ಬಿಸಿಸಿಐಗೆ ಜೋಡೆತ್ತು ಟಕ್ಕರ್​.. ಕಿಂಗ್ ಕೊಹ್ಲಿ, ಹಿಟ್​ಮ್ಯಾನ್​ ರೋಹಿತ್ ಶರ್ಮಾ​ ಚಾಲೆಂಜ್​..!

2027ರ ಏಕದಿನ ವಿಶ್ವಕಪ್​ಗೆ ಯುವ ಆಟಗಾರರ ತಂಡವನ್ನ ಕಟ್ಟೋ ಲೆಕ್ಕಾಚಾರ ಹಾಕಿರುವ ಬಿಸಿಸಿಐ ಬಾಸ್​​ಗಳು ಕೊಹ್ಲಿ, ರೋಹಿತ್​ ಸೈಡ್​​ಲೈನ್​ ಮಾಡೋ ಯತ್ನಕ್ಕೆ ಕೈ ಹಾಕಿದ್ದಾರೆ. ಇದಕ್ಕೆಲ್ಲಾ ಕಾರಣ ಅವರ ವಯಸ್ಸು ಎಂದು ಹೇಳಲಾಗುತ್ತಿದೆ.

author-image
Bhimappa
Updated On
ROHIT_KOHLI_NEW
Advertisment

ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿಯನ್ನ ಸೈಡ್​ಲೈನ್​ ಮಾಡೋ ಚರ್ಚೆ ಸದ್ಯ ಕ್ರಿಕೆಟ್​ ವಲಯದಲ್ಲಿ ಜೋರಾಗಿದೆ. ಬಿಸಿಸಿಐ ಬಾಸ್​ಗಳು, ಸೆಲೆಕ್ಟರ್ಸ್​, ಟೀಮ್​ ಮ್ಯಾನೇಜ್​​ಮೆಂಟ್​ ಕೊಹ್ಲಿ, ರೋಹಿತ್​ಗೆ ಟಾಟಾ ಮಾಡಲು ರೆಡಿಯಾಗಿದ್ದಾರೆ. ಇದರ ನಡುವೆ ಬಿಸಿಸಿಐಗೆ ಜೋಡೆತ್ತು ಸವಾಲ್​ ಎಸೆದಿದ್ದಾರೆ. ವಿಶ್ವಕಪ್​ ಆಡೋದೆ ನಮ್​​ ಗುರಿ ಅನ್ನೋ ಸಂದೇಶವನ್ನ ರವಾನಿಸಿದ್ದಾರೆ. 

ಮುಂದಿನ ತಿಂಗಳು ನಡೆಯೋ ಏಷ್ಯಾಕಪ್​​, ಮುಂದಿನ ವರ್ಷ ನಡೆಯೋ ಟಿ20 ವಿಶ್ವಕಪ್​​ ಇವೆರಡಕ್ಕಿಂತ ಹೆಚ್ಚು ಚರ್ಚೆಯಲ್ಲಿರೋದು 2027ರ ಏಕದಿನ ವಿಶ್ವಕಪ್​. 2 ವರ್ಷಗಳ ಬಳಿಕ ನಡೆಯೋ ಈ ಮೆಗಾ ಟೂರ್ನಿಗೆ ಈಗಾಗಲೇ ಬಿಸಿಸಿಐ ವಲಯದಲ್ಲಿ ಸಿದ್ಧತೆ ಆರಂಭವಾಗಿದೆ. ಈ ಸಿದ್ಧತೆಯ ಹಂತದಲ್ಲೇ ಟೀಮ್​ ಇಂಡಿಯಾದ ಸೀನಿಯರ್​​ ಆಟಗಾರರಾದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿಯ ಭವಿಷ್ಯ ಹಾಟ್​ ಟಾಪಿಕ್​ ಆಗಿ ಮಾರ್ಪಟ್ಟಿದೆ. 

Virat kohli Rohit sharma (2)
ಕೊಹ್ಲಿ, ರೋಹಿತ್ Photograph: (ಬಿಸಿಸಿಐ)

ಬಿಸಿಸಿಐ, ಸೆಲೆಕ್ಟರ್ಸ್​ಗೆ ಜೋಡೆತ್ತುಗಳ ಸವಾಲ್​.!

2027ರ ಏಕದಿನ ವಿಶ್ವಕಪ್​ಗೆ ಯುವ ಆಟಗಾರರ ತಂಡವನ್ನ ಕಟ್ಟೋ ಲೆಕ್ಕಾಚಾರ ಹಾಕಿರುವ ಬಿಸಿಸಿಐ ಬಾಸ್​​ಗಳು ಕೊಹ್ಲಿ, ರೋಹಿತ್​ ಸೈಡ್​​ಲೈನ್​ ಮಾಡೋ ಯತ್ನಕ್ಕೆ ಕೈ ಹಾಕಿದ್ದಾರೆ. ಇದಕ್ಕೆಲ್ಲಾ ಕಾರಣ ವಯಸ್ಸು.. 2027ರ ಏಕದಿನ ವಿಶ್ವಕಪ್​ ವೇಳೆಗೆ ರೋಹಿತ್​ಗೆ 40, ಕೊಹ್ಲಿಗೆ 39 ವರ್ಷ ವಯಸ್ಸಾಗಲಿದೆ. ಈ ವಯಸ್ಸಲ್ಲಿ ಫಿಟ್​ನೆಸ್, ಫಾರ್ಮ್​ ಉಳಿಸಿಕೊಳ್ಳೋದು ಕಷ್ಟ ಅನ್ನೋದು ಬಾಸ್​​ಗಳ ಯೋಚನೆ. ಹೀಗಾಗಿ ತೆರೆಮರೆಯಲ್ಲಿ ಕೊಹ್ಲಿ, ರೋಹಿತ್​ ಕೈ ಬಿಡೋ ನಿರ್ಧಾರವಾಗಿದೆ. ತಮ್ಮ ನಿವೃತ್ತಿಯನ್ನ ಡಿಸೈಡ್​ ಮಾಡಿ ಬಿಸಿಸಿಐಗೆ ಇದೀಗ ಜೋಡೆತ್ತುಗಳು ಸವಾಲ್​ ಎಸೆದಿದ್ದಾರೆ.  

2027ರ ವಿಶ್ವಕಪ್​ ಆಡೋದೆ ಗುರಿ.. ಸಿದ್ಧತೆ ಆರಂಭ.!

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​​ ವಿರಾಟ್​​ ಕೊಹ್ಲಿ ಈ ಹಿಂದೆಯೇ 2027ರ ವಿಶ್ವಕಪ್​ ಆಡೋದು ನನ್ನ ಗುರಿ ಎಂದು ಹೇಳಿಕೊಂಡಿದ್ರು. ಕೊಹ್ಲಿಯದ್ದು ಈಗಲೂ ಅದೇ ಗುರಿ. ಐಪಿಎಲ್​ ಅಂತ್ಯದ ಬಳಿಕ ಫುಲ್​ ರಿಲ್ಯಾಕ್ಸ್​ ಮೂಡ್​ಗೆ ಜಾರಿದ್ದ ವಿರಾಟ್​ ಕೊಹ್ಲಿ, ಇದೀಗ ಮತ್ತೆ ಅಖಾಡಕ್ಕೆ ಮರಳಿದ್ದಾರೆ. ಲಂಡನ್​ನಲ್ಲಿ ಬೀಡು ಬಿಟ್ಟಿರೋ ವಿರಾಟ್​ ಆಂಗ್ಲರ ನಾಡಲ್ಲೇ ಅಭ್ಯಾಸದ ಅಖಾಡಕ್ಕೆ ಧುಮುಕಿದ್ದಾರೆ. ಮಿಸ್​ ಮಾಡದೇ ಕಳೆದ ಕೆಲ ದಿನಗಳಿಂದ ಇನ್​ಡೋರ್​​ ನೆಟ್ಸ್​ನಲ್ಲಿ ಅಭ್ಯಾಸ ನಡೆಸ್ತಿರೋ ವಿರಾಟ್​ ಕೊಹ್ಲಿ ಮುಂದಿನ ಸರಣಿಗೆ ಫಿಟ್​ & ಫೈನ್​ ಆಗಿರೋಕೆ ಕಸರತ್ತು ಆರಂಭಿಸಿದ್ದಾರೆ. 

ಫಿಟ್​ ಆಗಿರೋಕೆ ಹಿಟ್​ಮ್ಯಾನ್​ ಭರ್ಜರಿ ಕಸರತ್ತು.!

ಐಪಿಎಲ್​ ಬಳಿಕ ರಿಲ್ಯಾಕ್ಸ್​ ಮೂಡ್​ಗೆ ಜಾರಿದ್ದ ರೋಹಿತ್​ ಶರ್ಮಾ ಕೂಡ ಇದೀಗ ಕ್ರಿಕೆಟ್​ ಅಂಗಳದ ಕಡೆಗೆ ಮುಖ ಮಾಡಿದ್ದಾರೆ. ವಿದೇಶಿ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ಗೆಳೆಯ ಅಭಿಷೇಕ್​ ನಾಯರ್​ ಗರಡಿಗೆ ತೆರಳಿದ್ದಾರೆ. ಮುಂಬೈನಲ್ಲಿ ಅಭಿಷೇಕ್​ ನಾಯರ್​ ಮಾರ್ಗದರ್ಶನದಲ್ಲಿ ರೋಹಿತ್​ ಶರ್ಮಾ ಅಭ್ಯಾಸ ನಡೆಸ್ತಿದ್ದಾರೆ. ಬ್ಯಾಟಿಂಗ್​ಗಿಂತ ಹೆಚ್ಚಾಗಿ ರೋಹಿತ್​ ಫಿಟ್​ನೆಸ್​ ಮೇಲೆ ಫೋಕಸ್​ ಮಾಡ್ತಿದ್ದಾರೆ. ಜಿಮ್​ನಲ್ಲಿ ಬೆವರಿಳಿಸ್ತಾ ಇರೋ ರೋಹಿತ್​​, ದೇಹವನ್ನ ಫಿಟ್​ ಆಗಿರಿಸಿಕೊಳ್ಳೋ ಯತ್ನದಲ್ಲಿದ್ದಾರೆ. 

ಇದನ್ನೂ ಓದಿ: IPL​ ದ್ವೇಷ.. ಶ್ರೇಯಸ್ ಅಯ್ಯರ್​ನ ಟೀಮ್ ಇಂಡಿಯಾದಿಂದ ಹೊರಗಿಟ್ಟ ಕೋಚ್ ಗಂಭೀರ್!

Virat kohli Rohit sharma
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ Photograph: (ಬಿಸಿಸಿಐ)

ಕಾಂಗರೂ ನಾಡಲ್ಲಿ ದಿಗ್ಗಜರಿಗೆ ಅಗ್ನಿಪರೀಕ್ಷೆ.!

IPL ಬಳಿಕ ಕ್ರಿಕೆಟ್​ ಫೀಲ್ಡ್​ನಿಂದ ದೂರ ಉಳಿದಿರೋ ಕೊಹ್ಲಿ, ರೋಹಿತ್​ ಆಸ್ಟ್ರೇಲಿಯಾ ಪ್ರವಾಸದೊಂದಿಗೆ ಮೈದಾನಕ್ಕೆ ಕಮ್​ಬ್ಯಾಕ್​ ಮಾಡಲಿದ್ದಾರೆ. ಸುದೀರ್ಘ ಅಂತರದ ಬಳಿಕ ತಂಡಕ್ಕೆ ವಾಪಾಸ್ಸಾಗೋ ಇವರಿಬ್ಬರಿಗೆ ಈ ಪ್ರವಾಸ ಅಗ್ನಿಪರೀಕ್ಷೆಯ ಕಣ. ಇಲ್ಲಿ ಫಾರ್ಮ್​, ಫಿಟ್​​ನೆಸ್​​ ಟೆಸ್ಟ್​​ನಲ್ಲಿ ರೋಹಿತ್​, ಕೊಹ್ಲಿ ಪಾಸ್​ ಆಗಬೇಕಿದೆ. ಅಕ್ಟೋಬರ್​​ 19ರಿಂದ ಆರಂಭವಾಗೋ 3 ಪಂದ್ಯಗಳ ಸರಣಿಯಲ್ಲಿ ದಿಗ್ಗಜರು ಮಿಂಚಿದ್ರೆ, ಬಿಸಿಸಿಐನ ಲೆಕ್ಕಾಚಾರವೆಲ್ಲಾ ಉಲ್ಟಾ ಆಗಲಿದೆ. 

2027ರ ವಿಶ್ವಕಪ್​ ನಡೀತಿರೋದು ಸೌತ್​ ಆಫ್ರಿಕಾದಲ್ಲಿ. ಅಲ್ಲಿ ಟಫ್​ ಪ್ಲೇಯಿಂಗ್​ ಕಂಡಿಷನ್ಸ್​ನಲ್ಲಿ ಟೀಮ್​ ಇಂಡಿಯಾಗೆ ಅನುಭವಿಗಳ ಅಗತ್ಯತೆ ಹೆಚ್ಚಿದೆ. ಈ ಲೆಕ್ಕಾಚಾರದಲ್ಲಿ ರೋಹಿತ್​, ಕೊಹ್ಲಿ ತಂಡಕ್ಕೆ ಬೇಕೆ ಬೇಕು. ಆದ್ರೆ, ಇನ್ನೊಂದೆಡೆ ವಿಶ್ವಕಪ್​ ಕೆಲವೇ ಕೆಲವು ಪಂದ್ಯಗಳನ್ನಾಡೋದ್ರಿಂದ ಫಾರ್ಮ್​, ಫಿಟ್​ನೆಸ್​ ಕಾಯ್ದುಕೊಳ್ಳೋದು ರೋಹಿತ್​, ಕೊಹ್ಲಿ ಸವಾಲಾಗೋದೂ ಕೂಡ ಅಷ್ಟೇ ಸತ್ಯ.! ಈ ಸವಾಲನ್ನ ದಿಗ್ಗಜರು ಹೇಗೆ ಗೆಲ್ತಾರೆ ಅನ್ನೋದು ಕುತೂಹಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Rohith Sharma Virat Kohli Rohit Sharma-Virat Kohli World Cup
Advertisment