ಬೆಂಗಳೂರಿಗರಿಗೆ ನಮ್ಮ ಮೆಟ್ರೋ ಕಡೆಯಿಂದ ಭರ್ಜರಿ ಗುಡ್ ನ್ಯೂಸ್..!

ಸಿಲಿಕಾನ್ ಸಿಟಿ ಮಂದಿಗೆ ಬಹುನಿರೀಕ್ಷಿತ ‘ಪಿಂಕ್ ಲೈನ್’ (Pink Line) ಮೆಟ್ರೋ ಮಾರ್ಗದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ನಗರದ ಸಂಚಾರ ದಟ್ಟಣೆಗೆ ಮುಕ್ತಿ ನೀಡಲಿರುವ ಈ ಹೊಸ ಮಾರ್ಗಕ್ಕೆ ಎರಡನೇ ಸೆಟ್ ರೈಲು ಬೋಗಿಗಳು ಆಗಮಿಸಿವೆ.

author-image
Ganesh Kerekuli
pink lane metro trial run
Advertisment

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಬಹುನಿರೀಕ್ಷಿತ ‘ಪಿಂಕ್ ಲೈನ್’ (Pink Line) ಮೆಟ್ರೋ ಮಾರ್ಗದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ನಗರದ ಸಂಚಾರ ದಟ್ಟಣೆಗೆ ಮುಕ್ತಿ ನೀಡಲಿರುವ ಈ ಹೊಸ ಮಾರ್ಗಕ್ಕೆ ಎರಡನೇ ಸೆಟ್ ರೈಲು ಬೋಗಿಗಳು ಆಗಮಿಸಿವೆ.

ಚೀನಾ ಮೂಲದ ಸಿಆರ್‌ಆರ್‌ಸಿ (CRRC) ಕಂಪನಿಯಿಂದ ಆರ್ಡರ್ ಮಾಡಲಾಗಿದ್ದ ಈ ರೈಲು ಬೋಗಿಗಳು ಸದ್ಯ ಕೊತ್ತನೂರು ಡಿಪೋ ತಲುಪಿವೆ. ಈ ಹಿಂದೆ ಮೊದಲ ರೈಲು ಆಗಮಿಸಿತ್ತು, ಈಗ ಎರಡನೇ ರೈಲು ಬಂದಿರುವುದು ಯೋಜನೆಯ ವೇಗಕ್ಕೆ ಸಾಕ್ಷಿಯಾಗಿದೆ. ಬೋಗಿಗಳ ಜೋಡಣೆ ಪ್ರಕ್ರಿಯೆ ಮುಗಿದ ತಕ್ಷಣ ಹಳಿಗಳ ಮೇಲೆ ಟ್ರ್ಯಾಕ್ ಪರೀಕ್ಷೆ (Track Testing) ಆರಂಭವಾಗಲಿದೆ.

ಇದನ್ನೂ ಓದಿ: R.B ತಿಮ್ಮಾಪುರ ರಾಜೀನಾಮೆಗೆ ಒತ್ತಾಯಿಸಿ ಮೈತ್ರಿ ನಾಯಕರ ಆಹೋರಾತ್ರಿ ಧರಣಿ

ಪಿಂಕ್ ಲೈನ್ ಮಾರ್ಗದ ಹೈಲೈಟ್ಸ್:

  • ಒಟ್ಟು ಉದ್ದ: 21.26 ಕಿ.ಮೀ.
  • ಎಲಿವೇಟೆಡ್ ಮಾರ್ಗ: 7.5 ಕಿ.ಮೀ. (ಕಾಳೇನಾ ಅಗ್ರಹಾರದಿಂದ ತಾವರೆಕೆರೆವರೆಗೆ).
  • ಅಂಡರ್ ಗ್ರೌಂಡ್ ಮಾರ್ಗ: 13.76 ಕಿ.ಮೀ.
  • ನಿಲ್ದಾಣಗಳು: ಎಲಿವೇಟೆಡ್ ಮಾರ್ಗದಲ್ಲಿ ಒಟ್ಟು 6 ನಿಲ್ದಾಣಗಳಿವೆ.
  • ಏಪ್ರಿಲ್‌ನಲ್ಲಿ ಮೊದಲ ಹಂತ ಲೋಕಾರ್ಪಣೆ?

ಬಿಎಂಆರ್‌ಸಿಎಲ್ (BMRCL) ಯೋಜನೆ ಹಾಕಿಕೊಂಡಿರುವಂತೆ ಮೊದಲ ಹಂತದಲ್ಲಿ ಕಾಳೇನಾ ಅಗ್ರಹಾರದಿಂದ ತಾವರೆಕೆರೆ ನಡುವಿನ 7.5 ಕಿ.ಮೀ ಎಲಿವೇಟೆಡ್ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಸಿದ್ಧತೆ ನಡೆಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬರುವ ಏಪ್ರಿಲ್ ತಿಂಗಳಿನಲ್ಲಿ ಈ ಮಾರ್ಗದಲ್ಲಿ ಮೆಟ್ರೋ ರೈಲು ಓಡಾಡಲಿದೆ.

ವರ್ಷಾಂತ್ಯಕ್ಕೆ ಪೂರ್ಣ ಮಾರ್ಗ ಓಪನ್

ಇನ್ನುಳಿದ 13.76 ಕಿ.ಮೀ ಉದ್ದದ ಸುರಂಗ ಮಾರ್ಗದ (Underground) ಕಾಮಗಾರಿ ಪ್ರಗತಿಯಲ್ಲಿದೆ. ಸುರಂಗ ಮಾರ್ಗದ ಕೆಲಸಗಳು ಪೂರ್ಣಗೊಂಡ ನಂತರ, ಈ ವರ್ಷದ ಅಂತ್ಯದ ವೇಳೆಗೆ ಕಾಳೇನಾ ಅಗ್ರಹಾರದಿಂದ ನಾಗವಾರದವರೆಗಿನ ಇಡೀ ಪಿಂಕ್ ಲೈನ್ ಮಾರ್ಗವನ್ನು ಸಾರ್ವಜನಿಕರ ಬಳಕೆಗೆ ನೀಡುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ.

ಹೊಸದಾಗಿ ಬಂದಿರುವ ರೈಲು ಬೋಗಿಗಳನ್ನು ಜೋಡಿಸಿ, ತಾಂತ್ರಿಕ ಪರೀಕ್ಷೆಗಳನ್ನು ನಡೆಸಿದ ನಂತರ 7.5 ಕಿ.ಮೀ ಎಲಿವೇಟೆಡ್ ಮಾರ್ಗದಲ್ಲಿ ಟ್ರಯಲ್ ರನ್ ಆರಂಭವಾಗಲಿದೆ. ಇದು ಯಶಸ್ವಿಯಾದರೆ ದಕ್ಷಿಣ ಬೆಂಗಳೂರಿನ ಜನರಿಗೆ ಸಂಚಾರದಲ್ಲಿ ದೊಡ್ಡ ಮಟ್ಟದ ರಿಲೀಫ್ ಸಿಗಲಿದೆ. ಒಟ್ಟಿನಲ್ಲಿ ಪಿಂಕ್ ಲೈನ್ ಮೆಟ್ರೋ ಕಾಮಗಾರಿ ಭರದಿಂದ ಸಾಗುತ್ತಿದ್ದು, ಬೆಂಗಳೂರಿಗರ ಪ್ರಯಾಣ ಇನ್ನಷ್ಟು ಸುಗಮವಾಗುವ ದಿನಗಳು ಹತ್ತಿರದಲ್ಲಿವೆ.

ಇದನ್ನೂ ಓದಿ: ದರ್ಶನ್​ ಅಂಡ್​ ಗ್ಯಾಂಗ್​ ಮನೆ ಊಟ ವಿಚಾರ; ಕೋರ್ಟ್​ನಲ್ಲಿ ಮಹತ್ವದ ಬೆಳವಣಿಗೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Namma metro
Advertisment