Advertisment

ಟೀಂ ಇಂಡಿಯಾಗೆ ಶಾಕ್! ಕಂಬ್ಯಾಕ್ ಕನಸಿನಲ್ಲಿದ್ದ ಪಂತ್​ಗೆ ಮತ್ತೊಮ್ಮೆ ಆಘಾತ..!

ಟೀಮ್​ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್​ ಮತ್ತೆ ಇಂಜುರಿಗೆ ತುತ್ತಾಗಿದ್ದಾರೆ. ಸೌತ್​ ಆಫ್ರಿಕಾ ಎ ವಿರುದ್ಧದ 2ನೇ ಅನಧಿಕೃತ ಟೆಸ್ಟ್​ನಲ್ಲಿ ಬ್ಯಾಟಿಂಗ್​ ವೇಳೆ ಪಂತ್​​ ಇಂಜುರಿಗೆ ತುತ್ತಾಗಿದ್ದಾರೆ.

author-image
Ganesh Kerekuli
ಬೆರಳು ಮುರಿದಿದೆ, 6 ವಾರ ಆಡಂಗಿಲ್ಲ ಅಂದರೂ ಪಂತ್ ಸುಮ್ಮನಿರಲಿಲ್ಲ.. ಆ ಮೊದಲ ಎರಡು ದಿನ..!
Advertisment

ಟೀಮ್​ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್​ ಮತ್ತೆ ಇಂಜುರಿಗೆ ತುತ್ತಾಗಿದ್ದಾರೆ. ಸೌತ್​ ಆಫ್ರಿಕಾ ಎ ವಿರುದ್ಧದ 2ನೇ ಅನಧಿಕೃತ ಟೆಸ್ಟ್​ನಲ್ಲಿ ಬ್ಯಾಟಿಂಗ್​ ವೇಳೆ ಪಂತ್​​ ಇಂಜುರಿಗೆ ತುತ್ತಾಗಿದ್ದಾರೆ.

Advertisment

ಬ್ಯಾಟಿಂಗ್​ ವೇಳೆ ಬಾಲ್​ ಕೈಗೆ ಬಡಿದಿದ್ದು ನೋವಲ್ಲಿ ನರಳಾಡಿದ ಪಂತ್​ ಕೂಡಲೇ ಮೈದಾನ ತೊರೆದಿದ್ದಾರೆ. ನವೆಂಬರ್​ 14ರಿಂದ ಆರಂಭವಾಗೋ ಸೌತ್​ ಆಫ್ರಿಕಾ ವಿರುದ್ಧ ಟೆಸ್ಟ್​ ಪಂದ್ಯಕ್ಕೂ ಮುನ್ನ ಪಂತ್​ ಇಂಜುರಿಗೆ ತುತ್ತಾಗಿರೋದು ಟೀಮ್​ ಇಂಡಿಯಾದಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ: ಸೌತ್​ ಆಫ್ರಿಕಾ ಸರಣಿಗೆ ತಂಡ ಪ್ರಕಟ.. ಪ್ರಸಿದ್ಧ್​​ ಡ್ರಾಪ್, ಯಾರಿಗೆಲ್ಲ ಸ್ಥಾನ..?

ಟೆಸ್ಟ್​ ಸರಣಿಗೆ ಸೀನಿಯರ್​ ಸೆಲೆಕ್ಷನ್​​ ಕಮಿಟಿ ಟೀಮ್​ ಅನೌನ್ಸ್​ಮೆಂಟ್​ ಮಾಡಿದೆ. ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿಗೆ ಪ್ರಕಟವಾಗಿದ್ದ ತಂಡವೇ ಮುಂದುವರೆದಿದ್ದು, ರಿಷಬ್ ಪಂತ್ ಕಂಬ್ಯಾಕ್ ಮಾಡಿದ್ದರು. 

Advertisment

ಇಂಗ್ಲೆಂಡ್ ಪ್ರವಾಸದಲ್ಲಿ ಇಂಜುರಿಗೆ ತುತ್ತಾಗಿ ಫೀಲ್ಡ್​ನಿಂದ ದೂರ ಉಳಿದಿದ್ದ ರಿಷಬ್​ ಪಂತ್​ ಕಮ್​ಬ್ಯಾಕ್​ ಮಾಡಿದ್ದಾರೆ. ಕಮ್​ಬ್ಯಾಕ್ ಮಾಡಿರುವ ಪಂತ್​​ಗೆ​ ಉಪನಾಯಕತ್ವ ನೀಡಲಾಗಿದೆ. ವಿಂಡೀಸ್​ ಸರಣಿಯಲ್ಲಿ ಪಂತ್ ಅಲಭ್ಯತೆಯಲ್ಲಿ ​ಜವಾಬ್ದಾರಿಯನ್ನು ಜಡೇಜಾಗೆ ನೀಡಲಾಗಿತ್ತು. ಪಂತ್​ ಎಂಟ್ರಿಯಿಂದ ಎನ್​.ಜಗದೀಶನ್​ ತಂಡದಿಂದ ಹೊರಬಿದ್ದಿದ್ದಾರೆ. ಇದೀಗ ಪಂತ್ ಗಾಯ ಹಿನ್ನೆಲೆಯಲ್ಲಿ ಅವರು ಆಡುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿದೆ. 

ಇದನ್ನೂ ಓದಿ:RCB ಟೀಮ್ ಮಾರಾಟದ ಹಿಂದೆ ಸ್ಫೋಟಕ ಸತ್ಯ.. ಕಿಂಗ್ ಕೊಹ್ಲಿನೇ ಕಾರಣನಾ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Rishabh Pant
Advertisment
Advertisment
Advertisment