/newsfirstlive-kannada/media/media_files/2026/02/05/rcb-vs-dc-1-2026-02-05-12-48-24.jpg)
ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4 ಫೈನಲ್ ಪಂದ್ಯ ಸೇಡಿನ ಸಮರವಾಗಿದೆ. ಲೀಗ್ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದ ಆರ್​ಸಿಬಿ ವುಮೆನ್ಸ್, ಫೈನಲ್​ ಪಂದ್ಯದಲ್ಲಿ ತಿರುಗೇಟು ನೀಡಲು ಕಾತರದಿಂದಿದೆ. 2024ರ ಡಬ್ಲ್ಯೂಪಿಎಲ್ ಫೈನಲ್ಸ್​ನಲ್ಲಿ ಬೆಂಗಳೂರು ವಿರುದ್ಧ ಸೋತಿದ್ದ ಡೆಲ್ಲಿ, ಇಂದು ಫೈನಲ್ಸ್​ ಗೆಲ್ಲುವ ವಿಶ್ವಾಸದಲ್ಲಿದೆ.
ರನ್​ಮಷೀನ್ ಸ್ಮೃತಿ ಮಂದಾನ..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ, ಟೂರ್ನಿಯಲ್ಲಿ ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡಿದ್ದಾರೆ. ಟೂರ್ನಿ ಆರಂಭದಿಂದಲೂ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿರುವ ಮಂದಾನ, ಫೈನಲ್ ಪಂದ್ಯದಲ್ಲೂ ಮಿಂಚುವ ವಿಶ್ವಾಸದಲ್ಲಿದ್ದಾರೆ. ರನ್​ಮಷೀನ್ ಸ್ಮೃತಿ ಮೇಲೆ, ಬೆಂಗಳೂರು ತಂಡ ಡಿಪೆಂಡ್ ಆಗಿದೆ.
ಉತ್ತರ್ ಪ್ರದೇಶ್ ವಾರಿಯರ್ಸ್​ ವಿರುದ್ಧ 2 ಬಿರುಸಿನ ಅರ್ಧಶತಕಗಳನ್ನ ಸಿಡಿಸಿದ್ದ ಗ್ರೇಸ್ ಹ್ಯಾರಿಸ್, ಉಳಿದ ತಂಡಗಳ ವಿರುದ್ಧ ಅಟ್ಟರ್ ಫ್ಲಾಪ್ ಆಗಿದ್ರು. ಆದ್ರೀಗ ಫೈನಲ್ ಪಂದ್ಯದಲ್ಲಿ ಹ್ಯಾರಿಸ್, ತಂಡಕ್ಕೆ ಸಿಡಿಲಬ್ಬರದ ಸ್ಟಾರ್ಟ್ ನೀಡಲೇಬೇಕು. ಇವತ್ತು ಗ್ರೇಸ್ ಹ್ಯಾರಿಸ್ ಸಿಡಿದಿದ್ದೇ ಆದ್ರೆ, ಎದುರಾಳಿ ತಂಡದ ಖೇಲ್ ಖತಂ ಆಗೋದ್ರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ: ರಾಜಸ್ಥಾನದಲ್ಲೂ ಹನಿಮೂನ್ ಮರ್ಡರ್! ರಸ್ತೆ ಅಪಘಾತದಂತೆ ಬಿಂಬಿಸಿ ಗಂಡನನ್ನು ಕೊಲ್ಲಿಸಿದ ಸುಂದರಿ ಪತ್ನಿ ಅಂಜು!
/filters:format(webp)/newsfirstlive-kannada/media/media_files/2026/02/05/rcb-vs-dc-2026-02-05-09-08-13.jpg)
ಮಿಡಲ್ ಆರ್ಡರ್ ಮತ್ತು ಲೋವರ್ ಮಿಡಲ್ ಆರ್ಡರ್​ನಲ್ಲಿ ರಿಚಾ ಘೋಷ್ ಮತ್ತು ನಾಡಿನ್ ಡಿ ಕ್ಲಾರ್ಕ್ ಮೇಲೆ, ತಂಡ ಹೆಚ್ಚು ಡಿಪೆಂಡ್ ಆಗಿದೆ. ಟಾಪ್ ಆರ್ಡರ್ ಫೇಲ್ ಆದ್ರೆ, ರಿಚಾ ಮತ್ತು ಡಿ ಕ್ಲಾರ್ಕ್, ತಂಡಕ್ಕೆ ರನ್​​ ಕೊಡುಗೆ ನೀಡಿ ನೆರವಾಗ್ತಾರೆ. ಇಂದು ಸಹ ಉಭಯ ಆಟಗಾರ್ತಿಯರು ತಂಡದ ಗೇಮ್ ಚೇಂಜರ್ಸ್ ಆಗಬೇಕಿದೆ. ಫಿನಿಷರ್ ರೋಲ್​ಗೂ ಇಬ್ಬರೂ ಸಖತ್ ಸೂಟ್ ಆಗ್ತಾರೆ.
ಲಾರೆಲ್ ಬೆಲ್, ಬೆಂಗಳೂರು ತಂಡದ ನಂಬಿಕಸ್ಥ ಪೇಸರ್. ಬೆಲ್ ಜೊತೆಗೆ ನಾಡಿನ್ ಡಿ ಕ್ಲಾರ್ಕ್, ಸಯ್ಯಾಲಿ ಸೆಟ್ಗೆರೆ ಮತ್ತು ಅರುಂಧತಿ ರೆಡ್ಡಿ, ಪೇಸ್ ಬೌಲಿಂಗ್​ನಲ್ಲಿ ಎದುರಾಳಿಗಳನ್ನ ಟ್ರಬಲ್ ಮಾಡ್ತಿದ್ದಾರೆ. ಇವ್ರ ಜೊತೆಗೆ ಸ್ಪಿನ್ನರ್​ಗಳಾದ ಶ್ರೇಯಾಂಕ ಪಾಟೀಲ್ ಮತ್ತು ರಾಧ ಯಾದವ್, ಕ್ರೂಶಿಯಲ್ ಟೈಮ್​ನಲ್ಲಿ ಆರ್​ಸಿಬಿಗೆ ಬಲ ತುಂಬ್ತಿದ್ದಾರೆ.
ಇದನ್ನೂ ಓದಿ:ಮುಂಬೈ- ಪುಣೆ ಎಕ್ಸ್ ಪ್ರೆಸ್ ವೇ 32 ಗಂಟೆ ಟ್ರಾಫಿಕ್ ಜಾಮ್: ಹೆಲಿಕಾಪ್ಟರ್ ನಲ್ಲಿ ಪುಣೆಗೆ ಹೋದ ಉದ್ಯಮಿ!
/filters:format(webp)/newsfirstlive-kannada/media/media_files/2026/02/04/rcb-12-2026-02-04-11-26-02.jpg)
ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ ಟ್ರೋಫಿ ಗೆಲ್ಲಲು ಮುಂದಾಗಿರುವ ಜೆಮಿಮಾ ರಾಡ್ರಿಗ್ಸ್​ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್​ ತಂಡ, ಬ್ಯಾಟಿಂಗ್​ನಲ್ಲಿ ಸಿಕ್ಕಾಪಟ್ಟೆ ಬಲಿಷ್ಟವಾಗಿದೆ. ಲಿಝೆಲ್​ ಲೀ, ಶೆಫಾಲಿ ವರ್ಮಾ, ಲೌರಾ ವುಲ್ವಾರ್ಟ್​​, ಜೆಮಿಮಾ ರಾಡ್ರಿಗ್ಸ್, ಚಿನೆಲ್ಲೆ ಹೆನ್ರಿ ಮತ್ತು ಮಾರಿಝಾನ್ ಕಾಪ್ ತಂಡದ ಬ್ಯಾಟಿಂಗ್ ಶಕ್ತಿ ಹೆಚ್ಚಿಸಿದ್ದಾರೆ. ಆದ್ರೆ ಡಿಸಿ, ಬೌಲಿಂಗ್​​ ಡಿಪಾರ್ಟ್​ಮೆಂಟ್ ಅನ್ನ ಸ್ಟ್ರಾಂಗ್ ಮಾಡಿಕೊಂಡ್ರೆ, ಆರ್​ಸಿಬಿಗೆ ಪೈಪೋಟಿ ನೀಡಬಹುದು.
ಬರೋಡಾದಲ್ಲಿ ನಡೆಯಲಿರುವ ಮೆಗಾ ಫೈನಲ್ ಪಂದ್ಯದಲ್ಲಿ, ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪ್ರಶಸ್ತಿಗಾಗಿ ಜಿದ್ದಾಜಿದ್ದಿ ಪೈಪೋಟಿ ನಡೆಸಲಿದೆ. ಆದ್ರೆ ಯಾವ ತಂಡ ಚಾಂಪಿಯನ್ ಪಟ್ಟಕ್ಕೇರುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್: ಟಿಕೆಟ್ ರೇಟ್ ಏರಿಕೆ! ಹೊಸ ದರ ಪಟ್ಟಿ ಇಲ್ಲಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us