/newsfirstlive-kannada/media/media_files/2026/02/07/surya-kumar-yadav-2-2026-02-07-16-38-11.jpg)
ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಟಿ-20 ಕರಿಯರ್ ಬಹುತೇಕ ಮುಗಿಯುತ್ತ ಬಂದಿದೆ. ಕಳೆದೊಂದು ವರ್ಷದಿಂದ ಬ್ಯಾಡ್ ಫಾರ್ಮ್​ನಿಂದ ಬಳಲುತ್ತಿದ್ದ ಸೂರ್ಯ, ನ್ಯೂಜಿಲೆಂಡ್ ಟಿ-20 ಸರಣಿಯಲ್ಲಿ 3 ಅರ್ಧಶತಕ ಸಿಡಿಸಿ, ಫಾರ್ಮ್​​​ ಕಂಡುಕೊಂಡಿದ್ರು. ಇಷ್ಟಕ್ಕೆ ಸೂರ್ಯ ಸೂಪರ್ ಬ್ಯಾಟರ್ ಎಂದು ಹೇಳೋಕೆ ಸಾಧ್ಯವಿಲ್ಲ. ಯಾಕಂದ್ರೆ ಸೂರ್ಯಕುಮಾರ್ ಬ್ಯಾಟಿಂಗ್​ನಲ್ಲಿ ಕನ್ಸಿಸ್ಟೆನ್ಸಿ ಮಾಯವಾಗಿದೆ.
ಈಗ 35 ವರ್ಷ
ಟಿ-20 ನಾಯಕ ಸೂರ್ಯಕುಮಾರ್ ಯಾದವ್​ಗೆ 35 ವರ್ಷ. ಈಗಲೂ ಸ್ಕೈ, ಟಿ-20 ತಂಡವನ್ನ ಮುನ್ನಡೆಸ್ತಿದ್ದಾರೆ. ವಿರಾಟ್ ಕೊಹ್ಲಿ 35 ವರ್ಷವಿದ್ದಾಗಲೇ ಟಿ-20ಗೆ ಗುಡ್​ಬೈ ಹೇಳಿದ್ರು. ನಿವೃತ್ತಿಗೆ ಇದು ಸೂಕ್ತ ಸಮಯ ಅಂತ ಹೇಳಲಾಗ್ತಿದೆ. ಟಿ-20 ಯಂಗ್​ಸ್ಟರ್ಸ್ ಗೇಮ್ ಆಗಿರೋದ್ರಿಂದ ಸೂರ್ಯ​ ಗುಡ್​ಬೈ ಹೇಳೋದೇ ಒಳ್ಳೇದು.
/filters:format(webp)/newsfirstlive-kannada/media/media_files/2025/12/09/surya-and-sundar-2025-12-09-09-55-57.jpg)
ಗಂಭೀರ್ ಟೀಮ್ ಇಂಡಿಯಾ ಕೋಚ್ ಹುದ್ದೆ ಅಲಂಕರಿಸಿದ ಮೇಲೆ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ರು. ಆಟಗಾರರ ಬದಲಾಯಿಸಿದ್ರು. ನಾಯಕರನ್ನೂ ಬದಲಾಯಿಸಿದ್ರು. ಕೋಚ್ ಗಂಭೀರ್ ಟಿ-20 ತಂಡದ ನಾಯಕ ಸೂರ್ಯಕುಮಾರ್​ರನ್ನ ಟಿ-20 ವಿಶ್ವಕಪ್ ನಂತರ ಕೆಳಗಿಳಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಗಂಭೀರ್​ಗೆ ಯುವ ನಾಯಕನ ಮೇಲೆ ಒಲವು ಇರೋದ್ರಿಂದ ಪಟ್ಟ ಯಾವಾಗ ಬೇಕಾದ್ರೂ ಬೀಳಬಹುದು. ​​
2028 T20 ವಿಶ್ವಕಪ್​ಗೆ ಡೌಟ್?
ಕಳೆದೊಂದು ವರ್ಷದಿಂದ ಸೂರ್ಯಕುಮಾರ್ ರನ್​ಗಳಿಸಲು ಸಾಕಷ್ಟು ಪರದಾಡಿದ್ರು. ಒಂದೊಂದು ರನ್​ಗಳಿಸೋಕೂ ಪರದಾಡಿದ್ರು. ಕಿವೀಸ್ ವಿರುದ್ಧ ಸ್ಕೈ, ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದ್ರು. ಅಭಿಷೇಕ್ ವರ್ಮಾ, ಇಶಾನ್ ಕಿಶನ್ ಆಟದ ಮುಂದೆ ಸೂರ್ಯ ಮಂಕಾಗಿದ್ದಾರೆ. ಸೂರ್ಯಕುಮಾರ್​ಗಿಂತ ಯುವ ಕ್ರಿಕೆಟಿಗರು ಸೂಪರ್ ಡೂಪರ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಸಾಕಷ್ಟು ಯಂಗ್​​ಸ್ಟರ್ಸ್​ ಸ್ಟ್ಯಾಂಡ್​​ ಬೈನಲ್ಲೂ ಇದ್ದಾರೆ. ಹೀಗಿರುವಾಗ ಸೂರ್ಯ 2028ರ ಟಿ-20 ವಿಶ್ವಕಪ್ ಆಡೋದು ಅನುಮಾನವಾಗಿದೆ.
T20 ಆಡಲು SKYಗೆ ಹೆಚ್ಚಿನ ಫಿಟ್ನೆಸ್ ಅವಶ್ಯಕತೆ ಇದೆ
ಸೂರ್ಯಕುಮಾರ್ ಯಾದವ್ ಸೂಪರ್ ಫಿಟ್ ಅಲ್ಲದಿದ್ದರೂ ಒಂದು ಮಟ್ಟಕ್ಕೆ ಫಿಟ್ನೆಸ್ ಲೆವೆಲ್​ ಕಾಯ್ದುಕೊಂಡು ಬಂದಿದ್ದಾರೆ. ಆಗೊಮ್ಮೆ ಈಗೊಮ್ಮೆ ಇಂಜುರಿ ಆಗೋ ಸೂರ್ಯ, ಮುಂದಿನ ದಿನಗಳಲ್ಲಿ ಅತ್ಯುತ್ತಮ ಫಿಟ್ನೆಸ್ ಕಾಪಾಡಿಕೊಳ್ಳಬೇಕು. ಈಗಿನ ಜನರೇಷನ್ ಕ್ರಿಕೆಟರ್ಸ್​ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಜೊತೆಗೆ ಫಿಟ್ನೆಸ್​​ನಲ್ಲೂ ಜೋರಾಗಿದ್ದಾರೆ. ಆದ್ರೆ ಸೂರ್ಯಕುಮಾರ್ ಫಿಟ್ನೆಸ್ ಲೆವೆಲ್​ನಲ್ಲಿ ಯಂಗ್​ಸ್ಟರ್ಸ್​ನ ಬೀಟ್ ಮಾಡಬೇಕಿದೆ.
ನಾಯಕನಾಗಿ ಸೂರ್ಯಕುಮಾರ್ ಅದ್ಭುತ ದಾಖಲೆ ಹೊಂದಿದ್ದಾರೆ. ಆಟಗಾರನಾಗಿ ಸೂರ್ಯ ಕರಿಯರ್​ನಲ್ಲಿ ಸಾಕಷ್ಟು ಏಳು ಬೀಳುಗಳನ್ನ ಕಂಡಿದ್ದಾರೆ. ಸದ್ಯ ಫಾರ್ಮ್​ಗೆ ಮರಳಿರುವಂತೆ ಕಾಣುತ್ತಾರೆ. ಇದೇ ಫಾರ್ಮ್ ಟಿ-20 ವಿಶ್ವಕಪ್​ನಲ್ಲೂ ನಿರೀಕ್ಷಿಸಲಾಗಿದೆ. ಒಂದು ವೇಳೆ ವಿಶ್ವಕಪ್​ನಲ್ಲಿ ಸೂರ್ಯ ರನ್​ಗಳಿಸದಿದ್ದರೆ ಮೆಗಾ ಟೂರ್ನಿಯ ಬಳಿಕ ಸ್ಕೈ ನೂರಕ್ಕೆ ನೂರರಷ್ಟು ಬಲವಂತದ ನಿವೃತ್ತಿ ಆಗೋದು ಪಕ್ಕಾ.
​​ಸೂರ್ಯಕುಮಾರ್ ಟಿ20 ಕ್ರಿಕೆಟ್​​​​​​ನ ಕ್ಲಾಸ್ ಌಂಡ್ ಮಾಸ್ ಪ್ಲೇಯರ್. ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈ ಸೂಪರ್​ಸ್ಟಾರ್ ಆಟಗಾರನಿಗೆ, ಟಿ-20 ವಿಶ್ವಕಪ್, ಅಗ್ನಿಪರೀಕ್ಷೆ. ಈ ಪರೀಕ್ಷೆಯಲ್ಲಿ ಪಾಸಾಗ್ತಾರಾ ಕಾದುನೋಡೋಣ.
ಇದನ್ನೂ ಓದಿ: ಭಾರತ- ಅಮೆರಿಕಾ ವ್ಯಾಪಾರ ಒಪ್ಪಂದದಲ್ಲಿ ಯಾವ್ಯಾವುದಕ್ಕೆ ರಕ್ಷಣೆ, ಯಾವುದು ಅಗ್ಗ? ರಫ್ತುದಾರರಿಗೆ ಹೇಗೆ ಲಾಭ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us