Advertisment

‘ಮದುವೆ ನಡೆಯುತ್ತದೆ..’ ಪಾಲಶ್ ಮುಚ್ಚಲ್ ತಾಯಿ ಹೇಳಿದ್ದೇನು?

ಇಷ್ಟಕ್ಕೆಲ್ಲ ಕಾರಣ ಸ್ಮೃತಿ ಮಂದಾನರ ಭಾವಿ ಪತಿಯ ಅಕ್ರಮ ಸಂಬಂಧವೇ ಮದುವೆ ಪೋಸ್ಟ್​ಪೋನ್​​ಗೆ ಕಾರಣ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಪಲಾಶ್‌ಗೆ ಬೇರೆ ಸಂಬಂಧವಿದೆ ಎಂದು ಹೇಳಲಾಗುವ ಯುವತಿಯೊಂದಿಗಿನ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

author-image
Ganesh Kerekuli
palash muchhal
Advertisment
  • ಪಾಲಾಶ್ ಸ್ಮೃತಿಯ ತಂದೆಯೊಂದಿಗೆ ಉತ್ತಮ ಬಾಂಧವ್ಯ
  • ಅವರಿಬ್ಬರು ಸ್ಮೃತಿ ಮಂಧಾನಗಿಂತಲೂ ಹೆಚ್ಚು ಹತ್ತಿರ
  • ಅನಾರೋಗ್ಯಕ್ಕೆ ಒಳಗಾಗಿದ್ದಕ್ಕೆ ಮದುವೆ ಮುಂದೂಡಿಕೆ

ಸ್ಮೃತಿ ಮಂದಾನ ಮತ್ತು ಪಾಲಶ್ ಮುಚ್ಚಲ್ ಮದುವೆ ಸಂಬಂಧಿಸಿ ಕೆಲವು ವದಂತಿಗಳು ಹಬ್ಬಿವೆ. ಮದುವೆ ಮುಂದೂಡಿಕೆ ಬೆನ್ನಲ್ಲೇ ಸ್ಮೃತಿ ಮಂದಾನ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಮುಚ್ಚಲ್​ ಜೊತೆಗಿನ ಎಂಗೇಜ್​​​ಮೆಂಟ್​ ಸೇರಿದಂತೆ ಮದುವೆ ಶಾಸ್ತ್ರದ ವಿಡಿಯೋ ಫೋಟೋಗಳನ್ನು ಡಿಲೀಟ್​ ಮಾಡಿದ್ದಾರೆ. 

Advertisment

ಇಷ್ಟಕ್ಕೆಲ್ಲ ಕಾರಣ ಸ್ಮೃತಿ ಮಂದಾನರ ಭಾವಿ ಪತಿಯ ಅಕ್ರಮ ಸಂಬಂಧವೇ ಮದುವೆ ಪೋಸ್ಟ್​ಪೋನ್​​ಗೆ ಕಾರಣ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಪಲಾಶ್‌ಗೆ ಬೇರೆ ಸಂಬಂಧವಿದೆ ಎಂದು ಹೇಳಲಾಗುವ ಯುವತಿಯೊಂದಿಗಿನ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆದರೆ ಮುಚ್ಚಲ್ ತಾಯಿ ಅದೆಲ್ಲ ಸುಳ್ಳು ಎಂದಿದ್ದಾರೆ.  

ಇದನ್ನೂ ಓದಿ: ಸ್ಮೃತಿ ಮಂದಾನಗೆ ಮೋಸ ಮಾಡಿಬಿಟ್ರಾ ಪಾಲಶ್..? ಮದುವೆ ನಿಂತ ಹಿಂದಿನ ಅಸಲಿ ರಹಸ್ಯ..!

Smrit mandana (1)

ಶೀಘ್ರವೇ ಮದುವೆ ನಡೆಯಲಿದೆ ಎಂದ ಮುಚ್ಚಲ್​ ತಾಯಿ

ಇದೀಗ ಮುಂದೂಡಲ್ಪಟ್ಟ ಮದುವೆ ಯಾವಾಗ ನಡೆಯಲಿದೆ ಎಂಬುದರ ಕುರಿತು ಪಲಾಶ್ ಮುಚ್ಚಲ್ ಅವರ ತಾಯಿ ಅಮಿತಾ ಮುಚ್ಚಲ್ ಬಹುದೊಡ್ಡ ಅಪ್ಡೇಟ್ ನೀಡಿದ್ದಾರೆ. ಜೊತೆಗೆ ಮುಚ್ಚಲ್​ನನ್ನು ಆಸ್ಪತ್ರೆಗೆ ದಾಖಲಿಸಿದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಪಾಲಾಶ್ ಸ್ಮೃತಿಯ ತಂದೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾನೆ. ಸ್ಮೃತಿ ಮಂದಾನಗಿಂತಲೂ ಪಲಾಶ್​​ ಹೆಚ್ಚು ಹತ್ತಿರವಾಗಿದ್ದಾನೆ.

Advertisment

 ಹೀಗಾಗಿ ಸ್ಮೃತಿಯ ತಂದೆ ಅನಾರೋಗ್ಯಕ್ಕೆ ಒಳಗಾಗಿದ್ದಕ್ಕೆ ಮದುವೆ ಮುಂದೂಡಲು ನಿರ್ಧಾರ ಮಾಡಲಾಯ್ತು. ಇನ್ನು ಅರಶಿಣ ಕಾರ್ಯಕ್ರಮದ ಬಳಿಕ ಪಲಾಶ್​ನನ್ನು ಹೊರಗೆ ಹೋಗಲು ಬಿಟ್ಟಿರಲಿಲ್ಲ. ಅವನು ತುಂಬಾ ಅಳುತ್ತಿದ್ದ, ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಹೀಗಾಗಿ ಪಲಾಶ್ ಮುಚ್ಚಲ್​ನನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಸದ್ಯ ಪಲಾಶ್​​ ಚೇತರಿಸಿಕೊಂಡಿದ್ದು, ವಿಶ್ರಾಂತಿ ಪಡೆಯುತ್ತಿದ್ದಾನೆ. ಎಲ್ಲವೂ ಸರಿಯಾಗಿ ಶೀಘ್ರದಲ್ಲೇ ನಡೆಯಲಿದೆ ಎಂದು ಪಲಾಶ್​ ಮುಚ್ಚಲ್​ ತಾಯಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಾವು ಯಾಕೆ ನವೆಂಬರ್ 26 ರಂದು ಸಂವಿಧಾನ ದಿನ ಆಚರಿಸುತ್ತೇವೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

smriti mandhana
Advertisment
Advertisment
Advertisment