/newsfirstlive-kannada/media/post_attachments/wp-content/uploads/2025/03/shreyas_iyer.jpg)
ಅತ್ತ ಏಷ್ಯಾಕಪ್​​ನಲ್ಲಿ ಸ್ಥಾನ ಇಲ್ಲ. ಟೆಸ್ಟ್​ ತಂಡದ ಡೋರ್​ ಸಹ ಕ್ಲೋಸ್ ಮಾಂಡಿರುವ ಬಿಸಿಸಿಐ, ಈಗ ಶ್ರೇಯಸ್ ಅಯ್ಯರ್​​ಗೆ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಏಕಾಏಕಿ ಉತ್ತರಾಧಿಕಾರದ ಪಟ್ಟವನ್ನು ನೀಡುವ ಚಿಂತನೆಯಲ್ಲಿದೆ.
ಟೀಮ್ ಇಂಡಿಯಾದಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಟೆಸ್ಟ್​ ಆಯಿತು. ಟಿ20 ಆಯ್ತು. ಈಗ ಏಕದಿನ ತಂಡದತ್ತ ದೃಷ್ಟಿ ನೆಟ್ಟಿರುವ ಬಿಸಿಸಿಐ & ಮ್ಯಾನೇಜ್​ಮೆಂಟ್​, ಒಡಿಐ ಫಾರ್ಮೆಟ್​ಗೂ ಹೊಸ ನಾಯಕನ ನೇಮಿಸುವ ಚಿಂತನೆಯಲ್ಲಿದೆ. ಈ ನಿಟ್ಟಿನಲ್ಲೇ ಲೆಕ್ಕಾಚಾರ ಹಾಕ್ತಿದೆ. ರೋಹಿತ್ ಶರ್ಮಾರ ಯುಗಾಂತ್ಯದ ಬಳಿಕ ಯಾರ್ ಕ್ಯಾಪ್ಟನ್ ಆಗ್ತಾರೆ ಎಂಬ ಪ್ರಶ್ನೆಗೂ ನಾಂದಿಯಾಡಿದೆ.
/filters:format(webp)/newsfirstlive-kannada/media/post_attachments/wp-content/uploads/2025/05/shreyas_iyer_test.jpg)
ಶುಭ್​ಮನ್ ಅಲ್ಲ ರೋಹಿತ್ ಶರ್ಮಾ ಉತ್ತರಾಧಿಕಾರಿ..!
ಸದ್ಯ ಹಿಟ್​ಮ್ಯಾನ್ ರೋಹಿತ್ ಶರ್ಮಾರ ಏಕದಿನ ಭವಿಷ್ಯ ಅಂತತ್ರಕ್ಕೆ ಸಿಲುಕಿದೆ. 2027ರ ತನಕ ಆಡ್ತಾರಾ, ಇಲ್ವಾ ಎಂಬ ಅನುಮಾನವೂ ಇದೆ. ಈ ಹೊತ್ತಿನಲ್ಲೇ ಟೆಸ್ಟ್​ ತಂಡದ ನಾಯಕತ್ವ ವಹಿಸಿಕೊಂಡಿರುವ ಶುಭ್​ಮನ್, ಟೀಮ್ ಇಂಡಿಯಾ ಏಕದಿನ ತಂಡದ ಫ್ಯೂಚರ್ ಕ್ಯಾಪ್ಟನ್ ಅಂತಾನೇ ಹೇಳಲಾಗ್ತಿತ್ತು. ಆದ್ರೀಗ ಬಿಸಿಸಿಐ ಮನಸು ಬದಲಾಗಿದೆ. ಶುಭ್​ಮನ್ ಗಿಲ್ ಬದಲಿಗೆ ಮತ್ತೊರ್ವ ಆಟಗಾರನಿಗೆ ಏಕದಿನ ತಂಡದ ನಾಯಕತ್ವ ವಹಿಸಲು ಮುಂದಾಗಿದೆ. ಅಂದ್ಹಾಗೆ ಆ ಆಟಗಾರ ಮತ್ಯಾರು ಅಲ್ಲ, ಮುಂಬೈಕರ್ ಶ್ರೇಯಸ್​ ಅಯ್ಯರ್.
ರೋಹಿತ್ ನಿವೃತ್ತಿಯ ನಂತರ ಶ್ರೇಯಸ್ ಅಯ್ಯರ್ ಪಟ್ಟಾಭಿಷೇಕ..!
ಟೆಸ್ಟ್​ ಹಾಗೂ ಏಷ್ಯಾಕಪ್​ನ ಟೀಮ್ ಇಂಡಿಯಾದಲ್ಲಿ ಶ್ರೇಯಸ್ ಅಯ್ಯರ್​​ಗೆ ಸ್ಥಾನ ಸಿಕ್ಕಿಲ್ಲ. ಇದರಿಂದ ಶ್ರೇಯಸ್ ಟಿ20 ಕನಸು ನುಚ್ಚುನೂರಾಗಿದೆ. ಆದ್ರೆ, ಇದೇ ನಿರಾಸೆಯಲ್ಲಿದ್ದ ಶ್ರೇಯಸ್ ಅಯ್ಯರ್​ಗೆ ಬಿಸಿಸಿಐ ಗುಡ್​​ನ್ಯೂಸ್ ನೀಡಲು ಮುಂದಾಗಿದೆ. ಭವಿಷ್ಯದ ಏಕದಿನ ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್​​ನ ನೇಮಿಸುವ ಬಗ್ಗೆ ಚಿಂತಿಸಿದೆ. ರೋಹಿತ್ ಶರ್ಮಾ ನಿರ್ಗಮನದ ಬಳಿಕ ಪಟ್ಟಾಭಿಷೇಕ ಕಟ್ಟಲು ಮುಂದಾಗಿದೆ ಎನ್ನಲಾಗ್ತಿದೆ. ಬಿಸಿಸಿಐನ ಭವಿಷ್ಯದ ಲೆಕ್ಕಾಚಾರವೂ ಅಡಗಿವೆ.
ಬಿಸಿಸಿಐ ಲೆಕ್ಕಾಚಾರ ಏನು..?
- ರೋಹಿತ್ ನಂತರ ಶ್ರೇಯಸ್​ಗೆ ಪಟ್ಟ ಕಟ್ಟಲು ಬಿಸಿಸಿಐ ಒಲವು
- ಸೂರ್ಯ ಬಳಿಕ ಶುಭ್​ಮನ್​ಗೆ ಟಿ20 ನಾಯಕತ್ವದ ಚಿಂತನೆ
- 3 ಫಾರ್ಮೆಟ್​ಗೆ ಇಬ್ಬರು ನಾಯಕರನ್ನ ನೇಮಿಸುವ ಆಸಕ್ತಿ
- ಲಾಂಗ್ ಟರ್ಮ್ ನಾಯಕತ್ವದ ಶ್ರೇಯಸ್, ಗಿಲ್ ಉತ್ತಮ
- ಏಷ್ಯಾಕಪ್​ ಬಳಿಕ ಏಕದಿನ ನಾಯಕತ್ವದ ಡಿಸಿಷನ್ ಫೈನಲ್
- ರೋಹಿತ್ ನಿವೃತ್ತಿ ನಿರ್ಣಯದ ಮೇಲೆ ಶ್ರೇಯಸ್​ಗೆ ಪಟ್ಟ
ರೋಹಿತ್ ಭವಿಷ್ಯದ ನಿರ್ಣಯದ ಮೇಲೆಯೇ ಅಂತಿಮ ನಿರ್ಧಾರ..!
2027ರ ಏಕದಿನ ವಿಶ್ವಕಪ್ ದಷ್ಟಿಯಿಂದ ತಂಡಕ್ಕೆ ಸರ್ಜರಿ ಮಾಡಲು ಬಿಸಿಸಿಐ ಮುಂದಾಗಿದೆ. ಇದೇ ಕಾರಣಕ್ಕೆ 40ರ ಅಸುಪಾಸಿನಲ್ಲಿರುವ ರೋಹಿತ್ ಶರ್ಮಾರ ಏಕದಿನ ಭವಿಷ್ಯ ಪ್ರಶ್ನಾರ್ಥಕ ಚಿನ್ಹೆಯಾಗಿದೆ. ಕೆಲ ಮೂಲಗಳ ಪ್ರಕಾರ ಆಸ್ಟ್ರೇಲಿಯಾ ಪ್ರವಾಸವೇ ರೋಹಿತ್ ಶರ್ಮಾಗೆ ಪಾಲಿಗೆ ಕೊನೆ ಎನ್ನಲಾಗ್ತಿದೆ. ಮತ್ತೊಂದು ಕಡೆ ಏಷ್ಯಾಕಪ್​ ಬಳಿಕ ನಿರ್ಣಯ ಕೈಗೊಳ್ಳುವ ಬಗ್ಗೆ ಬಿಸಿಸಿಐ ಚಿಂತಿಸಿದೆ. ಆಸ್ಟ್ರೇಲಿಯಾ ಸರಣಿ ನಂತರ ಶ್ರೇಯಸ್​ಗೆ ನಾಯಕತ್ವದ ಪಟ್ಟ ಕಟ್ಟುತ್ತೋ..? ಮುನ್ನವೇ ಪಟ್ಟ ಕಟ್ಟುತ್ತೋ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಆದ್ರೆ, ಶ್ರೇಯಸ್ ನಾಯಕತ್ವದ ಪಟ್ಟ ರೋಹಿತ್ ಶರ್ಮಾ ನಿರ್ಗಮನದ ನಿರ್ಧಾರದ ಮೇಲೆಯೇ ನಿಂತಿದೆ.
ಶ್ರೇಯಸ್ ಅಯ್ಯರ್ ಏಕದಿನ ತಂಡದ ಮುಂದಿನ ನಾಯಕ. ಕಾಮ್​​ನೆಸ್ ಇದೆ. ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡಿದ್ದರು. ಯಂಗ್​ ಪಂಜಾಬ್​ ಕಿಂಗ್ಸ್ ತಂಡವನ್ನ ಅದ್ಬುತವಾಗು ಮುನ್ನಡೆಸಿದ್ದರು. ಅತ್ಯದ್ಬುತ ನಾಯಕ. ಶ್ರೀಘ್ರದಲ್ಲೇ ನಾಯಕನಾಗಿ ನೇಮಕ ಮಾಡಬೇಕು.
ಅಂಬಾಟಿ ರಾಯುಡು, ಮಾಜಿ ಕ್ರಿಕೆಟರ್​
ಇದನ್ನೂ ಓದಿ:M ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನ ಆಡಿಸಬೇಕಾ..? ಅಂದ್ರೆ ಈ ಷರತ್ತುಗಳು ಕಡ್ಡಾಯ
/filters:format(webp)/newsfirstlive-kannada/media/post_attachments/wp-content/uploads/2023/07/Shreyas-Iyer.jpg)
ಅಂದೇ ನಾಯಕನಾಗಿ ಶ್ರೇಯಸ್​​ನ ಬೆಳಸಲು ಮುಂದಾಗಿದ್ದ ಕೊಹ್ಲಿ.!
ಅಂಬಾಟಿ ರಾಯುಡನೇ ಅಲ್ಲ, ವಿರಾಟ್​ ಕೊಹ್ಲಿಯ ನಾಯಕತ್ವದ ಅವಧಿಯಲ್ಲೇ ಟೀಮ್ ಇಂಡಿಯಾಗೆ ಶ್ರೇಯಸ್​​ ಅಯ್ಯರ್​ ಡೆಬ್ಯು ಮಾಡಿದ್ದರು. ಈ ವೇಳೆಯೇ ಶ್ರೇಯಸ್ ಅಯ್ಯರ್​ ಭವಿಷ್ಯದ ಅತ್ಯುತ್ತಮ ನಾಯಕ ಆಗ್ತಾರೆ ಎಂಬ ನಂಬಿಕೆ ಹೊಂದಿದ್ದರು. ಆತನ ಮುಂದಿನ ನಾಯಕನಾಗಿ ಬೆಳಸಬೇಕು ಎಂಬ ಇಚ್ಚೆಯನ್ನ ಹೊಂದಿದ್ದ ಕೊಹ್ಲಿ, ಅಂದಿನ ಚೀಫ್ ಸೆಲೆಕ್ಟರ್ ಎಂ​.ಎಸ್​.ಕೆ ಪ್ರಸಾದ್​ ಬಳಿಯೂ ಪ್ರಸ್ತಾಪಿಸಿದರು. ಅಂದ್ರೆ, ಟೀಮ್ ಇಂಡಿಯಾದ ಬದಲಾವಣೆ ಪರ್ವದಲ್ಲಿ ಅದು ಸಾಧ್ಯವಾಗಿರಲಿಲ್ಲ. ಆದ್ರೀಗ ಕೊಹ್ಲಿಯ ಇಚ್ಚೆಯಂತೆ ಶ್ರೇಯಸ್​, ಏಕದಿನ ತಂಡದ ನಾಯಕತ್ವದ ರೇಸ್​ನಲ್ಲಿದ್ದಾರೆ. ಹಾಟ್ ಫೇವರಿಟ್ ಆಗಿದ್ದಾರೆ. ಕೊಹ್ಲಿ ಕನಸು ನನಸಾಗುವ ಕಾಲವೂ ಸನ್ನಿಹಿತವಾಗಿದೆ. ಮುಂದೆ ಏನೆಲ್ಲಾ ಆಗುತ್ತೆ ಜಸ್ಟ್ ವೇಯ್ಟ್​ ಆ್ಯಂಡ್ ಸೀ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us