬಂದಿ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.

author-image
Ganesh Kerekuli
Mysore canara bank
Advertisment

ಮೈಸೂರು: ಚಿನ್ನ ಅಡಮಾನ ಇಟ್ಟ ಗ್ರಾಹಕರಿಗೆ ಬ್ಯಾಂಕ್​ ಮೋಸ ಮಾಡಿದ ಆರೋಪ ಮೈಸೂರಿನ ಹಿನಕಲ್​ನಲ್ಲಿ ಕೇಳಿಬಂದಿದೆ. ಪ್ರತಿಷ್ಠಿತ ಕೆನರಾ ಬ್ಯಾಂಕ್ ಸಿಬ್ಬಂದಿ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. 

ಗ್ರಾಹಕರೊಬ್ಬರು ಅಡಮಾನ ಇಟ್ಟ ಚಿನ್ನ ಬಿಡಿಸಿಕೊಂಡು ಮನೆಗೆ ತಂದಾಗ ಮೋಸ ಹೋಗಿರೋದು ಬೆಳಕಿಗೆ ಬಂದಿದೆ. ಚಿನ್ನದ ಸ್ವರೂಪದಲ್ಲಿ ಬದಲಾವಣೆ ಆಗಿತ್ತು. ಅನುಮಾನ ಬಂದು ಪರಿಶೀಲಿಸಿದಾಗ ಅಸಲಿ ವಿಷಯ ಗೊತ್ತಾಗಿದೆ.

ಇದನ್ನೂ ಓದಿ: Exclusive: ನಿವೃತ್ತಿ ಘೋಷಿಸಿದ ಕೆ.ಗೌತಮ್ ಸೆಕೆಂಡ್ ಇನ್ನಿಂಗ್ಸ್ ಹೇಗಿರುತ್ತೆ..? ನ್ಯೂಸ್​ಫಸ್ಟ್ ಜೊತೆ ಮಾತು

Mysore canara bank (1)

ಮೈಸೂರಿನ ಗಾಯತ್ರಿ ಅನ್ನೋದು 19 ಗ್ರಾಮ ತೂಕದ ಚಿನ್ನದ ಸರವನ್ನು ಕೆನರಾ ಬ್ಯಾಂಕ್​ನಲ್ಲಿಟ್ಟಿದ್ದರು. ಅದನ್ನು ಬಿಡಿಸಿಕೊಂಡು ಮನೆಗೆ ತಂದಾಗ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಅದು 16 ಗ್ರಾಮ್​ಗೆ ಇಳಿಕೆ ಆಗಿದೆ. ಚಿನ್ನದ ಸರದಲ್ಲಿದ್ದ ಗುಂಡುಗಳ ಪ್ರಮಾಣದಲ್ಲಿ‌ ವ್ಯತ್ಯಾಸ ಇರೋದು ಬೆಳಕಿಗೆ ಬಂದಿದೆ. ಮತ್ತೊಬ್ಬರು ಆರೋ ಮಾಡಿ, ಅಡಮಾನ ಇಟ್ಟಾಗ 85 ಗುಂಡುಗಳಿದ್ದ ಸರದಲ್ಲಿ 77 ಗುಂಡುಗಳು ಮಾತ್ರ ಇವೆ. ಚಿನ್ನದ ಸರದಲ್ಲಿ ಕೊಂಡಿಗಳನ್ನು ಕಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ರೀತಿ ಹಲವು ಮಹಿಳೆಯರು ಆರೋಪಿಸಿದ್ದು, ಕಂಗಾಲಾಗಿ ಕೂತಿದ್ದಾರೆ.  

Mysore canara bank (2)

ತಮ್ಮ ಚಿನ್ನವನ್ನು ವಾಪಸ್ ಕೊಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಗಾಯತ್ರಿ ತರಾಟೆ ತೆಗೆದುಕೊಂಡಿದ್ದಾರೆ. ಇತ್ತ ಮೋಸ ಹೋಗಿರೋ ವಿಚಾರ ಗೊತ್ತಾಗ್ತಿದ್ದಂತೆಯೇ, ಚಿನ್ನ ಇಟ್ಟಿರುವ ಇತರರಿಗೂ ಆಘಾತ ಆಗಿದೆ. ವಿಷಯ ತಿಳಿದು ಬ್ಯಾಂಕ್​ಗೆ ದೌಡಾಯಿಸುತ್ತಿದ್ದಾರೆ. ಬ್ಯಾಂಕ್​ನಲ್ಲಿ ಪರಿಸ್ಥಿತಿ ಬಿಗಡಾಯಿಸಿರೋದ್ರಿಂದ ಒಬ್ಬೊಬ್ಬರನ್ನೇ ಕರೆದು ಚಿನ್ನವನ್ನು ಪರಿಶೀಲನೆ ಮಾಡುತ್ತಿದ್ದಾರೆ. ಯಾರಿಂದ ಸಮಸ್ಯೆಯಾಗಿದೆ? ಹೇಗೆ ಆಗಿದೆ? ಎಲ್ಲವನ್ನೂ ಪರಿಶೀಲನೆ ಮಾಡಿ ಎಲ್ಲರಿಗೂ ನ್ಯಾಯ ಸಿಗುತ್ತೆ. ಸಮಯ ಕೊಡಿ ಎಂದು ಬ್ಯಾಂಕ್ ಮ್ಯಾನೇಜ್ಮೆಂಟ್ ಹೇಳಿದೆ. 
ಪ್ರಕರಣ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಕೆನರಾ ಬ್ಯಾಂಕ್ ಅಕ್ಕಸಾಲಿಗನ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಆರೋಪಿ ಅಶ್ವಿನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸ್ತಿದ್ದಾರೆ. ತೂಕದಲ್ಲಿ ಗ್ರಾಹಕರನ್ನ ವಂಚಿಸಿದ್ದ ಆರೋಪ ಅಕ್ಕಸಾಲಿಗ ಅಶ್ವಿನ್ ಮೇಲೆ ಕೇಳಿಬಂದಿದೆ. 

ಇದನ್ನೂ ಓದಿ:‘ಕರ್ಪೂರ’ ಮನೆಗೆ ರಕ್ಷಾ ಕವಚ.. ಅಬ್ಬಾ ಎಷ್ಟೊಂದು ಲಾಭ ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mysore Gold Gold pledge
Advertisment