Advertisment

ಸಾಧಾರಣ ಗುರಿ​ ನೀಡಿದ ಪಾಕಿಸ್ತಾನ.. ಸೂರ್ಯಕುಮಾರ್ ಪಡೆಗೆ ಎಷ್ಟು ಟಾರ್ಗೆಟ್..?

ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಟಾಸ್ ಗೆದ್ದು ಮೊದಲ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಮೊದಲ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು.

author-image
Bhimappa
IND_VS_PAK_NEW
Advertisment

ಏಷ್ಯಾ ಕಪ್​ನ ಸೂಪರ್​- 4 ಪಂದ್ಯದಲ್ಲಿ ಸಲ್ಮಾನ್ ಅಲಿ ಆಘಾ ನೇತೃತ್ವದ ಪಾಕಿಸ್ತಾನ ತಂಡ, 172 ರನ್​ಗಳ ಟಾರ್ಗೆಟ್ ಅನ್ನು ಟೀಮ್ ಇಂಡಿಯಾಗೆ ನೀಡಿದೆ. 

Advertisment

ದುಬೈ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್​ನ ಸೂಪರ್-4 ಪಂದ್ಯದಲ್ಲಿ ಪಾಕ್​ ವಿರುದ್ಧ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಟಾಸ್ ಗೆದ್ದು ಮೊದಲ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಮೊದಲ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಫಖಾರ್ ಜಮಾನ್ ಕೇವಲ 15 ರನ್​ಗೆ ಹಾರ್ದಿಕ್ ಪಾಂಡ್ಯ ಬೌಲಿಂಗ್​ನಲ್ಲಿ ಕ್ಯಾಚ್ ಔಟ್ ಆದರು. 

ಇದನ್ನೂ ಓದಿ:ಮತ್ತೆ ಹ್ಯಾಂಡ್​ಶೇಕ್ ಮಾಡದ ಸೂರ್ಯಕುಮಾರ್​.. ಪಾಕ್​ ಕ್ಯಾಪ್ಟನ್​ಗೆ ಭಾರೀ ಅವಮಾನ

TEAM_INDIA (9)

ಆದರೆ ಇನ್ನೊಂದೆಡೆ ಕ್ರೀಸ್​ ಕಾಯ್ದುಕೊಂಡಿದ್ದ ಓಪನರ್​ ಸಾಹಿಬ್‌ಜಾದಾ ಫರ್ಹಾನ್ ತಂಡಕ್ಕೆ ನೆರವಾದರು. ಈ ಪಂದ್ಯದಲ್ಲಿ 45 ಬಾಲ್ ಎದುರಿಸಿದ ಫರ್ಹಾನ್ 5 ಬೌಂಡರಿ, 3 ಸಿಕ್ಸರ್​ಗಳಿಂದ 58 ರನ್​​ ಗಳಿಸಿದರು. ಪಾಕ್ ಪರ ಇದೇ ಹೆಚ್ಚು ರನ್ ಆಗಿದೆ. ಉಳಿದಂತೆ ಸೈಮ್ ಆಯುಬ್ 21, ಹುಸೇನ್ ತಲಾತ್ 10, ಮೊಹಮ್ಮದ್ ನವಾಜ್ 21, ಕ್ಯಾಪ್ಟನ್ ಸಲ್ಮಾನ್ 17, ಫಹೀಮ್ ಆಶ್ರಪ್ 20 ರನ್​ ಗಳಿಸಿದರು. 

Advertisment

ಹೀಗಾಗಿ ಪಾಕಿಸ್ತಾನ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್​ಗಳ ಗುರಿ ಟೀಮ್ ಇಂಡಿಯಾಗೆ ನೀಡಿದೆ. ದುಬೈ ಮೈದಾನದಲ್ಲಿ ಈ ರನ್​ಗಳ ಮೊತ್ತ ಟಾರ್ಗೆಟ್ ಮಾಡುವುದು ಕೊಂಚ ಕಷ್ಟ ಎನ್ನಬಹುದು. ಆದರೂ ಸೂರ್ಯಕುಮಾರ್ ನೇತೃತ್ವದ ತಂಡ ಟಾರ್ಗೆಟ್​ ಕಡೆಗೆ ತನ್ನ ಗಮನ ಹರಿಸಲಿದೆ.  

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Surya kumar Yadav Asia Cup 2025 india vs pakistan asia cup
Advertisment
Advertisment
Advertisment