/newsfirstlive-kannada/media/media_files/2026/02/02/india-vs-pakistan-2026-02-02-08-32-08.jpg)
ಟಿ20 ವಿಶ್ವಕಪ್ 2026ರಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರವನ್ನು ಪಾಕಿಸ್ತಾನ ಹಿಂಪಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಹೈಡ್ರಾಮಾದ ನಡುವೆಯೇ ಸಮಸ್ಯೆಯನ್ನು ಇತ್ಯರ್ಥಪಡಿಸಲು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಯ ಪ್ರತಿನಿಧಿಗಳು ಪಾಕಿಸ್ತಾನಕ್ಕೆ ದೌಡಾಯಿಸಿದ್ದಾರೆ.
ಲಾಹೋರ್‌ಗೆ ಐಸಿಸಿ ಅಧಿಕಾರಿಗಳ ಭೇಟಿ
ವರದಿಯ ಪ್ರಕಾರ, ಐಸಿಸಿ ಉಪಾಧ್ಯಕ್ಷ ಇಮ್ರಾನ್ ಖವಾಜಾ ಮತ್ತು ಅಸೋಸಿಯೇಟ್ ಮೆಂಬರ್ ಡೈರೆಕ್ಟರ್ ಮುಬಶಿರ್ ರಹಮಾನಿ ಅವರು ಇಂದು (ಫೆಬ್ರವರಿ 8) ಲಾಹೋರ್‌ಗೆ ತಲುಪಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯದ ಕುರಿತು ಉಂಟಾಗಿರುವ ಗೊಂದಲ ಬಗೆಹರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇವರನ್ನು ಆಹ್ವಾನಿಸಿತ್ತು. ಐಸಿಸಿ ತಕ್ಷಣವೇ ತನ್ನ ಪ್ರತಿನಿಧಿಗಳನ್ನು ಕಳುಹಿಸಿರುವುದು, ಈ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ.
ಪಂದ್ಯ ನಡೆಯುವ ಸಾಧ್ಯತೆ 99%
ವರದಿಯ ಪ್ರಕಾರ, ಐಸಿಸಿ ಮತ್ತು ಪಿಸಿಬಿ ನಡುವಿನ ಸಭೆಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುವ ಸಾಧ್ಯತೆ ಶೇ. 99 ರಷ್ಟಿದೆ. ಪಾಕಿಸ್ತಾನವು ತನ್ನ ಹಳೆಯ 'ಬಹಿಷ್ಕಾರ'ದ ನಿರ್ಧಾರದಿಂದ ಯು-ಟರ್ನ್ (U-Turn) ಹೊಡೆಯುವುದು ಬಹುತೇಕ ಖಚಿತವಾಗಿದೆ.
ಏನಿದು ವಿವಾದ?
ಕಳೆದ ಫೆಬ್ರವರಿ 1 ರಂದು ಪಾಕಿಸ್ತಾನ ಸರ್ಕಾರವು, ತಮ್ಮ ರಾಷ್ಟ್ರೀಯ ಕ್ರಿಕೆಟ್ ತಂಡವು ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡುವುದಿಲ್ಲ ಎಂದು ಘೋಷಿಸಿತ್ತು. ಇದು ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಆದರೆ, ಪಿಸಿಬಿ ಈ ಬಗ್ಗೆ ಐಸಿಸಿಯನ್ನು ನೇರವಾಗಿ ಸಂಪರ್ಕಿಸಿರಲಿಲ್ಲ.
ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ಪಂದ್ಯ ನಡೆಯದಿದ್ದರೆ ಅದರ ಆರ್ಥಿಕ ಪರಿಣಾಮಗಳು ಗಂಭೀರವಾಗಿರುತ್ತವೆ ಎಂದು ಸಹ-ಆತಿಥೇಯ ರಾಷ್ಟ್ರವಾದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು. ಪಂದ್ಯ ರದ್ದಾದರೆ ಶ್ರೀಲಂಕಾದ ಆರ್ಥಿಕತೆಯ ಮೇಲೂ ಹೊಡೆತ ಬೀಳಲಿದೆ ಎಂದು ಹೇಳಲಾಗಿತ್ತು. ಈ ಎಲ್ಲಾ ಒತ್ತಡಗಳ ನಡುವೆ ಈಗ ಪಾಕಿಸ್ತಾನ ಮೆತ್ತಗಾದಂತೆ ಕಾಣುತ್ತಿದೆ.
ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಶಾಕ್.. ಏಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ ಸಾಧ್ಯತೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us