/newsfirstlive-kannada/media/media_files/2025/09/02/s_sreesanth-2025-09-02-13-44-46.jpg)
2012ರ ಐಪಿಎಲ್ ಸೀಸನ್ನಲ್ಲಿ ಎಸ್ ಶ್ರೀಶಾಂತ್ ಮೊಣಕಾಲಿನ ಇಂಜುರಿಗೆ ಸಂಬಂಧಿಸಿದಂತೆ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯು ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿಯನ್ನು ಸುಪ್ರೀಂ ಕೋರ್ಟ್ಗೆ ಎಳೆದು ತಂದಿದೆ.
ಎಸ್. ಶ್ರೀ ಶಾಂತ್ ಅವರು 2012ರಲ್ಲಿ ರಾಜಸ್ತಾನ್ ರಾಯಲ್ಸ್ ಪರವಾಗಿ ಆಡುತ್ತಿದ್ದರು. ಈ ವೇಳೆ ಅಭ್ಯಾಸ ಪಂದ್ಯದಲ್ಲಿ ಎಸ್ ಶ್ರೀಶಾಂತ್ ಮೊಣಕಾಲಿನ ಗಾಯಕ್ಕೆ ಒಳಗಾಗುತ್ತಾರೆ. ಇದರಿಂದ ಇಡೀ ಸೀಸನ್ನಲ್ಲಿ ತಂಡದಿಂದ ಹೊರಗುಳಿಯುತ್ತಾರೆ. ಇದಕ್ಕೆ ಸಂಬಂಧಿಸಿದಂತೆ 82 ಲಕ್ಷ ರೂಪಾಯಿ ಇನ್ಶುರೆನ್ಸ್ ಕ್ಲೈಮ್ ಮಾಡಲು ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿಯು ಮುಂದಾಗುತ್ತದೆ.
ಆದರೆ ಇದನ್ನು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯು ಒಪ್ಪುವುದಿಲ್ಲ. 2011ರಲ್ಲಿ ಶ್ರೀಶಾಂತ್ ಇಂಜುರಿಗೆ ಒಳಗಾಗಿರುತ್ತಾರೆ. ಆದರೆ ಇದನ್ನು ಐಪಿಎಲ್ ಸಂದರ್ಭದಲ್ಲಿ ಎಂದು ಹೇಳಲಾಗುತ್ತಿದೆ. ಇದನ್ನು ನಾವು ಒಪ್ಪುವುದಿಲ್ಲ. ಹಳೆಯ ಗಾಯವನ್ನು ಆವರು ಪ್ರೂ ಮಾಡುವಲ್ಲಿ ವಿಫಲವಾಗಿದ್ದಾರೆ. ಇದರಿಂದಲೇ ಶ್ರೀಶಾಂತ್ ಅವರು 2012ರ ಸೀಸನ್ನಲ್ಲಿ ಆಡಲಿಲ್ಲ ಎನ್ನುವುದು ಇನ್ಶುರೆನ್ಸ್ ಕಂಪನಿಯ ವಾದವಾಗಿದೆ.
ಇದನ್ನೂ ಓದಿ: ಅಂತರಾಷ್ಟ್ರೀಯ T20 ಕ್ರಿಕೆಟ್ಗೆ ಗುಡ್ಬೈ ಹೇಳಿದ ಮರ್ಕ್ಯೂ ಬೌಲರ್ ಮಿಚೆಲ್ ಸ್ಟಾರ್ಕ್
ಇದಕ್ಕೆ ರಾಜಸ್ತಾನ್ ಫ್ರಾಂಚೈಸಿಯು ತಮ್ಮ ನಿಲುವು ತಿಳಿಸಿದ್ದು ಶ್ರೀಶಾಂತ್ ಕಾಲ್ಬೆರಳು ಮಾತ್ರ ಅವರು ಆಡುವುದಕ್ಕೆ ಅಡ್ಡಿಯಾಗಲಿಲ್ಲ. ಶ್ರೀಶಾಂತ್ಗೆ ಇನ್ಶುರೆನ್ಸ್ ಮಾಡಿದ ಸಂದರ್ಭದಲ್ಲೇ ಗಾಯಕ್ಕೆ ಒಳಗಾಗಿ ಕ್ರಿಕೆಟ್ ಆಡುತ್ತಿದ್ದರು. ಸೀಸನ್ನಿಂದ ಹೊರಗುಳಿಯಲು ಮುಖ್ಯ ಕಾರಣವೇ ಅವರು ಇನ್ಶುರೆನ್ಸ್ ಮಾಡಿದ ಅವಧಿಯಲ್ಲಿ ಗಾಯಕ್ಕೆ ಒಳಗಾಗಿದ್ದರು ಎನ್ನುವುದು ರಾಜಸ್ತಾನ್ ಫ್ರಾಂಚೈಸಿ ವಾದವಾಗಿದೆ.
ಈ ಎರಡು ಕಡೆಯ ವಾದ ಆಲಿಸಿದ್ದ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ (ಎನ್ಸಿಡಿಆರ್ಸಿ)ವು ರಾಜಸ್ತಾನ್ ಫ್ರಾಂಚೈಸಿ ಪರವಾಗಿ ತೀರ್ಪು ನೀಡಿತ್ತು. ಈ ಸಂಬಂಧ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯು ಹಣ ಪಾವತಿ ಮಾಡಬೇಕು ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇದರ ಬಗ್ಗೆ ಸುಪ್ರೀಂ ಕೋರ್ಟ್ನಿಂದ ತೀರ್ಪು ಹೊರ ಬೀಳಬೇಕಿದೆ.
ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ವಿಚಾರಣೆ ನಡೆಸಿದ್ದು ಶ್ರೀಶಾಂತ್ ಅವರ ಫಿಟ್ನೆಸ್ ಸರ್ಟಿಫಿಕೆಟ್ ಅನ್ನು ಕೇಳಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚುವರಿ ದಾಖಲೆ ಒದಗಿಸುವಂತೆ ಹೇಳಿದೆ. ಇಷ್ಟೇ ಅಲ್ಲದೇ, ಮೊದಲೇ ಕಾಲ್ಬೆರಳು ಗಾಯಕ್ಕೆ ಒಳಗಾಗಿದ್ದರು ಎನ್ನುವ ಪ್ರಮಾಣಪತ್ರ ಬಹಿರಂಗ ಪಡಿಸಲಾಗಿದೆಯೇ. ಅದನ್ನು ನೀಡುವಂತೆ ನ್ಯಾಯಾಲಯ ಕೇಳಿದೆ. ಒಂದು ವೇಳೆ ಹಳೆಯ ಗಾಯವಾಗಿದ್ರೆ ಇನ್ಶುರೆನ್ಸ್ ಕಂಪನಿಗೆ ಜಯ ಸಿಗುತ್ತದೆ. ಅದೇ ಇನ್ಶುರೆನ್ಸ್ ಅವಧಿಯಲ್ಲೇ ಗಾಯವಾಗಿತ್ತು ಎಂದರೆ 82 ಲಕ್ಷ ರೂಪಾಯಿಗೂ ಅಧಿಕ ಹಣ ಪಾವತಿ ಮಾಡುವಂತೆಯು ಕೋರ್ಟ್ ಹೇಳಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ