ಮೋಸ ಹೋಗೋ ಸಾಧ್ಯತೆ; ಯಾವುದೇ ವಿಚಾರ ಲಘುವಾಗಿ ಪರಿಗಣಿಸಬೇಡಿ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಕೃಷ್ಣ ಪಕ್ಷ, ತೃತೀಯಾ (ತದಿಗೆ) ತಿಥಿ, ಪುಬ್ಬಾ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ: ರಸ್ತೆ ಪಕ್ಕ ಕಾರ್ ನಿಲ್ಲಿಸಿಕೊಂಡು ನಿಂತಿದ್ದೇ ತಪ್ಪಾಯ್ತು : BMW ಕಾರ್ ಹಿಂದಿನಿಂದ ಡಿಕ್ಕಿ ಹೊಡೆದು ಮಲ್ಲಿಕಾ ದಾರುಣ ಸಾವು

ಮೇಷ

  • ಹಣದಿಂದ ಜನರು ಗೌರವಿಸುವ ಸಾಧ್ಯತೆ 
  • ಇಂದು ನಿಮ್ಮ ಮಾತು, ಕೋಪದಿಂದ ಕೆಲಸವಾಗಬಹುದು
  • ನಿಮ್ಮ ಆಲೋಚನೆಗಳು ಕುಟುಂಬದ ಮಧ್ಯದಲ್ಲಿರಲಿ
  • ಸ್ಪರ್ಧಾತ್ಮಕ ವಿಚಾರಗಳಿಗೆ ಶುಭದಿನ
  • ತುಂಬಾ ಬುದ್ದಿವಂತರರಾದ ನೀವು ಮೋಸಹೋಗುವ ಸಾಧ್ಯತೆ
  • ಖಾಸಗಿ ಉದ್ಯೋಗಿಗಳಿಗೆ ಬದಲಾವಣೆಯ ಭಯ 
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ವೃಷಭ

  • ಯಾವುದೇ ವಿಚಾರಗಳನ್ನು ಲಘುವಾಗಿ ಪರಿಗಣಿಸಬೇಡಿ
  • ಸಹೋದರರಲ್ಲಿ ವಿವಾದ, ಕಲಹ ಬೇಡ
  • ಅನಿವಾರ್ಯವಾಗಿ ಪ್ರಯಾಣ ಸಾಧ್ಯತೆ ಆದರೆ ಶುಭಕರವಿಲ್ಲ
  • ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇದ್ದರೂ ದ್ರೋಹ ಅಥವಾ ಮೋಸ ಸಾಧ್ಯತೆ
  • ವ್ಯವಹಾರದಲ್ಲಿ ನಿಮ್ಮ ಜಾಗ್ರತೆ ಬೇರೆಯವರಿಗೆ ಮಾದರಿ
  • ಆರೋಗ್ಯ ಸಮಸ್ಯೆ ಕಾಡಬಹುದು ತಾತ್ಸಾರ ಮಾಡಬೇಡಿ
  • ಬಿಳಿ ಎಕ್ಕದ ಗಿಡಕ್ಕೆ ಪೂಜೆ ಮಾಡಿ ,12 ಪ್ರದಕ್ಷಿಣೆ ಹಾಕಿ

ಮಿಥುನ

  • ಹೊಸ ಉದ್ಯೋಗ ಅಥವಾ ವೃತ್ತಿ ಆರಂಭಿಸಲು ಶುಭದಿನ
  • ಹಳೆಯ ವಿಚಾರ ಪ್ರಸ್ತಾಪವಾಗಿ ಬೇಸರ ಸಾಧ್ಯತೆ
  • ತಾಯಿಯವರ ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ
  • ಸ್ನೇಹ - ಮಿತ್ರತ್ವಕ್ಕೆ ಬೆಲೆ ಸಿಗಬಹುದು ಅದರಿಂದ ನೆಮ್ಮದಿ ಕೂಡ ಸಿಗುವ ದಿನ
  • ಪ್ರೇಮಿಗಳಿಗೆ ತೊಂದರೆಯಾಗುವ ಸಾಧ್ಯತೆ
  • ಪ್ರಯಾಣವು ಕೂಡ ಸುಖಕರವಾಗಿರಬಹುದು
  • ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ


ಕಟಕ

  • ಇಂದು ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಬೇಸರ ಉಂಟು ಮಾಡಬಹುದು
  • ಯಾವುದೋ ತೊಂದರೆಯಿದೆ ಎಂದು ಮನಸ್ಸಿನಲ್ಲಿ ಭಯ ಸಾಧ್ಯತೆ
  • ಇಂದು ಜೀವ ಭಯವಾಗುವಂತ ಯಾವುದೇ ಘಟಣೆ ನಡೆಯುವುದಿಲ್ಲ ಭಯ ಬೇಡ
  • ಸಣ್ಣ-ಸಣ್ಣ ಸಮಸ್ಯೆಗಳು ಮನಸ್ಸಿನಲ್ಲಿ ಭಯ ಹುಟ್ಟಿಸಬಹುದು
  • ವ್ಯವಹಾರಿಕವಾದ ಅಡೆತಡೆಗಳು ನಿಮ್ಮ ಮುಂದೆ ಬರಬಹುದು
  • ವಿನಾಕಾರಣ ಕುಟುಂಬ ಕಲಹ ಸಾಧ್ಯತೆ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಸಿಂಹ 

  • ಮನೆಯ ಸದಸ್ಯರಿಗೆ ಅಧ್ಯಾತ್ಮದ ವಿಚಾರಗಳ ಬಗ್ಗೆ ತಿಳುವಳಿಕೆ ಹೇಳಿ
  • ಕೆಲವು ಅನುಮಾನಾಸ್ಪದ ವಾತಾವರಣ ನಿರ್ಮಾಣವಾಗಬಹುದು
  • ಹೂ ಬೆಳೆಗಾರರಿಗೆ ನಷ್ಟ ಸಾಧ್ಯತೆ
  • ಸಾಯಂಕಾಲ ಶುಭ ಸುದ್ದಿ, ಮನಸ್ಸಿಗೆ ನೆಮ್ಮದಿ ಸಾಧ್ಯತೆ
  • ಪ್ರಾಯೋಗಿಕವಾದ ಕೆಲಸಕ್ಕೆ ಆದ್ಯತೆ ನೀಡಿ
  • ಕೌಟುಂಬಿಕ ಸಂಬಂಧದಲ್ಲಿ ವಿಶ್ವಾಸವಿರಲಿ
  • ನರಸಿಂಹನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ನಿಮ್ಮ ಜವಾಬ್ದಾರಿಯುತ ಕೆಲಸಕ್ಕೆ ಮುಂಗಡ ಹಣ ಸಿಗಬಹುದು
  • ದೊಡ್ಡವರ ಸಂಪರ್ಕ ಮತ್ತು ಅವರ ಮಾತು ಸಮಧಾನ ಕೊಡುವ ಸಾಧ್ಯತೆ
  • ವೃತ್ತಿ ಮತ್ತು ಕೆಲಸದ ಬಗ್ಗೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗಬಹುದು
  • ನಿರೀಕ್ಷಿಸಿದ ವಿಚಾರಗಳಿಗೆ ಸಂಪೂರ್ಣವಾದ ಸಹಾಯ, ಭರವಸೆ ಸಿಗಬಹುದು
  • ನಿಮ್ಮ ದೌರ್ಬಲ್ಯ ನಿಮ್ಮ ನಿಯಂತ್ರಣದಲ್ಲಿರಲಿ
  • ವಿನಾಕಾರಣ ಬೇರೆಯವರೊಂದಿಗೆ ನಿಷ್ಠುರ ಬೇಡ
  • ಗಣಪತಿ ಪ್ರಾರ್ಥನೆ ಮಾಡಿ

ತುಲಾ

  • ಬಡ್ಡಿ ವ್ಯವಹಾರ ಮಾಡುವವರಿಗೆ ಇಂದು ಹಿನ್ನಡೆ ಸಾಧ್ಯತೆ
  • ಮನೆಯ ಅಗತ್ಯ ವಸ್ತುಗಳ ಖರೀದಿಯಿಂದ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ
  • ವೃತ್ತಿಪರರಿಗೆ ಹೆಚ್ಚು ಅನುಕೂಲ ಇರುವ ದಿನ
  • ಮಕ್ಕಳು ಮತ್ತು ವಿದ್ಯಾರ್ಥಿಗಳನ್ನ ಗೌರವಿಸಲ್ಪಡುವ ದಿನ
  • ದಾಂಪತ್ಯ ವಿಚಾರದಲ್ಲಿ ವಿರಸ ಸಾಧ್ಯತೆ
  • ಆರ್ಥಿಕ ಸಂಕಷ್ಟ ಕಾಡುವ ಸಾಧ್ಯತೆ
  • ಐಕ್ಯಮತ್ಯ ಮಂತ್ರ ಜಪಿಸಿ

ವೃಶ್ಚಿಕ

  • ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆ ಸಿಗುವ ದಿನ
  • ವಿದ್ಯಾಭ್ಯಾಸದಲ್ಲಿ ಸ್ವಲ್ಪ ಅನಾನುಕೂಲ ಸಾಧ್ಯತೆ
  • ದೂರ ಪ್ರಯಾಣದ ವಿಚಾರವಾಗಿ ಮಾತುಕತೆ ನಡೆಯಬಹುದು 
  • ಸ್ವಲ್ಪ ಸಂತೋಷ, ಸ್ವಲ್ಪ ಬೇಸರ ಇರುವ ದಿನ 
  • ಅಧಿಕ ಖರ್ಚಿರುತ್ತೆ ಆದರೆ ಖರ್ಚನ್ನ ನಿಭಾಯಿಸುವ ಶಕ್ತಿ ಕೂಡ ಇರುತ್ತದೆ
  • ಇಂದು ನಿಮ್ಮ ಆಹಾರದ ಬಗ್ಗೆ ಜಾಗ್ರತೆವಹಿಸಿ
  • ಸರಸ್ವತಿ ಆರಾಧನೆ ಮಾಡಿ

ಧನುಸ್ಸು

  • ಮಾತಿನಿಂದ ಜನಾಕರ್ಷಣೆ ಸಾಧ್ಯತೆ 
  • ನವ ವಿವಾಹಿತರಿಗೆ ಶುಭ ದಿನ 
  • ವಿದೇಶ ಶುಭ ವಿಚಾರವೊಂದು ಮನಸ್ಸಿಗೆ ಸಂತೋಷ ನೀಡುತ್ತದೆ 
  • ಜವಾಬ್ದಾರಿಗಳ ಪೂರೈಕೆ ಆಗುತ್ತದೆ ಅದರಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
  • ವ್ಯಾಪಾರದಲ್ಲಿ ಸವಾಲುಗಳು ಎದುರಾಗಬಹುದು ಆದರೆ ನಿಮ್ಮ ಅನುಭವ ನಿಮಗೆ ಜಯ ತಂದು ಕೊಡುತ್ತದೆ
  • ನೌಕರಿ ಅಥವಾ ವೃತ್ತಿಯಲ್ಲಿ ಗೌರವ ಹೆಚ್ಚಾಗಬಹುದು
  • ಹಿರೀಕರ ಆರ್ಶೀವಾದ ಪಡೆಯಿರಿ

ಮಕರ

  • ಸಹೋದ್ಯೋಗಿಗಳಿಗೆ ನಿಮ್ಮಿಂದ ಸಹಾಯ ಸಾಧ್ಯತೆ
  • ಕುಟುಂಬದವರೊಂದಿಗೆ ಸಾಯಂಕಾಲ ಉತ್ತಮ ವಾತಾವರಣ ವಿರುತ್ತದೆ
  • ಮಂಗಳಕಾರ್ಯ ಅಥವಾ ಶುಭ ಕಾರ್ಯದ ಬಗ್ಗೆ ಚಿಂತನೆ ಸಾಧ್ಯತೆ
  • ದಿನದ ಆರಂಭದಲ್ಲಿ ಕೆಲಸದಲ್ಲಿ ಉದಾಸೀನತೆ, ತಾತ್ಸಾರ, ಆಲಸ್ಯ ಕಾಣಬಹುದು
  • ನಿಮ್ಮ ಪರಿಶ್ರಮದಿಂದ ಹಲವರಿಗೆ ಲಾಭ ಸಾಧ್ಯತೆ
  • ಎರಡನೇ ಬಳಗದ ಅಣ್ಣತಮ್ಮಂದಿರಿಗೆ ತೊಂದರೆ ಸಾಧ್ಯತೆ
  • ದುರ್ಗಾರಾಧನೆ ಮಾಡಿ

ಕುಂಭ

  • ಮನೆಯಿಂದ ಹೊರಗಿದ್ದಾಗ ಖುಷಿಯಾಗಿರುವ ಸಾಧ್ಯತೆ
  • ಮನೋರಂಜನೆಯ ದಿನವಾದರೂ ಸಂತೋಷ ಕಡಿಮೆ
  • ದಾಂಪತ್ಯದಲ್ಲಿ ಹೊಂದಾಣಿಕೆ ಬೇಕಾಗಬಹುದು
  • ಸ್ನೇಹಿತರ ಜೊತೆ ವಿವಾದಗಳು ಉಂಟಾಗಬಹುದು
  • ಅನೇಕ ಯೋಚನೆಗಳು ಒಟ್ಟಿಗೆ ಬರಬಹುದು
  • ಪ್ರಯಾಣವು ಕೂಡ ಇಷ್ಟವಾಗಬಹುದು
  • ಕುಲದೇವತಾ ಪ್ರಾರ್ಥನೆ ಮಾಡಿ

ಮೀನ

  • ಮೂಳೆಗೆ ಸಂಬಂಧಿಸಿದ ತೊಂದರೆ ಕಾಣಬಹುದು ತಾತ್ಸಾರ ಮಾಡಬೇಡಿ
  • ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ ಸಾಧ್ಯತೆ
  • ಮಕ್ಕಳ ವಿಚಾರದಲ್ಲಿ ಸಮಸ್ಯೆ, ತೊಂದರೆ ಕಾಡಬಹುದು ಎಚ್ಚರಿಕೆ ಇರಲಿ
  • ಇಂದು ಯಾವುದೇ ಹೊಸ ಕೆಲಸ ಆರಂಭಿಸುವುದು ಬೇಡ
  • ಕುಟುಂಬದಲ್ಲಿ ಸಂತೋಷ ವಿರುತ್ತದೆ ಅದನ್ನ ಹಾಗೆ ಕಾಪಾಡಿ
  • ಹಿರಿಯರ ಅಭಿಪ್ರಾಯ, ಮಾರ್ಗದರ್ಶನವನ್ನ ನಿರ್ಲಕ್ಷ್ಯ ಮಾಡಬೇಡಿ
  • ಜನರ ಪರ ಕೆಲಸದಿಂದ ಹೊಗಳಿಕೆ ಸಾಧ್ಯತೆ
  • ಧನ್ವಂತರಿಯನ್ನ ಆರಾಧನೆ ಮಾಡಿ

ಇದನ್ನೂ ಓದಿ:ಹೆಚ್​​ಡಿಕೆ ಮನವಿಗೆ ಕೇಂದ್ರದ ಸ್ಪಂದನೆ; ಶೇ.18ರಷ್ಟು ಸುಂಕ ರದ್ದು; ರಾಜ್ಯದ ತಂಬಾಕು ಬೆಳೆಗಾರರರು ನಿರಾಳ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Horoscope Rashi Bhavishya
Advertisment