ಗಿಲ್ ಹೊಸ ಪಾಲಿಸಿ.. ದಾದಾ ಹಾದಿಯಲ್ಲೇ ಹೊರಟ ಪ್ರಿನ್ಸ್​..!

ಭಾರತ ಟೆಸ್ಟ್ ತಂಡವನ್ನ ಬಲಿಷ್ಟಗೊಳಿಸಲು ಕ್ಯಾಪ್ಟನ್ ಶುಭ್ಮನ್ ಗಿಲ್ ಮುಂದಾಗಿದ್ದಾರೆ. ಇದಕ್ಕಾಗಿ ಗಿಲ್ ಬಿಗ್​ಬಾಸ್​ಗಳಿಗೆ ಹೊಸ ಸಲಹೆ ನೀಡಿದ್ದಾರೆ. ಗಿಲ್ ಹೊಸ ಪಾಲಿಸಿ ಕೇಳಿದ ಬಿಸಿಸಿಐ, ಸೆಲೆಕ್ಟರ್ಸ್​ ಮತ್ತು ಟೀಮ್ ಮ್ಯಾನೇಜ್ಮೆಂಟ್​​ ಫುಲ್ ಖುಷ್ ಆಗಿದೆ. ಅಷ್ಟಕ್ಕೂ ಯುವ ನಾಯಕ ಗಿಲ್ ಪ್ರಸ್ತಾಪ ಮಾಡಿದ್ದೇನು?

author-image
Ganesh Kerekuli
Gill (4)
Advertisment
  • ಭಾರತ ಟೆಸ್ಟ್​ ತಂಡಕ್ಕೆ ಶುಭ್ಮನ್​​ ಗಿಲ್ ಹೊಸ ಬಾಸ್
  • ಟೆಸ್ಟ್​ ತಂಡ ಬಲಿಷ್ಟಗೊಳಿಸಲು ಶುಭ್​ಮನ್ ಸಲಹೆ
  • ಬಿಸಿಸಿಐಗೆ ಟೆಸ್ಟ್ ನಾಯಕ ಗಿಲ್ ಕೊಟ್ಟ ಸಲಹೆ ಏನು..?

ಭಾರತ ಟೆಸ್ಟ್ ತಂಡವನ್ನ ಬಲಿಷ್ಟಗೊಳಿಸಲು ಕ್ಯಾಪ್ಟನ್ ಶುಭ್ಮನ್ ಗಿಲ್ ಮುಂದಾಗಿದ್ದಾರೆ. ಇದಕ್ಕಾಗಿ ಗಿಲ್ ಬಿಗ್​ಬಾಸ್​ಗಳಿಗೆ ಹೊಸ ಸಲಹೆ ನೀಡಿದ್ದಾರೆ. ಗಿಲ್ ಹೊಸ ಪಾಲಿಸಿ ಕೇಳಿದ ಬಿಸಿಸಿಐ, ಸೆಲೆಕ್ಟರ್ಸ್​ ಮತ್ತು ಟೀಮ್ ಮ್ಯಾನೇಜ್ಮೆಂಟ್​​ ಫುಲ್ ಖುಷ್ ಆಗಿದೆ. ಅಷ್ಟಕ್ಕೂ ಯುವ ನಾಯಕ ಗಿಲ್ ಪ್ರಸ್ತಾಪ ಮಾಡಿದ್ದೇನು? 

ಒಂದಲ್ಲ.. ಎರಡು ಭಾರಿ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ವೈಟ್​​ವಾಶ್. ನ್ಯೂಜಿಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧ ತೀವ್ರ ಮುಖಭಂಗದ ನಂತರ ಬಿಗ್​ಬಾಸ್​​​​​ಗಳಿಗೆ, ದಿಕ್ಕೇ ತೋಚದಂತಾಗಿತ್ತು. ಆದ್ರೀಗ ಬಿಸಿಸಿಐಗೆ ಟೆಸ್ಟ್ ತಂಡದ ಯುವ ನಾಯಕ ಗಿಲ್, ಹೊಸ ಸಲಹೆ ನೀಡಿದ್ದಾರೆ. ಗಿಲ್ ಸಲಹೆಯಿಂದ ಬಿಗ್​ಬಾಸ್​​ಗಳು ಫುಲ್ ಖುಷ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಗಿಲ್ ಹೊಸ ಪಾಲಿಸಿಯನ್ನ ಅಳವಡಿಸಲು ಮುಂದಾಗಿದ್ದಾರೆ.   

ಇದನ್ನೂ ಓದಿ: ಇನ್ಸಾಟಾಗ್ರಾಮ್ ನಲ್ಲಿ ವಿರಾಟ್ ಕೊಹ್ಲಿ ಖಾತೆಯೇ ಮಾಯ! ಶಾಕ್ ಆದ ಕೊಹ್ಲಿ ಫ್ಯಾನ್ಸ್ : ಕೊನೆಗೆ ಏನಾಗಿತ್ತು ಗೊತ್ತಾ?

Team India

ಟೀಮ್ ಇಂಡಿಯಾ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಗಿಲ್ ರಿಯಲ್ ಬಾಸ್. ಗಿಲ್​ಗೆ ಬಿಗ್​ಬಾಸ್​​ಗಳು ಫುಲ್ ಫ್ರಿಡಂ ನೀಡಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ಜೊತೆಗೂಡಿ ತಂಡವನ್ನ ಕಟ್ಟೋಕೆ, ಜವಾಬ್ದಾರಿ ನೀಡಿದ್ದಾರೆ. ಟೆಸ್ಟ್, ಏಕದಿನ ತಂಡವನ್ನ ಬಲಿಷ್ಟಗೊಳಿಸಲು ಅವಶ್ಯಕತೆ ಇರೋದನ್ನ ಒದಗಿಸಲು, ಗಿಲ್​​ಗೆ ಬಿಗ್​ಬಾಸ್​ಗಳು ಸಾಥ್ ನೀಡ್ತಿದ್ದಾರೆ. ಹಾಗಾಗಿ ಗಿಲ್, ಸದ್ಯ ಹೊಸ ಹೊಸ ಐಡಿಯಾಗಳೊಂದಿಗೆ ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ಮೆಂಟ್​​​​​ಗೆ ಸಲಹೆ ನೀಡಲು ಮುಂದಾಗಿದ್ದಾರೆ.   

ರೋಹಿತ್ ಶರ್ಮಾ ಬಳಿಕ ಟೆಸ್ಟ್ ತಂಡದ ಸಾರಥ್ಯವಹಿಸಿಕೊಂಡಿರೋ ಶುಭ್ಮನ್ ಗಿಲ್, ದಿನೇ ದಿನೇ ಕ್ಯಾಪ್ಟನ್ ಆಗಿ ಮೆಚ್ಯುರಿಟಿ ತೋರಿಸುತ್ತಿದ್ದಾರೆ. 9 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನ ಮುನ್ನಡೆಸಿರುವ ಗಿಲ್, ಬಿಗ್​ಬಾಸ್​​ಗಳಿಗೆ ಬಿಗ್ ಐಡಿಯಾ ನೀಡಿದ್ದಾರೆ. ಅದೇ, 15 ದಿನಗಳ ಪ್ರಿಪರೇಟ್ರಿ ಕ್ಯಾಂಪ್ ಆಯೋಜನೆಯ ಪ್ಲಾನ್. ಟೆಸ್ಟ್​ ಸರಣಿಗಳ ಆರಂಭಕ್ಕೂ ಮುನ್ನ ಸಿದ್ಧತೆಯ ದೃಷ್ಟಿಯಿಂದ 15 ದಿನಗಳ ಅಭ್ಯಾಸ ಶಿಬಿರ ಆರಂಭಿಸುವಂತೆ ಸಲಹೆ ನೀಡಿದ್ದಾರೆ. 

ಇದನ್ನೂ ಓದಿ:Super six: 5ನೇ ಟಿ20 ಪಂದ್ಯದ ಟಿಕೆಟ್ಸ್​ ಸೋಲ್ಡ್​ ಔಟ್​.. ಮಾಜಿ ಕ್ರಿಕೆಟಿಗ ಅರೆಸ್ಟ್ ..!

GillI (6)

ಪ್ರಿಪರೇಟರಿ ಕ್ಯಾಂಪ್​ ಜೊತೆಗೆ ಟೆಸ್ಟ್​ ತಂಡದ ಆಟಗಾರರು ಕಡ್ಡಾಯವಾಗಿ ರಣಜಿ ಟ್ರೋಫಿ ಆಡಬೇಕು ಎಂದು ಶುಭ್​ಮನ್​ ಗಿಲ್​ ಸಲಹೆ ನೀಡಿದ್ದಾರೆ. ಪ್ರತಿ ಡೊಮೆಸ್ಟಿಕ್ ಸೀಸನ್​ನಲ್ಲಿ ಕನಿಷ್ಟ 1ರಿಂದ 2 ಪಂದ್ಯಗಳನ್ನ ಟೆಸ್ಟ್​ ಪ್ಲೇಯರ್ಸ್​ ಆಡಬೇಕು. ಈ ನಿಟ್ಟಿನಲ್ಲಿ ಆಟಗಾರರಿಗೆ ಖಡಕ್​ ಸೂಚನೆ ನೀಡಿ ಎಂದು ಗಿಲ್​ ಬಿಸಿಸಿಐಗೆ ತಿಳಿಸಿದ್ದಾರೆ. ಕಳೆದ 2 ವರ್ಷಗಳ ಹಿಂದೆಯೇ ಡೊಮೆಸ್ಟಿಕ್​ ಕ್ರಿಕೆಟ್​ ಮೇಲೆ ಹೆಚ್ಚು ಆಸಕ್ತಿ ವಹಿಸಿರೋ ಬಾಸ್​​ಗಳು, ಶುಭ್​ಮನ್​ ಗಿಲ್​​ ಸಲಹೆಯಿಂದ ಫುಲ್​ ಖುಷ್​ ಆಗಿದ್ದಾರೆ. 

ತಂಡಕ್ಕೆ ಲಾಭ ಇದ್ಯಾ..?

ಶುಭ್ಮನ್ ಗಿಲ್ ಕೊಟ್ಟಿರೋ ಐಡಿಯಾಗಳು ಎಕ್ಸಲೆಂಟ್.! ಪ್ರಿಪರೇಟ್ರಿ ಕ್ಯಾಂಪ್​ನಿಂದ ತಂಡಕ್ಕೆ ಸಾಕಷ್ಟು ಲಾಭಗಳಿವೆ. ಕ್ಯಾಂಪ್​ನಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಜೊತೆಗೆ ಫಿಟ್ನೆಸ್​​​ಗೆ ಹೆಚ್ಚು ಆಸಕ್ತಿ ನೀಡಬಹುದು. 15 ದಿನಗಳಲ್ಲಿ ಆಟಗಾರರ ಸ್ಟ್ರೆಂಥ್ ಌಂಡ್ ವೀಕ್ನೆಸ್ ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ರಣಜಿ ಟ್ರೋಫಿ ಪಂದ್ಯವನ್ನಾಡಿದ್ರೆ, ಆಟಗಾರರಿಗೆ ರಿಧಮ್​ ಕಂಡುಕೊಳ್ಳಲು, ಮಿಸ್ಟೇಕ್ಸ್​ ಮೇಲೆ ವರ್ಕೌಟ್​ ಮಾಡಲು ನೆರವಾಗಲಿದೆ. ಇದರಿಂದ ಟೀಮ್ ಮ್ಯಾನೇಜ್ಮೆಂಟ್​ಗೂ, ಪ್ರತಿಯೊಬ್ಬ ಆಟಗಾರರ ಬಗ್ಗೆ ಕ್ಲಾರಿಟಿ ಸಿಗಲಿದೆ.   
15 ದಿನಗಳ ಪ್ರಿಪರೇಟ್ರಿ ಕ್ಯಾಂಪ್​ನಿಂದ ಕೋಚ್​ಗಳಿಗೆ ಸ್ಟ್ರಾಟಜಿ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಇದರಿಂದ ಪಂದ್ಯಗಳ ವೇಳೆ ಕೋಚ್​ಗಳಿಗೆ, ಯಾವುದೇ ಗೊಂದಲಗಳು ಆಗೋದಿಲ್ಲ. ಕ್ಯಾಂಪ್​ ವೇಳೆ ಚಾಲೆಂಜಿಂಗ್ ಸೆಷನ್ಸ್​ ವೇಳೆ, ಆಟಗಾರರು ಒತ್ತಡ ನಿಭಾಯಿಸೋದನ್ನ ಕಲಿಯುತ್ತಾರೆ. ಜೊತೆಗೆ ಸೆಟ್​​ಬ್ಯಾಕ್​ಗಳಿಂದ ಕಮ್​ಬ್ಯಾಕ್ ಮಾಡೋದೇಗೆ ಅನ್ನೋದನ್ನ ತಿಳಿದುಕೊಳ್ಳಲಿದ್ದಾರೆ.

ಇದನ್ನೂ ಓದಿ: ಕ್ಯಾಪ್ಟನ್ ರೇಸ್​​​ನಲ್ಲಿ ಒಬ್ಬರಲ್ಲ, ಇಬ್ಬರಲ್ಲ.. ಮಾಲೀಕರ ಒಲವು ಯಾರ ಮೇಲೆ..?

ಇದೆಲ್ಲದರ ಜೊತೆಗೆ ತಮ್ಮ ಟೆಕ್ನಿಕ್ ಬಗ್ಗೆ ತಿಳಿದುಕೊಳ್ಳಲು ಪ್ರಿಪರೇಟ್ರಿ ಕ್ಯಾಂಪ್ ಸಹಕಾರಿಯಾಗಲಿದೆ. ಹಾಗಾಗಿ ಯಾವುದೇ ಟೆಸ್ಟ್ ಸರಣಿಗೂ ಮುನ್ನ ಪ್ರಿಪರೇಟ್ರಿ ಕ್ಯಾಂಪ್ ಬೇಕೇ ಬೇಕು.​​​​​

ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ನಾಯಕನಾಗಿದ್ದಾಗ ಪ್ರಿಪರೇಟ್ರಿ ಕ್ಯಾಂಪ್ ಕಾನ್ಸೆಪ್ಟ್ ಆರಂಭಿಸಿದ್ರು. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಗಂಗೂಲಿ ನಾಯಕತ್ವದ ಟೀಮ್ ಇಂಡಿಯಾ, ಸಾಕಷ್ಟು ಭಾರೀ ಕ್ಯಾಂಪ್ ನಡೆಸಿತ್ತು. ಪ್ರಿಪರೇಟ್ರಿ ಕ್ಯಾಂಪ್​​ನಿಂದ ಅಂದಿನ ಟೀಮ್ ಇಂಡಿಯಾಕ್ಕೆ ಭಾರೀ ನೆರವಾಯ್ತು. ವಿದೇಶಗಳಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿಗಳನ್ನ ಗೆಲ್ಲಲು ಆರಂಭಿಸಿತು. ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ, ನ್ಯೂಜಿಲೆಂಡ್​​​​​​ನಲ್ಲಿ ಎದುರಾಳಿಗಳಿಗೆ ಟಫ್ ಫೈಟ್ ನೀಡಲು ಆರಂಭಿಸಿದ್ದೇ, ಪ್ರಿಪರೇಟ್ರಿ ಕ್ಯಾಂಪ್ ನೆರವಿನಿಂದ. ಇದನ್ನ ಯಾರೂ ಬೇಕಾದ್ರೂ ಹೇಳ್ತಾರೆ.

ಯುವ ನಾಯಕ ಶುಭ್ಮನ್ ಗಿಲ್ ಕೊಟ್ಟ ಓಲ್ಡ್ ಸ್ಕೂಲ್ ಆಫ್ ಪಾಲಿಸಿ ಐಡಿಯಾ, ಖಂಡಿತ ವರ್ಕ್ ​ಔಟ್ ಆಗುತ್ತೆ. ಯುದ್ಧಕಾಲೇ ಶಸ್ತ್ರಾಭ್ಯಾಸ ಮಾಡೋದಕ್ಕಿಂತ, ಯುದ್ಧಕ್ಕೂ ಮುನ್ನವೇ ಶಸ್ತ್ರಾಭ್ಯಾಸ ಮಾಡಿದ್ರೆ, ಎದುರಾಳಿಗಳ ವಿರುದ್ಧ ದಿಟ್ಟ ಹೋರಾಟ ನಡೆಸಬಹುದು. 

ಇದನ್ನೂ ಓದಿ: 331 ಎಸೆತಗಳಲ್ಲಿ ಅಭಿ ಸಿಡಿಸಿದ ಸಿಕ್ಸರ್​ ಎಷ್ಟು ಗೊತ್ತಾ..? ಅಬ್ಬಬ್ಬಾ, ಭಲೇ ಬ್ಯಾಟರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

cricketers love Shubman Gill
Advertisment