/newsfirstlive-kannada/media/media_files/2025/09/07/shivam-dube-team-india-new-jursey-1-2025-09-07-08-06-28.jpg)
2025ರ ಏಷ್ಯಾಕಪ್ಗಾಗಿ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ದುಬೈ ಪ್ರಯಾಣ ಬೆಳೆಸಿದೆ. ಸೆಪ್ಟೆಂಬರ್ 9 ರಿಂದ ಏಷ್ಯಾಕಪ್ ಶುರುವಾಗಲಿದೆ. ಟೀಮ್ ಇಂಡಿಯಾ ಸೆಪ್ಟೆಂಬರ್ 10 ರಂದು ಮೊದಲ ಪಂದ್ಯವನ್ನು ಆಡಲಿದೆ.
ಇದೀಗ ಟೀಮ್ ಇಂಡಿಯಾ ಹೊಸ ಜೆರ್ಸಿ ಫೋಟೋ ಬಿಡುಗಡೆ ಮಾಡಿದೆ. ಬಿಸಿಸಿಐ ಮತ್ತು ಡ್ರೀಮ್ 11 ನಡುವಿನ ಜೆರ್ಸಿ ಪ್ರಾಯೋಜಕತ್ವ ಒಪ್ಪಂದವು ಕೆಲವು ದಿನಗಳ ಹಿಂದೆ ಕೊನೆಗೊಂಡಿದೆ. ಆದ್ದರಿಂದ ಬಿಸಿಸಿಐ ಹೊಸ ಪ್ರಾಯೋಜಕತ್ವಕ್ಕಾಗಿ ಟೆಂಡರ್‌ಗಳನ್ನು ಕರೆದಿದೆ. ಆದರೆ, ಏಷ್ಯಾ ಕಪ್ ವೇಳೆಗೆ ಪ್ರಾಯೋಜಕರು ಸಿಗದ ಕಾರಣ ಟೀಮ್ ಇಂಡಿಯಾ ಯಾವುದೇ ಜೆರ್ಸಿ ಪ್ರಾಯೋಜಕತ್ವವಿಲ್ಲದೆ ಏಷ್ಯಾ ಕಪ್‌ನಲ್ಲಿ ಆಡಲಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಿಗೆ ಅಯ್ಯರ್ ಕ್ಯಾಪ್ಟನ್.. KL ರಾಹುಲ್ ಬಿಟ್ಟು ಇಬ್ಬರು ಕನ್ನಡಿಗರಿಗೆ ಸ್ಥಾನ
ಟೀಮ್ ಇಂಡಿಯಾ ಜೆರ್ಸಿ ಹೇಗಿದೆ?
2025ರ ಏಷ್ಯಾಕಪ್ಗೂ ಮುನ್ನ ಟೀಮ್ ಇಂಡಿಯಾ ಧರಿಸಿರುವ ಹೊಸ ಜೆರ್ಸಿಯ ಮೊದಲ ಫೋಟೋ ವೈರಲ್ ಆಗಿದೆ. ಹೊಸ ಜೆರ್ಸಿಯಲ್ಲಿ ಪ್ರಾಯೋಜಕರ ಹೆಸರಿಲ್ಲ. ಜೆರ್ಸಿಯ ಎಡಭಾಗದಲ್ಲಿ ಬಿಸಿಸಿಐ ಲೋಗೋ ಇದ್ದರೆ, ಬಲಭಾಗದಲ್ಲಿ ಡಿಪಿ ವರ್ಲ್ಡ್ ಏಷ್ಯಾ ಕಪ್ 2025 ಇದೆ. ಡಿಪಿ ವರ್ಲ್ಡ್ ಏಷ್ಯಾ ಕಪ್ನ ಪ್ರಾಯೋಜಕರು. ಇದಲ್ಲದೆ, ಜೆರ್ಸಿಯಲ್ಲಿ ಭಾರತ ಎಂಬ ಹೆಸರು ಮಾತ್ರ ಇದೆ.
ಟೀಮ್ ಇಂಡಿಯಾ ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಮೊದಲ ಪಂದ್ಯ ಆಡಲಿದೆ. ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 19 ರಂದು ಟೀಮ್ ಇಂಡಿಯಾ ತನ್ನ ಕೊನೆಯ ಲೀಗ್ ಪಂದ್ಯವನ್ನು ಓಮನ್ ವಿರುದ್ಧ ಆಡಲಿದೆ.
ಇದನ್ನೂ ಓದಿ:95 ಟು 75 ಕೆಜಿ! ರೋಹಿತ್ ಶರ್ಮಾ ಫುಡ್ ಮೆನು ಹೇಗಿತ್ತು ಅನ್ನೋದೇ ಇಂಟ್ರೆಸ್ಟಿಂಗ್..!
🚨 THE ASIA CUP JERSEY OF TEAM INDIA 🚨 🇮🇳 pic.twitter.com/UVuIHEu5C9
— Johns. (@CricCrazyJohns) September 6, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ