ತಲೆ ಕೆಳಗಾದ ಗಂಭೀರ್​ ಲೆಕ್ಕಾಚಾರ, ಭಾರೀ ಮುಖಭಂಗ..!

T20 ವಿಶ್ವಕಪ್​ಗೂ ಮುನ್ನ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ಹೊಸ ಟೆನ್ಶನ್​ ಶುರುವಾಗಿದೆ. ಚಾಂಪಿಯನ್ ಪಟ್ಟ ಉಳಿಸಿಕೊಳ್ಳೋ ಬಿಗ್​ ಚಾಲೆಂಜ್​ ರೆಡಿಯಾಗ್ತಿರೋ ಮೆನ್​ ಇನ್​ ಬ್ಲ್ಯೂ ಪಡೆ ಸದ್ಯ ನ್ಯೂಜಿಲೆಂಡ್​ ಎದುರು ಪ್ರಿಪರೇಟರಿ ಸರಣಿಯನ್ನಾಡ್ತಿದೆ.

author-image
Ganesh Kerekuli
Gambhir Sanju
Advertisment
  • ಸ್ಯಾಮ್ಸನ್​ ಫೇಲ್, ಮ್ಯಾನೇಜ್​ಮೆಂಟ್​ಗೆ ಟೆನ್ಶನ್​
  • ಟೀಮ್​ ಇಂಡಿಯಾಗೆ ಆರಂಭದಲ್ಲೇ ‘ವಿಘ್ನ’.!
  • ಟಾಪ್​ ಆರ್ಡರ್​​ನಲ್ಲಿ 3 ಎಡಗೈ ಬ್ಯಾಟರ್ಸ್​ ಬೇಕಾ..?

T20 ವಿಶ್ವಕಪ್​ಗೂ ಮುನ್ನ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ಹೊಸ ಟೆನ್ಶನ್​ ಶುರುವಾಗಿದೆ. ಚಾಂಪಿಯನ್ ಪಟ್ಟ ಉಳಿಸಿಕೊಳ್ಳೋ ಬಿಗ್​ ಚಾಲೆಂಜ್​ ರೆಡಿಯಾಗ್ತಿರೋ ಮೆನ್​ ಇನ್​ ಬ್ಲ್ಯೂ ಪಡೆ ಸದ್ಯ ನ್ಯೂಜಿಲೆಂಡ್​ ಎದುರು ಪ್ರಿಪರೇಟರಿ ಸರಣಿಯನ್ನಾಡ್ತಿದೆ. ಈ ಸರಣಿಯಲ್ಲೂ ಸಂಜು ಸ್ಯಾಮ್ಸನ್​ ವೈಫಲ್ಯ ಮುಂದುವರೆದಿದೆ. ಕೇರಳ ಬಾಯ್​ ಫೇಲ್ಯೂರ್​ ವಿಶ್ವಕಪ್​ಗೂ ಮುನ್ನ ಹೆಡ್​ಕೋಚ್​ ಗೌತಮ್​ ಗಂಭೀರ್​ ಲೆಕ್ಕಾಚಾರ ತಲೆ ಕೆಳಗಾಗಿಸಿದೆ. 

ಇಂಡೋ-ಕಿವೀಸ್​ ಚುಟುಕು ಯುದ್ಧ ಜೋರಾಗಿ ನಡೀತಿದೆ. ಟಿ20 ವಿಶ್ವಕಪ್​ಗೂ ಮುನ್ನ ಆಡ್ತಿರೋ ಕೊನೆಯ ಸರಣಿಯಲ್ಲಿ ಟೀಮ್​ ಇಂಡಿಯಾ ಸೂಪರ್​ ಡೂಪರ್​ ಪರ್ಫಾಮೆನ್ಸ್​ ನೀಡ್ತಿದೆ. 2 ಪಂದ್ಯ ಮೊದಲೇ ಸರಣಿ ಗೆದ್ದಿರೋ ಸೂರ್ಯಕುಮಾರ್​ ಸೈನ್ಯ ಆತ್ಮವಿಶ್ವಾಸದಲ್ಲಿ ತೇಲಾಡ್ತಿದೆ. ಟೀಮ್​ ಇಂಡಿಯಾ ಭರ್ಜರಿ ಪರ್ಫಾಮೆನ್ಸ್​ ನೀಡ್ತಾ ಇದ್ರೂ ಮ್ಯಾನೇಜ್​ಮೆಂಟ್​ಗೆ ಟೆನ್ಶನ್ ಮಾತ್ರ ತಪ್ಪಿಲ್ಲ. ವಿಕೆಟ್​ ಕೀಪರ್​ ಬ್ಯಾಟರ್​ ಸಂಜು ಸ್ಯಾಮ್ಸನ್ ಹೆಡ್​ ಕೋಚ್​ ಗೌತಮ್​ ಗಂಭೀರ್​ ಅಂಡ್ ಟೀಮ್​ನ ಟೆನ್ಶನ್​ ಹೆಚ್ಚಿಸಿದ್ದಾರೆ.

ಇದನ್ನೂ ಓದಿ: ಗಿಲ್ ಹೊಸ ಪಾಲಿಸಿ.. ದಾದಾ ಹಾದಿಯಲ್ಲೇ ಹೊರಟ ಪ್ರಿನ್ಸ್​..!

Sanju Samson

ವಿಶ್ವಕಪ್​ ಟೂರ್ನಿಗೂ ಮುನ್ನ ನಡೀತಿರೋ ಟಿ20 ಸರಣಿಯ ಮೊದಲ 3 ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ನೀಡಿರೋ ಪರ್ಫಾಮೆನ್ಸ್​ ಇದು. ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ 10 ರನ್​ಗೆ ಸುಸ್ತಾದ ಸಂಜು ಸ್ಯಾಮ್ಸನ್​, ರಾಯ್​ಪುರದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ 6 ರನ್​ಗೆ ಆಟ ಅಂತ್ಯಗೊಳಿಸಿದ್ರು. ಗುವಾಹಟಿಯಲ್ಲಿ ನಡೆದ 3ನೇ ಪಂದ್ಯದಲ್ಲಿ ಆಗಿದ್ದು ಗೋಲ್ಡನ್​ ಡಕೌಟ್​.
ಸಂಜು ಸ್ಯಾಮ್ಸನ್​ ವೈಫಲ್ಯ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಓಪನರ್​ ಆಗಿ ಪ್ರಮೋಟ್​ ಆದ ಬಳಿಕ ಸಂಜು ಸ್ಯಾಮ್ಸನ್​ ರನ್​ಗಳಿಕೆಗೆ ಅಕ್ಷರಶಃ ತಿಣುಕಾಡಿದ್ದಾರೆ. ಚುಟುಕು ವಿಶ್ವಕಪ್​ ಸರಣಿಗೆ ಮುನ್ನ ಇಂದಿನ ಪಂದ್ಯವೂ ಸೇರಿ ಟೀಮ್​ ಇಂಡಿಯಾ ಕೇವಲ 2 ಮ್ಯಾಚ್​ ಮಾತ್ರ ಆಡಲಿದೆ. ಆ 2 ಪಂದ್ಯದೊಳಗೆ ಮ್ಯಾನೇಜ್​ಮೆಂಟ್​​ ಆರಂಭಿಕ ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ. 

ಆರಂಭದಲ್ಲೇ ‘ವಿಘ್ನ’

ಟಿ20 ಫಾರ್ಮೆಟ್​​ನಲ್ಲಿ ಟೀಮ್​ ಇಂಡಿಯಾಗೆ ಆರಂಭದಲ್ಲೇ ವಿಘ್ನ ಕಾಡ್ತಿದೆ. ಒಂದು ಕಡೆ ಅಭಿಷೇಕ್​ ಶರ್ಮಾ ವಿಸ್ಪೋಟಕ ಆಟದಿಂದ ಎದುರಾಳಿಯನ್ನ ಫುಲ್​ ಶೇಕ್​ ಮಾಡ್ತಿದ್ದಾರೆ. ಆದ್ರೆ, ಇನ್ನೊಂದು ತುದಿಯಿಂದ ಅಭಿಷೇಕ್​ ಶರ್ಮಾಗೆ ಸಾಥ್​ ಸಿಗ್ತಿಲ್ಲ. ಏಷ್ಯಾಕಪ್​ಗೂ ಮುನ್ನ ಅಭಿಷೇಕ್​ ಶರ್ಮಾ ಜೊತೆಗಾರನಾಗಿ ಶುಭ್​ಮನ್​ ಗಿಲ್​ನ ಪಿಕ್​ ಮಾಡಲಾಗಿತ್ತು. ಉಪನಾಯಕನ ಪಟ್ಟವನ್ನೂ ಕಟ್ಟಲಾಗಿತ್ತು. ಆದ್ರೆ, ಗಿಲ್​ ಓಪನರ್​ ಆಗಿ ಫೇಲ್ ಆದ್ರು. ಹೀಗಾಗಿ ಶುಭ್​ಮನ್​ನ ಡ್ರಾಪ್​​ ಮಾಡಿ ಸಂಜುನ ಪ್ರಮೋಟ್​ ಮಾಡಲಾಗಿತ್ತು. ಪ್ರಮೋಷನ್​ ಪ್ಲಾನ್​ ಈಗ ಫ್ಲಾಪ್​ ಆಗಿದೆ. 

ಕೋಚ್​ ಗಂಭೀರ್​ಗೆ ಮುಖಭಂಗ

ಗೌತಮ್​ ಗಂಭೀರ್​ ಟೀಮ್​ ಇಂಡಿಯಾದ ಹೆಡ್​ಕೋಚ್​ ಹುದ್ದೆಗೇರಿದ ಬಳಿಕ ಟಿ20 ಫಾರ್ಮೆಟ್​ನಲ್ಲಿ ಸಂಜು ಸ್ಯಾಮ್ಸನ್​ನ ಸಿಕ್ಕಾಪಟ್ಟೆ ಬ್ಯಾಕ್​ ಮಾಡಿದ್ರು. ಶ್ರೀಲಂಕಾ ಪ್ರವಾಸದಲ್ಲಿ ಫೇಲ್​ ಆದ್ರೂ, ಮತ್ತೆ ಚಾನ್ಸ್​ ಗಿಟ್ಟಿಸಿಕೊಂಡ ಸಂಜು ಆರಂಭಿಕನಾಗಿ 3 ಸೆಂಚುರಿಗಳನ್ನೂ ಸಿಡಿಸಿದ್ರು. ​ಆ ಬಳಿಕ ಇಂಗ್ಲೆಂಡ್​ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿದ್ರು. ಸಂಜು ಬೆನ್ನಿಗೆ ನಿಂತ ಗಂಭೀರ್​, ಮಿಡಲ್​ ಆರ್ಡರ್​ನಲ್ಲಿ ಆಡಿಸಿದ್ರು. ಸಂಜು ಶೈನ್​ ಆಗಲಿಲ್ಲ. ಇದೀಗ ಪ್ರಮೋಷನ್​ ಪಡೆದು ನ್ಯೂಜಿಲೆಂಡ್ ಸರಣಿಯಲ್ಲಿ ಇನ್ನಿಂಗ್ಸ್​ ಓಪನ್​ ಮಾಡಿದ ಸಂಜು ಮತ್ತೆ ಫೇಲ್​ ಆಗಿದ್ದಾರೆ. ಸಂಜು ವೈಫಲ್ಯದಿಂದ ಗಂಭೀರ್​ಗೆ ಮುಖಭಂಗವಾಗಿದೆ. 

ಇದನ್ನೂ ಓದಿ: ಇಂದು ಬೆಂಗಳೂರಿನಲ್ಲಿ ಇಳಿಕೆಯಾದ ಚಿನ್ನ, ಬೆಳ್ಳಿ ಬೆಲೆ !! : 4 ಲಕ್ಷಕ್ಕಿಂತ ಕಡಿಮೆಗೆ ಕುಸಿದ ಬೆಳ್ಳಿ ಬೆಲೆ!!

Gambhir (4)

ಸಂಜು ಸ್ಯಾಮ್ಸನ್​ ವೈಫಲ್ಯದ ಬಳಿಕ ಹೊಸ ಓಪನರ್​ಗಾಗಿ ಟೀಮ್​ ಮ್ಯಾನೇಜ್​ಮೆಂಟ್​ ಹುಡುಕಾಟ ನಡೆಸ್ತಿದ್ದು, ಕಮ್​ಬ್ಯಾಕ್​ ಕಿಂಗ್​ ಇಶಾನ್​ ಕಿಶನ್​ ಮೇಲೆ ಕಣ್ಣು ಬಿದ್ದಿದೆ. ಸುದೀರ್ಘ ಅಂತರದ ಬಳಿಕ ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿರೋ ಕಿಶನ್​ ಧೂಳೆಬ್ಬಿಸಿದ್ದಾರೆ. 3ನೇ ಕ್ರಮಾಂಕದಲ್ಲಿ ಬೊಂಬಾಟ್​ ಬ್ಯಾಟಿಂಗ್​ ನಡೆಸಿ ಎಲ್ಲರನ್ನೂ ಇಂಪ್ರೆಸ್​ ಮಾಡಿದ್ದಾರೆ. ಸಾಲಿಡ್​ ಆಟವಾಡಿರೋ ಇಶಾನ್​ ಕಿಶನ್​ನ ಓಪನರ್​ ಆಗಿ ಪ್ರಮೋಟ್​ ಮಾಡೋ ಪ್ಲಾನ್​ ಮ್ಯಾನೇಜ್​ಮೆಂಟ್​ ವಲಯದಲ್ಲಿ ಆರಂಭವಾಗಿದೆ. 

ಓಪನರ್​ ಸಮಸ್ಯೆಗೆ ವಿಶ್ವಕಪ್​ ಟೂರ್ನಿಯೊಳಗೆ ಪರಿಹಾರ ಕಂಡುಕೊಳ್ಳಲೇ ಬೇಕಿದೆ. ಮ್ಯಾನೇಜ್​ಮೆಂಟ್​ ಬಳಿ ಕಿಶನ್​ನ ಪ್ರಮೋಟ್​ ಮಾಡೋ ಪ್ಲ್ಯಾನ್ ಬಿ ಕೂಡ ಇದೆ. ಆದ್ರೆ, ಅಭಿಷೇಕ್​ ಶರ್ಮಾ ಜೊತೆಗೆ ಇಶಾನ್​ ಕಿಶನ್​ ಓಪನರ್​ ಆಗಿ ಕಣಕ್ಕಿಳಿದ್ರೆ, ನಂಬರ್​ 3 ಸ್ಲಾಟ್​ನಲ್ಲಿ ತಿಲಕ್​ ವರ್ಮಾ ಆಡಲಿದ್ದಾರೆ. ಅಂದ್ರೆ, ಟಾಪ್​ 3 ಬ್ಯಾಟರ್ಸ್​​ ಲೆಫ್ಟ್​ ಹ್ಯಾಂಡರ್​ಗಳೇ ಆಗಲಿದ್ದಾರೆ. ಮೂವರು ಲೆಫ್ಟ್​ ಹ್ಯಾಂಡ್​ ಬ್ಯಾಟರ್ಸ್​ನ ಆಡಿಸೋ ರಿಸ್ಕ್​ನ ಮ್ಯಾನೇಜ್​ಮೆಂಟ್​ ತೆಗೆದುಕೊಳ್ಳುತ್ತಾ ಅನ್ನೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಎನ್‌ಸಿಪಿ ಎರಡು ಬಣಗಳ ವಿಲೀನಕ್ಕೆ ಅಜಿತ್ ಪವಾರ್ ಉತ್ಸುಕರಾಗಿದ್ದರು- ಅಜಿತ್ ಆಪ್ತ ಕಿರಣ್ ಗುಜಾರ್ ಸ್ಪಷ್ಟನೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cricket news in Kannada Gautam Gambhir Sanju Samson sports
Advertisment