/newsfirstlive-kannada/media/media_files/2025/09/01/virat_kohli-2-2025-09-01-11-13-56.jpg)
ಸ್ಟ್ರೈಲಿಶ್ ಸ್ಟಾರ್, ಈ ಪದ ಕೇಳಿದರೆ ಟಾಲಿವುಡ್ ನಟ ಅಲ್ಲು ಅರ್ಜನ್ ನೆನಪಾಗ್ತಾರೆ. ಆದ್ರೆ, ಟೀಮ್ ಇಂಡಿಯಾ ಹಾಗೂ ವಿಶ್ವ ಕ್ರಿಕೆಟ್ ಅಭಿಮಾನಿಗಳಿಗೆ ಶುಭ್ಮನ್ ಗಿಲ್ ಹೆಸರು ನೆನಪಾಗಬೇಕು. ಅದ್ಯಾಕೆ..? ಈ ಮಾತು ಹೇಳ್ತಿದ್ದೀವಿ ಅಂತೀರಾ?.
ಕ್ರಿಕೆಟ್ ಅನ್ನೋದು ಜಸ್ಟ್ ಗೇಮ್ ಅಲ್ಲ, ಅದು ಗ್ಲೋಬಲ್ ಸೆನ್ಸೇಷನ್. ಆನ್ಫೀಲ್ಡ್ನಲ್ಲಿ ಆಟದಿಂದ ಗಮನ ಸೆಳೆಯುವ ಆಟಗಾರರು, ಕೇವಲ ಆಟದಿಂದಷ್ಟೇ ಅಲ್ಲ, ಆನ್ಫೀಲ್ಡ್ನಲ್ಲಿ ತಮ್ಮ ಟ್ರೆಂಡಿಂಗ್ ಲುಕ್ಸ್, ಸ್ಟ್ರೈಲ್, ವ್ಯಕ್ತಿತ್ವದಿಂದಲೂ ಸ್ಪೂರ್ತಿಯಾಗ್ತಾರೆ. ಈ ಪೈಕಿ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ ಕೂಡ ಒಬ್ಬರು.
ಆನ್ಫಿಲ್ಡ್ನಲ್ಲಿ ರನ್ ಹೊಳೆ ಹರಿಸುವ ಇವರು, ಆಫ್ ದಿ ಫಿಲ್ಡ್ನಲ್ಲೂ ಟ್ರೆಂಡ್ ಸೆಟರ್ಸ್. ಫ್ಯಾಷನ್ ಐಕಾನ್ಸ್. ಫಿಟ್ನೆಸ್ ವಿಚಾರದಲ್ಲಿ ರೋಲ್ ಮಾಡೆಲ್ಗಳಾಗಿದ್ದಾರೆ. ಇವರನ್ನೇ ಫಾಲೋ ಮಾಡೋ ಕೋಟ್ಯಾಂತರ ಅಭಿಮಾನಿಗಳ ಬಳಗವೂ ಇದೆ. ಇದೀಗ ಇದೇ ಸಾಲಿಗೆ ಸೇರುವ ಮತ್ತೊಬ್ಬ ಕ್ರಿಕೆಟರ್ ಪ್ರಿನ್ಸ್ ಶುಭ್ಮನ್ ಗಿಲ್..
ಆಟದಲ್ಲೇ ಅಲ್ಲ.. ಆಫ್ ದಿ ಫೀಲ್ಡ್ನ ಸ್ಟೈಲಿಶ್ ಸ್ಟಾರ್..!
ಶುಭ್ಮನ್ ಗಿಲ್.. ಕ್ಲಾಸಿ ಬ್ಯಾಟ್ಸ್ಮನ್.. ಆತನ ಟೆಕ್ನಿಕಲಿ ವೆರಿ ವೆರಿ ಸೌಂಡೆಡ್ ಬ್ಯಾಟ್ಸ್ಮನ್. ಆತನ ಕ್ಲಾಸಿ ಕವರ್ ಡ್ರೈವ್ಸ್, ಸ್ಟ್ರೈಲಿಶ್ ಸ್ಟೋಕ್ಗಳು ಎಂಥವರನ್ನು ವಾವ್ ಎನಿಸುತ್ತೆ. ಆದ್ರೆ, ಇದೇ ಸ್ಟ್ರೈಲಿಶ್ ಬ್ಯಾಟರ್ ಶುಭ್ಮನ್ ಗಿಲ್, ಆಫ್ ದಿ ಫೀಲ್ಡ್ನಲ್ಲೂ ಒಬ್ಬ ಸ್ಟ್ರೈಲಿಶ್ ಸ್ಟಾರ್. ಸ್ಟ್ರೈಲಿಶ್ ಐಕಾನ್.. ಇದಕ್ಕೆ ಸಾಕ್ಷಿ ಶುಭ್ಮನ್ ಗಿಲ್ ಡ್ರೆಸ್ಸಿಂಗ್..
ಟ್ರೆಂಡಿ ಫ್ಯಾಷನ್ಗೆ ಕೇರ್ ಆಫ್ ಅಡ್ರೆಸ್ ಶುಭ್ಮನ್..!
ಶುಭ್ಮನ್ ಗಿಲ್ರ ಟ್ರೆಂಡಿ ಫ್ಯಾಷನ್ ನಿಜಕ್ಕೂ ನೆಕ್ಸ್ಟ್ ಲೆವೆಲ್. ಅದ್ರಲ್ಲೂ ಇನ್ಸ್ಟಾದಲ್ಲಿ ಶುಭ್ಮನ್ ಗಿಲ್ ಹಂಚಿಕೊಳ್ಳುವ ಒಂದೊಂದು ವಿಡಿಯೋ, ಫೋಟೋಗಳು ಒಂದೊಕ್ಕಿಂತ ಒಂದು ಭಿನ್ನ. ಯಾವಾಗಲೂ ಟ್ರೆಂಡಿ ಲುಕ್ಸ್ನಲ್ಲಿ ಕಾಣಿಸಿಕೊಳ್ಳುವ ಶುಭ್ಮನ್, ನಿಜಕ್ಕೂ ಒಬ್ಬ ಟ್ರೆಂಡ್ ಸೆಟರ್ ಅನ್ನೋದ್ರಲ್ಲಿ ತಪ್ಪಿಲ್ಲ..
ಯೂತ್ ಫುಲ್ ಚಾರ್ಮ್.. ಕ್ಲೀನ್ ಶೇವ್.. ಸ್ಟ್ರೈಲಿಶ್ ವಾಕ್..!
ಯೂತ್ ಫುಲ್ ಚಾರ್ಮ್ ಹೊಂದಿರುವ ಶುಭ್ಮನ್, ಕ್ಲೀನ್ ಶೇವ್ನಲ್ಲಿ ಕಾಣಿಸಿಕೊಳ್ತಾರೆ. ಪ್ರಿಂಟೆಡ್ & ಫಂಕಿ ಶರ್ಟ್, ಬ್ಲೇಜರ್, ಹೂಡಿಗಳಲ್ಲಿ ಮಿರ ಮಿರ ಅಂತ ಮಿಂಚುವ ಶುಭ್ಮನ್ ಗಿಲ್, ಸನ್ ಗ್ಲಾಸ್ ಧರಿಸಿದ ಸ್ಟ್ರೈಲಿಶ್ ವಾಕ್ನಲ್ಲಿ ಹೆಜ್ಜೆ ಹಾಕಿದ್ರೆ. ಅದು ನೋಡೋಕೆ ನಿಜಕ್ಕೂ ನೆಕ್ಸ್ಟ್ ಲೆವೆಲ್..
ಗಿಲ್ ಹ್ಯಾಂಡ್ಸಮ್ ಲುಕ್ಸ್ಗೆ ಯುವತಿಯರು ಕ್ಲೀನ್ ಬೋಲ್ಡ್..!
ಟೀಮ್ ಇಂಡಿಯಾದ ಹ್ಯಾಂಡ್ಸಮ್ ಹಂಕ್ ಶುಭ್ಮನ್, ಸನ್ ಗ್ಲಾಸ್ನಲ್ಲಿ ಕೂಲ್ & ಕಾಮ್ ಆಗಿ ಕಾಣಿಸ್ತಾರೆ. ಯೂತ್ ಫುಲ್ ಚಾರ್ಮ್ನಲ್ಲಿ ಪಕ್ಕಾ, ಕಾನ್ಪಿಡೆನ್ಸ್ ವೈಬ್ ನೀಡುವ ಶುಭ್ಮನ್, ಯುವತಿಯರ ಮನ ಕದ್ದಿರುವ ಮನ್ಮಥ. ಈಗಾಗಲೇ ಅದೆಷ್ಟೋ ಚಲುವೆಯರು, ಶುಭ್ಮನ್ ಹ್ಯಾಂಡ್ಸಮ್ ಲುಕ್ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಸ್ಟಾರ್ ನಟ, ನಟಿಯರೇ ಪ್ರಪೋಸ್ ಮಾಡಿದ್ದಿದೆ.
ಇದನ್ನೂ ಓದಿ: ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಆರ್ಸಿಬಿಯೇ ಕಿಂಗ್.. ತಂಡಗಳ ಬ್ರ್ಯಾಂಡ್ ವ್ಯಾಲ್ಯೂ ಲಿಸ್ಟ್..!
ಶುಭ್ಮನ್ ರ್ಯಾಂಪ್ ವಾಕ್.. ಫ್ಯಾನ್ಸ್ ಫಿದಾ..!
ಆನ್ಫೀಲ್ಡ್ನಲ್ಲಿ ಕೂಲ್ & ಕಾಮ್ ಆಗಿ ಕಾಣಿಸಿಕೊಳ್ಳುವ ಶುಭ್ಮನ್, ಆಫ್ ದಿ ಫೀಲ್ಡ್ನಲ್ಲೂ ಕೂಲ್ & ಕಾಮ್ ಆಗಿಯೇ ಇರ್ತಾರೆ. ಆದ್ರೆ, ಇದೇ ಸ್ಟ್ರೈಲಿಶ್ ಸ್ಟಾರ್ ಶುಭ್ಮನ್ ಗಿಲ್, ಆಗಾಗ ಕೆಲ ಶೋಗಳಲ್ಲಿ ರ್ಯಾಂಪ್ ವಾಕ್ ಮಾಡಿ ಎಲ್ಲರ ಗಮನ ಸೆಳೆದಿದ್ದಿದೆ.
ಸ್ನೇಹಮಹಿಯೂ ಆಗಿರುವ ಶುಭ್ಮನ್ ಗಿಲ್, ಸಹ ಆಟಗಾರರ ಬೆಸ್ಟ್ ಫ್ರೆಂಡ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಟೀಮ್ ಇಂಡಿಯಾದ ಸ್ಟಾರ್ ಆಗಿರುವ ಶುಭ್ಮನ್, ವಿಶ್ವ ಕ್ರಿಕೆಟ್ ಲೋಕದ ನಯಾ ಸ್ಟ್ರೈಲಿಶ್ ಐಕಾನ್ ಆಗಿದ್ದಾರೆ. ಆಫ್ ದಿ ಫೀಲ್ಡ್ ಹಾಗೂ ಆನ್ ದಿ ಫೀಲ್ಡ್ನಲ್ಲಿ ವಿಶೇಷ ವ್ಯಕ್ತಿತ್ವದಿಂದಲೇ ಎಲ್ಲರ ಮನ ಕದಿಯುತ್ತಿರುವ ಶುಭ್ಮನ್, ಅಭಿಮಾನಿಗಳ ಫೇವರಿಟ್ & ಸೂಪರ್ ಸ್ಟಾರ್ ಆಗುತ್ತ ಹೆಜ್ಜೆ ಹಾಕ್ತಿರುವುದು ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ