RCB ಸೇಲ್​ಗೆ ಫೈನಲ್ ರೇಟ್ ಫಿಕ್ಸ್.. ಓನರ್​ ಪಟ್ಟದ ಮೇಲೆ ಅನುಷ್ಕಾ ಶರ್ಮಾ ಕಣ್ಣು..!

ರಾಯಲ್​​​ ಚಾಲೆಂಜರ್ಸ್​​ ಬೆಂಗಳೂರು ತಂಡದ ಮಾರಾಟದ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಹಾಲಿ ಓನರ್​ ಡಿಯಾಜಿಯೋ ಕಂಪನಿ ತಂಡಕ್ಕೆ ಫೈನಲ್​ ಪ್ರೈಸ್​ ಫಿಕ್ಸ್​ ಮಾಡಿದೆ. ಆರ್​​ಸಿಬಿಯ ಫೈನಲ್​ ಪ್ರೈಸ್​ ಎಷ್ಟು ಕೋಟಿ? ಆರ್​​ಸಿಬಿ ಸ್ಟೇಕ್​​​ ಖರೀದಿಗೆ ಮುಂದಾಗಿರೋ ಬಿಡ್ಡರ್ಸ್​ ಯಾರ್ಯಾರು?

author-image
Ganesh Kerekuli
Anushka sharma rcb
Advertisment
  • ಆರ್​​ಸಿಬಿ ಫ್ರಾಂಚೈಸಿಯ ಫೈನಲ್​ ರೇಟ್​​ ಫಿಕ್ಸ್..!
  • 18 ಸಾವಿರ ಕೋಟಿ ಪ್ರೈಸ್​ ಫಿಕ್ಸ್​ ಮಾಡಿದ RCB
  • ಮಾರ್ಚ್​​ ಅಂತ್ಯದೊಳಗೆ ಆರ್​​ಸಿಬಿಗೆ ಹೊಸ ಓನರ್​

ಸೆಪ್ಟೆಂಬರ್​​ 30, 2025.. ಐಪಿಎಲ್​​ನ ಮಾಜಿ ಅಧ್ಯಕ್ಷ ಲಲಿತ್​ ಮೋದಿ ಮಾಡಿದ್ದ ಒಂದು ಟ್ವೀಟ್​ ಕ್ರಿಕೆಟ್​ ಲೋಕದಲ್ಲಿ ಸಂಚಲನ ಸೃಷ್ಟಿಸಿತ್ತು. ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಮಾರಾಟಕ್ಕೆ ತೆರೆ ಹಿಂದೆ ಪ್ಲಾನ್​ ನಡೀತಿದೆ ಅನ್ನೋ ಸ್ಪೋಟಕ ಸುದ್ದಿಯನ್ನ ಲಲಿತ್​ ಮೋದಿ ರಿವೀಲ್​ ಮಾಡಿದ್ರು. ಅದಾದ ಬಳಿಕ ಹಲವರು ತಂಡದ ಖರೀದಿಗೆ ಆಸಕ್ತಿ ತೋರಿಸಿದ್ರು. ಆ ಬಳಿಕ ಆ ಸುದ್ದಿ ಸೈಲೆಂಟ್​ ಆಗಿತ್ತು. ಇದೀಗ ಆರ್​​​ಸಿ​ಬಿ ಸೇಲ್​ನ ಡೀಲ್​ ಅಧಿಕೃತವಾಗಿ ಆರಂಭವಾಗಿದೆ. 

18 ಸಾವಿರ ಕೋಟಿ ಪ್ರೈಸ್​ ಫಿಕ್ಸ್​ ಮಾಡಿದ RCB

ಫ್ರಾಂಚೈಸಿ ಮಾರಾಟದ ಜವಾಬ್ದಾರಿಯನ್ನ ಸಿಟಿ ಬ್ಯಾಂಕ್​​ಗೆ ವಹಿಸಿರೋ ಡಿಯಾಜಿಯೋ ಕಂಪನಿ, ಇದೀಗ ಫ್ರಾಂಚೈಸಿಯ ಫೈನಲ್​ ರೇಟ್​ ಫಿಕ್ಸ್​ ಮಾಡಿದೆ. ಸದ್ಯ ಹೊಸ ರಿಪೋರ್ಟ್​​ನ ಪ್ರಕಾರ 5 ಬಾರಿಯ ಚಾಂಪಿಯನ್​​ ತಂಡಗಳಾದ ಚೆನ್ನೈ ಸೂಪರ್​ ಕಿಂಗ್ಸ್​, ಮುಂಬೈ ಇಂಡಿಯನ್ಸ್​ ತಂಡವನ್ನೂ ಆರ್​​ಸಿಬಿ ಮೀರಿಸಿ ನಿಂತಿದೆ. ಹಾಲಿ ಚಾಂಪಿಯನ್​​ ಆರ್​​ಸಿಬಿಯ ಬ್ರ್ಯಾಂಡ್​ ವ್ಯಾಲ್ಯೂ 2 ಬಿಲಿಯನ್​ ಡಾಲರ್​ ಗಡಿ ದಾಟಿದೆ. ಇದ್ರ ಆಧಾರದಲ್ಲಿ 18 ಸಾವಿರ ಕೋಟಿ ಬೇಸ್ ಪ್ರೈಸ್​ ಫಿಕ್ಸ್​ ಮಾಡಲಾಗಿದ್ದು, ಇದ್ರ ಮೇಲೆ ಬಿಡ್ಡಿಂಗ್​ ವಾರ್​ ನಡೆಯಲಿದೆ. 

ಇದನ್ನೂ ಓದಿ: ದರ್ಶನ್​ ಅಂಡ್​ ಗ್ಯಾಂಗ್​ ಮನೆ ಊಟ ವಿಚಾರ; ಕೋರ್ಟ್​ನಲ್ಲಿ ಮಹತ್ವದ ಬೆಳವಣಿಗೆ..!

RCB (10)

ಈ ಹಿಂದೆ ವರದಿಯಾದಂತೆ ಮಾರ್ಚ್​ ಅಂತ್ಯದ ಒಳಗೆ ಹೊಸ ಓನರ್ಸ್​ ಆರ್​​ಸಿಬಿಗೆ ಬರೋದು ಕನ್​ಫರ್ಮ್​ ಆಗಿದೆ. ಫೈನಲ್​ ಪ್ರೈಸ್​ ಫಿಕ್ಸ್​ ಆದ ಬಳಿಕ ಸೇಲ್​ನ ಚುಟುವಟಿಕೆಗಳು ಅಧಿಕೃತವಾಗಿ ಆರಂಭವಾಗಿವೆ. ಆರ್​​ಸಿಬಿ ಖರೀದಿಗೆ ಹಲವು ಖರೀದಿದಾರರು ಆಸಕ್ತಿ ತೋರಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 2.5 ಬಿಲಿಯನ್​ ಡಾಲರ್​ವರೆಗೆ ಬಿಡ್ಡಿಂಗ್​ ನಡೆಯೋ ಸಾಧ್ಯತೆಯಿದ್ದು, ಹತ್ತಿರ ಹತ್ತಿರ 25 ಸಾವಿರ ಕೋಟಿಗೆ ಆರ್​​ಸಿಬಿ ಸೇಲ್​ ಆಗಲಿದೆ ಎನ್ನಲಾಗ್ತಿದೆ. 

ಆರ್​​​ಸಿಬಿ ತಂಡದ ಷೇರುಗಳನ್ನ ಖರೀದಿಸೋಕೆ ವಿರಾಟ್​ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಆಸಕ್ತಿ ತೋರಿಸಿದ್ದಾರೆ. 3 ಪರ್ಸೆಂಟ್​ ಸ್ಟೇಕ್​​​ ಖರೀದಿಗೆ ಅನುಷ್ಕಾ ಶರ್ಮಾ ಆಸಕ್ತಿ ಹೊಂದಿದ್ದು, ಇದ್ರ ಬೆಲೆ 400 ಕೋಟಿ ರೂಪಾಯಿಗಳಾಗಿವೆ. ಆದ್ರೆ, ಅನುಷ್ಕಾ ಇನ್ವೆಸ್ಟ್​ ಮಾಡೋದಕ್ಕೆ ನಿಯಮಗಳು ಅಡ್ಡಿಯಾಗಿವೆ. ಪತಿ ವಿರಾಟ್​ ಕೊಹ್ಲಿ ತಂಡದ ಆಟಗಾರನಾಗಿರೋದು ಫ್ರಾಂಚೈಸಿ ಓನರ್​ ಆಗೋ ಅನುಷ್ಕಾ ಆಸೆಗೆ ಅಡ್ಡಿಯಾಗಿದೆ.  

ಆರ್​​ಸಿಬಿ ಸೇಲ್​ಗಿದೆ ಅನ್ನೋ ಸುದ್ದಿ ಹೊರಬಿದ್ದ ಬೆನ್ನಲ್ಲೇ ಬಹಿರಂಗವಾಗೇ ಸೀರಮ್​ ಇನ್ಸಿಸ್ಟ್ಯೂಟ್​ನ ಆದಾರ್​ ಪೂನಾವಾಲ ಖರೀದಿಗೆ ಆಸಕ್ತಿಯಿದೆ ಎಂದು ಹೇಳಿದ್ರು. ಇತ್ತೀಚೆಗಷ್ಟೇ ಮತ್ತೆ ಟ್ವೀಟ್​ ಮಾಡಿ ಪೂನಾವಾಲ ಹೈಯೆಸ್ಟ್​ ಬಿಡ್​ ಮಾಡೋದಾಗಿ ಹೇಳಿದ್ದಾರೆ. ಈಗಾಗಲೇ ಹಾಲಿ ಓನರ್ಸ್​ ಡಿಯಾಜಿಯೋ ಗ್ರೂಪ್​ ಜೊತೆಗೆ ಪೂನಾವಾಲಾ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿಯಿದೆ. ತಂಡದ ಬಹುಪಾಲು ಷೇರುಗಳು ಆಧಾರ್​ ಪೂನಾವಾಲಾ ಪಾಲಾಗೋ ಸಾಧ್ಯತೆಯಿದೆ. 

ಇದನ್ನೂ ಓದಿ: ದರ್ಶನ್​ ಅಂಡ್​ ಗ್ಯಾಂಗ್​ ಮನೆ ಊಟ ವಿಚಾರ; ಕೋರ್ಟ್​ನಲ್ಲಿ ಮಹತ್ವದ ಬೆಳವಣಿಗೆ..!

RCB (7)

ಕೆ.ಜಿ.ಎಫ್​, ಕಾಂತಾರ ಚಿತ್ರಗಳ ಯಶಸ್ಸಿನ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್​​ನ ಮಾಲೀಕ ತನ್ನ ಸಾಮ್ರಾಜ್ಯವನ್ನ ಮತ್ತಷ್ಟು ವಿಸ್ತರಿಸೋಕೆ ಮುಂದಾಗಿದ್ದಾರೆ. ಆರ್​​ಸಿಬಿ ತಂಡದ ಓನರ್​​ಶಿಪ್​ ಮೇಲೆ ಹೊಂಬಾಳೆ ಫಿಲ್ಮ್ಸ್​​ನ ಕಣ್ಣು ಬಿದ್ದಿದೆ.  2023ರಿಂದಲೂ ಹೊಂಬಾಳೆ ಫಿಲ್ಮ್ಸ್​​ ಆರ್​​ಸಿಬಿಯ ಡಿಜಿಟಲ್​ ಪಾರ್ಟನರ್​ ಆಗಿ ಗುರುತಿಸಿಕೊಂಡಿದೆ. ಇದೀಗ ಆರ್​​​ಸಿಬಿ ಸೇಲ್​ಗಿರೋದ್ರಿಂದ ತಂಡವನ್ನೇ ಖರೀದಿಸೋಕೆ ತೆರೆ ಹಿಂದೆ ಕಸರತ್ತನ್ನ ಆರಂಭಿಸಿದೆ. ಪೂರ್ತಿ ತಂಡವನ್ನ ಖರೀದಿಸಲು ಸಾಧ್ಯವಾಗಲಿದ್ರೆ, ಪಾಲುದಾರಿಕೆಯಲ್ಲಿ ಕೆಲವು ಷೇರುಗಳನ್ನಾದ್ರೂ ತೆಕ್ಕೆಗೆ ತೆಗೆದುಕೊಳ್ಳಲು ಹೊಂಬಾಳೆ ಫಿಲ್ಮ್ಸ್​ ಮುಂದಾಗಿದೆ. 

ಉದ್ಯಮಿ ಪಾರ್ಥ್​ ಜಿಂದಾಲ್ ಕೂಡ ಆರ್​​​ಸಿಬಿಯ ಖರೀದಿಗೆ ಗಂಭೀರವಾಗಿ ಚಿಂತಿಸಿದ್ದಾರೆ. ಈಗಾಗಲೇ ಐಪಿಎಲ್​ನಲ್ಲಿ ಜಿಂದಾಲ್ ಕಂಪನಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಒಡೆತನವನ್ನ ಹೊಂದಿದೆ. ಡೆಲ್ಲಿ ಫ್ರಾಂಚೈಸಿಯ 50 ಪರ್ಸೆಂಟ್​ ಶೇರುಗಳ ಹೊಂದಿರೋ ಪಾರ್ಥ್​ ಜಿಂದಾಲ್​, ಪೂರ್ಣ ಪ್ರಮಾಣದಲ್ಲಿ ತಂಡವೊಂದರ ಒಡೆಯನಾಗೋ ಲೆಕ್ಕಾಚಾರದಲ್ಲಿದ್ದಾರಂತೆ.! ISL​​ನ ಬೆಂಗಳೂರು ಫುಟ್ಬಾಲ್​ ತಂಡದ ಒಡೆಯನಾಗಿರೋ ಪಾರ್ಥ್​ ಜಿಂದಾಲ್​, ಕ್ರಿಕೆಟ್​ನಲ್ಲೂ ಬೆಂಗಳೂರು ಮೂಲದ ತಂಡದ ಖರೀದಿಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಜೊತೆಗೆ 2022ರಲ್ಲಿ ಐಪಿಎಲ್​ನಲ್ಲಿ ತಂಡ ಖರೀದಿಸಲು ಪ್ರಯತ್ನಿಸಿ ವಿಫಲವಾಗಿದ್ದ ಅದಾನಿ ಗ್ರೂಪ್​ ಕಣ್ಣು ಕೂಡ ರೆಡ್​ಆರ್ಮಿ ಮೇಲೆ ಬಿದ್ದಿದೆ. 
ಆರ್​​ಸಿಬಿ ಖರೀದಿಗೆ ಹಲವು ಕಂಪನಿಗಳಂತೂ ಕ್ಯೂನಲ್ಲಿ ನಿಂತಿವೆ. ಆರ್​​ಸಿಬಿ ಫ್ರಾಂಚೈಸಿಗಿರೋ ಕ್ರೇಜ್​ನ ಲಾಭ ಪಡೆದು ಕೋಟಿ ಕೋಟಿ ಕಮಾಲ್​ ಮಾಡೋ ಲೆಕ್ಕಾಚಾರ ಹಾಕಿಕೊಂಡಿವೆ. ಕೆಲವೇ ದಿನಗಳಲ್ಲಿ ಹೊಸ ಓನರ್​ ಯಾರಾಗ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ.  

ಇದನ್ನೂ ಓದಿ:ಬೆಂಗಳೂರಿಗರಿಗೆ ನಮ್ಮ ಮೆಟ್ರೋ ಕಡೆಯಿಂದ ಭರ್ಜರಿ ಗುಡ್ ನ್ಯೂಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cricket news in Kannada RCB
Advertisment