R.B ತಿಮ್ಮಾಪುರ ರಾಜೀನಾಮೆಗೆ ಒತ್ತಾಯಿಸಿ ಮೈತ್ರಿ ನಾಯಕರ ಆಹೋರಾತ್ರಿ ಧರಣಿ

ಅಬಕಾರಿ ಸಚಿವ R.B ತಿಮ್ಮಾಪುರ ರಾಜೀನಾಮೆ ಒತ್ತಾಯಿಸಿ ವಿಧಾನಸೌಧ ಒಳಗೆ ಮೈತ್ರಿ ನಾಯಕರ ಆಹೋರಾತ್ರಿ ಧರಣಿ ನಡೆಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮಾಡ್ತಿದ್ದು, ನಿನ್ನೆ ಸದನದಲ್ಲೂ ವಾಕ್ಸಮರ ಜೋರಾಗಿ ನಡೆದಿತ್ತು.

author-image
Ganesh Kerekuli
bjp protest (2)
Advertisment

ಬೆಂಗಳೂರು: ಅಬಕಾರಿ ಸಚಿವ R.B ತಿಮ್ಮಾಪುರ ರಾಜೀನಾಮೆ ಒತ್ತಾಯಿಸಿ ವಿಧಾನಸೌಧ ಒಳಗೆ ಮೈತ್ರಿ ನಾಯಕರ ಆಹೋರಾತ್ರಿ ಧರಣಿ ನಡೆಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮಾಡ್ತಿದ್ದು, ನಿನ್ನೆ ಸದನದಲ್ಲೂ ವಾಕ್ಸಮರ ಜೋರಾಗಿ ನಡೆದಿತ್ತು.

ನಿನ್ನೆ ಪ್ರಶ್ನೋತ್ತರ ಕಲಾಪದ ವೇಳೆ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದ R.B ತಿಮ್ಮಾಪುರ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡೋದಿಲ್ಲ ಅಂತ ಕಡ್ಡಿ ಮುರಿದಂತೆ ಹೇಳಿದ್ರು. ತಿಮ್ಮಾಪುರ ಪದಚುತ್ಯಕ್ಕೆ ಒತ್ತಾಯಿಸಿ ರಾತ್ರಿ ವಿಧಾನಸೌಧದಲ್ಲಿ ಭಜನೆ, ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಕಮಲ-ದಳ ನಾಯಕರು ಅಲ್ಲೇ ಮಲಗಿದ್ರು. 

ಇದನ್ನೂ ಓದಿ:ಹೆಚ್​​ಡಿಕೆ ಮನವಿಗೆ ಕೇಂದ್ರದ ಸ್ಪಂದನೆ; ಶೇ.18ರಷ್ಟು ಸುಂಕ ರದ್ದು; ರಾಜ್ಯದ ತಂಬಾಕು ಬೆಳೆಗಾರರರು ನಿರಾಳ

bjp protest (1)

ಬೆಳಗ್ಗೆ ಎದ್ದ ಕಮಲ-ದಳ ನಾಯಕರು ವಾಕಿಂಗ್​ ಶುರು ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ ಆರ್​.ಅಶೋಕ್, ರಾಜ್ಯ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಪ್ರತಿಭಟನಾ ನಿರತ ಶಾಸಕರು ಕಾಫಿ, ಟೀ ಸೇವಿಸಿ ವಾಕಿಂಗ್​ ಮಾಡಿದ್ದಾರೆ.

‘ನಾನು ಯಾವ ರಾಜೀನಾಮೆ ಕೊಡೋದಿಲ್ಲ’

ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ನಿರಾಕರಿಸಿದ್ದು, ಪ್ರತಿಪಕ್ಷಗಳು ರಾಜೀನಾಮೆಗೆ ಪಟ್ಟು ಹಿಡಿದಿದೆ. ಸಚಿವ ಆರ್.ಬಿ ತಿಮ್ಮಾಪುರ್ ಮಾತ್ರ ವಿಪಕ್ಷಗಳ ಹಗರಣದ ಲಿಸ್ಟ್​ ಮುಂದಿಟ್ಟು.. ತಮ್ಮನ್ನ ಸರ್ಮಥಿಸಿಕೊಳ್ಳೋ ಕೆಲಸ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಗೋಪಾಲಯ್ಯ ಮೇಲೆ ಲಂಚದ ಆರೋಪ ಬಂತು, ಅವರೇನು ರಾಜೀನಾಮೆ ಕೊಟ್ಟಿದ್ರಾ? ಶಶಿಕಲಾ ಜೊಲ್ಲೆ ಮೇಲೆ ಮೊಟ್ಟೆ ಹಗರಣ ಬಂತು, ಅವರನ್ನ ಸಂಪುಟದಲ್ಲಿ ಹೇಗೆ ಇಟ್ಕೊಂಡಿದ್ರಿ. ನೌಕರರಿಂದ ಸಿಸಿ ಪಾಟೀಲ್ ಹಣ ವಸೂಲಿ ಆರೋಪ ಬಂತು, ಅವರ ಮೇಲೆ ಏನು ಕ್ರಮ‌ಕೈಗೊಂಡ್ರಿ. ಬಿಜೆಪಿ ಅವಧಿಯಲ್ಲಿ ದೊಡ್ಡ ಪಟ್ಟಿಯೇ ಇದೆ. ಹಾಗಾಗಿ ನಾನು ಯಾವ ರಾಜೀನಾಮೆ ಕೊಡೋದಿಲ್ಲ ಅಂತ ಗುಡುಗಿದ್ದಾರೆ.

ಇದನ್ನೂ ಓದಿ: ಮೋಸ ಹೋಗೋ ಸಾಧ್ಯತೆ; ಯಾವುದೇ ವಿಚಾರ ಲಘುವಾಗಿ ಪರಿಗಣಿಸಬೇಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BY Vijayendra R Ashok R.B Timmarapura Vidhana Soudha session
Advertisment