/newsfirstlive-kannada/media/media_files/2025/10/31/pant_kohli-2025-10-31-10-40-44.jpg)
ಯಂಗ್ ಌಂಡ್ ಡ್ಯಾಶಿಂಗ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಸದ್ಯ ಸೌತ್ ಆಫ್ರಿಕಾ 'ಎ' ವಿರುದ್ಧ ಅನ್​ಅಫಿಶಿಯಲ್ ಟೆಸ್ಟ್ ಪಂದ್ಯ ಆಡ್ತಿರುವ ಪಂತ್, ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ. ಅಷ್ಟಕ್ಕೂ ಪಂತ್ ಸುದ್ದಿಯಾಗಿರೋದು, ತನ್ನ ಬ್ಯಾಟಿಂಗ್ ಅಥವಾ ವಿಕೆಟ್ ಕೀಪಿಂಗ್​​ನಿಂದ ಅಲ್ಲ. ಹಾಗಾದ್ರೆ ಪಂತ್ ಎಲ್ಲರ ಗಮನ ಸೆಳೆದಿರೋದು ಯಾಕೆ?.
ಅಗ್ರೆಸಿವ್, ಫಿಯರ್​ಲೆಸ್, ಡೈನಾಮಿಕ್, ಗೇಮ್​ ಚೇಂಜರ್ ರಿಷಭ್​ ಪಂತ್ ಈಗ, ಫಿಟ್ ಌಂಡ್ ಫೈನ್ ಆಗಿದ್ದಾರೆ. ಟೀಮ್ ಇಂಡಿಯಾಕ್ಕೆ ಸ್ಟ್ರಾಂಗ್ ಕಮ್​ಬ್ಯಾಕ್​ ಮಾಡುವ ತವಕದಲ್ಲಿರೋ ಡೆಲ್ಲಿ ಡ್ಯಾಶರ್, ಎಂಟ್ರಿಗೂ ಮುನ್ನ ಸಖತ್ ಸೌಂಡ್ ಮಾಡಿದ್ದಾರೆ. ಆದ್ರೆ ಪಂತ್ ಈ ಬಾರಿ ಸುದ್ದಿಯಾಗಿರೋದು ತನ್ನ ಬ್ಯಾಟಿಂಗ್​, ವಿಕೆಟ್ ಕೀಪಿಂಗ್​ನಿಂದ ಅಲ್ಲ, ಜೆರ್ಸಿ ನಂಬರ್​ನಿಂದ. ​​​​​​
/filters:format(webp)/newsfirstlive-kannada/media/post_attachments/wp-content/uploads/2025/07/RISHAB-PANT-2.jpg)
ರಿಷಬ್ ಪಂತ್​ಗೆ ಸಿಕ್ತಾ​​ ಹೊಸ ಜೆರ್ಸಿ ನಂಬರ್..?
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್​ ಎಕ್ಸಲೆನ್ಸ್​ನಲ್ಲಿ, ದಕ್ಷಿಣ ಆಫ್ರಿಕಾ ಎ ವಿರುದ್ಧ ನಡೆಯುತ್ತಿರುವ ಅನ್​ಅಫಿಶಿಯಲ್ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್, ಜೆರ್ಸಿ ನಂಬರ್ 18 ಧರಿಸಿ, ಎಲ್ಲರಿಗೂ ಸರ್​​ಪ್ರೈಸ್ ನೀಡಿದ್ರು. ಯಾಕಂದ್ರೆ ಜೆರ್ಸಿ ನಂಬರ್ 18, ವಿರಾಟ್ ಕೊಹ್ಲಿಯದ್ದು. ಕೊಹ್ಲಿ ಇನ್ನು ಏಕದಿನ ಕ್ರಿಕೆಟ್​​ನಿಂದ ರಿಟೈರ್ ಆಗ್ಲಿಲ್ಲ. ಆದ್ರೂ ಪಂತ್ ಜೆರ್ಸಿ ನಂಬರ್ 18 ಧರಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದ್ರು. ಅಷ್ಟೇ ಅಲ್ಲ ನಂಬರ್ 18, ಪಂತ್ ಹೊಸ ಜೆರ್ಸಿ ನಂಬರಾ ಅಂತಾ, ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ನಂಬರ್.18ರಲ್ಲಿ ಲಕ್ ಹುಡುಕಲು ಹೊರಟ್ರಾ ಪಂತ್..?
ಪಂತ್, ಜೆರ್ಸಿ ನಂಬರ್ 17. ಅಂಡರ್-19 ಮತ್ತು ಟೀಮ್ ಇಂಡಿಯಾ ಪರ ಆಡುವಾಗ ಪಂತ್, ಇದೇ ನಂಬರ್ ಇರುವ ಜೆರ್ಸಿಯನ್ನ ತೊಡುತ್ತಾರೆ. ಆದ್ರೀಗ ಪಂತ್, ದಿಢೀರ್ ಜೆರ್ಸಿ ನಂಬರ್ ಬದಲಾವಣೆಯಿಂದ ಹಲವು ಪ್ರಶ್ನೆಗಳು ಮೂಡುತ್ತದೆ. ಜೆರ್ಸಿ ನಂಬರ್ 17ರಲ್ಲಿ ಪಂತ್, ಸಾಕಷ್ಟು ಬಾರಿ ಗಾಯಗೊಂಡಿದ್ರು. ಇತ್ತೀಚಿಗೆ ಪಂತ್, ಬ್ಯಾಟಿಂಗ್ ಫಾರ್ಮ್ ಸಮಸ್ಯೆ ಕೂಡ ಎದುರಿಸುತ್ತಿದ್ರು. ಹಾಗಾಗಿ ಪಂತ್, ಜೆರ್ಸಿ ನಂಬರ್ ಬದಲಾಯಿಸಿ, ಹೊಸ ನಂಬರ್​​ನಲ್ಲಿ ಅದೃಷ್ಟವನ್ನ ಹುಡುಕಲು ಹೊರಟ್ರಾ..? ಅನ್ನೋ ಪ್ರಶ್ನೆ ಹುಟ್ಟಿದೆ.
ಇಂಡಿಯಾ 'ಎ' ಪಂದ್ಯಗಳಲ್ಲಿ ಜರ್ಸಿ ನಂಬರ್ ಲೆಕ್ಕಕ್ಕಿಲ್ವಾ..?
ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಜೆರ್ಸಿ ನಂಬರ್ 18 ಬಗ್ಗೆ, ಹೆಚ್ಚು ತಲೆಕೆಡಿಸಿಕೊಳ್ಳುವಂತಿಲ್ಲ. ಯಾಕಂದ್ರೆ ಈ ನಂಬರ್, ಪಂತ್​ರ ಹೊಸ ನಂಬರ್ ಅಲ್ಲ. ಅಥವಾ ಪರ್ಮನೆಂಟ್ ನಂಬರ್ ಕೂಡ ಅಲ್ಲ. ಪಂತ್ ಜೆರ್ಸಿ ನಂಬರ್ 18 ಧರಿಸಿರೋದ್ರ ಹಿಂದೆ, ಇಂಟ್ರಸ್ಟಿಂಗ್ ವಿಚಾರಾನೂ ಇಲ್ಲ. ಇಂಡಿಯಾ ಎ ಅಥವಾ ಯಾವುದೇ ಡೊಮೆಸ್ಟಿಕ್ ಪಂದ್ಯಗಳಲ್ಲಿ ಆಟಗಾರರು, ತಮಗೆ ಬೇಕಾದ ಜೆರ್ಸಿ ನಂಬರ್​ಗಳನ್ನ ಧರಿಸಿಬಹುದು. ಇಂತಹದ್ದೇ ನಂಬರ್ ಧರಿಸಬೇಕು ಅಂತ ಬಿಸಿಸಿಐನಿಂದ ಕಡ್ಡಾಯ ನಿಯಮ ಇಲ್ಲ. ಸೋ ಪಂತ್, ಜಸ್ಟ್ ಫಾರ್ ಎ ಚೇಂಜ್, ಜೆರ್ಸಿ ನಂಬರ್ 18 ಧರಿಸಿ, ಪಂದ್ಯವಾಡುತ್ತಿದ್ದಾರೆ.
ಕಮ್​ಬ್ಯಾಕ್ ಮಾಡ್ತಿರುವ ಪಂತ್ ಮೇಲೆ ಹೆಚ್ಚಿದ​ ನಿರೀಕ್ಷೆ..!
ಜುಲೈ 2025, ರಿಷಭ್ ಪಂತ್ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ, ಗಾಯಗೊಂಡ ತಿಂಗಳು. ಸರಿ ಸುಮಾರು ನಾಲ್ಕು ತಿಂಗಳ ಬಳಿಕ ಪಂತ್, ಮತ್ತೆ ಫೀಲ್ಡ್​​ಗೆ ಇಳಿದಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಅಭ್ಯಾಸ ಪಂದ್ಯಗಳನ್ನ ಆಡುತ್ತಿರುವ ಪಂತ್ ಮೇಲೆ, ಬೆಟ್ಟದಷ್ಟು ನಿರೀಕ್ಷೆ ಇದೆ. ಪಂತ್, ಸೌತ್ ಆಫ್ರಿಕಾ ಎ ಸರಣಿಯಲ್ಲಿ ಅತ್ಯುತಮ ಪ್ರದರ್ಶನ ನೀಡಿದ್ರೆ, ಟೀಮ್ ಇಂಡಿಯಾಕ್ಕೆ ಡೈರೆಕ್ಟ್ ಎಂಟ್ರಿ. ಇಲ್ದಿದ್ರೆ, ಅವಕಾಶಕ್ಕಾಗಿ ಕಾಯಬೇಕು.
ಇದನ್ನೂ ಓದಿ: IND vs AUS T20 ಮ್ಯಾಚ್.. ಆಸ್ಟ್ರೇಲಿಯಾದಲ್ಲಿ ಟೀಮ್​ ಇಂಡಿಯಾ ಪಾಲಿಗೆ ಲಕ್ಕಿ ಗ್ರೌಂಡ್ ಇದು..!
/filters:format(webp)/newsfirstlive-kannada/media/post_attachments/wp-content/uploads/2025/07/rishabh_pant_new.jpg)
ಪಂತ್​ಗೆ ಕಾಂಪಿಟೇಟರ್​ಗಳ ಕಾಟ, ಯಾಮಾರೋ ಹಾಗಿಲ್ಲ..!
ರಿಷಭ್ ಪಂತ್ ಟೀಮ್ ಇಂಡಿಯಾ ಎಂಟ್ರಿ ಅಷ್ಟು ಸುಲಭವಾಗಿಲ್ಲ. ಟೆಸ್ಟ್, ಏಕದಿನ ಮತ್ತು ಟಿ-20 ಮೂರೂ ಫಾರ್ಮೆಟ್​ಗಳಲ್ಲಿ ಪಂತ್​ಗೆ ಕಾಂಪಿಟೇಟರ್ಸ್ ಇದ್ದಾರೆ. ಟೆಸ್ಟ್​ನಲ್ಲಿ ಕೆ.ಎಲ್.ರಾಹುಲ್, ಧೃವ್ ಜುರೆಲ್, ಏಕದಿನ ಕ್ರಿಕೆಟ್​ನಲ್ಲಿ ಕೆ.ಎಲ್.ರಾಹುಲ್, ಸಂಜು ಸ್ಯಾಮ್ಸನ್, ಟಿ-ಟ್ವೆಂಟಿ ಕ್ರಿಕೆಟ್​ನಲ್ಲಿ ಜಿತೇಶ್ ಶರ್ಮಾ, ಇಶಾನ್ ಕಿಶನ್.
ಹೀಗೆ ಪಂತ್​, ತಂಡದಲ್ಲಿ ಸಾಕಷ್ಟು ಪೈಪೋಟಿಯನ್ನ ಎದುರಿಸುತ್ತಿದ್ದಾರೆ. ಸದ್ಯ ಸಿಕ್ಕಾಪಟ್ಟೆ ಕಾಂಪಿಟೇಶನ್ ಇರುವ ಟೀಮ್ ಇಂಡಿಯಾದಲ್ಲಿ ಸ್ವಲ್ಪ ಯಾಮಾರಿದ್ರೂ, ಖೇಲ್ ಖತಂ. ರಿಷಭ್ ಪಂತ್ ಓರ್ವ ಪಕ್ಕಾ ಎಂಟರ್​​ಟೈನರ್. ಪಂತ್ ಏನ್ ಮಾಡಿದ್ರೂ, ಅಭಿಮಾನಿಗಳು ಖುಷಿ ಪಡ್ತಾರೆ. ಹಾಗಾಗಿ ಸದ್ಯ ಪಂತ್, ವಿರಾಟ್ ಕೊಹ್ಲಿಯ ಜೆರ್ಸಿ ನಂಬರ್.18 ಧರಿಸಿ, ತಮ್ಮ ಮತ್ತು ಕೊಹ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us