ಟಿ-20 ವಿಶ್ವಕಪ್​ನಲ್ಲಿ ಫ್ಯಾನ್ಸ್​ನ ಟಾಪ್ 5 ಫೇವರಿಟ್ ಯಂಗ್​ಸ್ಟರ್ಸ್​ ಯಾರು ಗೊತ್ತೇ..?

ಟಿ-20 ವಿಶ್ವಕಪ್​ಗೆ ಟೀಮ್ ಇಂಡಿಯಾ ರೆಡಿಯಾಗಿದೆ. ಯುವ ಆಟಗಾರರ ಒಳಗೊಂಡ ಸೂರ್ಯಕುಮಾರ್ ಯಾದವ್ ಪಡೆ ಬಲಿಷ್ಟ ತಂಡವಾಗಿ ಕಾಣುತ್ತಿದೆ. ಯಂಗ್ ಇಂಡಿಯಾ ಮೇಲೆ ಅಭಿಮಾನಿಗಳ ನಿರೀಕ್ಷೆ ಕೂಡ ಹೆಚ್ಚಾಗಿದೆ.

author-image
Ganesh Kerekuli
rinku singh abhishek sharma ishan kishan
Advertisment
  • ಸಿಕ್ಸರ್ ಕಿಂಗ್ ಅಭಿಷೇಕ್ ಮೇಲೆ ಎಲ್ಲರ ಕಣ್ಣು
  • T20 ವಿಶ್ವಕಪ್​ನಲ್ಲೂ ಘರ್ಜಿಸ್ತಾರಾ ಇಶಾನ್ ಕಿಶನ್?
  • ಮಿಡಲ್ ಆರ್ಡರ್​​​​​​​​ಗೆ ತಿಲಕ್ ವರ್ಮಾನೇ ದ ಕಿಂಗ್!

ಟಿ-20 ವಿಶ್ವಕಪ್ ಫೀವರ್ ಶುರುವಾಗಿದೆ. ಕ್ರಿಕೆಟ್ ಹಬ್ಬವನ್ನ ಕಣ್ತುಂಬಿಸಿಕೊಳ್ಳಲು, ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಅದ್ರಲ್ಲೂ ಯಂಗ್ ಇಂಡಿಯಾ ಈ ಬಾರಿ ಫ್ಯಾನ್ಸ್ ಫೇವರಿಟ್ ತಂಡವಾಗಿದೆ. ಹೊಡೆಬಡಿ ಆಟಕ್ಕೆ ಹೇಳಿ ಮಾಡಿಸಿದಂತಿರುವ ಸ್ಕೈ ಪಡೆ, ಯುವ ಸೇನೆಯನ್ನೇ ನೆಚ್ಚಿಕೊಂಡಿದೆ. ಅದ್ರಲ್ಲೂ ಆ 5 ಮಂದಿ ಆಟಗಾರರು, ಟಿ-20 ವಿಶ್ವಕಪ್​ನಲ್ಲಿ, ಟೀಮ್ ಇಂಡಿಯಾ ಹಣೆಬರ ನಿರ್ಧರಿಸಲು ಹೊರಟಿದ್ದಾರೆ.  

ಡಿಸ್ಟ್ರಕ್ಟೀವ್ ಌಂಡ್ ಡೆಡ್ಲಿ ಬ್ಯಾಟ್ಸ್​ಮನ್ ಅಭಿಷೇಕ್ ಶರ್ಮಾ ಟೀಮ್ ಇಂಡಿಯಾದ ಸಿಕ್ಸರ್ ಕಿಂಗ್. ಪವರ್​ ಪ್ಲೇನಲ್ಲಿ ಎದುರಾಳಿಗಳ ದಾಳಿಯನ್ನ ಧೂಳಿಪಟ ಮಾಡುವ ಅಭಿಷೇಕ್, ಸಿಕ್ಸರ್​ಗಳ ಸುರಿಮಳೆ ಸುರಿಸುತ್ತಾರೆ. ಅಭಿಷೇಕ್ ವಿಶ್ವಕಪ್​ನ ಎಲ್ಲಾ ಪಂದ್ಯಗಳಲ್ಲಿ ಅಟ್ಲೀಸ್ಟ್ 10 ಓವರ್ ಬ್ಯಾಟಿಂಗ್ ಮಾಡಿದ್ದೇ ಆದ್ರೆ ಎದುರಾಳಿಗಳ ಖೇಲ್ ಖತಂ.

ಇದನ್ನೂ ಓದಿ:ವೈಭವ್ ಸೂರ್ಯವಂಶಿ ಇದುವರೆಗೂ ಮಾಡಿದ ದಾಖಲೆಗಳು ಏನೇನು ಗೊತ್ತಾ? ಇಲ್ಲಿದೆ ಫುಲ್ ಡೀಟೈಲ್ಸ್

ಇಶಾನ್ ಕಿಶನ್..!

ನ್ಯೂಜಿಲೆಂಡ್ ವಿರುದ್ಧದ ಕಮ್​ಬ್ಯಾಕ್ T20 ಸೀರಿಸ್​ನಲ್ಲಿ ಇಶಾನ್ ಕಿಶನ್, ಸ್ಪೋಟಗೊಂಡಿದ್ರು. ರಾಯ್ಪುರ  ಮತ್ತು ತಿರುವನಂತಪುರಂನಲ್ಲಿ ಘರ್ಜಿಸಿದ ಕಿಶನ್, ಕಿವೀಸ್ ಬೌಲರ್​ಗಳನ್ನ ಬೆಚ್ಚಿಬೀಳಿಸಿದ್ರು. ಜಾರ್ಖಂಡ್ ಬ್ಯಾಟರ್ ಇದೇ ಫಾರ್ಮ್ ವಿಶ್ವಕಪ್​ನಲ್ಲೂ ಮುಂದುವರೆಸಿದ್ರೆ ಗೆಲುವು ಕಷ್ಟವೇನಲ್ಲ. ಮೆಗಾ ಟೂರ್ನಿಯಲ್ಲಿ ಕಿಶನ್ ಬ್ಯಾಟಿಂಗ್​​ ಕಿಕ್​​ಗೆ ರೆಡಿಯಾಗಿ.

ತಿಲಕ್ ವರ್ಮಾ

ಶಸ್ತ್ರಚಿಕಿತ್ಸೆಯ ಬಳಿಕ ಫಿಟ್ ಌಂಡ್ ಫೈನ್ ಆಗಿರುವ ತಿಲಕ್ ವರ್ಮಾ, ಮಿಡಲ್ ಆರ್ಡರ್ ಜವಾಬ್ದಾರಿ ಹೊರಲಿದ್ದಾರೆ. ಆರಂಭದಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದ್ರೆ ತಿಲಕ್ ವರ್ಮಾ ಸ್ಟೆಪ್ ಇನ್ ಆಗಲಿದ್ದಾರೆ. ಕೊನೆಯವರೆಗೂ ಹೋರಾಟ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಎದುರಾಳಿಗಳ ಲೆಕ್ಕಾಚಾರ ಉಲ್ಟಾ ಮಾಡುವ ತಾಖತ್ತು ಹೊಂದಿದ್ದಾರೆ. ತಿಲಕ್ ಇದ್ರೆ ಭಯವಿಲ್ಲ ಅನ್ನೋದು ನಾಯಕ ಸೂರ್ಯಗೂ ಗೊತ್ತು. 

ಇದನ್ನೂ ಓದಿ: ಲೀಗ್ ಪಂದ್ಯಗಳು ನೀರು ಕುಡಿದಷ್ಟೇ ಸರಾಗ.. ಟೀಂ ಇಂಡಿಯಾಗೆ ಚಾಲೇಂಜ್ ಎಲ್ಲಿ..?

ಫಿನಿಷರ್ ರಿಂಕು ಸಿಂಗ್

ಲೋವರ್ ಡೌನ್ ದ ಆರ್ಡರ್ನಲ್ಲಿ ಬ್ಯಾಟಿಂಗ್​ಗಿಳಿಯುವ ರಿಂಕು ಸಿಂಗ್ ಟೀಮ್ ಇಂಡಿಯಾದ ಫನಿಷರ್ ಌಂಡ್ ಗೇಮ್ ಚೇಂಜರ್. ಅಸಾಧ್ಯವಾದದ್ದನ್ನ ಸಾಧಿಸೋದೇ ರಿಂಕು ಸ್ಪೆಷಾಲಿಟಿ. ಅದ್ರಲ್ಲೂ ಡೆಥ್ ಓವರ್​ಗಳಲ್ಲಿ ರಿಂಕುರಷ್ಟು ಡೇಂಜರಸ್ ಬ್ಯಾಟರ್, ಮತ್ತಾರು ಇಲ್ಲ. ಒಂದೇ ಓವರ್​ನಲ್ಲಿ ಎದುರಾಳಿಗಳ ಸ್ಟ್ರಾಟಜಿ ಟ್ಯಾಕ್ಟಿಕ್ಸ್ ಬದಲಾಯಿಸೋ ಕೆಪಾಸಿಟಿ ರಿಂಕುಗೆ ಇದೆ.

ಯಂಗ್ ಆಲ್​ರೌಂಡರ್ ಹರ್ಷಿತ್ ರಾಣಾ, ಪಂದ್ಯದಿಂದ ಪಂದ್ಯಕ್ಕೆ ತುಂಬಾ ಮೆಚೂರ್ಡ್​ ಆಗ್ತಿದ್ದಾರೆ. ಆರಂಭದಲ್ಲಿ ರಾಣಾ ವಿರುದ್ಧ ಭಾರೀ ಟೀಕೆಗಳು ಕೇಳಿಬರ್ತಿತ್ತು. ಆದ್ರೀಗ ರಾಣಾ, ತಮ್ಮ ಆಲ್​ರೌಂಡ್ ಪರ್ಫಾಮೆನ್ಸ್​​ನಿಂದ ಟೀಕೆಗಳಿಗೆ ಉತ್ತರ ನೀಡಿದ್ದರು. ದುರಾದೃಷ್ಟವಶಾತ್ ಹರ್ಷಿತ್ ರಾಣಾ ಗಾಯದ ಕಾರಣದಿಂದ ನಿನ್ನೆಯಷ್ಟೇ ಟೂರ್ನಿಯಿಂದ ಔಟ್ ಆಗಿದ್ದಾರೆ. 

ಮುಂಬರುವ ಟಿ-20 ವಿಶ್ವಕಪ್​​ನಲ್ಲಿ ಯುವ ಪಡೆಯೇ ಟೀಮ್ ಇಂಡಿಯಾದ ಶಕ್ತಿ. ವಿಶ್ವಕಪ್​ನಲ್ಲಿ ಪವರ್ ಆಫ್ ಯೂತ್ ಏನೂ ಅನ್ನೋದನ್ನ ತೋರಿಸೋಕೆ ಸೂರ್ಯಕುಮಾರ್ ಯಾದವ್ ಪಡೆ ತುದಿಗಾಲಲ್ಲಿ ನಿಂತಿದೆ.

ಇದನ್ನೂ ಓದಿ:T20 world cup: ಅಭಿಷೇಕ್ ಶರ್ಮಾಗೆ ಜೋಡಿ ಯಾರು..? ಇಬ್ಬರು ಸ್ಟಾರ್​ಗಳ ಮಧ್ಯೆ ಫೈಟ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Tilak Varma Rinku Singh Ishan Kishan Abhishek Sharma T20 world cup T20I
Advertisment