Advertisment

ಪಾಪಿ ಪಾಕ್​ ಏರ್​ಸ್ಟ್ರೈಕ್​ಗೆ ಯುವ ಪ್ಲೇಯರ್ಸ್​ ಬಲಿ.. ಪಂದ್ಯ ಮುಗಿಸಿ ಬರುವಾಗ ಟಾರ್ಗೆಟ್​ ಮಾಡಿ ದಾಳಿ

ಯುವ ಆಟಗಾರರಾದ ಕಬೀರ್, ಸಿಬ್ಘತುಲ್ಲಾ ಹಾಗೂ ಹರೂನ್ ಮೃತರು ಎಂದು ತಿಳಿದು ಬಂದಿದೆ. ಈ ಮೂವರು ಆಟಗಾರರು ಸೌಹಾರ್ದ ಪಂದ್ಯವನ್ನು ಆಡಲು ಪಾಕಿಸ್ತಾನ ಗಡಿಯಲ್ಲಿರುವ ಪೂರ್ವ ಪಕ್ತಿಕಾ ಪ್ರಾಂತ್ಯದ ಉರ್ಗುನ್‌ನಿಂದ ಶರಾನಾಗೆ ಪ್ರಯಾಣ ಮಾಡುತ್ತಿದ್ದರು.

author-image
Bhimappa
AFG_CRICKET_PLAYERS
Advertisment

ಪಾಪಿ ಪಾಕಿಸ್ತಾನ ನಡೆಸಿದ ಏರ್​ಸ್ಟ್ರೈಕ್​ನಲ್ಲಿ ಅಫ್ಘಾನಿಸ್ತಾನದ ಮೂವರು ಯುವ ಆಟಗಾರರು ಅನ್ಯಾಯವಾಗಿ ಜೀವ ಕಳೆದುಕೊಂಡಿದ್ದಾರೆ. ಇದರ ಜೊತೆಗೆ 8 ಜನ ನಾಗರಿಕರು ಸಾವನ್ನಪ್ಪಿದ್ದಾರೆ. ಸದ್ಯ ಬಲಿಯಾದ ಆಟಗಾರರು ಯಾರು ಯಾರು ಎನ್ನುವುದು ಫೋಟೋ ಸಮೇತ ಮಾಹಿತಿ ಲಭ್ಯವಾಗಿದೆ.
 
ಅಫ್ಘಾನಿಸ್ತಾನದ ಮೂವರು ಯುವ ಆಟಗಾರರಾದ ಕಬೀರ್, ಸಿಬ್ಘತುಲ್ಲಾ ಹಾಗೂ ಹರೂನ್ ಮೃತರು ಎಂದು ತಿಳಿದು ಬಂದಿದೆ. ಈ ಮೂವರು ಆಟಗಾರರು ಸೌಹಾರ್ದ ಪಂದ್ಯವನ್ನು ಆಡಲು ಪಾಕಿಸ್ತಾನ ಗಡಿಯಲ್ಲಿರುವ ಪೂರ್ವ ಪಕ್ತಿಕಾ ಪ್ರಾಂತ್ಯದ ಉರ್ಗುನ್‌ನಿಂದ ಶರಾನಾಗೆ ಪ್ರಯಾಣ ಮಾಡಿ ವಾಪಸ್​ ಆಗುತ್ತಿದ್ದರು ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಹೇಳಿದೆ.

Advertisment

ಇದನ್ನೂ ಓದಿ: ಪಾಕ್​ ಏರ್​​ಸ್ಟ್ರೈಕ್​ನಿಂದ ಮೂವರು ಕ್ರಿಕೆಟರ್ಸ್​ ಬಲಿ.. T20 ತ್ರಿಕೋನ ಸರಣಿಯಿಂದ ಹಿಂದೆ ಸರಿದ ಅಫ್ಘಾನ್​

ಟಾಸ್ ಗೆದ್ದು ತಪ್ಪು ನಿರ್ಣಯ ತೆಗೆದುಕೊಂಡ ರಶೀದ್ ಖಾನ್.. ಕೋಚ್ ಮುಂದೆ ಹೋಗಿ ಗಳಗಳನೇ ಕಣ್ಣೀರಿಟ್ಟ ನಾಯಕ..!

ಅಫ್ಘಾನ್ ಪ್ಲೇಯರ್ಸ್​ ಮೂವರು ಮನೆಗೆ ವಾಪಸ್ ಆಗಬೇಕಾದರೆ ಎಲ್ಲರೂ ಒಟ್ಟಾಗಿ ಇರುವಾಗಲೇ ಟಾರ್ಗೆಟ್​ ಮಾಡಿ ಪಾಕಿಸ್ತಾನ ಸೇನೆ ಏರ್​ಸ್ಟ್ರೈಕ್ ಮಾಡಿ ಬಲಿ ಪಡೆದಿದೆ. ಇವರು ಇನ್ನು ಚಿಕ್ಕ ವಯಸ್ಸಿನವರು ಆಗಿದ್ದರು ಮುಂದಿನ ದಿನಗಳಲ್ಲಿ ಅಫ್ಘಾನ್​ ರಾಷ್ಟ್ರೀಯ ತಂಡದ ಪರ ಆಡಲು ಒಂದೊಂದೇ ಹೆಜ್ಜೆ ಮುಂದೆ ಬರುತ್ತಿದ್ದರು. ಆದರೆ ಪಾಪಿ ಪಾಕಿಸ್ತಾನ ನಡೆಸಿದ ಹೇಯಕೃತ್ಯದಿಂದ ಯುವ ಆಟಗಾರರು ಜೀವ ಕಳೆದುಕೊಂಡಿದ್ದಾರೆ. 

ಏರ್​ಸ್ಟ್ರೈಕ್​ನಲ್ಲಿ ಗೌರವ ಸೂಚಿಸುವುದಕ್ಕಾಗಿ ಪಾಕಿಸ್ತಾನದಲ್ಲಿ ಮುಂದಿನ ದಿನಗಳಲ್ಲಿ ನಡೆಯಬೇಕಿದ್ದ ಟಿ20 ತ್ರಿಕೋನ ಸರಣಿಯಲ್ಲಿ ಅಫ್ಘಾನ್ ತಂಡ ಭಾಗಿಯಾಗದೇ ಇರುವುದಕ್ಕೆ ನಿರ್ಧರಿಸಿದೆ ಎಂದು ಎಸಿಬಿ ಹೇಳಿದೆ. ಅಲ್ಲದೇ ಪಾಕಿಸ್ತಾನದ ಈ ಕೃತ್ಯವನ್ನು ಅಫ್ಘಾನ್ ಟೀಮ್ ಕ್ಯಾಪ್ಟನ್​ ರಶೀದ್ ಖಾನ್ ಅವರು ತೀವ್ರವಾಗಿ ಖಂಡಿಸಿದ್ದು ಅನಾಗರಿಕ ದಾಳಿ ಎಂದು ಕಿಡಿ ಕಾರಿದ್ದಾರೆ. ಸದ್ಯ ಪಾಕ್ ವಿರುದ್ಧ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ ಎಂದು ಹೇಳಲಾಗುತ್ತಿದೆ. 

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Pakistani forces Afghanistan border
Advertisment
Advertisment
Advertisment