/newsfirstlive-kannada/media/media_files/2025/08/22/rinku_singh_100-2025-08-22-08-35-08.jpg)
ಏಷ್ಯಾ ಕಪ್ಗೆ ಟೀಮ್ ಇಂಡಿಯಾದ ಯಂಗ್ ಪ್ಲೇಯರ್ಗಳ ಹೆಸರನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಯುಎಇನಲ್ಲಿ ನಡೆಯುವ ಈ ಮಹತ್ವದ ಟೂರ್ನಿಯಲ್ಲಿ 8 ರಾಷ್ಟ್ರಗಳು ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ. ಭಾರತ ತಂಡಕ್ಕೆ 15 ಆಟಗಾರರ ಹೆಸರನ್ನು ಅನೌನ್ಸ್ ಮಾಡಿದ್ದು ಇದರಲ್ಲಿ ರಿಂಕು ಸಿಂಗ್ ಒಬ್ಬರು. ಏಷ್ಯಾ ಕಪ್ಗೆ ಆಯ್ಕೆಯಾದ ಖುಷಿಯಲ್ಲಿರುವ ರಿಂಕು ಸಿಂಗ್ ಸಿಡಿಲಬ್ಬರ ಸೆಂಚುರಿ ಬಾರಿಸಿದ್ದಾರೆ.
ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಉತ್ತರ ಪ್ರದೇಶ ಟಿ20 ಲೀಗ್ ಪಂದ್ಯ ನಡೆಯಿತು. ಇದರಲ್ಲಿ ಗೋರಖ್‌ಪುರ ಲಯನ್ಸ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿತು. ಓಪನರ್ಗಳಾಗಿ ಬ್ಯಾಟಿಂಗ್ ಮಾಡಿದ ಧೃವ್ ಜುರೆಲ್ ಮತ್ತು ಆರ್ಯನ್ ಜುಯಾಲ್ ಕ್ರಮವಾಗಿ 38, 0 ರನ್ಗೆ ಔಟ್ ಆದರು. ಆಕಾಶ್ ದೀಪ್ 23, ಸಿದ್ಧಾರ್ಥ್ ಯಾದವ್ 15 ರನ್ಗಳಿಸಿದರು. ಉಳಿದವರ ಬ್ಯಾಟಿಂಗ್ ನೆರವಿನಿಂದ ಗೋರಖ್‌ಪುರ ಲಯನ್ಸ್ 20 ಓವರ್ಗಳಲ್ಲಿ 167 ರನ್ಗಳ ಟಾರ್ಗೆಟ್ ನೀಡಿತ್ತು.
ಇದನ್ನೂ ಓದಿ:ಅನನ್ಯ ಭಟ್ ನಾಪತ್ತೆ ಕೇಸ್ನಲ್ಲಿ ರೋಚಕ ಟ್ವಿಸ್ಟ್ ಌಂಡ್ ಟರ್ನ್ಸ್.. ಕೇಸ್ ವಾಪಸ್ ಪಡೆಯುತ್ತಾರಾ?
ಈ ಟಾರ್ಗೆಟ್ ಬೆನ್ನು ಬಿದ್ದ ಮೀರತ್ ಮೇವರಿಕ್ಸ್ ತಂಡದ ಬ್ಯಾಟಿಂಗ್ ಏನು ಅಷ್ಟು ಸುಧಾರಣೆ ಇರಲಿಲ್ಲ. ಏಕೆಂದರೆ ಓಪನರ್ಗಳಾದ ಆಕ್ಷಯ್ ದುಬೆ 11, ಸ್ವಸ್ತಿಕ್ ಚಿಕಾರ್ 10 ರನ್ಗೆ ಔಟ್ ಆದರು. ರಿತುರಾಜ್ ಶರ್ಮಾ ಮತ್ತು ಮಾಧವ್ ಕೌಶಿಕ್ ಅಷ್ಟೇನೂ ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ಲ. ಆದರೆ ಇನ್ನೊಂದೆಡೆ ಬಲಿಷ್ಠ ಬ್ಯಾಟಿಂಗ್ ಮಾಡುತ್ತಿದ್ದ ರಿಂಕು ಸಿಂಗ್ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದರು.
ಮೀರತ್ ಮೇವರಿಕ್ಸ್ ತಂಡ ಸೋಲಿನ ಅಂಚಿನಲ್ಲಿತ್ತು. ಆದರೆ ರಿಂಕು ಸಿಂಗ್ ಬ್ಯಾಟಿಂಗ್ ಇಡೀ ತಂಡದ ದಿಕ್ಕನ್ನೇ ಬದಲಿಸಿತು. ಪಂದ್ಯದಲ್ಲಿ ಸಿಡಿಲಬ್ಬರ ಬ್ಯಾಟಿಂಗ್ ಮಾಡಿದ ರಿಂಕು ಸಿಂಗ್ ಎದುರಾಳಿಗಳ ಎದೆ ನಡುಗಿಸಿದರು. 225 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ರಿಂಕು ಸಿಂಗ್ ಕೇವಲ 48 ಬಾಲ್ಗಳಲ್ಲಿ 7 ಬೌಂಡರಿಗಳು ಹಾಗೂ 8 ಆಕಾಶದೆತ್ತರದ ಸಿಕ್ಸರ್ಗಳು ಸಿಡಿಸಿ ಸೆಂಚುರಿ ಬಾರಿಸಿದರು. ಇದರ ಜೊತೆಗೆ ಮೀರತ್ ಮೇವರಿಕ್ಸ್ ತಂಡವನ್ನು ಗೆಲ್ಲಿಸಿದರು. ಟಿ20 ಕ್ರಿಕೆಟ್ನಲ್ಲಿ ರಿಂಕು ಸಿಂಗ್ ಅವರ ಅತ್ಯುತ್ತಮ ಬ್ಯಾಟಿಂಗ್ ಪರ್ಫಾಮೆನ್ಸ್ ಇದಾಗಿದೆ.
Chasing a target of 168, Rinku walks in at 38-4. Scores unbeaten 108 off 48. Wins the game in the 19th over. 🤯
— KolkataKnightRiders (@KKRiders) August 21, 2025
The One. The Only. RINKU SINGH! 🦁 💜
pic.twitter.com/YCjQcLMcaH
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ