/newsfirstlive-kannada/media/media_files/2025/09/19/sanju_samson-3-2025-09-19-21-42-14.jpg)
ಏಷ್ಯಾ ಕಪ್​ನ 12ನೇ ಪಂದ್ಯದಲ್ಲಿ ಎದುರಾಳಿ ಒಮಾನ್ ವಿರುದ್ಧ ಸಂಜು ಸ್ಯಾಮ್ಸನ್​ ಭರ್ಜರಿ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿದ್ದಾರೆ. ಒಂದು ಕಡೆ ವಿಕೆಟ್​ ಉರುಳುತ್ತಿದ್ದರು ಸಂಜು ಸ್ಯಾಮ್ಸನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು.
ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್​ನ ಪಂದ್ಯದಲ್ಲಿ ಒಮಾನ್ ವಿರುದ್ಧ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಓಪನರ್​ ಆಗಿ ಬ್ಯಾಟಿಂಗ್​ಗೆ ಆಗಮಿಸಿದ್ದ ಅಭಿಷೇಕ್ ಶರ್ಮಾ ಹಾಗೂ ಶುಭ್​ಮನ್​ ಗಿಲ್​ ಜೋಡಿ ಮತ್ತೆ ವಿಫಲವಾಯಿತು. ಕೇವಲ 5 ರನ್​ಗೆ ಶುಭ್​ಮನ್​ ಗಿಲ್​ ಕ್ಲೀನ್​ ಬೋಲ್ಡ್​ ಆದರು. ಈ ವೇಳೆ ಸಂಜು ಸ್ಯಾಮ್ಸನ್ ಕ್ರೀಸ್​ಗೆ​ ಆಗಮಿಸಿದರು.
ಇದನ್ನೂ ಓದಿ:ತಾಯಿಯ ಚಿನ್ನಾಭರಣಕ್ಕಾಗಿ ಸಹೋದರರ ನಡುವೆ ಗಲಾಟೆ.. ಅಣ್ಣ, ಅತ್ತಿಗೆ ಮೇಲೆ ಕಲ್ಲು ಹಾಕಿದ ತಮ್ಮ!
ಆದರೆ ಇನ್ನೊಂದೆಡೆ ಭರವಸೆ ಮೂಡಿಸಿದ್ದ ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ ಮಾಡುವ ತವಕದಲ್ಲಿದ್ದರು. ಆದರೆ 38 ರನ್​ ಗಳಿಸಿದ್ದಾಗ ಬಲವಾದ ಶಾಟ್​​ ಬಾರಿಸಲು ಹೋಗಿ ಕ್ಯಾಚ್​ ಔಟ್ ಆದರು. ಪಂದ್ಯದಲ್ಲಿ 15 ಬಾಲ್ ಎದುರಿಸಿದ ಅಭಿಷೇಕ್ ಶರ್ಮಾ 5 ಬೌಂಡರಿ, 2 ಸಿಕ್ಸರ್​​ ಸಮೇತ 38 ರನ್​ಗೆ ವಿಕೆಟ್​ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ ಕ್ರೀಸ್​ಗೆ ಬಂದು ರನೌಟ್​ ಆಗಿ ಹಾಗೇ ಹಿಂದಕ್ಕೆ ಹೋದರು. ಶಿವಂ ದುಬೆ 5 ರನ್​ಗೆ ವಿಕೆಟ್​ ಕಳೆದುಕೊಂಡರು.
ಕ್ರೀಸ್​ ಕಾಯ್ದುಕೊಂಡಿದ್ದ ಸಂಜು ಸ್ಯಾಮ್ಸನ್, ಒಮಾನ್ ಬೌಲರ್​ಗಳಿಗೆ ಬೆವರಿಳಿಸಿದರು. 41 ಬಾಲ್​ಗಳನ್ನು ಆಡಿದ ಸಂಜು ಸ್ಯಾಮ್ಸನ್​ 3 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್​ಗಳಿಂದ ಅರ್ಧಶತಕ ಸಿಡಿಸಿದರು. ಇದೇ ವೇಳೆ 56 ರನ್​ ಗಳಿಸಿ ಆಡುವಾಗ ಸಂಜು ಸ್ಯಾಮ್ಸನ್ ಕ್ಯಾಚ್​ ಔಟ್ ಆಗಿ ನಿರಾಸೆಯಿಂದ ಪೆವಿಲಿಯನ್​ ಕಡೆಗೆ ನಡೆದರು. ಸದ್ಯ ಟೀಮ್ ಇಂಡಿಯಾ 18 ಓವರ್​ಗೆ 6 ವಿಕೆಟ್​ಗೆ 171 ರನ್​ ಗಳಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ