/newsfirstlive-kannada/media/media_files/2025/08/28/rcb-cares-2025-08-28-15-27-04.jpg)
ಕ್ಯಾಶ್ ಡೀಲ್.. ಪ್ಲೇಯರ್ ಫಾರ್ ಪ್ಲೇಯರ್​ ಎಕ್ಸ್​ಚೇಂಜ್.. ಪರ್ಸ್ ಅಡ್ಜೆಸ್ಟ್​ಮೆಂಟ್.. ಸೆಟಲ್​ಮೆಂಟ್.. ಇವೆಲ್ಲವೂ ಐಪಿಎಲ್ ಸೀಸನ್-19ರ ಟ್ರೇಡ್ ವಿಂಡೋದಲ್ಲಿ ಸಾಮಾನ್ಯ. ಆದ್ರೆ ವಿಂಡೋ ಟ್ರೇಡ್​​ನಲ್ಲಿ ಯಾವ ತಂಡ, ಸ್ಮಾರ್ಟ್​​​​ ಟ್ರೇಡ್ ಌಂಡ್ ಬೈ ಮಾಡುತ್ತೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ. ಯಾಕಂದ್ರೆ ಇಲ್ಲಿ ಗೆಲ್ಲೋದು ಲೆಕ್ಕಾಚಾರವಲ್ಲ. ಸ್ಮಾರ್ಟ್ ಮೂವ್ ಅಷ್ಟೇ. ಸದ್ಯ ಎಲ್ಲಾ ಹತ್ತು ಫ್ರಾಂಚೈಸಿಗಳು ವಿಂಡೋ ಟ್ರೇಡ್​ನಲ್ಲಿ ಆಸಕ್ತಿ ತೋರುತ್ತಿವೆ. ಹಾಗಾಗಿ ವಿಂಡೋ ಟ್ರೇಡ್​​​​​​​, ಹೆಚ್ಚು ಮಹತ್ವದ ಪಡೆದುಕೊಂಡಿದೆ.
ಆರ್​ಸಿಬಿ ಕತೆ ಏನು..?
ಆಲ್​ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್​ರನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ರಿಲೀಸ್ ಮಾಡುವ ಮನಸು ಮಾಡ್ತಿದೆ. ಬಲಿಷ್ಠ ಮಿಡಲ್ ಆರ್ಡರ್ ಕಟ್ಟಲು ಹೊರಟಿರುವ ಆರ್​ಸಿಬಿ, ರಿಲೀಸ್ ಅಥವಾ ಟ್ರೇಡಿಂಗ್ ಮೂಲಕ ಮತ್ತೋರ್ವ ಆಟಗಾರನನ್ನ ಕರೆತರಲು ಮುಂದಾಗಿದೆ. ಆಲ್​ರೌಂಡರ್​ಗಳ ಹುಡುಕಾಟಲ್ಲಿರುವ ಮುಂಬೈ ಮತ್ತು ಲಕ್ನೋ ಫ್ರಾಂಚೈಸಿ, ಲಿವಿಂಗ್​ಸ್ಟೋನ್​ ಖರೀದಿ ಮಾಡಿದ್ರೂ ಅಚ್ಚರಿ ಇಲ್ಲ.
ಇದನ್ನೂ ಓದಿ: ಆರೋಗ್ಯ ಚೇತರಿಕೆ ಬಗ್ಗೆ ಮೊದಲ ಬಾರಿಗೆ ಅಪ್​​ಡೇಟ್ಸ್ ಕೊಟ್ಟ ಅಯ್ಯರ್.. ಭಾವುಕ ಪೋಸ್ಟ್..!
/filters:format(webp)/newsfirstlive-kannada/media/media_files/2025/08/12/venkatesh-iyer-and-phill-salt-2025-08-12-18-51-23.jpg)
ದುಬಾರಿ ಆಲ್​ರೌಂಡರ್ ವೆಂಕಟೇಶ್ ಅಯ್ಯರ್​​​​​​​​​​​​ರನ್ನ ಟ್ರೇಡ್ ಮಾಡಲು, ಕೊಲ್ಕತ್ತಾ ನೈಟ್​ರೈಡರ್ಸ್​ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮಾತುಕಥೆ ನಡೆಯುತ್ತಿದೆ. ವೆಂಕಟೇಶ್ ಅಯ್ಯರ್​​ರನ್ನ ಆರ್​ಸಿಬಿಗೆ ನೀಡಿ, ಲಿವಿಂಗ್​ಸ್ಟೋನ್​ರನ್ನ ಕೆಕೆಆರ್​ಗೆ ನೀಡುವ ಕುರಿತು ಹೈವೋಲ್ಟೇಚ್ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ ಸನ್​ರೈಸರ್ಸ್​ ಹೈದ್ರಾಬಾದ್ ತಂಡ ಸಹ ಟ್ರೇಡಿಂಗ್ ಕುರಿತು​ ಮಾತುಕತೆಯಲ್ಲಿ ತೊಡಗಿರೋದು, ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ:ಓರ್ವ ಸ್ಟಾರ್​ ಆಟಗಾರನ ಬಿಟ್ಟುಕೊಡಲು RCB ರೆಡಿ.. ಬಿಗ್​ ಕ್ಯಾಶ್ ಡೀಲ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us