/newsfirstlive-kannada/media/media_files/2025/08/08/rishabh_pant-5-2025-08-08-11-04-19.jpg)
ಏಷ್ಯಾಕಪ್ ಟೂರ್ನಿಗೆ ಬಿಸಿಸಿಐ ವಲಯದಲ್ಲಿ ಸಿದ್ಧತೆ ಆರಂಭವಾದ ಬೆನ್ನಲ್ಲೇ ಆಘಾತ ಎದುರಾಗಿದೆ. ವಿಕೆಟ್ ಕೀಪರ್ ರಿಷಭ್ ಪಂತ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಪಂತ್ ಸ್ಥಾನಕ್ಕೆ ಬದಲಿ ಆಟಗಾರನ ಆಯ್ಕೆ ಸೆಲೆಕ್ಷನ್ ಕಮಿಟಿಗೆ ತಲೆ ನೋವಾಗಿದೆ. ಐವರು ಆಟಗಾರರು ಸ್ಥಾನಕ್ಕಾಗಿ ಪೈಪೋಟಿ ನಡೆಸ್ತಿದ್ದಾರೆ.
ಇಂಗ್ಲೆಂಡ್ ಪ್ರವಾಸ ಅಂತ್ಯದ ಬಳಿಕ ಇದೀಗ ಬಿಸಿಸಿಐ ವಲಯದಲ್ಲಿ ಏಷ್ಯಾಕಪ್ ಟೂರ್ನಿಗೆ ಸಿದ್ಧತೆ ಆರಂಭವಾಗಿದೆ. ಸಪ್ಟೆಂಬರ್ನಲ್ಲಿ ನಡೆಯೋ ಮಹತ್ವದ ಟೂರ್ನಿಗೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ತಂಡಗಳು ಟೀಮ್ ಸೆಲೆಕ್ಷನ್ ಮಾಡಿ ಯುದ್ಧಕ್ಕೆ ಸಜ್ಜಾಗಿವೆ. ಬಿಸಿಸಿಐ ವಲಯದಲ್ಲೂ ಟೀಮ್ ಸೆಲೆಕ್ಷನ್ನದ್ದೇ ಚರ್ಚೆ ಜೋರಾಗಿದೆ. ಸೆಲೆಕ್ಷನ್ ಕಮಿಟಿ, ಟೀಮ್ ಮ್ಯಾನೇಜ್ಮೆಂಟ್ ತಂಡದ ಆಯ್ಕೆಯ ಸಿದ್ಧತೆ ನಡೆಸ್ತಿರೋವಾಗಲೇ ಶಾಕ್ ಎದುರಾಗಿದೆ.
ಮಹತ್ವದ ಪಂದ್ಯದಿಂದ ರಿಷಭ್ ಪಂತ್ ರೂಲ್ಡ್ ಔಟ್.!
ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿ ವೇಳೆ ಪಾದದ ಇಂಜುರಿಗೆ ತುತ್ತಾದ ರಿಷಭ್ ಪಂತ್ ಏಷ್ಯಾಕಪ್ ಟೂರ್ನಿಯಿಂದ ರೂಲ್ಡ್ ಔಟ್ ಆಗಿದ್ದಾರೆ. ಪಂತ್ ಟೂರ್ನಿ ವೇಳೆ ಫುಲ್ ಫಿಟ್ ಆಗಲ್ಲ ಎಂಬ ರಿಪೋರ್ಟ್ ಅನ್ನ ಮೆಡಿಕಲ್ ಟೀಮ್ ನೀಡಿದೆ. ತಂಡದ ಖಾಯಂ ವಿಕೆಟ್ ಕೀಪರ್ ಬ್ಯಾಟರ್ ಮಹತ್ವದ ಟೂರ್ನಿಯಿಂದ ಹೊರಬಿದ್ದಿರೋದು ತಂಡಕ್ಕೆ ದೊಡ್ಡ ಹಿನ್ನಡೆ ತಂದಿದೆ. ಪಂತ್ ಸ್ಥಾನದಲ್ಲಿ ಬೇರೆ ಯಾರನ್ನ ಸೆಲೆಕ್ಟ್ ಮಾಡೋದು ಅನ್ನೋ ಟೆನ್ಶನ್ ಸೆಲೆಕ್ಷನ್ ಕಮಿಟಿಗೆ ಶುರುವಾಗಿದೆ.
ಪಂತ್ಗೆ ಗಾಯ.. ಸಂಜು ಸ್ಯಾಮ್ಸನ್ಗೆ ಅದೃಷ್ಠ.?
ರಿಷಭ್ ಪಂತ್ ಇಂಜುರಿಗೆ ತುತ್ತಾಗಿರೋದ್ರಿಂದ ಸಂಜು ಸ್ಯಾಮ್ಸನ್ಗೆ ಅದೃಷ್ಟ ಖುಲಾಯಿಸೋ ಸಾಧ್ಯತೆ ದಟ್ಟವಾಗಿದೆ. ಪಂತ್ ಅಲಭ್ಯತೆಯಲ್ಲಿ ಸಂಜು ಸ್ಯಾಮ್ಸನ್ ಸೆಲೆಕ್ಷನ್ ಕಮಿಟಿಯ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಬ್ಯಾಟರ್ ಎನಿಸಿದ್ದಾರೆ. 2024ರ ಟಿ20 ವಿಶ್ವಕಪ್ ಸೇರಿದಂತೆ ಕಳೆದ ಕೆಲ ಸರಣಿಗಳಿಂದ ಪಂತ್ಗೆ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ತಂಡದಲ್ಲಿರೋದ್ರಿಂದ ಸಂಜುಗೆ ಸ್ಥಾನ ಸಿಗೋ ಸಾಧ್ಯತೆಯಿದೆ. ಕನ್ಫರ್ಮ್ ಇಲ್ಲ, ಯಾಕಂದ್ರೆ, ಸ್ಥಾನಕ್ಕೆ ಇನ್ನೂ ಹಲವು ಆಟಗಾರರ ಪೈಪೋಟಿಯಿದೆ.
ಇಶಾನ್ ಕಿಶನ್ ಮೇಲೆ ಕೃಪೆ ತೋರ್ತಾರಾ ಸೆಲೆಕ್ಟರ್ಸ್.?
ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಟೀಮ್ ಇಂಡಿಯಾದಿಂದ ಕಳೆದೇ ಹೋಗಿದ್ದಾರೆ. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಪರ್ಫಾಮ್ ಮಾಡ್ತಾ ಇದ್ರೂ ಪೈಪೋಟಿಯ ಕಾರಣದಿಂದ ಟೀಮ್ ಇಂಡಿಯಾ ಡೋರ್ ಮಾತ್ರ ಓಪನ್ ಆಗಿಲ್ಲ. ಇದೀಗ ಪಂತ್ ಅಲಭ್ಯ ಆಗಿರೋದ್ರಿಂದ ಸೆಲೆಕ್ಟರ್ಸ್ ಇಶಾನ್ ಕಿಶನ್ ಮೇಲೆ ಕೃಪೆ ತೋರೋ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
T20 ಫಾರ್ಮೆಟ್ಗೆ ಕೆ.ಎಲ್ ರಾಹುಲ್ ಕಮ್ಬ್ಯಾಕ್.?
ಕನ್ನಡಿಗ ಕೆ.ಎಲ್ ರಾಹುಲ್ 2025ರಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಟೆಸ್ಟ್, ಏಕದಿನ, ಐಪಿಎಲ್ ಎಲ್ಲಾ ಮಾದರಿಯಲ್ಲೂ ಅದ್ಬುತ ಆಟದಿಂದ ಗಮನ ಸೆಳೆದಿದ್ದಾರೆ. ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪರ್ ಆಗಿಯೂ ಶೈನ್ ಆಗಿದ್ದಾರೆ. ಮಿಡಲ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡೋ ಸಾಮರ್ಥ್ಯ ಹೊಂದಿರೋ ರಾಹುಲ್ ಕೂಡ ಪಂತ್ ಸ್ಥಾನಕ್ಕೆ ಸಮರ್ಥ ಆಟಗಾರನೇ. ಆದ್ರೆ, 2022ರ ಬಳಿಕ ಟಿ20 ಸೆಟಪ್ನಿಂದ ರಾಹುಲ್ನ ಹೊರಗಿಡಲಾಗಿದೆ. ಹೀಗಾಗಿ ಸೆಲೆಕ್ಟರ್ಸ್ ಮತ್ತೆ ರಾಹುಲ್ಗೆ ಮಣೆ ಹಾಕ್ತಾರಾ.? ಅನ್ನೋದು ಪ್ರಶ್ನೆಯಾಗಿದೆ.
ಇದನ್ನೂ ಓದಿ: ರಿಷಭ್ ಶೆಟ್ಟಿಗೆ ಜೊತೆಯಾದ ಕನಕವತಿ.. ಕಾಂತಾರ- 1 ರಲ್ಲಿ ರುಕ್ಮಿಣಿ ವಸಂತ್ ಪೋಸ್ಟರ್ ಲುಕ್..!
RCB ವಿಕೆಟ್ ಕೀಪರ್ಗೆ ಸಿಗುತ್ತಾ ಅವಕಾಶ.?
ಈ ಸೀಸನ್ನ ಐಪಿಎಲ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಆರ್ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಕೂಡ ಈ ರೇಸ್ನಲ್ಲಿದ್ದಾರೆ. ವಿಕೆಟ್ ಕೀಪಿಂಗ್ ಜೊತೆಗೆ ಫಿನಿಷಿಂಗ್ ರೋಲ್ನ ಕೂಡ ಜಿತೇಶ್ ಶರ್ಮಾ ಸಮರ್ಥವಾಗಿ ನಿಭಾಯಿಸಿದ್ದಾರೆ. ಟೀಮ್ ಇಂಡಿಯಾಗೂ ಫಿನಿಷರ್ ಅವಶ್ಯಕತೆ ಇದೆ. ಹೀಗಾಗಿ ಜಿತೇಶ್ ಶರ್ಮಾಗೆ ಚಾನ್ಸ್ ಅಚ್ಚರಿಪಡಬೇಕಿಲ್ಲ.
ಇಂಗ್ಲೆಂಡ್ ಪ್ರವಾಸದಲ್ಲಿ ಪಂತ್ ಇಂಜುರಿಗೆ ತುತ್ತಾದ ಬಳಿಕ ವಿಕೆಟ್ ಕೀಪಿಂಗ್ ಜವಾಬ್ಧಾರಿ ನಿಭಾಯಿಸಿದ ಧೃವ್ ಜುರೇಲ್ ಕೂಡ ಸ್ಥಾನದ ಆಕಾಂಕ್ಷಿ. ಆದ್ರೆ, ಜುರೇಲ್ ಈ ಹಿಂದೆ ಸಿಕ್ಕ ಅವಕಾಶಗಳಲ್ಲಿ ಇಂಪ್ರೆಸ್ಸಿವ್ ಪ್ರದರ್ಶನ ನೀಡಿಲ್ಲ. ಸೆಲೆಕ್ಷನ್ಗೆ ಇದೇ ಅಡ್ಡ ಆಗೋ ಸಾಧ್ಯತೆಯಿದೆ. ಒಂದು ಸ್ಥಾನಕ್ಕಾಗಿ ಹಲವು ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿದ್ದು, ಯಾರಿಗೆ ಅದೃಷ್ಟ ಒಲಿಯುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಮಿ’ ವೀಕ್ಷಿಸಿ