/newsfirstlive-kannada/media/media_files/2025/12/23/chinnaswamy-1-2025-12-23-12-38-29.jpg)
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವುದೇ ಮ್ಯಾಚ್​​ ನಡೆಸಲು ಅನುಮತಿ ಇಲ್ಲ ಎಂದು ಬೆಂಗಳೂರಿನ ಪೊಲೀಸ್ ಕಮೀಷನರ್​ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ನಿಗದಿಯಂತೆ ನಾಳೆ ದೆಹಲಿ ಹಾಗೂ ಆಂಧ್ರಪ್ರದೇಶ ತಂಡಗಳ ನಡುವೆ ವಿಜಯ್ ಹಜಾರೆ ಪಂದ್ಯ ನಡೆಯಬೇಕಿತ್ತು.
ಕಾಲ್ತುಳಿತ ಪ್ರಕರಣ ಬಳಿಕ ಚಿನ್ನಸ್ವಾಮಿಯಲ್ಲಿ ಪಂದ್ಯಗಳ ಆಯೋಜನೆಗೆ ಅವಕಾಶ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ ಕೆಎಸ್​ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್​ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ನಾಳೆ ವಿಜಯ್ ಹಜಾರೆ ಟೂರ್ನಿ ಆಯೋಜನೆಗೊಂಡಿದೆ. ಆಂಧ್ರ ಮತ್ತು ದೆಹಲಿ ನಡುವೆ ಪಂದ್ಯ ನಡೆಯಲಿದೆ. ನಮಗೆ ಅವಕಾಶ ಮಾಡಿಕೊಡಬೇಕು ಎಂದು ವೆಂಕಟೇಶ್ ಪ್ರಸಾದ್ ಮನವಿ ಮಾಡಿಕೊಂಡಿದ್ದರು.
ಇದನ್ನೂ ಓದಿ: ನೀವು ಅಡಮಾನ ಇಟ್ಟ ಚಿನ್ನ ಎಷ್ಟು ಸೇಫ್..? ಮೈಸೂರಲ್ಲಿ ಏನಾಗಿದೆ ನೋಡಿ..
ಕೆಎಸ್​ಸಿಎ ಅಧ್ಯಕ್ಷರ ಮನವಿಗೆ ಸ್ಪಂದಿಸಿದ್ದ ಪರಮೇಶ್ವರ್​ ಅವರು, ಉಪಸಮಿತಿ ರಚಿಸಿ ಕಾಲ್ತುಳಿತ ಪ್ರಕರಣದ ಬಳಿಕ ಚಿನ್ನಸ್ವಾಮಿಯಲ್ಲಿ ಕೈಗೊಳ್ಳಲಾಗಿರುವ ಭದ್ರತಾ ಕ್ರಮಗಳನ್ನು ಪರಿಶೀಲಿಸಿ ವರದಿ ನೀಡುವಂತೆ ತುರ್ತಾಗಿ ಸೂಚಿಸಿದ್ದರು. ಅಂತೆಯೇ ಸರ್ಕಾರದ ಮಟ್ಟದಲ್ಲಿ ರಚನೆಯಾಗಿದ್ದ ಉಪಸಮಿತಿ ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ನೀಡಿತ್ತು. ಈ ವೇಳೆ ಲೋಕಪಯೋಗಿ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್, ಜಿಬಿಎ ಆಯುಕ್ತರು, ಅಗ್ನಿಶಾಮಕ ಸಿಬ್ಬಂದಿ ಕೂಡ ಭೇಟಿ ನೀಡಿದ್ದರು.
ಪರಿಶೀಲನೆ ಬಳಿಕ, ಉಪಸಮಿತಿ ಸದ್ಯಕ್ಕೆ ಚಿನ್ನಸ್ವಾಮಿಯಲ್ಲಿ ಪಂದ್ಯಗಳ ಆಯೋಜನೆಗೆ ಅವಕಾಶ ನಿಡಬಾರದು ಎಂದು ಸೂಚಿಸಿದೆ. ಅಂತೆಯೇ, ಇಂದು ಬೆಳಗ್ಗೆ ಮಾತನ್ನಾಡಿರುವ ಸೀಮಂತ್ ಕುಮಾರ್ ಸಿಂಗ್, ನಾಳೆ ನಡೆಯಲಿರುವ ಪಂದ್ಯಕ್ಕೆ ಅನುಮತಿ ಇಲ್ಲ ಎಂದಿದ್ದಾರೆ.
15 ವರ್ಷಗಳ ಬಳಿಕ ಕಿಂಗ್ ವಿರಾಟ್ ಕೊಹ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದರು. ಪಂದ್ಯ ಹಿನ್ನೆಲೆಯಲ್ಲಿ ಕೊಹ್ಲಿ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದರು. ಕೊಹ್ಲಿ ಆಗಮನ ಹಿನ್ನೆಲೆಯಲ್ಲಿ ಕ್ರೇಜ್ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಕೊಹ್ಲಿ ನೊಡಬೇಕು ಅಂದ್ಕೊಂಡಿದ್ದ ಅಭಿಮಾನಿಗಳಿಗೂ ಆಘಾತವಾಗಿದೆ.
ಇದನ್ನೂ ಓದಿ: ನೀವು ಅಡಮಾನ ಇಟ್ಟ ಚಿನ್ನ ಎಷ್ಟು ಸೇಫ್..? ಮೈಸೂರಲ್ಲಿ ಏನಾಗಿದೆ ನೋಡಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us