500 ಕೋಟಿ ಟಾರ್ಗೆಟ್​.. ಬಿಸಿಸಿಐ ಹೊಸ ಪ್ಲಾನ್ ಏನು ಗೊತ್ತಾ..?

ಡ್ರೀಮ್​ ಇಲೆವೆನ್​ನ ಎಕ್ಸಿಟ್​​ನಿಂದ ಬಿಸಿಸಿಐಗೆ ಬಿಗ್​ ಲಾಸ್​​ ಆಯ್ತು ಅನ್ನೋ ಟಾಕ್​ ಓಡಾಡ್ತಿದೆ. ಅಸಲಿಗೆ ಡ್ರೀಮ್​ ಇಲೆವೆನ್​ ಹೋಗಿದ್ದೇ ಒಳ್ಳೇದು ಅಂತಿದೆ. ಹೊಸ ಸ್ಪಾನ್ಸರ್​​ ಬರೋಕೆ ಮುಂಚೆ ಮಾಸ್ಟರ್​ ಪ್ಲಾನ್​ ಮಾಡಿರೋ ಬಿಸಿಸಿಐ 500 ಕೋಟಿ ಆದಾಯವನ್ನ ಹೊಸ ಟಾರ್ಗೆಟ್​ ಮಾಡಿದೆ.

author-image
Ganesh Kerekuli
BCCI (1)
Advertisment

ಡ್ರೀಮ್​ ಇಲೆವೆನ್​ನ ಎಕ್ಸಿಟ್​​ನಿಂದ ಬಿಸಿಸಿಐಗೆ ಬಿಗ್​ ಲಾಸ್​​ ಆಯ್ತು ಅನ್ನೋ ಟಾಕ್​ ಓಡಾಡ್ತಿದೆ. ಅಸಲಿಗೆ ಡ್ರೀಮ್​ ಇಲೆವೆನ್​ ಹೋಗಿದ್ದೇ ಒಳ್ಳೇದು ಅಂತಿದೆ. ಹೊಸ ಸ್ಪಾನ್ಸರ್​​ ಬರೋಕೆ ಮುಂಚೆ ಮಾಸ್ಟರ್​ ಪ್ಲಾನ್​ ಮಾಡಿರೋ ಬಿಸಿಸಿಐ 500 ಕೋಟಿ ಆದಾಯವನ್ನ ಹೊಸ ಟಾರ್ಗೆಟ್​ ಮಾಡಿದೆ. 

ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ.. ಬಿಸಿಸಿಐ.. ವಿಶ್ವದ ಶ್ರೀಮಂತ ಕ್ರಿಕೆಟ್​ ಬೋರ್ಡ್​​. ಕ್ರಿಕೆಟ್ ದುನಿಯಾಕ್ಕೆ ಬಿಗ್ ಬಾಸ್ ಐಸಿಸಿ ಆಗಿದ್ರೂ, ಐಸಿಸಿಯನ್ನೇ ಗಡ ಗಡ ನಡುಗಿಸೋ ತಾಕತ್ತು ಹೊಂದಿರೋ ಕ್ರಿಕೆಟ್ ಮಂಡಳಿ ಅಂದ್ರೆ ಅದು ಬಿಸಿಸಿಐ. ವಿಶ್ವದ ಬೇರಾವ ಕ್ರಿಕೆಟ್​ ಬೋರ್ಡ್​​ ಕೂಡ ಬಳಿ ಕೂಡ ನಮ್ಮ ಬಿಸಿಸಿಐ ಬಳಿ ಇರೋವಷ್ಟು ಹಣವಲ್ಲ. ಕೋಟಿ-ಕೋಟಿ ಹಣ ಬಿಸಿಸಿಐ ಖಜಾನೆಯಲ್ಲಿದೆ. ಇಷ್ಟಿದ್ರೂ 500 ಕೋಟಿಯನ್ನ ಟಾರ್ಗೆಟ್​ ಮಾಡಿರೋ ಬಿಸಿಸಿಐ ಹೊಸ ಡೀಲ್​ಗೆ ಕೈ ಹಾಕಿದೆ. 

ಬೆಲೆ ಏರಿಸಿದ ಬಿಸಿಸಿಐ

ಕೇಂದ್ರ ಸರ್ಕಾರ ಜಾರಿ ತಂದಿರುವ ಆನ್‌ಲೈನ್ ಗೇಮಿಂಗ್​​ ಬಿಲ್​​ನಿಂದಾಗಿ ಬಿಸಿಸಿಐ ಹಾಗೂ ಜೆರ್ಸಿಯ ಸ್ಪಾನ್ಸರ್​​ಶಿಪ್​ ಕಂಪನಿ ಡ್ರೀಮ್​ ಇಲೆವೆನ್​ನ ಒಪ್ಪಂದ ಮುರಿದು ಬಿದ್ದಿದೆ. ಮುಂಬರುವ ಏಷ್ಯಾಕಪ್​ ಸರಣಿಯನ್ನ ಪ್ರಾಯೋಜಕರಿಲ್ಲದೇ ಟೀಮ್​ ಇಂಡಿಯಾ ಆಡ್ತಿದೆ. ಇದ್ರ ನಡುವೆ ಹೊಸ ಪ್ರಾಯೋಜಕರಿಗೆ ಬಿಸಿಸಿಐ ಆಹ್ವಾನ ನೀಡಿದೆ. ಹಲವು ಕಂಪನಿಗಳು ಪ್ರಾಯೋಜಕ್ವ ನೀಡೋಕೆ ಮುಂದೆ ಬಂದಿವೆ ಕೂಡ. ಹಾಗೆ ಮುಂದೆ ಬಂದವರಿಗೆ ಹೊಸ ಶಾಕ್​ ಎದುರಾಗಿದೆ. ಜೆರ್ಸಿ ಸ್ಪಾನ್ಸರ್​ಶಿಪ್​ನ ಬೆಲೆಯನ್ನ ಬಿಸಿಸಿಐ ಏರಿಸಿದೆ. 

ಬೇಸ್​​ಪ್ರೈಸ್​ ಹೆಚ್ಚಿಸಿದ ಬಿಸಿಸಿಐ

ಜೆರ್ಸಿ ಸ್ಪಾನ್ಸರ್​​ಶಿಪ್​ ಪಡೆದುಕೊಳ್ಳೋ ಕಂಪನಿಗಳು ಪ್ರತಿ ಪಂದ್ಯಕ್ಕೆ ಬಿಸಿಸಿಐಗೆ ಹಣ ಸಂದಾಯ ಮಾಡಬೇಕಿರುತ್ತೆ. ಹೊಸ ಸ್ಪಾನ್ಸರ್​ ಹುಡುಕಾಟದಲ್ಲಿರೋ ಬಿಸಿಸಿಐ ಆ ಬೆಲೆಯನ್ನ ಹೆಚ್ಚಿಸಿದೆ. ಈ ಹಿಂದೆ ದ್ವಿಪಕ್ಷೀಯ ಪಂದ್ಯವೊಂದಕ್ಕೆ ಬಿಸಿಸಿಐಗೆ ಡ್ರೀಮ್​ ಇಲೆವೆನ್ 3.17 ಕೋಟಿ ಹಣವನ್ನ ನೀಡುತ್ತಿತ್ತು. ಇದೀಗ ಬಿಸಿಸಿಐ ಈ ಸ್ಪಾನ್ಸರ್​ಶಿಪ್​ನ ಬೇಸ್​​ಪ್ರೈಸ್​ ಅನ್ನೇ 3.50 ಕೋಟಿಗೆ ಏರಿಸಿದೆ. ಬಿಡ್ಡಿಂಗ್​ನಲ್ಲಿ ಪೈಪೋಟಿ ಎದುರಾದ್ರೆ​ ಈ ಮೊತ್ತ ಇನ್ನಷ್ಟು ಹೆಚ್ಚಲಿದೆ. 

500 ಕೋಟಿ ಟಾರ್ಗೆಟ್​ ಮಾಡಿದ ಬಿಸಿಸಿಐ..!

ದ್ವಿಪಕ್ಷೀಯ ಸರಣಿ ಮಾತ್ರವಲ್ಲ.. ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ಆಯೋಜಿಸೋ ಏಷ್ಯಾಕಪ್​, ಐಸಿಸಿ ಆಯೋಜಿಸೋ ವಿಶ್ವಕಪ್​ ಟೂರ್ನಿಗಳು, ಚಾಂಪಿಯನ್​ ಟ್ರೋಫಿ ಪಂದ್ಯಗಳ ಸ್ಪಾನ್ಸರ್​ಶಿಪ್​ ಪ್ರೈಸ್​​ನ ಬೇಸ್​ಪ್ರೈಸ್​ನಲ್ಲೂ ಏರಿಕೆಯಾಗಿದೆ. ಐಸಿಸಿ ಹಾಗೂ ಏಷ್ಯಾಕಪ್​ ಟೂರ್ನಿಯ ಪ್ರತಿ ಪಂದ್ಯಕ್ಕೆ 1.5 ಕೋಟಿ ಹಣವನ್ನ ಬೇಸ್​​ಪ್ರೈಸ್​ ಆಗಿ ನಿಗಧಿಪಡಿಸಲಾಗಿದೆ. ಇದಕ್ಕೂ ಮೊದಲು ಈ ಬೆಲೆ 1.12 ಕೋಟಿ ಇತ್ತು.  ಇದೀಗ ಬೆಲೆ ಏರಿಸಿರೋ ಬಿಸಿಸಿಐ ಈ ಸ್ಪಾನ್ಸರ್​ಶಿಪ್​ನಿಂದ ವಾರ್ಷಿಕ 500 ಕೋಟಿ ಆದಾಯ ಟಾರ್ಗೆಟ್​ ಮಾಡ್ತಿದೆ.

ಬಿಸಿಸಿಐ ಖಜಾನೆಯಲ್ಲಿದೆ ಕೋಟಿ ಕೋಟಿ ಹಣ

ಈ ಜೆರ್ಸಿ ಸ್ಪಾನ್ಸರ್​ಶಿಪ್​ನಿಂದ ಬರುವ ಹಣ​ ಜಸ್ಟ್​ ಸ್ಯಾಂಪಲ್​ ಅಷ್ಟೇ. ಉಳಿದ ಮೂಲಗಳಿಂದಲೂ ಕೋಟಿ-ಕೋಟಿ ಹಣ ಬಿಸಿಸಿಐ ಖಜಾನೆಗೆ ಹರಿದು ಬರುತ್ತೆ. ಈ ಪೈಕಿ ಐಪಿಎಲ್‌, ಬಿಸಿಸಿಐನ ಚಿನ್ನದ ಮೊಟ್ಟೆ ಇಡೋ ಕೋಳಿ. ಬಿಸಿಸಿಐನ ವಾರ್ಷಿಕ ವಹಿವಾಟಿನ ಶೇ 59.10 ಪಾಲು ಐಪಿಎಲ್​​ನಿಂದಲೇ ಬರುತ್ತೆ. ಕಳೆದ ವರ್ಷ ಪಂದ್ಯ ಪ್ರಸಾರದ ಹಕ್ಕುಗಳು, ಪ್ರಾಯೋಜಕತ್ವ ಸೇರಿ ಹಲವು ಮೂಲಗಳಿಂದ 5,761 ಕೋಟಿ ರೂಪಾಯಿ ಬಿಸಿಸಿಐ ಬೊಕ್ಕಸ ಸೇರಿದೆ. ಶ್ರೀಮಂತ ಕ್ರಿಕೆಟ್ ಮಂಡಳಿಯ 2023-24ರ ವಾರ್ಷಿಕ ಆದಾಯ ವಾರ್ಷಿಕ ಆದಾಯ ಎಷ್ಟು ಗೊತ್ತಾ 9,741.7 ಕೋಟಿ.!

5 ಪಟ್ಟು ಹೆಚ್ಚು ಹಣ..!

ವಿಶ್ವ ಕ್ರಿಕೆಟ್​ ಬಾಸ್ ಐಸಿಸಿಗಿಂತಲೂ 5 ಪಟ್ಟು ಹೆಚ್ಚು ಸಂಪತ್ತನ್ನ ಬಿಸಿಸಿಐ ಹೊಂದಿದೆ. 2025ರ ಐಸಿಸಿಯ ನಿವ್ವಳ ಮೌಲ್ಯ 3950 ಕೋಟಿ ಆಗಿದ್ರೆ, ಬಿಸಿಸಿಐನದ್ದು 18,760 ಕೋಟಿ.! ಐಸಿಸಿ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಯಾವ ಬೋರ್ಡ್​ ಬಳಿಯೂ ಬಿಸಿಸಿಐ ಸಂಪತ್ತಿನ ಅರ್ಧವೂ ಇಲ್ಲ. ಕ್ರಿಕೆಟ್​ ನಮಗೆ ಎಂಟರ್​​ಟೈನ್​ಮೆಂಟ್​ ಆದ್ರೆ, ಬಿಸಿಸಿಐಗೆ ಆದಾಯದ ಮೂಲ. ಕ್ರಿಕೆಟಿಗರು​ ಬಿಸಿಸಿಐ ಬಂಡವಾಳ. ಪ್ರಾಯೋಜಕರ ಪಾಲಿಗೆ ತಮ್ಮ ಪ್ರಾಡಕ್ಟ್​ನ ಜನರಿಗೆ ತಲುಪಿಸೋಕೆ ಇರೋ ಸುಲಭದ ದಾರಿ ಕೂಡ ಭಾರತೀಯ ಕ್ರಿಕೆಟ್​​​. ಈಗ ಬಿಸಿಸಿಐ ಸ್ಪಾನ್ಸರ್​ಶಿಪ್​ನ ಬೇಸ್​​ಪ್ರೈಸ್​ ಹೆಚ್ಚಿಸಿರಬಹುದು. ವಿಶ್ವದ ಪ್ರಖ್ಯಾತ ಬ್ರ್ಯಾಂಡ್​ಗಳು​ ಸ್ಪಾನ್ಸರ್​​ಶಿಪ್​ಗಾಗಿ​ ಬಿಗ್​​ಫೈಟ್​ ನಡೆಸ್ತವೆ. ಯಾಕಂದ್ರೆ, ಕ್ರಿಕೆಟರ್ಸ್​​ ಓಡೋ ಕುದುರೆ. ಬ್ರ್ಯಾಂಡ್​ಗಳು ಮಾರ್ಕೆಟ್​​ನಲ್ಲಿ ಸಲೀಸಾಗಿ ತನ್ನ ಬ್ರ್ಯಾಂಡ್​ಗಳನ್ನ ಮಾರಾಟ ಮಾಡಬಹುದು. 

ಇದನ್ನೂ ಓದಿ:ಟೀಮ್ ಇಂಡಿಯಾದ ಹೊಸ ಜೆರ್ಸಿ ನೋಡಿದ್ದೀರಾ? ಅದು ಹೇಗಿದೆ? Photo


ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

BCCI ENDS DREAM 11 SPONSPORSHIP BCCI and sponsorship BCCI Farewell
Advertisment