/newsfirstlive-kannada/media/media_files/2026/01/21/ind-vs-nz-2026-01-21-14-24-54.jpg)
ಕೇರಳದ ತಿರುವನಂತಪುರಂನಲ್ಲಿ ಭಾರತ-ನ್ಯೂಜಿಲೆಂಡ್​ ನಡುವಿನ 5ನೇ ಟಿ20 ಪಂದ್ಯದ ಕ್ರೇಜ್​ ಜೋರಾಗಿದೆ. ಪಂದ್ಯದ ಟಿಕೆಟ್ಸ್​ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಸೋಲ್ಡ್​ ಔಟ್​ ಆಗಿವೆ. 5ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದ್ರೆ, ಕರಿಯರ್​ನಲ್ಲಿ ಇದೇ ಮೊದಲ ಬಾರಿಗೆ ಸಂಜು ಸ್ಯಾಮ್ಸನ್​ ತವರು ಕೇರಳದಲ್ಲಿ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನಾಡಿದಂತಾಗಲಿದೆ. ಹೀಗಾಗಿ ಪಂದ್ಯದ ಕ್ರೇಜ್​ ಹೆಚ್ಚಾಗಿದೆ.
/filters:format(webp)/newsfirstlive-kannada/media/media_files/2026/01/22/team-india-2026-01-22-07-06-38.jpg)
ಮಹಿಳಾ ತಂಡಕ್ಕೆ ಸೇನೆಯಿಂದ ವಿಶೇಷ ಗೌರವ
ಮಹಿಳಾ ಏಕದಿನ ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾಗೆ ಭಾರತೀಯ ಸೇನೆ ವಿಶೇಷ ಗೌರವ ಅರ್ಪಿಸಿದೆ. ನಿನ್ನೆ ದೆಹಲಿಯ ವಿಜಯ್​ ಚೌಕ್​ನಲ್ಲಿ ನಡೆದ ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮದಲ್ಲಿ ಭಾರತೀಯ ಸೇನೆ ಮಹಿಳಾ ಕ್ರಿಕೆಟರ್ಸ್​ಗಾಗಿ ವಿಶೇಷ ಪ್ರದರ್ಶನ ನೀಡಿತು. ಪರೇಡ್​ ವೇಳೆ ವಿಶ್ವಕಪ್​ ಟ್ರೋಫಿಯನ್ನ ಪ್ರತಿರೂಪ ರಚಿಸಿ ಗೌರವ ಸಲ್ಲಿಸಿತು.
ಇದನ್ನೂ ಓದಿ: ಹಳ್ಳಿ ಸಮಸ್ಯೆ ಹೇಳಿದ್ದಕ್ಕೆ ವ್ಯಕ್ತಿಯ ಬೆನ್ನು ಕಚ್ಚಿದ ಪಂಚಾಯತ್ ಅಧ್ಯಕ್ಷ.. ತಾಯಿಯ ತಾಳಿ ಸರವನ್ನೂ ಕಿತ್ತ ಆರೋಪ !
ನೆದರ್​​ಲ್ಯಾಂಡ್​ ಮಹಿಳೆಯರ ಸ್ಪೆಷಲ್​ ಸಂಭ್ರಮಾಚರಣೆ
ನೆದರ್​​ಲ್ಯಾಂಡ್​ ಮಹಿಳಾ ತಂಡ ಮುಂಬರುವ ಟಿ20 ವಿಶ್ವಕಪ್​ ಟೂರ್ನಿಗೆ ಮೊಟ್ಟ ಮೊದಲ ಬಾರಿಗೆ ಕ್ವಾಲಿಫೈ ಆಗಿದೆ. ಯುಎಸ್​ಎ ವಿರುದ್ಧದ ಸೂಪರ್​ ಸಿಕ್ಸ್ ಪಂದ್ಯದಲ್ಲಿ ನೆದರ್​​ಲ್ಯಾಂಡ್ ಮಹಿಳಾ ತಂಡ 21​ ರನ್​ಗಳ ಭರ್ಜರಿ ಜಯ ಸಾಧಿಸಿತು. ವಿಶ್ವಕಪ್​ ಟೂರ್ನಿಗೆ ಕ್ವಾಲಿಫೈ ಆಗ್ತಿದ್ದಂತೆ ಆಟಗಾರ್ತಿಯರು ಸ್ಪೆಷಲ್​ ಸೆಲಬ್ರೇಷನ್​ ಮಾಡಿದ್ದಾರೆ. ಡಗೌಟ್​​ನಿಂದ ಓಡಿ ಬಂದು ಮೈದಾನದಲ್ಲಿದ್ದ ವೆಟ್​ ಟಾರ್ಪಲ್ ಮೇಲೆ ಡೈವ್​ ಮಾಡಿ ಸಂಭ್ರಮಿಸಿದ್ದಾರೆ.
ಅಭ್ಯಾಸ ಆರಂಭಿಸಿದ ವಾಷಿಂಗ್ಟನ್ ಸುಂದರ್​
ಟಿ20 ವಿಶ್ವಕಪ್​ಗೂ ಮುನ್ನ ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​ ಸಿಕ್ಕಿದೆ. ಇಂಜುರಿಗೆ ತುತ್ತಾಗಿದ್ದ ಆಲ್​​​ರೌಂಡರ್​ ವಾಷಿಂಗ್ಟನ್​ ಸುಂದರ್​ ಬಹುತೇಕ ಫಿಟ್​ ಆಗಿದ್ದಾರೆ. ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿ ವೇಳೆ ಇಂಜುರಿಗೆ ತುತ್ತಾಗಿದ್ದ ಸುಂದರ್​, ಬಿಸಿಸಿಐ ಸೆಂಟರ್ ಆಫ್​ ಎಕ್ಸಲೆನ್ಸ್​ನಲ್ಲಿ ರಿಹ್ಯಾಬ್​ ಒಳಗಾಗಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರೋ ಸುಂದರ್​ ಬಹುತೇಕ ಫಿಟ್​ ಆಗಿದ್ದಾರೆ. ಅಭ್ಯಾಸವನ್ನೂ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ವಯಸ್ಸಾದಂತೆ ಕೂದಲು ಬಿಳಿ ಆಗೋದು ಯಾಕೆ..? ಇದನ್ನು ನಿಲ್ಲಿಸಲು ಸಾಧ್ಯವೇ..?
/filters:format(webp)/newsfirstlive-kannada/media/post_attachments/wp-content/uploads/2025/07/SUNDAR.jpg)
ಮಾಜಿ ಕ್ರಿಕೆಟಿಗ ಜಾಕೋಬ್​ ಮಾರ್ಟಿನ್ ಬಂಧನ
ಕುಡಿದು ವಾಹನ ಚಲಾಯಿಸಿದ ಆರೋಪದ ಮೇಲೆ ಭಾರತದ ಮಾಜಿ ಕ್ರಿಕೆಟಿಗ ಜಾಕೋಬ್ ಮಾರ್ಟಿನ್​​ರನ್ನ ಪೋಲಿಸರು ಬಂಧಿಸಿದ್ದಾರೆ. ಜಾಕೋಬ್ ಮಾರ್ಟಿನ್ ವಡೋದರಾದ ಅಕೋಟಾ ದಾಂಡಿಯಾ ಬಜಾರ್ ಸೇತುವೆಯ ಮೇಲೆ ಕುಡಿದು ಎಂಜಿ ಹೆಕ್ಟರ್ ಕಾರನ್ನು ಚಲಾಯಿಸುವ ವೇಳೆ ನಿಯಂತ್ರಣ ತಪ್ಪಿ ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಆಧಾರದಲ್ಲಿ ಸ್ಥಳಕ್ಕೆ ಧಾವಿಸಿದ ಅಕೋಟಾ ಪೊಲೀಸರು ಜಾಕೋಬ್​ ಮಾರ್ಟಿನ್​ರನ್ನ ಬಂಧಿಸಿದ್ದಾರೆ.
Ex-India Star, Who Played 10 ODIs, Arrested For Drunk Driving In Vadodarahttps://t.co/rfgWhewtpRpic.twitter.com/htH1UtElX2
— CricketNDTV (@CricketNDTV) January 27, 2026
ಮೊದಲ ದಿನ ಕರ್ನಾಟಕ ಡಿಸೆಂಟ್​ ಆಟ
ರಣಜಿ ಟ್ರೋಫಿ ಟೂರ್ನಿಯ ಪಂಜಾಬ್​ ವಿರುದ್ಧದ ಮಹತ್ವದ ಪಂದ್ಯದ ಮೊದಲ ದಿನ ಕರ್ನಾಟಕ ತಂಡ ಉತ್ತಮ ಬೌಲಿಂಗ್​ ದಾಳಿ ಸಂಘಟಿಸಿದೆ. ಮೊಹಾಲಿಯಲ್ಲಿ ನಡೆಯುತ್ತಿರೋ ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸ್ತಿರೋ ಪಂಜಾಬ್​, ಮೊದಲ ದಿನದ ಅಂತ್ಯಕ್ಕೆ 9 ವಿಕೆಟ್​ ನಷ್ಟಕ್ಕೆ 303 ರನ್​ಗಳಿಸಿದೆ. ಕರ್ನಾಟಕ ಪರ ಶ್ರೇಯಸ್​ ಗೋಪಾಲ್​, ವಿದ್ಯಾದರ್​ ಪಾಟೀಲ್​ ತಲಾ 3 ವಿಕೆಟ್​ ಕಬಳಿಸಿ ಮಿಂಚಿದ್ದಾರೆ. ಮೊಹ್ಸಿನ್​ ಖಾನ್​ 2, ಪ್ರಸಿದ್ಧ್​ ಕೃಷ್ಣ 1 ವಿಕೆಟ್​ ಕಬಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ.. ಸರ್ಕಾರದ ಹೊಸ ಆದೇಶದಲ್ಲಿ ಏನಿದೆ..?
/filters:format(webp)/newsfirstlive-kannada/media/post_attachments/wp-content/uploads/2025/01/PRASIDH_KRISHANA.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us