ರಾಜಸ್ಥಾನಕ್ಕೆ ಗುಡ್​ಬೈ ಹೇಳ್ತಿದ್ದಂತೆ ದ್ರಾವಿಡ್​ಗೆ ಬಿಗ್ ಆಫರ್​.. ಒಪ್ಪಿದ್ರೆ ಜಾಕ್​ಪಾಟ್..!

ಮುಂಬರುವ ಐಪಿಎಲ್​ ಟೂರ್ನಿಗೂ ಮುನ್ನ ರಾಜಸ್ಥಾನ್​ ರಾಯಲ್ಸ್​ ತಂಡದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಸಂಜು ಸ್ಯಾಮ್ಸನ್​, ರಾಹುಲ್​ ದ್ರಾವಿಡ್​. ಕ್ಯಾಪ್ಟನ್​​-ಕೋಚ್​ ಇಬ್ಬರೂ ತಂಡದಿಂದ ಹೊರ ಬರುವ ನಿರ್ಧಾರ ಮಾಡಿ ಫ್ಯಾನ್ಸ್​​ಗೆ ಶಾಕ್​ ಕೊಟ್ಟಿದ್ದಾರೆ.

author-image
Ganesh Kerekuli
rahul dravid (2)
Advertisment

ಮುಂಬರುವ ಐಪಿಎಲ್​ ಟೂರ್ನಿಗೂ ಮುನ್ನ ರಾಜಸ್ಥಾನ್​ ರಾಯಲ್ಸ್​ ತಂಡದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಸಂಜು ಸ್ಯಾಮ್ಸನ್​, ರಾಹುಲ್​ ದ್ರಾವಿಡ್​. ಕ್ಯಾಪ್ಟನ್​​-ಕೋಚ್​ ಇಬ್ಬರೂ ತಂಡದಿಂದ ಹೊರ ಬರುವ ನಿರ್ಧಾರ ಮಾಡಿ ಫ್ಯಾನ್ಸ್​​ಗೆ ಶಾಕ್​ ಕೊಟ್ಟಿದ್ದಾರೆ. 

ದ್ರಾವಿಡ್​​​ ತಲೆದಂಡಕ್ಕೆ ಕಾರಣ ಏನು?

ರಾಜಸ್ಥಾನ್​ ರಾಯಲ್ಸ್​ ತಂಡದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿರೋದಕ್ಕೆ ಮುಖ್ಯ ಕಾರಣವೇ ರಿಯಾನ್​ ಪರಾಗ್​. ಪರಾಗ್​​ ಮೇಲೆ ಫ್ರಾಂಚೈಸಿ ಮಾಲೀಕರಿಗೆ ವಿಪರೀತ ವ್ಯಾಮೋಹ. 2019ರಿಂದ ತಂಡದಲ್ಲಿರೋ ಪರಾಗ್​ನ ರಾಜಸ್ಥಾನದ ನೂತನ ರಾಜನನ್ನಾಗಿ ಮಾಡೋಕೆ  ಫ್ರಾಂಚೈಸಿ ಹೊರಟಿದೆ. ಈ ನಿರ್ಧಾರವೇ ಅಲ್ಲೋಲ ಕಲ್ಲೋಲಕ್ಕೆ ಕಾರಣ. 

ರಾಹುಲ್​ ದ್ರಾವಿಡ್​​ರ​ ಮುಂದಿನ ನಡೆ ಏನು?

ರಾಜಸ್ಥಾನ್​ ರಾಯಲ್ಸ್​​ಗೆ ಗುಡ್​​ ಬೈ ಹೇಳಿದ ರಾಹುಲ್​ ದ್ರಾವಿಡ್​​​ರ ಮುಂದಿನ ನಡೆ ಏನು ಅನ್ನೋದು ಕ್ರಿಕೆಟ್​​ ವಲಯದ ಕುತೂಹಲದ ಪ್ರಶ್ನೆ. ಹೊಸ ಕೋಚ್​ ಹುಡುಕಾಟದಲ್ಲಿರೋ 2 ಬಾರಿಯ ಚಾಂಪಿಯನ್​ ತಂಡ ಕೊಲ್ಕತ್ತಾ ನೈಟ್​ ರೈಡರ್ಸ್​​​ ದ್ರಾವಿಡ್​​ನ ಅಪ್ರೋಚ್​ ಮಾಡಿದೆ. 

ದ್ರಾವಿಡ್​ ಫೈನಲ್​ ನಿರ್ಧಾರ ತಿಳಿಸಿಲ್ಲ. ಇದ್ರ ನಡುವೆ ಸಂಜು ಸ್ಯಾಮ್ಸನ್​ಗೂ ಕೆಕೆಆರ್​ ಗಾಳ ಹಾಕ್ತಿದೆ. ಎಲ್ಲಾ ಅಂದುಕೊಂಡಂತೆಯಾದರೆ ಕೆಕೆಆರ್​ ತಂಡದಲ್ಲಿ ಮತ್ತೊಮ್ಮೆ ಗುರು-ಶಿಷ್ಯರ ಸಮಾಗಮವಾಗಲಿದೆ. 

ಇದನ್ನೂ ಓದಿ:‘ನಾವು ರವಿ ಬೆಳಗೆರೆ ಕಡೆಯವರು ಸ್ವಾಮಿ..’ ದರ್ಶನ್ ಕೇಸ್ ವಿಚಾರಣೆ ವೇಳೆ ಕೋರ್ಟ್​ನಲ್ಲಿ ಅನಾಮಿಕ ಟ್ವಿಸ್ಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sanju Samson Rahul Dravid resigns
Advertisment