/newsfirstlive-kannada/media/media_files/2025/09/06/rohit-sharma-2-2025-09-06-16-50-51.jpg)
ರೋಹಿತ್ ಶರ್ಮಾ
ಟೀಮ್ ಇಂಡಿಯಾ ಒನ್ ಡೇ ಕ್ಯಾಪ್ಟನ್ ರೋಹಿತ್ ಶರ್ಮಾ ಫಿಟ್ನೆಸ್ ಕಂಡು ಕ್ರಿಕೆಟ್ ಲೋಕ ದಂಗಾಗಿದೆ. ದೇಹದ ತೂಕದ ಕಾರಣಕ್ಕೆ ಟೀಕೆ ಮಾಡಿದವರೆಲ್ಲಾ ಈಗ ಬಾಯ್ಮೆಲೆ ಬೆರಳಿಟ್ಟುಕೊಂಡಿದ್ದಾರೆ. ಹಾಗಾದ್ರೆ, ಫ್ಯಾಟ್ ಆಗಿದ್ದ ರೋಹಿತ್ ಶರ್ಮಾ ಸೂಪರ್ ಫಿಟ್ ಆಗಿದ್ದೇಗೆ? ದೇಹದ ತೂಕ ಇಳಿಸಿಕೊಂಡು ಸ್ಲಿಮ್ ಅಂಡ್ ಟ್ರಿಮ್ ಆಗಿದ್ದೇಗೆ? ಅನ್ನೋ ವಿವರ ಇಲ್ಲಿದೆ.
ಇದನ್ನೂ ಓದಿ:ನಟಿ ಭಾವನಾ ರಾಮಣ್ಣ ಅವರ ಅವಳಿ IVF ಶಿಶುಗಳಲ್ಲಿ ಒಂದು ಮಗು ನಿಧನ
ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಕಳೆದ ಕೆಲ ದಿನಗಳಿಂದ ಚರ್ಚೆಯಲ್ಲಿತ್ತು. ಟೆಸ್ಟ್, ಟಿ20ಗೆ ಗುಡ್ ಬೈ ಹೇಳಿರೋ ರೋಹಿತ್ ಒನ್ ಡೇಯಿಂದ ಔಟ್ ಆಗ್ತಾರೆ ಅನ್ನೋದ ಸುದ್ದಿ ಹರಿದಾಡಿತ್ತು. ಫಿಟ್ನೆಸ್ ಕಾರಣ ನೀಡಿ ಹಿಟ್ಮ್ಯಾನ್ನ ಸೈಡ್ಲೈನ್ ಮಾಡೋಕೆ ಬಿಸಿಸಿಐ ವಲಯದಲ್ಲೂ ಸಿದ್ಧತೆ ನಡೆದಿತ್ತು. ಆದ್ರೆ, 2027ರ ಒನ್ ಡೇ ವಿಶ್ವಕಪ್ ಆಡಿಯೇ ತೀರಲು ಪಣತೊಟ್ಟಿರೋ ರೋಹಿತ್, ಬಿಸಿಸಿಐಗೆ ಸವಾಲ್ ಎಸೆದಿದ್ದಾರೆ.
ರೋಹಿತ್ ಫಿಟ್ನೆಸ್ ಕಂಡು ಕ್ರಿಕೆಟ್ ಲೋಕ ದಂಗು
ಫಿಟ್ನೆಸ್ ಮಾನದಂಡವನ್ನಿಟ್ಟುಕೊಂಡು ರೋಹಿತ್ಗೆ ಕೊಕ್ ಕೊಡೋ ಲೆಕ್ಕಾಚಾರದಲ್ಲಿದ್ದ ಬಿಸಿಸಿಐ ಇದೀಗ ಪೇಚಿಗೆ ಸಿಲುಕಿದೆ. ಫ್ಯಾಟ್ ಆಗಿದ್ದ ಹಿಟ್ಮ್ಯಾನ್ ಈಗ ಸೂಪರ್ ಫಿಟ್ ಆಗಿದ್ದಾರೆ. ಸ್ಲಿಮ್ ಅಂಡ್ ಟ್ರಿಮ್ ರೋಹಿತ್ ಶರ್ಮಾ ಕಂಡು ಫ್ಯಾನ್ಸ್ ಬಾಯ ಮೇಲೆ ಬೆರಳಿಟ್ಟಿದ್ದಾರೆ. ದೇಹದ ತೂಕದ ಕಾರಣಕ್ಕೆ ಅಂದು ಟ್ರೋಲ್ ಮಾಡಿದ್ದವರೆಲ್ಲಾ ಇಂದು ಹಾಡಿ ಹೊಗಳ್ತಿದ್ದಾರೆ. ಫಿಟ್ ಅಂಡ್ ಫೈನ್ ರೋಹಿತ್ ಕಂಡು ಕ್ರಿಕೆಟ್ ಲೋಕ ದಂಗಾಗಿದೆ.
ಇದನ್ನೂ ಓದಿ:ಪಾಂಡ್ಯ ಬೆಂಕಿ ಲುಕ್! ಈ ಫೋಟೋಗಳನ್ನ ನೀವು ನೋಡಲೇಬೇಕು.. Photos
95KG ಯಿಂದ 75ಕೆಜಿಗೆ ತೂಕ ಇಳಿಸಿದ ರೋಹಿತ್
ಶತಯಗತಾಯ ಏಕದಿನ ವಿಶ್ವಕಪ್ ಆಡೋಕೆ ಪಣ ತೊಟ್ಟಿರುವ ರೋಹಿತ್, ಮಹದಾಸೆಯನ್ನ ಈಡೇರೆಸಿಕೊಳ್ಳಲು ಪಡ್ತಿರೋ ಪರಿಶ್ರಮ ಅಷ್ಟಿಷ್ಟಲ್ಲ. ಫಿಟ್ನೆಸ್ ಕಾರಣ ನೀಡಿ ಬಿಸಿಸಿಐ ಸೈಡ್ಲೈನ್ ಮಾಡೋಕೆ ನೋಡಿದ್ರೆ, ಬಾಸ್ಗಳಿಗೆ ಸವಾಲು ಹಾಕಿರೋ ರೋಹಿತ್ ಬರೋಬ್ಬರಿ 20 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಐಪಿಎಲ್ ಅಂತ್ಯದ ವೇಳೆ 95 ಕೆಜಿ ಇದ್ದ ದೇಹದ ತೂಕವನ್ನ ಈಗ ರೋಹಿತ್ 75 ಕೆಜಿಗೆ ಇಳಿಸಿದ್ದಾರೆ. ಜಸ್ಟ್ 1 ತಿಂಗಳದಲ್ಲಿ ಅಂತರದಲ್ಲಿ ಮಾಡಿರೋ ಸಾಧನೆಯಿದು.
ನೋ ವಡಾಪಾವ್, ನೋ ಬಿರಿಯಾನಿ..
ರೋಹಿತ್ ಶರ್ಮಾ ಒಬ್ಬ ಫುಡ್ಡಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ತೂಕ ಇಳಿಸಿಕೊಳ್ಳೋ ಈ ಪ್ರಯತ್ನದಲ್ಲಿ ರೋಹಿತ್ ತನ್ನ ಇಷ್ಟದ ಆಹಾರಗಳಿಗೆ ಬ್ರೇಕ್ ಹಾಕಿದ್ರು. ಕಳೆದೊಂದು ತಿಂಗಳಿನಿಂದ ಕಠಿಣ ಡಯಟ್ ಫಾಲೋ ಮಾಡ್ತಿರೋ ಹಿಟ್ಮ್ಯಾನ್ ತನಗಿಷ್ಟವಾದ ದಾಲ್ ಚಾವಲ್, ವಡಾ ಪಾವ್, ಬಟರ್ ಚಿಕನ್, ಸೀ ಫುಡ್ ಕರೀಸ್, ಬಿರಿಯಾನಿ, ಕ್ಯಾಲೋರಿ ಹೆಚ್ಚಿರೋ ಮಿಲ್ಸ್ ಹಾಗೂ ಫ್ರೈಡ್ ಸ್ನಾಕ್ಸ್ಗಳ ಸೇವನೆ ಬಿಟ್ಟಿದ್ದಾರೆ.
ಇದನ್ನೂ ಓದಿ:ಜನಾರ್ಧನರೆಡ್ಡಿ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ ಸಂಸದ ಶಶಿಕಾಂತ್ ಸೆಂತಿಲ್, ಜನಾರ್ಧನರೆಡ್ಡಿ ಹೇಳಿದ್ದೇನು?
ಐಪಿಎಲ್ ಬಳಿಕ ವಿದೇಶ ಪ್ರವಾಸಕ್ಕೆ ತೆರಳಿದ್ದ ರೋಹಿತ್ ಶರ್ಮಾ ಭಾರತಕ್ಕೆ ವಾಪಾಸ್ಸಾದ ಬೆನ್ನಲ್ಲೇ ಮುಂಬೈನ nutritionist ಒಬ್ಬರನ್ನ ಸಂಪರ್ಕಿಸಿದ್ರು. ಆ nutritionist ದೇಹದ ತೂಕ ಇಳಿಸಿಕೊಳ್ಳಲು ಅನುಗುಣವಾಗುವಂತೆ ರೋಹಿತ್ಗೆ ಡಯಟ್ ಚಾರ್ಟ್ ತಯಾರಿಸಿಕೊಟ್ಟಿದ್ರು. ರೋಹಿತ್ ತೂಕ ಇಳಿಸಿಕೊಳ್ಳೋ ಜರ್ನಿಯಲ್ಲಿ ಡಯಟ್ ಚಾರ್ಟ್ ಮಹತ್ವದ ಪಾತ್ರವಹಿಸಿದೆ. ಕಳೆದ ಒಂದು ತಿಂಗಳಿಂದ ರೋಹಿತ್ ಫಾಲೋ ಮಾಡ್ತಿರೋ ಡಯಟ್ ಚಾರ್ಟ್ ಹೇಗಿದೆ ಅನ್ನೋದನ್ನ ನೋಡೋದಾದ್ರೆ,
ರೋಹಿತ್ ಡಯಟ್ ಚಾರ್ಟ್
ಕಳೆದ ಒಂದು ತಿಂಗಳಿಂದ ಬೆಳಗ್ಗೆ 7 ಗಂಟೆಗೆ 6 ನೆನೆಸಿದ ಬಾದಾಮಿ, ಮೊಳಕೆ ಕಾಳಿನ ಸಲಾಡ್ ಹಾಗೂ ಫ್ರೆಶ್ ಜ್ಯೂಸ್ನ ರೋಹಿತ್ ಸೇವಿಸ್ತಿದ್ದಾರೆ. ಬಳಿಕ 9.30ಕ್ಕೆ ತಿಂಡಿಗೆ ಹಾಲು, ಹಣ್ಣುಗಳು ಹಾಗೂ ಓಟ್ಸ್ ಮೀಲ್, 11.30ಕ್ಕೆ ಮೊಸರು, ಓಟ್ಸ್ ಚಿಲ್ಲಾ ಜೊತೆಗೆ ಎಳನೀರು ಹಾಗೂ 1.30ಕ್ಕೆ ಮಧ್ಯಾಹ್ನದ ಊಟಕ್ಕೆ ದಾಲ್, ರೈಸ್, ತರಾಕರಿ ಕರ್ರಿ, ಸಲಾಡ್ ಅನ್ನ ಸೇವಿಸ್ತಿದ್ದಾರೆ. 4.30ಕ್ಕೆ ಪ್ರೂಟ್ ಸ್ಮೂಥಿ ಜೊತೆಗೆ ಡ್ರೈ ಫ್ರೂಟ್ಸ್ ತಿನ್ನುವ ರೋಹಿತ್, 7.30ಕ್ಕೆ ಪನ್ನಿರ್, ತರಕಾರಿಗಳು, ಪಲಾವ್ ಹಾಗೂ ತರಕಾರಿ ಸೂಪ್ ತಿಂದು ರಾತ್ರಿಯ ಊಟ ಮುಗಿಸ್ತಿದ್ದಾರೆ. ಮಲಗುವ ಮುನ್ನ 9.30ಕ್ಕೆ ಒಂದು ಲೋಟ ಹಾಲು, ಮಿಕ್ಸೆಡ್ ನಟ್ಸ್ ತಿಂತಿದ್ದಾರೆ.
ದಿನಕ್ಕೆ 4 ಗಂಟೆ ಜಿಮ್ನಲ್ಲಿ ಕಠಿಣ ವರ್ಕೌಟ್
ಊಟದ ವಿಚಾರದಲ್ಲಿ ಮಾತ್ರವಲ್ಲ.. ಕಳೆದೊಂದು ತಿಂಗಳಿಂದ ಜಿಮ್ನಲ್ಲೂ ಕಠಿಣ ಪರಿಶ್ರಮ ಪಡ್ತಿದ್ದಾರೆ. ಗೆಳೆಯ ಅಭಿಶೇಕ್ ನಾಯರ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ಜಿಮ್ನಲ್ಲಿ ಬೆವರಿಳಿಸ್ತಿದ್ದಾರೆ. ದೇಹದ ತೂಕ ಇಳಿಸಿಕೊಳ್ಳೋಕೆ ಪ್ರತಿನಿತ್ಯ 4 ಗಂಟೆಗಳ ಕಠಿಣ ವರ್ಕೌಟ್ ಮಾಡಿದ್ದಾರೆ.
ಸ್ಲಿಮ್ ಅಂಡ್ ಟ್ರಿಮ್ ಆಗಿರೋ ರೋಹಿತ್ ಶರ್ಮಾ ಬೆಂಗಳೂರಿನಲ್ಲಿ ಎದುರಿಸಿದ ಫಿಟ್ನೆಸ್ ಅಗ್ನಿಪರೀಕ್ಷೆಯಲ್ಲೂ ಗೆದ್ದಿದ್ದಾರೆ. ಇದ್ರೊಂದಿಗೆ ಮುಂಬರೋ ಆಸ್ಟ್ರೇಲಿಯಾ ಟೂರ್ನಲ್ಲಿ ಆಡೋದಕ್ಕೆ ರೋಹಿತ್ಗೆ ಲೈನ್ ಕ್ಲೀಯರ್ ಆಗಿದೆ. 2027ರ ಏಕದಿನ ವಿಶ್ವಕಪ್ ಆಡಬೇಕಂದ್ರೆ ಇದೇ ಡಯಟ್, ಇದೇ ವರ್ಕೌಟ್ನ ಮುಂದೆಯೂ ಮೆಂಟೇನ್ ಮಾಡಬೇಕಿದೆ.
ಇದನ್ನೂ ಓದಿ:ಟಾಟಾ ಕಂಪನಿಯ ಕಾರ್ ಗಳ ಬೆಲೆ 65 ಸಾವಿರದಿಂದ 1.45 ಲಕ್ಷ ರೂ.ವರೆಗೆ ಕಡಿತ, ಗ್ರಾಹಕರಿಗೆ ಭರ್ಜರಿ ಲಾಭ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ