ರೋಹಿತ್​ ಶರ್ಮಾನ ಕೆಳಗಿಳಿಸಿ ಶುಭ್​ಮನ್​ ಗಿಲ್​ ನಾಯಕನ ಪಟ್ಟ ಕಟ್ಟಿದಾಗ ಟೀಕೆಗಳು ಎದುರಾಗಿದ್ವು. ನಾಯಕತ್ವದ ಒತ್ತಡ ನಿಭಾಯಿಸೋಕೆ ಗಿಲ್​ಗೆ ಸಾಧ್ಯವಾಗುತ್ತಾ? ಎಂಬ ಚರ್ಚೆಗಳು ನಡೆದಿದ್ವು. ಆ ಎಲ್ಲಾ ಪ್ರಶ್ನೆಗಳಿಗೆ ತನ್ನ ಬ್ಯಾಟ್​​ನಿಂದಲೇ ಉತ್ತರಿಸ್ತಿದ್ದಾರೆ ಶುಭ್​ಮನ್​ ಗಿಲ್​. ಆಂಗ್ಲರ ನಾಡಲ್ಲಿ ಅಬ್ಬರಿಸಿದ್ದಾಯ್ತು. ಕಿಂಗ್​ ಕೊಹ್ಲಿಯ ಭದ್ರಕೋಟೆಯಲ್ಲಿ ಪ್ರಿನ್ಸ್​ ಗಿಲ್​ ಘರ್ಜಿಸಿದ್ದಾರೆ.
ಇದನ್ನೂ ಓದಿ:ದೀಪಾವಳಿ ಸೇಲ್.. iPhone-16 ಮೇಲೆ ಭಾರೀ ರಿಯಾಯಿತಿ..!
/filters:format(webp)/newsfirstlive-kannada/media/media_files/2025/10/11/gill_100-2025-10-11-13-30-49.jpg)
ಡೆಲ್ಲಿ ದಂಗಲ್​​ನಲ್ಲಿ ವೆಸ್ಟ್​ ಇಂಡೀಸ್​ ಬೌಲರ್​​ಗಳು ಬಾಡಿ ಬಸವಳಿದ್ರು. ವಿಂಡೀಸ್​ ಕ್ಯಾಪ್ಟನ್​ ರೋಸ್ಟನ್​ ಚೇಸ್​ ದಿಕ್ಕೆ ತೋಚದೆ ಬಿರು ಬಿಸಿಲಿಗೆ ರೋಸ್ಟ್​ ಆದ್ರು. ಫೀಲ್ಡರ್ಸ್​ ಅಂತೂ ಸುಸ್ತಾಗಿ ಹೋದ್ರು. ಪಂಜಾಬ್​ ಪುತ್ತರ್​ ಶುಭ್​ಮನ್​ ಗಿಲ್​ ಶೈನಿಂಗ್​ ಪರ್ಫಾಮೆನ್ಸ್​ ನೀಡ್ತಾ ಇದ್ರೆ, ಫ್ಯಾನ್ಸ್​ ಹುಚ್ಚೆದ್ದು ಕುಣಿದ್ರು.
ಗಿಲ್​ ಸೂಪರ್​ ಆಟ
4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಶುಭ್​ಮನ್​ ಗಿಲ್​ ಮೊದಲ ದಿನದಾಟದಲ್ಲಿ ರಿಸ್ಕ್​ ತೆಗೆದುಕೊಳ್ಳೋಕೆ ಹೋಗಲಿಲ್ಲ. 2ನೇ ದಿನದಾಟದಲ್ಲಿ ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ್ರು. 20 ರನ್​ಗಳೊಂದಿಗೆ ದಿನದಾಟ ಆರಂಭಿಸಿದ ಗಿಲ್ ಕೂಲ್​ ಅಂಡ್ ಕಾಮ್​ ಆಟದಿಂದಲೇ ವಿಂಡೀಸ್​ ಬೌಲಿಂಗ್​ ದಾಳಿಯನ್ನ ಉಡೀಸ್​ ಮಾಡಿದ್ರು. ವೇಗಿ ಆ್ಯಂಡರ್ಸನ್​ ಫಿಲಿಪ್​ ಮೇಲಂತೂ ಸವಾರಿ ಮಾಡಿದ್ರು.
ಗಿಲ್​ ಶತಕ ವೈಭವ
ತಾಳ್ಮೆಯಿಂದಲೇ ವಿಂಡೀಸ್​ ಬೌಲಿಂಗ್​ ದಾಳಿಯನ್ನ ಡೀಲ್​ ಮಾಡಿದ ಶುಭ್​ಮನ್​ ಗಿಲ್​, ರಾಷ್ಟ್ರ ರಾಜಧಾನಿಯಲ್ಲಿ ಬೌಂಡರಿ ಜೊತೆಗೆ ಸಿಕ್ಸರ್​ಗಳ ಸುರಿಮಳೆಯನ್ನೂ ಸುರಿಸಿದ್ರು. ಅರ್ಧಶತಕ ಸಿಡಿಸಿಸೋಕೆ 95 ಎಸೆತಗಳನ್ನ ತೆಗೆದುಕೊಂಡ ಶುಭ್​ಮನ್​ ಗಿಲ್​ 177 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ರು. ಕಿಂಗ್​ ಕೊಹ್ಲಿ ಕೋಟೆಯಲ್ಲಿ ಪ್ರಿನ್ಸ್​ ಗಿಲ್​ 10ನೇ ಟೆಸ್ಟ್​ ಶತಕ ಸಿಡಿಸಿ ಸಂಭ್ರಮಿಸಿದ್ರು,
ಇದನ್ನೂ ಓದಿ: ಕುಲ್ದೀಪ್ ಯಾದವ್​​ಗೆ ವಿಕೆಟ್​​ಗಳ ಗೊಂಚಲು.. Follow-on ಹೇರಿದ ಟೀಂ ಇಂಡಿಯಾ..!
/filters:format(webp)/newsfirstlive-kannada/media/media_files/2025/09/23/kl_rahul_gill-2025-09-23-15-24-32.jpg)
ನಾಯಕತ್ವ ಆಟಗಾರನ ಒತ್ತಡ ಹೆಚ್ಚಿಸುತ್ತೆ ಅನ್ನೋ ಮಾತಿದೆ. ಇಂಗ್ಲೆಂಡ್​ ಪ್ರವಾಸಕ್ಕೂ ಮುನ್ನ ಶುಭ್​ಮನ್​ ಗಿಲ್​ ಕ್ಯಾಪ್ಟನ್ಸಿ ನೀಡಿದಾಗಲೂ ಈ ಚರ್ಚೆ ನಡೆದಿತ್ತು. ಕ್ಯಾಪ್ಟನ್​ ಆದ ಮೇಲೆ ಗಿಲ್​ ಖದರೇ ಬದಲಾಗಿದೆ. ಸಲೀಸಾಗಿ ರನ್​ಗಳಿಸ್ತಿರೋ ಗಿಲ್​, ನೀರು ಕುಡಿದಷ್ಟು ಸುಲಭಕ್ಕೆ ಶತಕ ಬಾರಿಸ್ತಿದ್ದಾರೆ. ನಾಯಕನಾಗಿ ಶುಭ್​ಮನ್​ ಗಿಲ್​ ಆಡ್ತಿರೋ 7ನೇ ಟೆಸ್ಟ್​ ಪಂದ್ಯ ಇದು. ಈ 7 ಪಂದ್ಯದಲ್ಲಿ ಸಿಡಿಸಿರೋ 5ನೇ ಟೆಸ್ಟ್​ ಸೆಂಚುರಿಯಿದು.
‘ಸೂಪರ್​ ಮ್ಯಾನ್​’ ಶುಭ್​ಮನ್
2025ರಲ್ಲಿ ಶುಭ್​ಮನ್​ ಗಿಲ್​ ಬ್ಯಾಟ್​​ ಸಖತ್​​ ಸೌಂಡ್​​ ಮಾಡ್ತಿದೆ. ಟೆಸ್ಟ್​ ಕ್ರಿಕೆಟ್​​ನಲ್ಲಂತೂ ಗಿಲ್ ಸೂಪರ್​ ಮ್ಯಾನ್​ ಅವತಾರ ಎತ್ತಿದ್ದಾರೆ. ಹೋಮ್​ ಕಂಡಿಷನ್ಸ್​, ಅವೇ ಕಂಡಿಷನ್ಸ್​ ಅನ್ನೋದು ಮ್ಯಾಟರೇ ಆಗ್ತಿಲ್ಲ. ಬೊಂಬಾಟ್​ ಬ್ಯಾಟಿಂಗ್​ ನಡೆಸಿ ಮಿಂಚು ಹರಿಸ್ತಿದ್ದಾರೆ. ಆಡಿದ 8 ಪಂದ್ಯಗಳಿಂದ 63.34ರ ಸರಾಸರಿಯಲ್ಲಿ ರನ್​ಗಳಿಸಿರೋ ಗಿಲ್,​ ಬರೋಬ್ಬರಿ 1062 ರನ್​ ಕಲೆ ಹಾಕಿದ್ದಾರೆ. 1 ಹಾಫ್​ ಸೆಂಚುರಿ, 5 ಸೆಂಚುರಿ ಬಾರಿಸಿದ್ದಾರೆ.
2025ರಲ್ಲಿ 5ನೇ ಶತಕ ಪೂರೈಸಿರೋ ಶುಭ್​ಮನ್​ ಗಿಲ್​ ನೆಕ್ಟ್ಸ್​ ಟಾರ್ಗೆಟ್​ ಇದೀಗ ವಿರಾಟ್​ ಕೊಹ್ಲಿ ರೆಕಾರ್ಡ್​.! ಟೀಮ್​ ಇಂಡಿಯಾ ನಾಯಕನಾಗಿ ಒಂದೇ ವರ್ಷ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿಯನ್ನ ಸದ್ಯ ಗಿಲ್​ ಸರಿಗಟ್ಟಿದ್ದಾರೆ. ಕೊಹ್ಲಿ ಪ್ರೈಮ್​​ ಫಾರ್ಮ್​ನಲ್ಲಿದ್ದ 2016 ಹಾಗೂ 2017ರಲ್ಲಿ 5 ಟೆಸ್ಟ್​ ಸೆಂಚುರಿ ಬಾರಿಸಿದ್ರು. ಇದೀಗ 2025ರಲ್ಲಿ ನಾಯಕನಾಗಿ 5 ಶತಕ ಬಾರಿಸಿರೋ ಗಿಲ್,​ ಕೊಹ್ಲಿಯನ್ನ ಮೀರಿ ನಿಲ್ಲೋ ಲೆಕ್ಕಾಚಾರದಲ್ಲಿದ್ದಾರೆ. ಗಿಲ್​ ಸದ್ಯದ ಫಾರ್ಮ್​ ನೋಡಿದ್ರೆ, ಈ ವರ್ಷದಲ್ಲಿ ಇನ್ನೊಂದು ಶತಕ ಸಿಡಿಸೋದು ಕಷ್ಟದ ವಿಚಾರವೇನಲ್ಲ ಬಿಡಿ.
ಇದನ್ನೂ ಓದಿ:ಕುಲ್ದೀಪ್ ಯಾದವ್​​ಗೆ ವಿಕೆಟ್​​ಗಳ ಗೊಂಚಲು.. Follow-on ಹೇರಿದ ಟೀಂ ಇಂಡಿಯಾ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಟೀಕೆಗಳಿಗೆ ಗಿಲ್ ತೀಕ್ಷ್ಣ ಉತ್ತರ.. ವಿರೋಧಿಗಳಿಗೆ ಬಿಗ್ ಮೆಸೇಜ್..!!
ರೋಹಿತ್ ಶರ್ಮಾನ ಕೆಳಗಿಳಿಸಿ ಗಿಲ್ ನಾಯಕನ ಪಟ್ಟ ಕಟ್ಟಿದಾಗ ಟೀಕೆಗಳು ಎದುರಾಗಿದ್ವು. ಒತ್ತಡ ನಿಭಾಯಿಸೋಕೆ ಗಿಲ್ಗೆ ಸಾಧ್ಯವಾಗುತ್ತಾ? ಎಂಬ ಚರ್ಚೆಗಳು ನಡೆದಿದ್ವು. ಆ ಪ್ರಶ್ನೆಗಳಿಗೆ ಬ್ಯಾಟ್ನಿಂದಲೇ ಉತ್ತರಿಸ್ತಿದ್ದಾರೆ ಗಿಲ್. ಕೊಹ್ಲಿಯ ಭದ್ರಕೋಟೆಯಲ್ಲಿ ಪ್ರಿನ್ಸ್ ಗಿಲ್ ಘರ್ಜಿಸಿದ್ದಾರೆ.

LATEST UPDATES