Advertisment

ಕುಲ್ದೀಪ್ ಯಾದವ್​​ಗೆ ವಿಕೆಟ್​​ಗಳ ಗೊಂಚಲು.. Follow-on ಹೇರಿದ ಟೀಂ ಇಂಡಿಯಾ..!

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವಿನತ್ತ ಮುನ್ನುಗ್ಗುತ್ತಿದೆ. ಎದುರಾಳಿ ವೆಸ್ಟ್​ ವಿಂಡೀಸ್​ಗೆ ಟೀಂ ಇಂಡಿಯಾ ಫಾಲೋ ಆನ್ ಹೇರಿದೆ.

author-image
Ganesh Kerekuli
kuldeep yadav
Advertisment

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವಿನತ್ತ ಮುನ್ನುಗ್ಗುತ್ತಿದೆ. ಎದುರಾಳಿ ವೆಸ್ಟ್​ ವಿಂಡೀಸ್​ಗೆ ಟೀಂ ಇಂಡಿಯಾ ಫಾಲೋ ಆನ್ (follow-on) ಹೇರಿದೆ. 

Advertisment

ಎರಡನೇ ಟೆಸ್ಟ್​​ಗೆ ಇವತ್ತು ಮೂರನೇ ದಿನ. ಮೊದಲ ದಿನ ಟಾಸ್​ ಗೆದ್ದು ಬ್ಯಾಟ್ ಮಾಡಿದ್ದ ಭಾರತ ತಂಡ, ಒಟ್ಟು 518 ರನ್​ಗಳಿಸಿ ಡಿಕ್ಲೇರ್​ ಮಾಡಿಕೊಂಡಿದೆ. ಪ್ರತಿಯಾಗಿ ಬ್ಯಾಟಿಂಗ್​​ಗೆ ಇಳಿದ್ದ ವಿಂಡೀಸ್​, ನಿನ್ನೆಯ ದಿನಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 140 ರನ್​ಗಳಿಸಿತ್ತು. ಅಂತೆಯೇ ಇಂದು ಬೆಳಗ್ಗೆ ಬ್ಯಾಟಿಂಗ್​ಗೆ ಇಳಿದ ವಿಂಡೀಸ್ ಮಧ್ಯಾಹ್ನದ ವೇಲೆಗೆ ಸರ್ಪಪತನ ಕಂಡಿದೆ. 248 ರನ್​​ಗಳಿಗೆ ವಿಂಡೀಸ್ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿದೆ. 

ಇದನ್ನೂ ಓದಿ: ಗಿಲ್​ ಶತಕ; ನಿತೀಶ್​, ಜುರೆಲ್ ಬಿರುಸಿನ ಬ್ಯಾಟಿಂಗ್.. ಬೃಹತ್​ ರನ್​ಗಳಿಗೆ ಇನ್ನಿಂಗ್ಸ್​ ಡಿಕ್ಲೇರ್

ಭಾರತದ ಪರ ಕುಲ್ದೀಪ್ ಯಾದವ್, ಐದು ವಿಕೆಟ್ ಕಿತ್ತರು. ಉಪನಾಯಕ ರವೀಂದ್ರ ಜಡೇಜಾ ಮೂರು ವಿಕೆಟ್ ಪಡೆದರು. ಹಾಗೆಯೇ ಸಿರಾಜ್ ಮತ್ತು ಬುಮ್ರಾ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು. ಕುಲ್ದೀಪ್ ಯಾದವ್ ಐತಿಹಾಸಿಕ ದಾಖಲೆ ಮಾಡಿದ್ದು, 15 ಟೆಸ್ಟ್​ಗಳಲ್ಲಿ ಐದು ಬಾರಿ ಐದು ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.

Advertisment

ಪ್ರಸ್ತುತ 270 ರನ್​ಗಳ ಹಿನ್ನಡೆ ಅನುಭವಿಸಿರುವ ವಿಂಡೀಸ್​, ಬ್ಯಾಟಿಂಗ್​ಗೆ ಬಂದಿದೆ. ಮಧ್ಯಾಹ್ನದ ವೇಳೆಯೂ ಟೀಂ ಇಂಡಿಯಾ ಬೌಲರ್​​ಗಳು ಪ್ರಾಬಲ್ಯ ಮೆರೆದರೆ ಇವತ್ತೇ ಭಾರತ ಗೆದ್ದು ಬೀಗುವ ಸಾಧ್ಯತೆ ಇದೆ. ಆ ಮೂಲಕ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಗಿಲ್​ ಪಡೆ ಗೆಲ್ಲಲಿದೆ. 

ಇದನ್ನೂ ಓದಿ: ದ್ವಿಶತಕ ಹೊಸ್ತಿಲಲ್ಲಿದ್ದ ಯಶಸ್ವಿ ಜೈಸ್ವಾಲ್​ನ ಔಟ್ ಮಾಡಿದ ಕ್ಯಾಪ್ಟನ್ ಶುಭ್​ಮನ್ ಗಿಲ್​.. ಹೇಗೆ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
IND vs WI India vs West Indies
Advertisment
Advertisment
Advertisment